ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಈಗ ನ್ಯಾಷನಲ್ ಸ್ಟಾರ್ ಜೊತೆಗೆ ಟ್ರೆಂಡ್ ಸೆಟರ್ ಸಹ ಹೌದು. ಕೆಜಿಎಫ್ (KGF Kannada Movie) ಸಿನಿಮಾದ ಮೂಲಕ ಇತರೆ ಭಾಷೆಗಳ ಸಿನಿಪ್ರಿಯ ಮನಸ್ಸಿನಲ್ಲೂ ಜಾಗ ಮಾಡಿಕೊಂಡಿರುವ ಯಶ್ ಇತ್ತೀಚೆಗೆ ಮುಂಬೈನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೆ ಮುಂಬೈಗೆ (Mumbai)ತೆರೆಳಿದ್ದ ಯಶ್, ಅಲ್ಲಿನ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕ್ಯಾಮೆರಾಗೆ ಸೆರೆಯಾಗಿದ್ದರು. ಅದರ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದ್ದವು. ಇವು ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವಾಗಲೇ ಯಶ್ ಮತ್ತೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ ನಟನನ್ನು ನೋಡಿದ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದಿದ್ದಾರೆ. ಇನ್ನು ಯಶ್ ಅವರು ಈ ಸಲ ಮುಂಬೈಗೆ ಹೋದಾಗ ಅಲ್ಲಿನ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರನ್ನಯ ಭೇಟಿಯಾಗಿದ್ದಾರೆ.
ಮುಂಬೈನಲ್ಲಿ ತಮ್ಮದೇ ಆದ ಸಲೂನ್ ಹೊಂದಿರುವ ಆಲಿಮ್ ಹಕೀಮ್ ಅವರ ಸಲೂನ್ಗೆ ಯಶ್ ಹೋಗಿದ್ದಾರೆ. ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರಿಂದ ಹೇರ್ ಕಟ್ ಮಾಡಿಸಿಕೊಂಡಿದ್ದಾರೆ. ಯಶ್ ಅವರ ಹೊಸ ಹೇರ್ ಕಟ್ ವಿಡಿಯೋವನ್ನು ಹೇರ್ ಸ್ಟೈಲಿಸ್ಟ್ ಹಂಚಿಕೊಂಡಿದ್ದಾರೆ.
ಯಶ್ ಅವರು ಉದ್ದ ಕೂದಲು, ಗಡ್ಡ ಬಿಟ್ಟಿರುವ ರಗಡ್ ಲುಕ್ನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಅವರು ಕೆಜಿಎಫ್ ಚಾಪ್ಟರ್ 2 ಸಿನಿಮಾಗಾಗಿ ಯಶ್ ಈ ರಗಡ್ ಲುಕ್ ಅನ್ನು ಕಾಪಾಡಿಕೊಂಡು ಬಂದಿದ್ದಾರೆ. ಅವರು ಉದ್ದದ ಕೂದಲಿಗೆ ಕತ್ತರಿ ಹಾಕಿಸಿಕೊಂಡಿದ್ದು, ಕೊಂಚ ಕಲರ್ ಸಹ ಮಾಡಿಸಿಕೊಂಡಿದ್ದಾರೆ.
ಇದನ್ನೂ ಓದಿ: Yash-Radhika Pandit: ರಾಕಿಂಗ್ ದಂಪತಿಯ ಹೊಸ ಮನೆ ಗೃಹಪ್ರವೇಶ: ಹೇಗಿದೆ ಗೊತ್ತಾ ಯಶ್-ರಾಧಿಕಾರ ಕನಸಿನ ನಿವಾಸ..!
ಇನ್ನು ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರ ಬಳಿ ಯಶ್ ಅವರು ಹೇರ್ ಕಟ್ ಮಾಡಿಸಿಕೊಂಡಿರುವುದು ಇದೇ ಮೊದಲೇನಲ್ಲ. ಹೌದು, ಈ ಹಿಂದೆಯೂ ಅವರು ಇವರ ಬಳಿ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ.
ಈ ಹಿಂದೆ ಯಶ್ ಅವರನ್ನು ಭೇಟಿಯಾದಾಗ ಆಲಿಮ್ ಹಕೀಮ್ ಅವರು ತಮ್ಮ ಸೋಶಿಯಾಲ್ ಮೀಡಿಯಾ ಖಾತೆಯಲ್ಲಿ ಯಶ್ ಜೊತೆಗಿನ ಫೋಟೋ ಹಂಚಿಕೊಂಡು, ನಟನನ್ನು ಹೊಗಳಿ ಪೋಸ್ಟ್ ಮಾಡಿದ್ದರು. ಇನ್ನು ಯಶ್ ಅವರನ್ನು ಮುಂಬೈನಲ್ಲಿ ನೋಡಿದ ಪ್ರತಿ ಬಾರಿಯೂ ಅಭಿಮಾನಿಗಳು ಸೆಲ್ಫಿಗಾಗಿ ಮುಗಿ ಬೀಳುತ್ತಾರೆ.
ರಾಕಿ ಭಾಯ್ ಕೆಜಿಎಫ್ 2 ಸಿನಿಮಾದ ಬಳಿಕ ಹೊಸ ಸಿನಿಮಾ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಾಗಿ ರಾಕಿ ಭಾಯ್ ದಿಢೀರ್ ಮುಂಬೈಗೆ ಹೋಗಿದ್ದು ಯಾಕೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿದೆ. ಈ ಹಿಂದೆ ಮುಂಬೈಗೆ ಹೋಗಿದ್ದ ಯಶ್ ಜಾಃಈರಾತೊಂದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈಗಾಗಲೇ ಕೆಜಿಎಫ್ ಚಾಪ್ಟರ್ 2 ಸಿನಿಮಾ ಮುಂದಿನ ವರ್ಷ ಏಪ್ರಿಲ್ 14ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಈ ಸಿನಿಮಾವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ
ಇದನ್ನೂ ಓದಿ: Yash Birthday Photos: ಕೆಜಿಎಫ್ ಚಿತ್ರತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ರಾಕಿಂಗ್ ಸ್ಟಾರ್ ಯಶ್
ಕೊರೋನಾ ಎರಡನೇ ಅಲೆಯಿಂದಾಗಿ ಮಾಡಿದ್ದ ಲಾಕ್ಡೌನ್ನಲ್ಲೇ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಹೊಸ ಮನೆಗೆ ಶಿಫ್ಟ್ ಆದರು. ಸರಳವಾಗಿ ಮನೆ ಮಟ್ಟಿಗೆ ಗೃಹ ಪ್ರವೇಶ ಕಾರ್ಯಕ್ರಮವನ್ನು ಮಾಡಿಕೊಂಡು ಹೊಸ ಮನೆಗೆ ಹೋದರು ರಾಕಿಂಗ್ ದಂಪತಿ. ಇನ್ನು ರಾಧಿಕಾ ಪಂಡಿತ್ ಸಹ ಅಭಿಮಾನಿಗಳಿಗೆ ತಮ್ಮ ಹೊಸ ಮನೆಯ ಚಿತ್ರಗಳು ಹಾಗೂ ಮಕ್ಕಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ