Napkin free: ದೇಶದ ಮೊದಲ ಸ್ಯಾನಿಟರಿ-ಮುಕ್ತ ಗ್ರಾಮವಾಗಿ ಕೇರಳದ ಕುಂಬಳಂಗಿ ಘೋಷಣೆ!

ಇಲ್ಲಿ 70% ದಷ್ಟು ಮಹಿಳೆಯರು ಮೆನುಸ್ಟ್ರವಲ್ ಕಪ್‌ಗಳನ್ನು ಪ್ರಯತ್ನಿಸಿದ್ದು ಇದನ್ನು ಬಳಸುವುದನ್ನು ಮುಂದುವರಿಸುವುದಾಗಿ ಮಹಿಳೆಯರು ತಿಳಿಸಿದ್ದಾರೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕೇರಳದ ಕುಂಬಳಂಗಿಯು (Kumbalangi) ಭಾರತದ ಮೊದಲ ಸ್ಯಾನಿಟರಿ-ನ್ಯಾಪ್‌ಕಿನ್ ಮುಕ್ತ (Sanitary Napkin Free) ಗ್ರಾಮವಾಗಿದೆ. ಕೇರಳದ ಎರ್ನಾಕುಲಂ ಜಿಲ್ಲೆಯ ಕುಂಬಲಂಗಿ ಗ್ರಾಮವನ್ನು ಮೊದಲ ನ್ಯಾಪ್‌ಕಿನ್ ಮುಕ್ತ ಹಳ್ಳಿ ಎಂಬುದಾಗಿ ಘೋಷಿಸಲಾಗಿದೆ. ಹಿಂದುಸ್ತಾನ್ ಟೈಮ್ಸ್‌ನ ವರದಿಯ ಪ್ರಕಾರ 5,000 ಕ್ಕಿಂತಲೂ ಹೆಚ್ಚಿನ ಮೆನುಸ್ಟ್ರವಲ್ (Menstrual Cups) ಕಪ್‌ಗಳನ್ನು ಹುಡುಗಿಯರು ಹಾಗೂ ಮಹಿಳೆಯರಾದ್ಯಂತ ವಿತರಿಸಲಾಗಿದ್ದು ಕಪ್‌ಗಳನ್ನು ಹೇಗೆ ಬಳಸಬೇಕು ಹಾಗೂ ಅದರ ಪ್ರಯೋಜನಗಳ ಕುರಿತು ಸ್ವಯಂಸೇವಕರು ಮೂರು ತಿಂಗಳುಗಳ ಕಾಲ ತರಬೇತಿಯನ್ನು ನೀಡಲಾಗಿದೆ ಎಂದು ಕಾರ್ಯಾಚರಣೆಯ ಸಂಯೋಜಕರಾದ ಅವಳ್‌ಕಾಯ್ (ಆಕೆಗಾಗಿ) ಸಂಸ್ಥೆ ತಿಳಿಸಿದೆ. ಕೇರಳದ ಗವರ್ನರ್ ಆರಿಫ್ ಮೊಹಮ್ಮದ್ ಖಾನ್ ತಿಳಿಸಿದ್ದು ದೇಶದಲ್ಲಿರುವ ಎಲ್ಲಾ ಹಳ್ಳಿಗಳಿಗೆ ಕುಂಬಲಂಗಿ ಮಾದರಿ ಎಂದೆನಿಸಿದ್ದು ಮಹಿಳೆಯನ್ನು ಸಬಲೀಕರಣಗೊಳಿಸುವ ಇಂತಹ ಯೋಜನೆಗಳು ದೀರ್ಘ ಕಾಲ ಕಾರ್ಯತತ್ಪರವಾಗಿರಬೇಕು ಎಂದು ತಿಳಿಸಿದ್ದಾರೆ. ದೇಶದ (Country) ಹಳ್ಳಿಗಳು ಉದ್ಧಾರವಾದರೆ ಮಾತ್ರವೇ ದೇಶ ಉದ್ಧಾರವಾಗಲು ಸಾಧ್ಯ ಎಂದು ಹೇಳಿದ್ದಾರೆ.

ವೈಯಕ್ತಿಕ ಸ್ವಚ್ಛತೆ
ಎಮ್‌ಪಿ ಹಿಬಿ ಈಡನ್ ಪ್ರಕಾರ ಈ ಯೋಜನೆಯನ್ನು ಅವಳ್‌ಕಾಯ್ (ಆಕೆಗಾಗಿ) ಸ್ಕೀಮ್‌ನ ಭಾಗವಾಗಿ ಸಂಸದೀಯ ಸಂವಿಧಾನದಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ. ಸ್ಕೀಮ್‌ನ ಇತರ ಪಾಲುದಾರರೆಂದರೆ ಎಚ್‌ಎಲ್‌ಎಲ್ (HLL) ಮ್ಯಾನೇಜ್‌ಮೆಂಟ್ ಅಕಾಡೆಮಿಯವರು ಅವರ “ತಿಂಗಳ್” ಸ್ಕೀಮ್ ಮೂಲಕ ಯೋಜನೆಯಲ್ಲಿ ಭಾಗವಹಿಸಿದ್ದು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಇತರ ಪಾಲುದಾರರಾಗಿದ್ದಾರೆ ಎಂಬುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಈಡನ್ ಹಿಂದುಸ್ತಾನ್ ಟೈಮ್ಸ್‌ಗೆ ತಿಳಿಸಿರುವಂತೆ ಈ ಅತ್ಯಾಧುನಿಕ ಯೋಜನೆಯು ಸಿಂಥೆಟಿಕ್ ನ್ಯಾಪ್‌ಕಿನ್‌ಗಳಿಂದ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಲಿದ್ದು ಉದ್ಯೋಗಸ್ಥ ಮಹಿಳೆಯರು ಹಾಗೂ ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಸ್ವಚ್ಛತೆಯನ್ನು ಖಾತ್ರಿಪಡಿಸಲಿದೆ ಎಂದು ತಿಳಿಸಿದ್ದಾರೆ.

ಅನೇಕ ಗಣ್ಯರು ನಟಿ ಪಾರ್ವತಿ ಸೇರಿದಂತೆ ಯೋಜನೆಯನ್ನು ಕಾರ್ಯಗತಗೊಳಿಸಲು ನೆರವಾಗಿದ್ದಾರೆ ಎಂಬುದಾಗಿ ಸ್ಮರಿಸಿಕೊಂಡಿದ್ದಾರೆ. ನಾವು ಹಲವಾರು ಶಾಲೆಗಳಲ್ಲಿ ನ್ಯಾಪ್‌ಕಿನ್ ವೆಂಡಿಂಗ್ ಮೆಶೀನ್‌ಗಳನ್ನು ಅಳವಡಿಸಿದ್ದೇವೆ ಆದರೆ ಆಗಾಗ್ಗೆ ಅವುಗಳು ಸಮಸ್ಯೆಗಳನ್ನು ಉಂಟುಮಾಡುತ್ತಿವೆ. ಆ ಸಮಯದಲ್ಲಿ ಈ ವಿಚಾರ ಮನದಲ್ಲಿ ಮೂಡಿ ಬಂದಿತು ಹಾಗೂ ನಾವು ಈ ಕುರಿತು ವಿವರವಾಗಿ ಅಧ್ಯಯನ ಮಾಡಿದೆವು ಮತ್ತು ತಜ್ಞರ ಸಲಹೆಯನ್ನು ಪಡೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಕಪ್ ಅನ್ನು ಹಲವಾರು ವರ್ಷಗಳ ಕಾಲ ಬಳಸಬಹುದಾಗಿದ್ದು ಇದು ಹೆಚ್ಚು ಆರೋಗ್ಯಕರವಾಗಿದೆ ಎಂಬುದಾಗಿ ತಜ್ಞರು ತಿಳಿಸಿದ್ದಾರೆ ಎಂದು ಈಡನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Side Effects Of Sanitary Pads: ಸ್ಯಾನಿಟರಿ ಪ್ಯಾಡ್​ ಬಳಕೆ ಮಾಡುವಾಗ ಈ ವಿಚಾರಗಳನ್ನು ನೆನಪಿನಲ್ಲಿಡಿ..

ಕೈಗೆಟಕುವ ದೀರ್ಘ-ಕಾಲದ ವ್ಯವಸ್ಥೆ
ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್‌ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿರುವಂತೆ, 70% ದಷ್ಟು ಮಹಿಳೆಯರು ಮೆನುಸ್ಟ್ರವಲ್ ಕಪ್‌ಗಳನ್ನು ಪ್ರಯತ್ನಿಸಿದ್ದು ಇದನ್ನು ಬಳಸುವುದನ್ನು ಮುಂದುವರಿಸುವುದಾಗಿ ಮಹಿಳೆಯರು ತಿಳಿಸಿದ್ದಾರೆ ಎಂಬುದಾಗಿ ವರದಿ ಹೇಳಿದೆ. ಸ್ಯಾನಿಟರಿ ಸಂರಕ್ಷಣೆಯು ಅಲಭ್ಯವಾಗಿದ್ದು ಹೆಚ್ಚಿನ ಮಹಿಳೆಯರಿಗೆ ಇದು ಕೈಗೆಟಕುವುದಿಲ್ಲ ಹೀಗಾಗಿ ಅದೆಷ್ಟೋ ಹುಡುಗಿಯರು ಹಾಗೂ ಮಹಿಳೆಯರು ತಮ್ಮ ಮುಟ್ಟಿನ ದಿನಗಳಲ್ಲಿ ಹೆಚ್ಚುವರಿ ಸ್ರಾವದ ಕಾರಣದಿಂದ ಕಚೇರಿ ಶಾಲೆಗೆ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅದೇ ರೀತಿ ಮೂತ್ರ ಸೋಂಕಿನ ಅಪಾಯಗಳಿಗೆ ತುತ್ತಾಗುತ್ತಿದ್ದರು ಎಂಬುದಾಗಿ ಅಧ್ಯಯನವು ತಿಳಿಸಿದೆ. ಪ್ಯಾಡ್‌ಗಳು ಹಾಗೂ ಟಾಂಪೋನ್‌ಗಳಿಗೆ ಬದಲಿಯಾಗಿ ಸುರಕ್ಷಿತ ಹಾಗೂ ಕೈಗೆಟಕುವ ದೀರ್ಘ-ಕಾಲದ ವ್ಯವಸ್ಥೆ ಇದಾಗಿದ್ದು ಮೆನುಸ್ಟ್ರುವಲ್ ಕಪ್‌ಗಳು ಮಿಲಿಯಗಟ್ಟಲೆ ಜೀವನಗಳನ್ನು ರಕ್ಷಿಸಬಹುದು ಎಂದು ತಿಳಿಸಿದೆ.

ಕೊಚ್ಚಿನ್ ಗ್ರಾಮ
ಗ್ರಾಮವು ಭಾರತದ ಮೊದಲ ಮಾದರಿ ಪ್ರವಾಸಿ ಗ್ರಾಮವಾಗಿದೆ. ರಾಜ್ಯಪಾಲರು ಕುಂಬಳಂಗಿಯನ್ನು ಭಾರತದ ಮೊದಲ ಮಾದರಿ ಪ್ರವಾಸೋದ್ಯಮ ಗ್ರಾಮವೆಂದು ಘೋಷಿಸಿದ್ದಾರೆ. ಮಾದರಿ ಗ್ರಾಮ ಯೋಜನೆಯನ್ನು ಪ್ರಧಾನ ಮಂತ್ರಿ ಸಂಸದ್ ಆದರ್ಶ ಗ್ರಾಮ ಯೋಜನೆ (SAGY) ಮೂಲಕ ಜಾರಿಗೊಳಿಸಲಾಗಿದೆ. ಕೊಚ್ಚಿಯಲ್ಲಿರುವ ಪ್ರವಾಸಿಗರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಕುಂಬಳಂಗಿ ಕೂಡ ಹೊಸ ಪ್ರವಾಸಿ ಮಾಹಿತಿ ಕೇಂದ್ರವನ್ನು ಹೊಂದಲಿದೆ. ಇದು ಭಾರತದ ಮೊದಲ ಮಾದರಿ ಪ್ರವಾಸಿ ಗ್ರಾಮ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಇದನ್ನೂ ಓದಿ: Sexual wellness: 7 ವರ್ಷದ ಮಗ ಜಾಹೀರಾತಿನಲ್ಲಿ ಬರುವ ಸ್ಯಾನಿಟರಿ ನ್ಯಾಪ್ಕಿನ್ ಬಗ್ಗೆ ಕೇಳಿದಾಗ ಹೇಗೆ ಉತ್ತರಿಸುವುದು?

2003 ರಲ್ಲಿ ಕೇರಳ ಸರಕಾರವು ತನ್ನ ಮಾದರಿ ಗ್ರಾಮ ಯೋಜನೆಯ ಭಾಗವಾಗಿ ಹಲವಾರು ಗ್ರಾಮಗಳನ್ನು ಆಯ್ಕೆ ಮಾಡಿದಾಗ ಕುಂಬಳಂಗಿ ಮೊದಲ ಆಯ್ಕೆಯಾಗಿತ್ತು. ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 35 ಕಿಮೀ ದೂರದಲ್ಲಿರುವ ಈ ಗ್ರಾಮವು ಸುಮಾರು 1,20,000 ನಿವಾಸಿಗಳನ್ನು ಹೊಂದಿದೆ.
Published by:vanithasanjevani vanithasanjevani
First published: