ದಾಖಲೆಗಳನ್ನು ನಿರ್ಮಿಸಲು ಜನ ಏನೇನ್ ಮಾಡ್ತಾರೆ ನೋಡಿ. 1350ಕ್ಕೂ ಹೆಚ್ಚು ಡಿಸ್ನಿ (Disney Dolls) ಬೊಂಬೆಗಳನ್ನು ಸಂಗ್ರಹಿಸಿದ ಕಾರಣಕ್ಕೆ ದುಬೈ ನಿವಾಸಿಯಾಗಿರುವ 33 ವರ್ಷದ ಕೇರಳದ ಮಹಿಳಾ (Businesswoman) ಉದ್ಯಮಿಯೊಬ್ಬರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್(Limca Book of Records) ಸೇರ್ಪಡೆಯಾಗಿದ್ದಾರೆ. ರಿಜ್ವಾನಾ ಘೋರಿ (Rizwana Ghori) ಕಳೆದ 28 ವರ್ಷಗಳಿಂದ ತನ್ನ ಪೋಷಕರೊಂದಿಗೆ ದುಬೈನಲ್ಲಿ ವಾಸಿಸುತ್ತಿದ್ದಾರೆ. ಆದರೆ, ಆಕೆ ಮೂಲತಃ ಕೇರಳದ ತ್ರಿಶೂರಿನವರು ಎಂದು ಐಎಎನ್ಎಸ್ ವರದಿ ಮಾಡಿದೆ.
ಡಿಸ್ನಿ ಬೊಂಬೆಗಳ ಒಡತಿ
ಸಣ್ಣ ವಯಸ್ಸಿನವಳಾಗಿದ್ದಾಗಲೇ ತನ್ನ ತಂದೆಯ ಮೂಲಕ ಬಂದ ಭಾರಿ ಮೌಲ್ಯದ ಡಿಸ್ನಿ ಬೊಂಬೆಗಳನ್ನುಸಂಗ್ರಹಿಸುವ ಪ್ರವೃತ್ತಿಯು ಇದೀಗ ಅದಕ್ಕಿಂತಲೂ ಹೆಚ್ಚಾಗಿದೆ ಎನ್ನುತ್ತಾರೆ ರಿಜ್ವಾನಾ ಘೋರಿ. ಕಳೆದ 25 ವರ್ಷಗಳಿಂದ ಡಿಸ್ನಿ ಬೊಂಬೆಗಳನ್ನು ಸಂಗ್ರಹಿಸುತ್ತಿರುವ ಅವರು, ಜಗತ್ತಿನ ಎಲ್ಲ ಭಾಗಗಳಿಂದ ಖರೀದಿಸಿರುವ 1350ಕ್ಕೂ ಹೆಚ್ಚು ಡಿಸ್ನಿ ಬೊಂಬೆಗಳ ಒಡತಿಯಾಗಿದ್ದಾರೆ.
ತಾನು ಸಂಗ್ರಹಿಸಿರುವ ಎಲ್ಲ ಬೊಂಬೆಗಳೂ ಜಗತ್ತಿನಾದ್ಯಂತ ಇರುವ ಡಿಸ್ನಿಲ್ಯಾಂಡ್, ಡಿಸ್ನಿವರ್ಲ್ಡ್, ಉದ್ಯಾನವನ, ಅಂಗಡಿಗಳು ಹಾಗೂ ಬೊಂಬೆಗಳ ಅಂಗಡಿಗಳಿಂದ ಸಂಗ್ರಹಿಸಿದವಾಗಿವೆ ಎನ್ನುತ್ತಾರೆ ರಿಜ್ವಾನಾ ಘೋರಿ.
“ನನ್ನ ಈ ಬದುಕು ಪ್ರವೃತ್ತಿಗಿಂತ ಹೆಚ್ಚಿನದಾಗಿದೆ. ಇದು ನಾನೇನಾಗಿದ್ದೇನೆ ಅದರ ಭಾಗ ಮತ್ತು ಸರಕಾಗಿದೆ. ನನ್ನ ತಂದೆ ನನ್ನಲ್ಲಿ ಇಂತಹ ಆಸಕ್ತಿಯನ್ನು ಬೆಳೆಸಿದರು. ನನ್ನ ಬಳಿ ಜಗತ್ತಿನ ಎಲ್ಲೆಡೆಯಿಂದ ಸಂಗ್ರಹಿಸಿರುವ 1350ಕ್ಕೂ ಹೆಚ್ಚು ಬೆಲೆ ಬಾಳುವ ಡಿಸ್ನಿ ಗೊಂಬೆಗಳ ಸಂಗ್ರಹವಿದೆ. ಭಾರತೀಯರೊಬ್ಬರು ಅತಿ ಹೆಚ್ಚು ಹೊಂದಿರುವ ಬೆಲೆ ಬಾಳುವ ಡಿಸ್ನಿ ಬೊಂಬೆಗಳ ಪೈಕಿ ನಾನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ವಿಜೇತಳಾಗಿದ್ದೇನೆ” ಎಂದು ಅವರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: 'ಮಹಿಳಾ ಶಬರಿಮಲೆ' ಎಂದೇ ಖ್ಯಾತಿ ಪಡೆದ Mandaikadu Temple; ಏನಿದರ ವಿಶೇಷತೆ, ಎಲ್ಲಿದೆ ಈ ದೇವಸ್ಥಾನ?
ಸಂಗ್ರಹಕ್ಕೆ 80 ಲಕ್ಷ ರೂ. ಪ್ರಸ್ತಾವನೆ
ಈಗ ಮಾರುಕಟ್ಟೆಯಲ್ಲಿ ಮೂರು ಕೋಟಿ ರೂ. ಬೆಲೆ ಬಾಳುವ ಡಿಸ್ನಿ ಬೊಂಬೆ ಸಂಗ್ರಹವನ್ನು ಮಾರಿಬಿಡುವಂತೆ ಹಲವಾರು ಮಂದಿ ನನಗೆ ಪದೇ ಪದೇ ಹೇಳಿದ್ದರು ಎಂದು ಆಕೆ ಹೇಳಿಕೊಂಡಿದ್ದಾಳೆ. ಪ್ರಸಿದ್ಧ ವ್ಯಕ್ತಿಯೊಬ್ಬರು ತನ್ನ ಸಂಗ್ರಹಕ್ಕೆ 80 ಲಕ್ಷ ರೂ. ನೀಡುವ ಪ್ರಸ್ತಾವನೆ ಮಂಡಿಸಿದಾಗ ನಾನದನ್ನು ನಿರಾಕರಿಸಿದೆ ಎಂದೂ ಆಕೆ ಹೇಳಿಕೊಂಡಿದ್ದಾಳೆ. ಆಕೆಯ ಸಂಗ್ರಹವು ಪ್ರಭಾವಶಾಲಿಯಾಗಿದ್ದು, ಈವರೆಗೆ ಜಗತ್ತಿನಾದ್ಯಂತ ತಯಾರಾಗಿರುವ ಕೇವಲ 40 ವಿಶಿಷ್ಟ ಬೊಂಬೆಗಳಾದ ಉದ್ದನೆಯ ಸಿಂಹ ರಾಜ ‘ಸಿಂಬಾ’ ಕೂಡಾ ಆಕೆಯ ಸಂಗ್ರಹದಲ್ಲಿ ಸೇರಿದೆ.
ತನ್ನ ತಾಯಿಯಿಂದ ಸಿಂಡ್ರೆಲಾ ಕತೆ ಕೇಳಿದ ನಂತರ ನಾನು ಡಿಸ್ನಿ ವರ್ಲ್ಡ್‌ನೆಡೆಗೆ ಆಕರ್ಷಿತಳಾದೆ ಎಂದು ರಿಜ್ವಾನಾ ಹೇಳಿಕೊಂಡಿದ್ದಾಳೆ. ಆಕೆಯ ಶಾಲಾ ದಿನ ಹಾಗೂ ಹದಿಹರೆಯದ ವರ್ಷಗಳಲ್ಲಿ ವ್ಯವಹಾರದ ಪ್ರವಾಸಕ್ಕೆಂದು ಬ್ರಿಟನ್ ಹಾಗೂ ಅಮೆರಿಕಗೆ ತೆರಳಿದಾಗ ಆಕೆಯ ತಂದೆ ಡಿಸ್ನಿ ಬೊಂಬೆಗಳನ್ನು ಖರೀದಿಸಿ ತರುತ್ತಿದ್ದರಂತೆ. ವೈವಿಧ್ಯಮಯ ಬೊಂಬೆಗಳ ಸಂಗ್ರಾಹಕಿಯ ಮುಂದಿನ ಗುರಿ ಬೊಂಬೆಗಳ ಸಂಗ್ರಹದಲ್ಲಿ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿಯುವುದಾಗಿದೆ.
ಇದನ್ನೂ ಓದಿ: Heart attack: ಚಲಿಸುತ್ತಿದ್ದ ಬಸ್‌ನಲ್ಲಿಯೇ CPR ಚಿಕಿತ್ಸೆ ನೀಡಿ ಯುವಕನ ಜೀವ ಉಳಿಸಿದ ನರ್ಸ್..!
ವಿಶ್ವ ದಾಖಲೆಗೆ ಅರ್ಜಿ
“ಇಡೀ ವಿಶ್ವದಲ್ಲಿ 1350ಕ್ಕೂ ಹೆಚ್ಚು ಬೆಲೆ ಬಾಳುವ ಡಿಸ್ನಿ ಬೊಂಬೆಗಳನ್ನು ಯಾರಾದರೂ ಹೊಂದಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ. ಹೀಗಾಗಿ ನಾನು ಗಿನ್ನೆಸ್ ವಿಶ್ವ ದಾಖಲೆಗೆ ಅರ್ಜಿ ಹಾಕುತ್ತಿದ್ದೇನೆ. ಅವರು ಈ ಕುರಿತು ಪರಿಶೀಲಿಸಿ, ಸತ್ಯ ತಿಳಿದುಕೊಳ್ಳಲಿ. ಆದರೆ, ನನಗಂತೂ ನನ್ನ ಬಳಿ ಗರಿಷ್ಠ ಪ್ರಮಾಣದ ಸಂಗ್ರಹವಿದೆ ಎಂಬ ವಿಶ್ವಾಸವಿದೆ” ಎನ್ನುತ್ತಾರೆ ರಿಜ್ವಾನಾ.
ನಾನು ಈ ದುಬಾರಿ ಬೆಲೆಯ ಡಿಸ್ನಿ ಬೊಂಬೆಗಳನ್ನು ಜಗತ್ತಿನ ಯಾವ ಯಾವ ಭಾಗಗಳಲ್ಲಿ ದೊರೆಯುತ್ತದೊ ಅಲ್ಲಿಂದೆಲ್ಲ ಅತ್ಯಂತ ಪ್ರೀತಿಯಿಂದ ಸಂಗ್ರಹಿಸಿದ್ದೇನೆ. ದತ್ತಿ ನೆರವಿಗಾಗಿ ನಾನು ನನ್ನ ಸಂಗ್ರಹದಲ್ಲಿನ ಕೆಲವು ಬೊಂಬೆಗಳನ್ನು ಮಾರುವ ಸಾಧ್ಯತೆಯೂ ಇದೆ” ಎನ್ನುತ್ತಾರೆ ರಿಜ್ವಾನಾ.ರಿಜ್ವಾನಾರ ತಾತಂದಿರು ಅಫ್ಘಾನಿಸ್ತಾನಕ್ಕೆ ಸೇರಿದ್ದರೂ, ರಿಜ್ವಾನಾ ಹುಟ್ಟಿದ ನಂತರ ಕೇರಳದ ತ್ರಿಶೂರ್‌ನಲ್ಲಿ ನೆಲೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ