• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Success Story: ಈ ಮಹಿಳೆಯ ಕೈಯಲ್ಲಿ ಸಿಕ್ಕಿ ವೇಸ್ಟ್ ಬಾಟಲಿಯೂ ಬೆಸ್ಟ್ ಆಯ್ತು! 21 ಸಾವಿರ ಬಾಟಲ್‌ನಿಂದ ಅದ್ಭುತ ಸೃಷ್ಟಿಸಿದ ಕಲಾಕಾರ್ತಿ

Success Story: ಈ ಮಹಿಳೆಯ ಕೈಯಲ್ಲಿ ಸಿಕ್ಕಿ ವೇಸ್ಟ್ ಬಾಟಲಿಯೂ ಬೆಸ್ಟ್ ಆಯ್ತು! 21 ಸಾವಿರ ಬಾಟಲ್‌ನಿಂದ ಅದ್ಭುತ ಸೃಷ್ಟಿಸಿದ ಕಲಾಕಾರ್ತಿ

ಸಾಧನೆ ಮಾಡಿದ ಮಹಿಳೆ

ಸಾಧನೆ ಮಾಡಿದ ಮಹಿಳೆ

ಟಿನ್ ಕ್ಯಾನ್ ​, ಟೈರ್​ ರಿಮ್, ಬಕೆಟ್​, ಗಾಜು ಇವುಗಳನ್ನು ಉಚಿತವಾಗಿ ಪಡೆದುಕೊಂಡರು. ಅಲ್ಲಿಂದಲೇ ಬಾಟಲಿಗಳನ್ನು ಸಂಗ್ರಹಿಸಿ ಗೃಹಾಲಂಕಾರದ ವಸ್ತುಗಳನ್ನು ವಿನ್ಯಾಸ ಮಾಡಿ ಯಶಸ್ವಿಯಾಗಿದ್ದಾರೆ.

  • Share this:
  • published by :

ಭಾರತವು ಪ್ರತಿ ವರ್ಷ 3 ಮಿಲಿಯನ್ ಟನ್​ ಗಾಜಿನ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಇದರಲ್ಲಿ ಕೇವಲ 45 ಪ್ರತಿಶತ ಗಾಜನ್ನು ಮರುಬಳಸಲಾಗುತ್ತದೆ. ಉಳಿದವು ಭೂಮಿಯೊಳಗೆ ಸೇರುತ್ತವೆ. ಇಂತಹ 21000 ಗಾಜಿನ ಬಾಟಲಿಗಳನ್ನು ಬಳಸಿಕೊಂಡು ಕೇರಳದ (Kerala) ರೆಂಜಿನಿಯವರು ಗೃಹಾಲಂಕಾರ ವಸ್ತುಗಳನ್ನು ತಯಾರಿಸಿದ್ದಾರೆ. ಮದುವೆಯ ನಂತರ 2015 ರಲ್ಲಿ ದುಬೈನಿಂದ ಭಾರತಕ್ಕೆ ಬಂದಿದ್ದ ರೆಂಜಿನಿಯವರು ತಮ್ಮ ಪತಿಯ ಸ್ಟುಡಿಯೋಗಾಗಿ ಗುಜರಿ ವಸ್ತುಗಳ ಕೆಲೆಕ್ಷನ್​ಗಾಗಿ ಸ್ಕ್ರ್ಯಾಪ್​ ಡೀಲರ್ಸ್​ ಬಳಿ ಹೋಗಿದ್ದರು. ಅಲ್ಲಿ ಕಂಡ ಗಾಜಿನ ತ್ಯಾಜ್ಯಗಳು ಅವರೊಳಗಿನ ಕಲಾವಿದೆಯನ್ನು ಎಚ್ಚರಗೊಳಿಸಿತು. ಟಿನ್ ಕ್ಯಾನ್ (Tin Tan)​, ಟೈರ್​ ರಿಮ್, ಬಕೆಟ್​, ಗಾಜು (Glass) ಇವುಗಳನ್ನು ಉಚಿತವಾಗಿ ಪಡೆದುಕೊಂಡರು. ಅಲ್ಲಿಂದಲೇ ಬಾಟಲಿಗಳನ್ನು ಸಂಗ್ರಹಿಸಿ ಗೃಹಾಲಂಕಾರದ ವಸ್ತುಗಳನ್ನು ವಿನ್ಯಾಸ ಮಾಡಿ ಯಶಸ್ವಿಯಾಗಿದ್ದಾರೆ.


ವಿವಿಧ ಕಲಾಕೃತಿಗಳ ಅನಾವರಣ


ಲ್ಯಾಂಪ್​ಗಳು, ಸೈಡ್​ಟೇಬಲ್​, ವಾಲ್​ ಹ್ಯಾಂಗಿಂಗ್, ಪ್ಯಾಲೆಟ್​​, ಗಡಿಯಾರಗಳು ಈ ಕಲಾತ್ಮಕ ತುಣುಕುಗಳಾಗಿವೆ. ಬಾಲ್ಯದಲ್ಲೇ ಅವರಿಗೆ ಚಿತ್ರಕಲೆ ಮೇಲೆ ಆಸಕ್ತಿ ಇತ್ತು.


ಜೊತೆಗೆ ತಮ್ಮ ಪತಿಯ ಸ್ಟುಡಿಯೋ ಕೂಡ ಇತ್ತು. ಜೊತೆಗೆ ತಮ್ಮ ಪೇಂಟಿಂಗ್​ ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಿದ್ದರು. ಇದೆಲ್ಲವೂ ಅವರಲ್ಲಿ ಸಾಕಷ್ಟು ಧೈರ್ಯ ತುಂಬಿ ಈ ಕೆಲಸಕ್ಕೆ ಪ್ರೇರಣೆ ನೀಡಿದೆ.


ಇದನ್ನೂ ಓದಿ: Aretto Startup​ ಹೊಸ ಆವಿಷ್ಕಾರ; ಮಕ್ಕಳು ಬೆಳೆದಂತೆ ದೊಡ್ಡದಾಗುತ್ತೆ ಶೂ!


ವಾಪಸಿ ಬ್ರ್ಯಾಂಡ್


ಈ ಕಲಾಕೃತಿಗಳನ್ನು ನೋಡಿದರೆ ಇದು ವೇಸ್ಟ್​​ನಿಂದ ತಯಾರಿಸಿದ್ದು ಎಂದು ಹೇಳಲು ಸಾಧ್ಯವಿಲ್ಲ. ಅಷ್ಟು ಅದ್ಭುತ ಕಟ್ಸ್​ ಇದರಲ್ಲಿವೆ. ಈ ಕಲಾಕೃತಿಗಳಿಗೆ ಸ್ನೇಹಿತರಿಂದ ಹೆಚ್ಚು ಬೇಡಿಕೆ ಬರಲು ಆರಂಭವಾದಾಗ ವಾಪಸಿ ಎನ್ನುವ ಬ್ರ್ಯಾಂಡ್​ ಆರಂಭಿಸಿದರು.


ಮಹಿಳಾ ಉದ್ಯಮಿಗಳ ಸ್ಪರ್ಧೆ


2020 ರಲ್ಲಿ ಕ್ಲೈಮೆಟ್​ ಕಲೆಕ್ಟೀವ್​ ಸಂಸ್ಥೆಯ ಪರಿಚಯವಾಯಿತು. ಕೊಚ್ಚಿಯಲ್ಲಿ ಇವರು ಮಹಿಳಾ ಉದ್ಯಮಿಗಳಿಗಾಗಿ ಲಾಂಚ್​ಪ್ಯಾಡ್, ಕ್ಲೈಮೆಟ್​ ಚೇಂಜ್​ ಎನ್ನುವ ಸ್ಪರ್ಧೆ ಆಯೋಜಿಸಿದ್ದರು.


ಗಾಜಿನ ಬಾಟಲಿಗಳು ಭೂಗರ್ಭ ಸೇರದಂತೆ ಪರಿಸರವನ್ನು ಸಂರಕ್ಷಿಸುವ ಅವರ ಕೆಲಸ ಅವರಿಗೆ ಮೆಚ್ಚುಗೆಯಾಯಿತು. ವ್ಯಾಪಾರದಲ್ಲಿ ಕಡಿಮೆ ಅನುಭವವಿದ್ದ ರೆಂಜಿನಿಯವರನ್ನು ಲಾಂಚ್​ ಪ್ಯಾಡ್​ ಸೆಮಿಫೈನಲ್​ಗೆ ತಲುಪಿಸಿದರು.


ಬದುಕು ಬದಲಿಸಿದ ಐಐಎಂ


ಬೆಂಗಳೂರಿನ ಐಐಎಂ ಸ್ಟಾರ್ಟ್​ಅಪ್​ಗಳಲ್ಲಿ ಭಾಗವಹಿಸಲು ಅವಕಾಶ ದೊರಕಿತು. ಅಲ್ಲಿ ವ್ಯವಹಾರದ ಎಲ್ಲಾ ಜ್ಞಾನವನ್ನು ಕಲಿತುಕೊಂಡ ರೆಂಜಿನಿಯವರಿಗೆ ತಮ್ಮ ಬಾಟಲಿ ಕಲೆಯಲ್ಲಿರುವ ನೈಜ ಶಕ್ತಿ ಅರಿವಿಗೆ ಬಂದಿದೆ.


ಇದನ್ನೂ ಓದಿ: ಜನರನ್ನು ಕಂಡರೆ ಕೂಗುತ್ತಾರೆ, ಓಡಿ ಹೋಗುತ್ತಾರೆ ಸಹೋದರರು, ಈ ಸಮಸ್ಯೆಗೆ ಕಾರಣ ಏನು?


ಸ್ಕ್ರ್ಯಾಪ್​ ವಿತರಕರು ಮತ್ತು ಸಂಗ್ರಹಣಾ ಡ್ರೈವ್​ಗಳಲ್ಲಿ ಜನರಿಂದ ಗಾಜಿನ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಅದರಲ್ಲಿ ಉತ್ಕೃಷ್ಟ ಕಲಾಕೃತಿ ಮಾಡುತ್ತಾರೆ.


ಗಾಜಿನ ಕಲಾಕೃತಿ ಅಪಾಯಕಾರಿ ಕೆಲಸ


ಇನ್ನೂ ಗಾಜಿನ ಕಲಾಕೃತಿ ಮಾಡುವುದು ಅಪಾಯಕಾರಿ ಕೆಲಸ. ಇಡೀ ದಿನ ತಾಳ್ಮೆಯಿಂದ ಕೆಲಸ ನಿರ್ವಹಿಸಬೇಕು. ಗಾಜು ತುಂಬಾ ಸೂಕ್ಷ್ಮ. ಗಾಜಿನ ಉಷ್ಣ ನಿರೋಧಕತೆಯ ಪ್ರಮಾಣ, ಕರಗುವ ಪ್ರಮಾಣ ಇದೆಲ್ಲಾ ತಿಳಿದಿರಬೇಕು. ಇದಕ್ಕಾಗಿ ಸಾಕಷ್ಟು ಜನರನ್ನು ಭೇಟಿ ಮಾಡಿ ರಿಸರ್ಚ್​ ಮಾಡಿದ್ದೇನೆ. ಅವರ ನೆರವಿನಿಂದ ಯಶಸ್ಸು ಸಿಕ್ಕಿದೆ ಎನ್ನುತ್ತಾರೆ ರೆಂಜಿನಿ.


ಇದನ್ನೂ ಓದಿ: ಅಯ್ಯಬ್ಬಾ, ಇದು ಸಾಮಾನ್ಯದ ಮೀನಲ್ಲ; ಬಿಟ್ರೆ ರಕ್ತವನ್ನೇ ಹೀರುತ್ತಂತೆ!


ಗಾಜಿನ ಜೊತೆಗೆ ಇನ್ನಿತರ ಕಲಾಕೃತಿಗಳು


ಗಾಜಿನೊಟ್ಟಿಗೆ 5000 ತೆಂಗಿನ ಚಿಪ್ಪುಗಳು, 800 ಕೆಜಿ ಮರ, 500 ಕೆಜಿ ಲೋಹದ ವೇಸ್ಟ್​ಗಳನ್ನು ಬಳಸಿ ಮನೆಯ ಅಲಂಕಾರಿಕ ವಸ್ತುಗಳನ್ನು ವಿನ್ಯಾಸ ಮಾಡಿದ್ದಾರೆ. ಇಲ್ಲಿಯವರೆಗೆ 5000 ಪ್ರಾಡಕ್ಟ್​ಗಳನ್ನು ಮಾರಾಟ ಮಾಡಿದ್ದಾರೆ.




ಇನ್ನೂ ರೆಂಜಿನಿ ಅವರಿಂದ ಇನ್​ಸ್ಟಾಗ್ರಾಂ ಮೂಲಕ ದೀಪವನ್ನು ಖರೀದಿಸಿದವರು ಬಾಟಲಿಯ ಚಮತ್ಕಾರಕ್ಕೆ ಬೆರಗಾಗುತ್ತಾರೆ. ಇದನ್ನು ಬಾಟಲಿಯಿಂದ ಮಾಡಿದ್ದೇ ಎಂದು ಉದ್ಘಾರ ತೆಗೆಯುತ್ತಾರೆ. ಇನ್ನೂ ರೆಂಜಿನಿಯವರ ಉತ್ಪನ್ನಗಳು ಅವರ ಇನ್​ಸ್ಟಾಗ್ರಾಂ ಖಾತೆ, ಅಮೇಜಾನ್, ಬ್ರೌನ್​ ಲೀವಿಂಗ್​, ಲೂಪಿಫೈನಂತಹ ವೆಬ್​ಸೈಟ್​ಗಳಲ್ಲಿ ಲಭ್ಯವಿದೆ.




ವಾಪಸಿ ಎಂದರೆ ಮರಳುವುದು

top videos


    ವಾಪಸಿ ಎನ್ನುವುದು ಮರಳುವುದು ಎಂದರ್ಥ. ಒಮ್ಮೆ ಮನೆಯಿಂದ ಬಿಸಾಡಿದ ತ್ಯಾಜ್ಯ ಮತ್ತೊಂದು ಸುಮಧುರ ರೂಪದಲ್ಲಿ ಮನೆಯನ್ನು ಅಲಂಕರಿಸುವುದು ಇದರ ವಿಶೇಷ ಎನ್ನುತ್ತಾರೆ ರೆಂಜಿನಿ.

    First published: