Lottery: ದುಬೈನಲ್ಲಿ 44 ಕೋಟಿಯ ಲಾಟರಿ ಗೆದ್ದ ಭಾರತದ ಮಹಿಳೆ

Indian Women Wins Lottery: ಇದೀಗ ಭಾರತದ ಮಹಿಳೆಯೊಬ್ಬರು ವಿದೇಶದಲ್ಲಿ ಲಾಟರಿ ಗೆದ್ದಿದ್ದಾರೆ. ಇದೇನು ಸಾವಿರಗಳಲ್ಲಿ ಅಲ್ಲ, ಲಕ್ಷವೂ ಅಲ್ಲ, ಒಂದೆರಡು ಕೋಟಿಯಲ್ಲ, ಭರ್ತಿ 44 ಕೋಟಿ ರೂಪಾಯಿಗಳು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಲಾಟರಿ (Lottery) ಅಂದ್ರೆ ಎಲ್ಲವೂ ಅದೃಷ್ಟದ ಮೇಲೆ ಅವಲಂಬಿಸಿದ ಆಟ. ಯಾರಿಗೆ ಹೊಡೆಯುತ್ತದೋ, ಬಿಡುತ್ತದೋ ಒಂದೂ ನಿರೀಕ್ಷಿಸಲು ಸಾಧ್ಯವಿಲ್ಲ. ಲಾಟರಿ ಟಿಕೆಟ್ ಮಾರಾಟ ಅಕ್ರಮ ಮತ್ತು ಸಕ್ರಮವಾಗಿ ನಡೆಯುತ್ತದೆ. ವಿದೇಶಗಳಲ್ಲಿ (Foreign) ಲಾಟರಿ ಉದ್ಯಮ ಹೆಚ್ಚಿದೆ. ಭಾರತಕ್ಕೆ (India) ಹೋಲಿಸಿದಲ್ಲಿ ವಿದೇಶಗಳಲ್ಲಿ ಲಾಟರಿ ಕೊಳ್ಳುವವರು ಹಾಗೂ ಮಾರುವವರ ಸಂಖ್ಯೆ ಹೆಚ್ಚು. ನೆರೆ ರಾಜ್ಯ ಕೇರಳದಲ್ಲಿಯೂ ಸಕ್ರಮವಾಗಿ ಲಾಟರಿ ಟಿಕೆಟ್‌ಗಳನ್ನು(Ticket) ಮಾರಾಟ ಮಾಡುತ್ತಾರೆ. ಇನ್ನೂ ಮುಖ್ಯವಾಗಿ ಲಾಟರಿಯನ್ನು ಮಾರಾಟ ಮಾಡಿಕೊಂಡು ಬದುಕುವ ಬಹಳಷ್ಟು ಜನರಿದ್ದಾರೆ. ಇದು ಬಹಳಷ್ಟು ಕುಟುಂಬಗಳಿಗೆ ಆದಾಯದ ದಾರಿಯೂ ಹೌದು.

  ಇದೀಗ ಭಾರತದ ಮಹಿಳೆಯೊಬ್ಬರು ವಿದೇಶದಲ್ಲಿ ಲಾಟರಿ ಗೆದ್ದಿದ್ದಾರೆ. ಇದೇನು ಸಾವಿರಗಳಲ್ಲಿ ಅಲ್ಲ, ಲಕ್ಷವೂ ಅಲ್ಲ, ಒಂದೆರಡು ಕೋಟಿಯಲ್ಲ, ಭರ್ತಿ 44 ಕೋಟಿ ರೂಪಾಯಿಗಳು. ದುಬೈನಲ್ಲಿ ವಾಸಿಸುವ ಭಾರತೀಯ ಮಹಿಳೆ 44.75 ಕೋಟಿಯ ಲಾಟರಿ ಟಿಕೆಟ್ ಗೆದ್ದಿದ್ದಾರೆ. ಬಿಗ್ ಟಿಕೆಟ್ ಲಾಟರಿಯಲ್ಲಿ ಮಹಿಳೆಗೆ ಅದೃಷ್ಟ ಖುಲಾಯಿಸಿದ್ದು ಇವರೀಗೆ ಕೋಟಿಗಳ ಒಡತಿ. ಕೇರಳ ಮೂಲದ ಲೀನಾ ಜಲಾಲ್ 22 ಮಿಲಿಯನ್ ದಿರಂ ಗೆದ್ದಿದ್ದಾರೆ. ಅಬುದಾಬಿಯ ಬುಗ್ ಟಿಕೆಟ್‌ನ ಪ್ರತಿವಾರ ಡ್ರಾ ಮಾಡಲಾಗುವ ಟಿಕೆಟ್‌ನಲ್ಲಿ ಹಣ ಗೆದ್ದಿದ್ದಾರೆ ಮಹಿಳೆ.

  10 ಜನರೊಂದಿಗೆ ಟಿಕೆಟ್ ಶೇರ್
  ಫೆಬ್ರವರಿ ೩ರಂದು ನಡೆದ ಡ್ರಾನಲ್ಲಿ ಜಲಾಲ್ ಅವರ 144387 ಟಿಕೆಟ್‌ಗೆ ಬಂಪರ್ ಹೊಡೆದಿದೆ. ಗಲ್ಫ್‌ ನ್ಯೂಸ್ ಪ್ರಕಾರ ಜಲಾಲ್ ಅವರು ಅಬುದಾಬಿಯಲ್ಲಿ ಎಚ್‌ಆರ್ ಆಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಟಿಕೆಟ್‌ನ್ನು 10 ಜನರೊಂದಿಗೆ ಶೇರ್ ಮಾಡಲು ಬಯಸಿದ್ದು ಸ್ವಲ್ಪ ಹಣವನ್ನು ಚಾರಿಟಿ ಕೆಲಸಗಳಿಗಾಗಿ ಬಳಸಲು ಬಯಸಿದ್ದಾಗಿ ಹೇಳಿದ್ದಾರೆ.

  ಇದನ್ನೂ ಓದಿ: ಇವ್ರು ಬಾಚಣಿಗೆ ಕೊಟ್ಟು ಪ್ರೀತಿ ಎಕ್ಸ್​ಪ್ರೆಸ್​ ಮಾಡ್ತಾರೆ! ಮದುವೆಗೂ ಮುನ್ನ ದೈಹಿಕ ಸಂಪರ್ಕಕ್ಕೂ ಇಲ್ಲಿ ಓಕೆ ಅಂತಾರೆ

  ಕೇರಳದ ಮತ್ತೊಬ್ಬ ಯುವಕನಿಗೆ ಬಂಪರ್
  ಆ ಸಂಜೆ ಟಿಕೆಟ್ ಡ್ರಾ ಮಾಡಿದಾಗ ಅದೃಷ್ಟಶಾಲಿಯಾಗಿದ್ದ ಭಾರತದ ಮಹಿಳೆ ಅವರು ಮಾತ್ರವಲ್ಲ.ಸುರೈಫ್ ಸುರು ಎಂಬ ಇನ್ನೊಬ್ಬ ಕೇರಳ ಮೂಲದ ವ್ಯಕ್ತಿಗೂ ಬಂಪರ್ ಹೊಡೆದಿದೆ. ಅವರಿಗೆ 1 ಮಿಲಿಯನ್ ದಿರಂ ಮೊತ್ತ ಸಿಕ್ಕಿದೆ. ಸುರು ಕೇರಳದ(Kerala) ಮಲಪ್ಪುರಂ ಜಿಲ್ಲೆಯವರಾಗಿದ್ದು ತನ್ನ ಟಿಕೆಟ್ ಅನ್ನು 29 ಜನರೊಂದಿಗೆ ಹಂಚಿಕೊಳ್ಳಲಿದ್ದು ಇನ್ನೂ ಸ್ವಲ್ಪ ಹಣವನ್ನು ತಮ್ಮ ಬಡ ಗೆಳೆಯರಿಗೆ ನೀಡುವುದಾಗಿ ಹೇಳಿದ್ದಾರೆ. ಸ್ವಲ್ಪ ಹಣವನ್ನು ನಾನು ನನ್ನ ಪೋಷಕರಿಗೆ ನೀಡುತ್ತೇನೆ. ಉಳಿದಂತೆ ನನ್ನ ಪತ್ನಿ ಹಾಗೂ ಮಗಳ ಭವಿಷ್ಯದ ಭದ್ರತೆಗೆ ಹಣವನ್ನು ಬಳಸುತ್ತೇನೆ ಎಂದಿದ್ದಾರೆ.

  ಕಳೆದ ವರ್ಷ ದುಬೈನಲ್ಲಿ ಡ್ರೈವರ್(Driver) ಆಗಿ ಕೆಲಸ ಮಾಡುತ್ತಿದ್ದ ಕೇರಳದ ವ್ಯಕ್ತಿಗೆ ಜಾಕ್‌ಪಾಟ್ ಸಿಕ್ಕಿತ್ತು. ಅವರು ಲಾಟರಿಯಲ್ಲಿ ಬರೋಬ್ಬರಿ 40 ಕೋಟಿ ರೂಪಾಯಿಗಳನ್ನು ಗೆದ್ದಿದ್ದರು. ಚಾಲಕನೊಬ್ಬನ ಜೀವನದಲ್ಲಿ ಈ ಮೊತ್ತ ಬಹಳಷ್ಟು ದೊಡ್ಡದೆಂಬುದನ್ನು ಹೇಳಬೇಕಿಲ್ಲ. ರಂಜಿತ್ ಸೋಮರಂಜನ್ ಹಾಗೂ ಅವರ ಸಹಚರರು ಗೆದ್ದ ಟಿಕೆಟ್‌ನ ಪಾಲುದಾರರುಎನ್ನಲಾಗಿತ್ತು.

  ನಾನು ಇಲ್ಲಿ ೨೦೦೮ರಿಂದ ದುಡಿಯುತ್ತಿದ್ದೇನೆ. ದುಬೈ ಟ್ರಾಕ್ಸಿ ಹಾಗೂ ಇತರ ಕಂಪನಿಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಕಳೆದ ವರ್ಷ ಚಾಲಕನಾಗಿ ಹಾಗೂ ಸೇಲ್ಸ್‌ಮೇನ್ ಆಗಿ ಕೆಲಸ ಮಾಡುತ್ತಿದ್ದರೂ ನನ್ನ ವೇತನದಲ್ಲಿ ಬಹಳಷ್ಟು ಕಟ್ ಮಾಡಲಾಗುತ್ತಿತ್ತು, ಹೀಗಾಗಿ ಜೀವನ ಕಷ್ಟವಾಗಿತ್ತು ಎಂದು ಸೋಮರಂಜನ್ ಹೇಳಿದ್ದರು.

  ಇದನ್ನೂ ಓದಿ: ಸಂಗಾತಿ ಸಾವಿನ ಬಳಿಕ ಒಂಟಿಯಾಗಿರುವ ಶಂಕರ್ ಆನೆ ಬಿಡುಗಡೆಗೆ ಹೆಚ್ಚಿದ ಒತ್ತಡ, ಏನಿದು ಸ್ಟೋರಿ?

  ಜುಲೈ 2020ರಲ್ಲಿ ಇಂಡಿಯನ್ ಹೈಸ್ಕೂಲ್ ಪ್ರಿನ್ಸಿಪಾಲ್ ಆಗಿದ್ದ ಅಜ್ಮಾನ್ ಎಂಬವರು 1 ಮಿಲಿಯನ್ ಡಾಲರ್ ಲಾಟರಿ ಗೆದ್ದಿದ್ದರು. ಜುಲೈ ಇಂಡಿಯನ್ ಹೈಸ್ಕೂಲ್ ಪ್ರಿನ್ಸಿಪಾಲ್ ಆಗಿದ್ದ ಅಜ್ಮಾನ್ ಎಂಬವರು 1 ಮಿಲಿಯನ್ ಡಾಲರ್ ಲಾಟರಿ ಗೆದ್ದಿದ್ದರು.
  Published by:Sandhya M
  First published: