Kerala: ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕನಿಗೆ ದಂಡ! ಕಾರಣ ಕೇಳಿದ್ರೆ ನಗೋದು ಪಕ್ಕಾ

ಇತ್ತೀಚೆಗೆ ಪೊಲೀಸರು ನೀಡುವ ಚಲನ್ ಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಯಾಗಿ ತುಂಬಾನೇ ತಮಾಷೆಯಾಗಿ ಬೇರೆ ಏನನ್ನೋ ಬರೆದಿರುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ನಡುವೆ ಸಂಚಾರಿ ಪೊಲೀಸರು ಸ್ವಲ್ಪ ಮಟ್ಟಿಗೆ ಈ ಚಲನ್ ಗಳನ್ನು ನೀಡುವುದರಲ್ಲಿ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ.

ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕನಿಗೆ ದಂಡ

ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕನಿಗೆ ದಂಡ

  • Share this:
ಸ್ಕೂಟರ್ (Scooter), ಬೈಕ್ ತುಂಬಾನೇ ವೇಗವಾಗಿ ಹೋಗುತ್ತಿದ್ದರೆ, ಮೂರು ಜನ ಕುಳಿತುಕೊಂಡು ಹೋಗುತ್ತಿದ್ದರೆ ಪೊಲೀಸರು (Police) ಆ ಬೈಕ್ ಅನ್ನು ತಡೆದು ನಿಲ್ಲಿಸಿ ಕೂಡಲೇ ಅವರ ಮೇಲೆ ದಂಡ (Fine) ವಿಧಿಸುವುದನ್ನು ನಾವು ನೋಡಿರುತ್ತೇವೆ. ಆದರೆ ಇತ್ತೀಚೆಗೆ ಪೊಲೀಸರು ನೀಡುವ ಚಲನ್ ಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಯಾಗಿ ತುಂಬಾನೇ ತಮಾಷೆಯಾಗಿ (Funny) ಬೇರೆ ಏನನ್ನೋ ಬರೆದಿರುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ನಡುವೆ ಸಂಚಾರಿ ಪೊಲೀಸರು (Traffic Police) ಸ್ವಲ್ಪ ಮಟ್ಟಿಗೆ ಈ ಚಲನ್ ಗಳನ್ನು (Challan) ನೀಡುವುದರಲ್ಲಿ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ.

ಈ ಹಿಂದೆ ಹೈದರಾಬಾದ್ ನಲ್ಲಿಯೂ ಇಂತದ್ದೇ ಘಟನೆ ನಡೆದಿತ್ತು
ಈ ಹಿಂದೆ ಸಹ ಬೈಕ್ ನಲ್ಲಿ ಇಬ್ಬರು ಸದಸ್ಯರು ಮಾತ್ರ ಸವಾರಿ ಮಾಡುತ್ತಿದ್ದರೆ, ಪೊಲೀಸರು ಅವರಿಗೆ ಟ್ರಿಪಲ್ ರೈಡಿಂಗ್ ಗಾಗಿ ಚಲನ್ ನೀಡಿದ್ದಾರೆ. ನಂತರ ದಂಡ ಹಾಕಿಸಿಕೊಂಡ ವ್ಯಕ್ತಿ “ಹತ್ತಿರದಿಂದ ನೋಡಿ ಸರ್.. ನಾವು ಕೇವಲ ಇಬ್ಬರು ಮಾತ್ರ ಇದ್ದೆವು" ಎಂದು ಅವರು ಹೈದರಾಬಾದ್ ಸಂಚಾರ ಪೊಲೀಸ್ ಮತ್ತು ಸೈಬರಾಬಾದ್ ಸಂಚಾರ ಪೊಲೀಸರ ಅಧಿಕೃತ ಟ್ವಿಟರ್ ಖಾತೆಗಳನ್ನು ಟ್ಯಾಗ್ ಮಾಡಿ ಬರೆದಿದ್ದರು. ಬೈಕ್ ನಲ್ಲಿ ತನ್ನೊಂದಿಗೆ ಕೇವಲ ಒಬ್ಬ ವ್ಯಕ್ತಿ ಮಾತ್ರ ಹಿಂಬದಿ ಸವಾರಿ ಮಾಡುತ್ತಿದ್ದಾನೆ ಎಂದು ಸಾಬೀತುಪಡಿಸಲು ಅವರು ಫೋಟೋವನ್ನು ಸಹ ಹಂಚಿಕೊಂಡಿದ್ದರು.

ಇತ್ತೀಚೆಗೆ ಸಂಚಾರಿ ಪೊಲೀಸರು ವಾಯುಮಾಲಿನ್ಯ ತುಂಬಾ ಇರುವಂತಹ ಕೆಲವು ಮಹಾನಗರಗಳಲ್ಲಿ ಬೈಕ್ ಗಳನ್ನು ತಡೆದು ನಿಲ್ಲಿಸಿ ಅವರಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು (ಪಿಯುಸಿ) ತೋರಿಸಲು ಕೇಳುವುದುಂಟು. ಇದು ಒಳ್ಳೆಯದು ಕೂಡ, ಏಕೆಂದರೆ ನಿಮ್ಮ ವಾಹನವು ಅಗತ್ಯಕ್ಕಿಂತ ಹೆಚ್ಚು ಹೊಗೆಯನ್ನು ಹೊರಸೂಸುತ್ತಾ ಇದ್ದರೆ, ವಾಯುಮಾಲಿನ್ಯವಾಗುವುದು ಗ್ಯಾರೆಂಟಿ.

ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕರಿಗೆ ದಂಡ ವಿಧಿಸಿದ್ಯಾಕೆ 
ಆದರೆ ಇಲ್ಲಿ ಕೇರಳ ಪೊಲೀಸರು ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕರಿಗೆ ದಂಡ ವಿಧಿಸಿದ್ದು ಯಾವ ಕಾರಣಕ್ಕೆ ಅಂತ ನಿಮಗೆ ತಿಳಿದರೆ ನೀವು ಬಿದ್ದು ಬಿದ್ದು ನಗ್ತೀರಾ. ಏಕೆಂದರೆ ವಾಯುಮಾಲಿನ್ಯ ಆಗಬಾರದು ಎಂಬ ಕಾರಣಕ್ಕೆ ಈ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಪರಿಚಯಿಸಿದ್ದಾರೆ. ಆದರೆ ಕೇರಳ ಪೊಲೀಸ್ ತಂಡವೊಂದು ಈ ಎಲೆಕ್ಟ್ರಿಕ್ ಸ್ಕೂಟರ್ ಪಿಯುಸಿ ತೋರಸಿಲ್ಲ ಅಂತ ದಂಡ ಹಾಕಿದ್ದಾರೆ ನೋಡಿ. ಈಗ ಕೇರಳ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಗಳನ್ನು ಎದುರಿಸಬೇಕಾಗಿದ್ದು, ತೊಂದರೆಗೆ ಸಿಲುಕಿದ್ದಾರೆ.

ಇದನ್ನೂ ಓದಿ:  Doctor Assault: ಕ್ಲಿನಿಕ್ ಬಾಗಿಲು ಬೇಗ ತೆಗೆಯಲಿಲ್ಲ ಎಂದು ವೈದ್ಯರ ಮೇಲೆ ಹಲ್ಲೆ

ಮಲಪ್ಪುರಂ ಜಿಲ್ಲೆಯ ಪೊಲೀಸ್ ಸಿಬ್ಬಂದಿಯಿಂದ 250 ರೂಪಾಯಿಗಳ ಸಂಚಾರ ಅಪರಾಧ ಚಲನ್ ನೀಡುವಾಗ ಇದು ತಪ್ಪಾದ ಟೈಪಿಂಗ್‌ ನಿಂದ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ವಾರ ಕರುವಾರಕುಂಡು ಪೊಲೀಸ್ ಠಾಣೆಯ ವ್ಯಾಪ್ತಿಯ ನೀಲಂಚೇರಿಯಲ್ಲಿ ಸಿಬ್ಬಂದಿ ವಾಹನಗಳನ್ನು ಅಡ್ಡಗಟ್ಟಿ ಸಂಚಾರ ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸಿದಾಗ ಈ ಘಟನೆ ಸಂಭವಿಸಿದೆ.

ತಪ್ಪು ಅಪರಾಧ ಸಂಖ್ಯೆಯನ್ನು ಟೈಪ್ ಮಾಡಿದ್ದರಿಂದ ಹೀಗಾಯ್ತು
ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಹೋಗುತ್ತಿದ್ದ ವ್ಯಕ್ತಿಯೊಬ್ಬ ತನ್ನ ಚಾಲನಾ ಪರವಾನಗಿಯನ್ನು ತೋರಿಸಲು ವಿಫಲನಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಅವರ ಬಳಿ ಮುದ್ರಿತ ದಾಖಲೆಯಾಗಲಿ ಅಥವಾ ಅವರ ಪರವಾನಗಿಯ ಸಾಫ್ಟ್ ಕಾಪಿಯಾಗಲಿ ಇರಲಿಲ್ಲ. ಆದಾಗ್ಯೂ, ಚಲನ್ ನೀಡುವಾಗ, ಅಧಿಕಾರಿ ಅವರ ಬಳಿ ಇದ್ದಂತಹ ಯಂತ್ರದಲ್ಲಿ ತಪ್ಪು ಅಪರಾಧ ಸಂಖ್ಯೆಯನ್ನು ಟೈಪ್ ಮಾಡಿದ್ದಾರೆ ಮತ್ತು ಪಿಯುಸಿ ಅಪರಾಧ ಚಲನ್ ಹೊರಬಂದಿದೆ" ಎಂದು ಅವರು ಹೇಳಿದರು.

ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಚಾಲನಾ ಪರವಾನಗಿಯ ಅಗತ್ಯದ ಬಗ್ಗೆ ಮಾತನಾಡಿದ ಅವರು, ಆ ದ್ವಿಚಕ್ರ ವಾಹನಗಳು ನೋಂದಣಿ ಸಂಖ್ಯೆಯನ್ನು ಹೊಂದಿರಬೇಕು ಎಂದು ಹೇಳಿದರು. ಚಾಲನಾ ಪರವಾನಗಿಯನ್ನು ಹೊಂದಿರದಿರುವುದಕ್ಕೆ ವಿಧಿಸಲಾಗುವ ದಂಡವು ಇನ್ನೂ ದೊಡ್ಡದಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:  Viral Video: ಅಬ್ಬಾ, ಜಸ್ಟ್​ ಮಿಸ್​! ಈ ವಿಡಿಯೋ ನೋಡೋಕೂ ಡಬಲ್​ ಗುಂಡಿಗೆ ಬೇಕು ರೀ

ಆದಾಗ್ಯೂ, ಈ ದಂಡವನ್ನು ಸಂಗ್ರಹಿಸಿದ ಪೊಲೀಸ್ ಅಧಿಕಾರಿಯು ಸ್ವತಃ ಅಥವಾ ಇನ್ನೊಬ್ಬ ಅಧಿಕಾರಿ ಮಾಡಿದ ತಪ್ಪನ್ನು ಗಮನಿಸದಿರುವುದು ತುಂಬಾನೇ ಆಶ್ಚರ್ಯಕರವಾಗಿದೆ. ಅವರು ಚಾಲನಾ ಪರವಾನಗಿ ಇಲ್ಲದೆ ಸವಾರಿಯಂತಹ ಗಂಭೀರ ಅಪರಾಧಕ್ಕಾಗಿ ದಂಡ ವಿಧಿಸಿದ್ದು, ಪಿಯುಸಿ ಪ್ರಮಾಣಪತ್ರದ ಕನಿಷ್ಠ ಉಲ್ಲಂಘನೆಗೆ ಪಾವತಿಸುವ ಹಣವನ್ನು ಪಡೆದು ಆ ಸವಾರನನ್ನು ಹಾಗೆಯೇ ಹೋಗಲು ಬಿಟ್ಟರು.
Published by:Ashwini Prabhu
First published: