Heart attack: ಚಲಿಸುತ್ತಿದ್ದ ಬಸ್‌ನಲ್ಲಿಯೇ CPR ಚಿಕಿತ್ಸೆ ನೀಡಿ ಯುವಕನ ಜೀವ ಉಳಿಸಿದ ನರ್ಸ್..!

ನರ್ಸ್ ಲಿಜಿ ಎಂ ಅಲೆಕ್ಸ್ ಚಲಿಸುವ ಬಸ್‍ನಲ್ಲಿ ಪ್ರಾಣಾಪಾಯದಲ್ಲಿ ಸಿಲುಕಿದ್ದ ಯುವಕನಿಗೆ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.

ನರ್ಸ್ ಲಿಜಿ ಎಂ ಅಲೆಕ್ಸ್ ಚಲಿಸುವ ಬಸ್‍ನಲ್ಲಿ ಪ್ರಾಣಾಪಾಯದಲ್ಲಿ ಸಿಲುಕಿದ್ದ ಯುವಕನಿಗೆ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.

ನರ್ಸ್ ಲಿಜಿ ಎಂ ಅಲೆಕ್ಸ್ ಚಲಿಸುವ ಬಸ್‍ನಲ್ಲಿ ಪ್ರಾಣಾಪಾಯದಲ್ಲಿ ಸಿಲುಕಿದ್ದ ಯುವಕನಿಗೆ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.

  • Share this:

ವಿಧಿಯ (Fate) ಆಟದ ಮುಂದೆ ಯಾರು ದೊಡ್ಡವರಲ್ಲ. ವಿಧಿಯು ಯಾವ ಸಮಯದಲ್ಲಿ ಯಾರನ್ನು ಆವರಿಸುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ಹಿರಿಯರ (Elders) ಮಾತು. ಇನ್ನು ಪ್ರಾಣದ ವಿಚಾರದಲ್ಲಿಯೂ ಈ ಮಾತು ಕೆಲವೊಮ್ಮೆ ಸತ್ಯ ಎನಿಸುವುದುಂಟು. ಯಮಧರ್ಮರಾಯ ಇಂತಹದ್ದೇ ಸಮಯದಲ್ಲಿ ಬರುತ್ತಾನೆ ಎಂದು ಹೇಳಲಾಗುವುದಿಲ್ಲ. ಹೋಗುವ ಪ್ರಾಣ(Alive) ಉಳಿಯಬಹುದು. ಉಳಿಯುವ ಜೀವ ಹೋಗಬಹುದು. ಹೀಗೆ ಬದುಕು ಅನಿರೀಕ್ಷಿತಗಳ (Turning Point) ತಿರುವು.


ಚಲಿಸುವ ಬಸ್‍ನಲ್ಲಿ ಚಿಕಿತ್ಸೆ
ಕಷ್ಟದ ಸಮಯಕ್ಕೆ ಬಂದವರೇ ಬಂಧು ಎನ್ನುತ್ತಾರೆ. ಜೊತೆಗೆ ಸಮಯಪ್ರಜ್ಞೆಯಿಂದ ಎಷ್ಟೋ ಅನಾಹುತಗಳು ತಪ್ಪಿವೆ. ಇದೀಗ ಅಪರಿಚಿತ ಮಹಿಳೆಯೊಬ್ಬಳ ಸಮಯೋಚಿತ ವರ್ತನೆಯಿಂದ ಅಪರಿಚಿತ ವ್ಯಕ್ತಿಯ ಜೀವ ಉಳಿಸಿ ಬಂಧುವಾಗಿದ್ದಾರೆ. ಹೌದು ಈ ಘಟನೆ ತಿರುವನಮತಪುರದಲ್ಲಿ ನಡೆದಿದೆ. ದಾದಿಯೊಬ್ಬರ ಸಮಯಪ್ರಜ್ಞೆಯಿಂದ ಯುವಕನ ಜೀವ ಉಳಿದಿದೆ. ನರ್ಸ್ ಲಿಜಿ ಎಂ ಅಲೆಕ್ಸ್ ಚಲಿಸುವ ಬಸ್‍ನಲ್ಲಿ ಪ್ರಾಣಾಪಾಯದಲ್ಲಿ ಸಿಲುಕಿದ್ದ ಯುವಕನಿಗೆ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ. ಜೀವಾಪಾಯಕ್ಕೆ ಈಡಾಗಿದ್ದ ಯುವಕನೇ 28 ವರ್ಷದ ರಾಜೀವ್. ಬುಧವಾರ ರಾತ್ರಿ 8 ಗಂಟೆಯ ನಂತರ ಈ ಘಟನೆ ಸಂಭವಿಸಿದೆ.


ನಾಡಿಮಿಡಿತ ಪರೀಕ್ಷೆ
31 ವರ್ಷದ ಲಿಜಿ ಕೊಟ್ಟಿಯಂನ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಆರು ಗಂಟೆಗಳ ಪಾಳಿಯ ಕೆಲಸ ಮುಗಿಸಿ ಕೊಲ್ಲಂನ ವಡಕ್ಕೆವಿಲಾದಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಇವರು ತಿರುವನಂತಪುರಂ-ಕೊಲ್ಲಂ ಫಾಸ್ಟ್ ಪ್ಯಾಸೆಂಜರ್ ಬಸ್ ಏರಿದ್ದರು. ಬಸ್ಸು ಪರಕ್ಕುಳಂ ತಲುಪುತ್ತಿದ್ದಂತೆ, ಬಸ್ ನಿರ್ವಾಹಕರೊಬ್ಬರು ಯಾರ ಬಳಿಯಾದರೂ ನೀರು ಇದೆಯೇ ಎಂದು ಗಾಬರಿಯಿಂದ ಕೇಳುತ್ತಿದ್ದುದ್ದನ್ನು ನರ್ಸ್ ಲಿಜಿ ಗಮನಿಸಿದರು. ಬಸ್ಸಿನಲ್ಲಿ ಯಾರೂ ಇರಲಿಲ್ಲ.


ಇದನ್ನೂ ಓದಿ: Chest Pain: ಎದೆ ನೋವೇ? ಈ ಮೂರು ಚಿಹ್ನೆಗಳಿದ್ದರೆ ಅವು ಹೃದಯಾಘಾತದ ಲಕ್ಷಣಗಳಲ್ಲ ಅಂತಾರೆ ತಜ್ಞರು


ಯಾವುದೋ ಒಬ್ಬ ಯುವಕ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಕಂಡಕ್ಟರ್ ಹೇಳಿದರು.
ಕಂಡಕ್ಟರ್ ಅವರ ಮಾತನ್ನು ಕೇಳಿಸಿಕೊಂಡ ಮುಂದಿನ ಸೀಟಿನಲ್ಲಿ ಕುಳಿತಿದ್ದ ಲಿಜಿ ಆ ವ್ಯಕ್ತಿಯ ಸೀಟಿಗೆ ಬರುವಷ್ಟರಲ್ಲಿ ಕುಸಿದು ಬಿದ್ದಿದ್ದರು. ಲಿಜಿ ತಕ್ಷಣವೇ ನಾಡಿಮಿಡಿತವನ್ನು ಪರೀಕ್ಷಿಸಿದರು ಮತ್ತು ನಾಡಿಮಿಡಿತ ನಿಂತಿದೆ ಎಂದು ಅವರು ಖಚಿತಪಡಿಸಿಕೊಂಡರು. ಸಮಯವನ್ನು ವ್ಯರ್ಥಮಾಡದೇ ತಕ್ಷಣವೇ ಇತರ ಪ್ರಯಾಣಿಕರ ಸಹಾಯದಿಂದ ರಾಜೀವ್‍ನನ್ನು ಬಸ್‌ನೊಳಗೆ ಮಲಗಿಸಿದರು ಮತ್ತು ಲಿಜಿ ಅವರಿಗೆ ಸಿಪಿಆರ್ ನೀಡಲು ಪ್ರಾರಂಭಿಸಿದರು.


ಘಟನೆ ವಿವರಿಸಿದ ಲಿಜಿ
ವ್ಯಕ್ತಿ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. ಸಿಪಿಆರ್ ನೀಡುವುದು ಮತ್ತು ಬಸ್ ಅನ್ನು ಹತ್ತಿರದ ಆಸ್ಪತ್ರೆಯ ಹತ್ತಿರ ನಿಲ್ಲಿಸುವಂತೆ ಮಾಡುವುದು ಈ ಎರಡು ಆಯ್ಕೆಗಳು ಮಾತ್ರ ಬಳಿ ಉಳಿದಿದ್ದವು. ಬಸ್ ಹತ್ತಿರದ ಆಸ್ಪತ್ರೆಯನ್ನು ತಲುಪುವವರೆಗೆ ರೋಗಿಯನ್ನು ಆಸ್ಪತ್ರೆಯಲ್ಲಿ ಟ್ರಾಲಿಗೆ ಸ್ಥಳಾಂತರಿಸುವವರೆಗೆ ಲಿಜಿ ಸಿಪಿಆರ್ ನೀಡುವುದನ್ನು ಮುಂದುವರೆಸಿದರು. ನಂತರ, ರಾಜೀವ್‍ಗೆ ಆಸ್ಪತ್ರೆಯ ಸಿಬ್ಬಂದಿ ಹೃದಯ ಸ್ತಂಭನಕ್ಕೆ ಸಂಬಂಧಿಸಿದ ಚಿಕಿತ್ಸೆ ಮುಂದುವರೆಸಿದರು. ಬಳಿಕ ನಾಡಿಮಿಡಿತ ಹೊಡೆದುಕೊಳ್ಳಲು ಪ್ರಾರಂಭಿಸಿತು ಎಂದು ಲಿಜಿ ಘಟನೆಯನ್ನು ನೆನಪಿಸಿಕೊಂಡರು.


ನಾನು ಬಸ್ಸಿನಲ್ಲಿದ್ದೆ ಮತ್ತು ಆ ಕ್ಷಣಕ್ಕೆ ನನ್ನ ಕರ್ತವ್ಯ ನಾನು ಮಾಡಿದ್ದೇನೆ. ನಾವು ಆಸ್ಪತ್ರೆಯಲ್ಲಿ ಮಾತ್ರ ಸಿಪಿಆರ್ ಅನ್ನು ನಿರ್ವಹಿಸುತ್ತೇವೆ ಆದರೆ ಆಸ್ಪತ್ರೆಯ ಹೊರಗೆ ಸಿಪಿಆರ್ ಮಾಡಿದ್ದು ನನ್ನ ವೃತ್ತಿಜೀವನದಲ್ಲಿ ಇದೇ ಮೊದಲು. ನನ್ನ ವೃತ್ತಿಯ ಬಗ್ಗೆ ನನಗೆ ಹೆಮ್ಮೆ ಅನಿಸಿದ ಕ್ಷಣಗಳಲ್ಲಿ ಇದು ಒಂದು ಎಂದು ಲಿಜಿ ಹೇಳಿದರು.


ಇದನ್ನೂ ಓದಿ: Viral Video: ಚಲಿಸುವ ಬಸ್​ನಲ್ಲಿ ಡ್ರೈವರ್​ಗೆ ಹೃದಯಾಘಾತ, ತಾನೇ ಬಸ್ ಚಲಾಯಿಸಿಕೊಂಡು ಬಂದ ಪ್ರಯಾಣಿಕ ಮಹಿಳೆ


ಸಿಪಿಆರ್ ಒಂದು ಜೀವನ ಕೌಶಲ್ಯ ಮತ್ತು ಹೆಚ್ಚಿನ ಜನರು ಅದರಲ್ಲಿ ತರಬೇತಿ ಪಡೆಯಬೇಕು. ಕಳೆದ 12 ವರ್ಷಗಳಿಂದ ಆಸ್ಪತ್ರೆಯಲ್ಲಿ ದಾದಿಯಾಗಿ ಸೇವೆ ಸಲ್ಲಿಸುತ್ತಿರುವ ಲಿಜಿ ಇದು ಈ ರೀತಿಯ ತುರ್ತು ಪರಿಸ್ಥಿತಿಯಲ್ಲಿ ವ್ಯಕ್ತಿಯ ಜೀವವನ್ನು ಉಳಿಸುತ್ತದೆ ಎಂದು ಹೇಳಿದರು. “ಆ ವ್ಯಕ್ತಿ ಚಿಕ್ಕವನಾಗಿದ್ದ. ನಾನು ಅವನಿಗೆ ಸಹಾಯ ಮಾಡಿರುವುದರಿಂದ ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದರು.

First published: