ಕೋಮುವಾದದ ಕಮೆಂಟ್ಸ್​ಗಳಿಗೆ ಡ್ಯಾನ್ಸ್ ವಿಡಿಯೋ ಮೂಲಕವೇ ಉತ್ತರಿಸಿದ ಕೇರಳ ಮೆಡಿಕಲ್ ವಿದ್ಯಾರ್ಥಿಗಳು: ನೆಟ್ಟಿಗರ ಪ್ರಶಂಸೆ

‘ಲವ್ ಜಿಹಾದ್’ ಆರೋಪ ಮತ್ತು ಕೋಮುವಾದ ಕಮೆಂಟ್ಸ್​ಗಳ ನಂತರ ತ್ರಿಶೂರ್​ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮೊದಲ ವಿಡಿಯೋದಲ್ಲಿ ನವೀನ್ ರಜಾಕ್ ಮತ್ತು ಜಾನಕಿ ಎಮ್ ಓಂಕಾರ್ ಎನ್ನುವ ಮೆಡಿಕಲ್ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡಿದ್ದರು. ಇದರಲ್ಲಿ ನವೀನ್ ರಜಾಕ್ ಅನ್ಯ ಧರ್ಮಕ್ಕೆ ಸೇರಿದವರು ಎನ್ನುವ ಕಾರಣಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಆ ನಂತರ ಈ ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದಾರೆ.

ವೈರಲ್ ಆದ ಕೇರಳ ವೈದ್ಯಕೀಯ ವಿದ್ಯಾರ್ಥಿಗಳ ಡ್ಯಾನ್ಸ್ ವಿಡಿಯೋ

ವೈರಲ್ ಆದ ಕೇರಳ ವೈದ್ಯಕೀಯ ವಿದ್ಯಾರ್ಥಿಗಳ ಡ್ಯಾನ್ಸ್ ವಿಡಿಯೋ

  • Share this:
Trending Desk: ಯಾವುದೇ ಕ್ಷೇತ್ರವಿರಲಿ, ಯಾರೇ ಆಗಿರಲಿ ಸಂಗೀತ ಮತ್ತು ನೃತ್ಯಕ್ಕೆ ಮನಸೋಲದವರು ಕಡಿಮೆ ಅಂತಲೇ ಹೇಳಬೇಕು. ಅದರಲ್ಲೂ ಈಗ ಶಾರ್ಟ್ ವಿಡಿಯೋ ಟ್ರೆಂಡ್​ಗಳು ತೀರಾ ಸಾಮಾನ್ಯ. ಹೀಗೆ ಶಾರ್ಟ್ ವಿಡಿಯೋಗಳಲ್ಲಿ ಸಿನಿಮಾ ಹಾಡುಗಳಿಗೆ ನೃತ್ಯ ಮಾಡುತ್ತಾ ನೆಟ್ಟಿಗರನ್ನು ರಂಜಿಸುವವರಲ್ಲಿ ಮೆಡಿಕಲ್ ಕಾಲೇಜಿನವರೂ ಸಹ ಹಿಂದೆ ಬಿದ್ದಿಲ್ಲ.

ಕೇರಳದ ತ್ರಿಶೂರ್ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ಬೋನಿ ಎಂ ಹಾಡಿಗೆ ಡ್ಯಾನ್ಸ್ ಮಾಡಿದ್ದ ವಿಡಿಯೋವೊಂದು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದ್ರೆ ಆ ವಿಡಿಯೋದಲ್ಲಿ ಅನ್ಯಧರ್ಮೀಯರು ನೃತ್ಯ ಮಾಡಿದ್ದರು ಎಂದು ವಿರೋಧಿಸಿ ಸಾಕಷ್ಟು ನೆಗೆಟಿವ್, ಹೇಟ್​ ಕಮೆಂಟ್​ಗಳು ಬಂದಿದ್ದವು. ಈಗ ಅದಕ್ಕೆ ಪ್ರತಿಕ್ರಿಯೆಯಾಗಿ ಅದೇ ಕಾಲೇಜಿನ ಅದೇ ಟೀಂ ಮತ್ತೊಂದು ಡ್ಯಾನ್ಸ್​ ವಿಡಿಯೋ ಪೋಸ್ಟ್ ಮಾಡುವ ಮೂಲಕ ಉತ್ತರಿಸಿದ್ದಾರೆ. ಅದರಲ್ಲೂ ಹೊಸ ಡ್ಯಾನ್ಸ್ ವಿಡಿಯೋ ಮತ್ತೊಮ್ಮೆ ನೆಟ್ಟಿಗರ ಮನಸ್ಸು ಗೆದ್ದಿದೆ.

‘ಲವ್ ಜಿಹಾದ್’ ಆರೋಪ ಮತ್ತು ಕೋಮುವಾದ ಕಮೆಂಟ್ಸ್​ಗಳ ನಂತರ ತ್ರಿಶೂರ್​ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮೊದಲ ವಿಡಿಯೋದಲ್ಲಿ ನವೀನ್ ರಜಾಕ್ ಮತ್ತು ಜಾನಕಿ ಎಮ್ ಓಂಕಾರ್ ಎನ್ನುವ ಮೆಡಿಕಲ್ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡಿದ್ದರು. ಇದರಲ್ಲಿ ನವೀನ್ ರಜಾಕ್ ಅನ್ಯ ಧರ್ಮಕ್ಕೆ ಸೇರಿದವರು ಎನ್ನುವ ಕಾರಣಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಆ ನಂತರ ಈ ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದಾರೆ.

ಇನ್ನೂ ಈ ವೀಡಿಯೋದಲ್ಲಿ ವಿದ್ಯಾರ್ಥಿಗಳಿಬ್ಬರೂ ಬೋನಿ ಎಂ ಕ್ಲಾಸಿಕ್ಸ್ ರಸ್ಪುಟೀನ್ ಹಾಡಿಗೆ ಸಖತ್ ಉತ್ಸಾಹದಿಂದಲೇ ಸ್ಟೆಪ್ ಹಾಕುತ್ತಾ ಡ್ಯಾನ್ಸ್ ಎಂಜಾಯ್ ಮಾಡಿರುವುದು ಎಂಥವರನ್ನೂ ಅವರ ನೃತ್ಯದ ಕಡೆಗೆ ಆಕರ್ಷಿಸುತ್ತದೆ. ಗುಡ್​ ವೈಬ್ಸ್ ಹೊಂದಿರುವ ಈ ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಆನ್​ಲೈನ್​​ನಲ್ಲಿ ಫೇಮಸ್​ ಆಗಿರುವ ಈ ನೃತ್ಯಕ್ಕೆ ವಕೀಲರೊಬ್ಬರು ಈ ಹಾಡಿನಲ್ಲಿ ನರ್ತಿಸಿರುವ ನವೀನ್ ರಜಾಕ್ ಹೆಸರನ್ನು ಹಿಡಿದು ಈ ವೀಡಿಯೋದಲ್ಲಿನ ಕೋಮುವಾದದ ಅಂಶವನ್ನು ಬೆರಳು ಮಾಡಿ ತೋರಿಸಿದ್ದರು.

ನವೀನ್ ನಾಲ್ಕನೇ ವರ್ಷದಲ್ಲಿ ಓದುತ್ತಿದ್ದು, ಜಾನಕಿ 3 ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹಾಡಿನಲ್ಲಿರುವ ಎನರ್ಜಿ, ಸ್ಟೆಪ್‌ಗಳು​ ಸಖತ್ ಖುಷಿ ನೀಡುತ್ತದೆ. ಈ ಕ್ಲಿಪ್ ಅನ್ನು ನವೀನ್ ರಜಾಕ್ ಅವರು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಕಮ್ಯೂನಲ್ ಟ್ರೋಲಿಂಗ್ ಜೊತೆ ಜೊತೆಗೆ ಹಲವಾರು ವಿಭಾಗಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೇ ಕೊರೊನಾ 2 ನೇ ಅಲೆಯ ಭೀತಿಯ ನಡುವೆ ಭಾರತದ ವೀಕ್ಷಕರಿಗೆ ಡ್ಯಾನ್ಸ್ ಮೂಲಕ ಸಂತೋಷ ನೀಡಿರುವುದಕ್ಕೆ ಮೆಚ್ಚುಗೆ ಕಾಣುತ್ತಿದೆ.

ವಿಶ್ವದಾದ್ಯಂತ ಎಲ್ಲಾ ಮೆಡಿಕಲ್ ವಿಭಾಗದವರು ಹಗಲು ರಾತ್ರಿ ಎನ್ನದೆ ಕೋವಿಡ್ 19 ಹೋಗಲಾಡಿಸಲು ಹೋರಾಡುತ್ತಿದ್ದಾರೆ. ಈ ಸಮಯದಲ್ಲಿ ಕೇರಳದ ತ್ರಿಶೂರ್ ಕಾಲೇಜಿನ ವಿದ್ಯಾರ್ಥಿಗಳ ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ಖುಷಿ ತಂದಿದೆ. ಇದಕ್ಕೆ ನೆಟ್ಟಿಗರು ನೀಡಿರುವ ಪ್ರತಿಕ್ರಿಯೇ ಸಾಕ್ಷಿ. ಇದಿಷ್ಟೇ ಅಲ್ಲದೇ ಈ ವಿದ್ಯಾರ್ಥಿಗಳ ಎರಡನೇ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಹೆಚ್ಚು ಜನರಿಂದ ಮೆಚ್ಚುಗೆ ಗಳಿಸುತ್ತಲೇ ಇದೆ.
Published by:Soumya KN
First published: