ಸಾಮಾನ್ಯವಾಗಿ ನಾವು ಯಾವುದಾದರೂ ನಗರಕ್ಕೆ (City) ವಿದ್ಯಾಭ್ಯಾಸಕ್ಕಾಗಿ (Education) ಅಂತಲೋ, ಕೆಲಸ (Work) ಹುಡುಕಿಕೊಂಡು ಅಂತಲೋ ಹೋದರೆ ಇರುವುದಕ್ಕೆ ಒಂದು ಪುಟ್ಟ ಮನೆಯನ್ನು (Home) ಬಾಡಿಗೆಗೆ (Rent) ಎಂದು ಹುಡುಕುವುದು ಸಹಜ ಬಿಡಿ. ಆದರೆ ಆ ಬಾಡಿಗೆಯ ಮನೆಯನ್ನು ನಾವು ಹೇಗೆ ಹುಡುಕುತ್ತೇವೆ ಅಂತ ಯಾರಾದರೂ ಕೇಳಿದರೆ ನಾವು ಅವರಿಗೆ ಯಾರಾದರೊಬ್ಬ ಬ್ರೋಕರ್ (Broker) ಅವರಿಗೆ ಸಂಪರ್ಕಿಸಿ ಅವರಿಗೆ ಬಾಡಿಗೆ ಮನೆಯನ್ನು ಹುಡುಕಿ(Search) ಕೊಡಲು ಹೇಳುತ್ತೇವೆ, ಇಲ್ಲವೇ ಅಲ್ಲೇ ಇರುವ ನಮ್ಮ ಸ್ನೇಹಿತರಿಗೆ (Friends) ಒಂದು ಮನೆಯನ್ನು ಬಾಡಿಗೆಗೆ ಹುಡುಕಿ ಕೊಡಲು ಕೇಳುತ್ತೇವೆ.
ಬಾಡಿಗೆ ಮನೆ ಹುಡುಕಲು ಯಾವ ಆ್ಯಪ್ ಬಳಸಿದ್ದಾರೆ ನೋಡಿ
ಇದರ ಬಗ್ಗೆ ಈಗ್ಯಾಕೆ ಮಾತು ಅಂತೀರಾ.. ಇಲ್ಲೊಬ್ಬ ವ್ಯಕ್ತಿ ಮುಂಬೈಯಲ್ಲಿ ಬಾಡಿಗೆ ಮನೆಯೊಂದನ್ನು ಹುಡುಕಲು ಯಾವ ಆ್ಯಪ್ ಅನ್ನು ಬಳಸಿದ್ದಾನೆ ನೋಡಿ. ನೀವು ಈ ಡೇಟಿಂಗ್ ಆ್ಯಪ್ಗಳ ಬಗ್ಗೆ ಕೇಳಿರುತ್ತೀರಿ ಅಲ್ಲವೇ? ಹೌದು.. ಈ ದಿನಗಳಲ್ಲಿ ಈ ರೀತಿಯ ಆ್ಯಪ್ಗಳು ತುಂಬಾನೇ ಜನಪ್ರಿಯವಾಗಿವೆ. ಈ ಡೇಟಿಂಗ್ ಆ್ಯಪ್ ಗಳನ್ನು ಸಾಮಾನ್ಯವಾಗಿ ಜನರು ತಮಗಾಗಿ ಒಬ್ಬ ಅಥವಾ ಒಬ್ಬಳು ಸಂಗಾತಿಯನ್ನು ಹುಡುಕಲು ಬಳಸುತ್ತಾರೆ ಎಂದು ಹೇಳಬಹುದು.
ಈ ಡೇಟಿಂಗ್ ಆ್ಯಪ್ಗಳು ಸಂಗಾತಿಗಳನ್ನು ಕಂಡುಕೊಳ್ಳಲು ಜನರಿಗೆ ಸಹಾಯ ಮಾಡಲು ಉದ್ದೇಶಿಸಲ್ಪಟ್ಟಿದ್ದರೂ, ಅವುಗಳನ್ನು ಬೇರೆ ಕಾರಣಗಳಿಗಾಗಿ ಬಳಸಲು ಇತರ ಚಮತ್ಕಾರಿ ಮಾರ್ಗಗಳನ್ನು ಜನರು ಕಂಡು ಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಡೇಟಿಂಗ್ ಅಪ್ಲಿಕೇಶನ್ ಬಂಬಲ್ನಲ್ಲಿ ಮನೆ ಹುಡುಕಾಟ
ಇಲ್ಲೊಬ್ಬ ಕೇರಳದ ವ್ಯಕ್ತಿ ಮುಂಬೈ ನಗರಕ್ಕೆ ಬಂದಿಳಿದಿದ್ದಾರೆ ಮತ್ತು ಅವರಿಗೆ ಇರಲು ಒಂದು ಬಾಡಿಗೆ ಫ್ಲ್ಯಾಟ್ ಬೇಕಾಗಿದ್ದು, ಅದನ್ನು ಹುಡುಕಲು ಸಹಾಯ ಮಾಡಲು ಡೇಟಿಂಗ್ ಅಪ್ಲಿಕೇಶನ್ ಬಂಬಲ್ನಲ್ಲಿ ತನ್ನ ಪ್ರೊಫೈಲ್ ಅನ್ನು ರಚಿಸಿಕೊಂಡಿದ್ದಾನೆ. ಈ ಖಾತೆಯ ಪುಟಗಳ ಸ್ಕ್ರೀನ್ಶಾಟ್ಗಳಂತೂ ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್ನಲ್ಲಿ ಸಕತ್ ವೈರಲ್ ಆಗಿದ್ದು, ನೆಟ್ಟಿಗರಿಗೆ ಬಿಟ್ಟಿ ಮನರಂಜನೆ ಸಿಕ್ಕಿದೇ ಎನ್ನಬಹುದು.
ತನ್ನ ಪ್ರೊಫೈಲ್ನಲ್ಲಿ ಬರೆದುಕೊಂಡಿರುವುದೇನು?
ಟ್ವಿಟ್ಟರ್ ಬಳಕೆದಾರರೊಬ್ಬರು ಹಂಚಿಕೊಂಡ ಪ್ರೊಫೈಲ್ನಲ್ನ ಸ್ಕ್ರೀನ್ಶಾಟ್ಗಳಲ್ಲಿ ಕಂಡು ಬಂದಿರುವ ವ್ಯಕ್ತಿಯು ಕೇರಳ ರಾಜ್ಯದವನಾಗಿದ್ದು ಅವನ ಡೇಟಿಂಗ್ ಪ್ರೊಫೈಲ್ ನಲ್ಲಿ "ಸೇಪಿಯೊಸೆಕ್ಷುವಲ್ ಅಲ್ಲ, ಮುಂಬೈನಲ್ಲಿ ಇರಲು ಒಂದು ಫ್ಲ್ಯಾಟ್ ಅನ್ನು ಬಾಡಿಗೆಗೆ ಹುಡುಕುತ್ತಿದ್ದೇನೆ. ನೀವು ಮುಂಬೈನಲ್ಲಿದ್ದರೆ ಮತ್ತು ನನಗೆ ಹಿಂದಿ ಗೊತ್ತಿಲ್ಲದ ಕಾರಣ ವೆಸ್ಟರ್ನ್ ಲೈನ್ನಲ್ಲಿ ಬಾಡಿಗೆಯ ಮನೆಯನ್ನು ಹುಡುಕಲು ನನಗೆ ಸಹಾಯ ಮಾಡಲು ತಯಾರಿದ್ದೀರಾ" ಎಂದು ಆ ವ್ಯಕ್ತಿ ಪ್ರೊಫೈಲ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: Viral Video: ಆರ್ಡರ್ ಮಾಡಿದ್ದು ‘ಆನಿಯನ್ ರಿಂಗ್ಸ್’; ಪಾರ್ಸಲ್ ನಲ್ಲಿ ಬಂದಿದ್ದನ್ನು ನೋಡಿ ನೆಟ್ಟಿಗರಿಗೆ ನಗುವೋ ನಗು
ಈ ಅಪ್ಲಿಕೇಶನ್ನಲ್ಲಿ ಕೇಳಲಾದ ಪ್ರಶ್ನೆಗೆ "ನನ್ನ ಮನಸ್ಸಿಗೆ ತೋಚುವ ಮೊದಲ ಮಾತು ಎಂದರೆ ಅಂಧೇರಿಯಲ್ಲಿ ಬ್ರೋಕರೇಜ್ ಅಲ್ಲದ ಮನೆಗಳ ಬಗ್ಗೆ ನನಗೆ ಮಾಹಿತಿಗಳನ್ನು ಕಳುಹಿಸಿ" ಎಂದು ಆ ವ್ಯಕ್ತಿ ಬರೆದನು. ನೀವು ಬ್ರೋಕರೇಜ್ಗಳ ಬಗ್ಗೆ ನನಗೆ ಮಾಹಿತಿ ನೀಡಿದರೆ ಅದು ನನಗೆ ಅಷ್ಟೊಂದು ಸಹಾಯವಾಗುವುದಿಲ್ಲ ಎಂದು ಸಹ ಅವರು ಉಲ್ಲೇಖಿಸಿದ್ದಾರೆ.
ಟ್ವಿಟ್ಟರ್ ಅಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಪೋಸ್ಟ್
ಟ್ವಿಟರ್ ಬಳಕೆದಾರರಾದ ಅನಾ ಡಿ ಆಮ್ರಾಸ್ ಜೂನ್ 15 ರಂದು ತಮಾಷೆಯ ಪ್ರೊಫೈಲ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಇದು ಇಲ್ಲಿಯವರೆಗೆ 2,800 ಕ್ಕೂ ಹೆಚ್ಚು ಲೈಕ್ಗಳು ಮತ್ತು 149 ರಿಟ್ವೀಟ್ಗಳನ್ನು ಸಹ ಇದು ಪಡೆದಿದೆ. ಈ ಪ್ರೊಫೈಲ್ ಅನ್ನು ಹಂಚಿಕೊಂಡು ಇದಕ್ಕೆ "ಇಲ್ಲ ನೀವು ಬಂಬಲ್ನಲ್ಲಿ ಸಂಗಾತಿಯನ್ನು ಹುಡುಕುತ್ತಿದ್ದೀರಿ, ಅವರು ಬಾಂಬೆಯಲ್ಲಿ ಒಂದು ಸ್ಥಳವನ್ನು ಬಾಡಿಗೆಗೆ ಪಡೆಯಲು ನೋಡುತ್ತಿದ್ದಾರೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: The Hemp Cafe: ಸೆಣಬಿನಿಂದ ತಯಾರಾದ ಆರೋಗ್ಯಕರ ಖಾದ್ಯಗಳನ್ನು ನೀವೂ ಸವಿಯಬೇಕಾ? ಹಾಗಿದ್ರೆ ಈ ಕೆಫೆಗೆ ಭೇಟಿ ಕೊಡಿ
ಈ ಟ್ವೀಟ್ಗೆ ಸಾಕಷ್ಟು ತಮಾಷೆಯ ಪ್ರತಿಕ್ರಿಯೆಗಳು ಸಹ ಬಂದಿವೆ. "ಅಂಧೇರಿಯಲ್ಲಿ ಬಾಡಿಗೆಗೆ ಮನೆಯನ್ನು ಹುಡುಕುವುದು ತುಂಬಾನೇ ಕಷ್ಟದ ಕೆಲಸ” ಎಂದು ಇನ್ನೊಬ್ಬರು ಅಳುವ ಮುಖದ ಎಮೋಜಿಯೊಂದಿಗೆ ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ