145 ವಿದೇಶಿ ಸರ್ಟಿಫಿಕೇಟ್ ಪಡೆದ ವ್ಯಕ್ತಿ, ಕೋವಿಡ್ ಸಮಯದ ಅತೀ ಹೆಚ್ಚು ಪ್ರಯೋಜನ ಪಡೆದವ್ರು ಇವ್ರೇ ನೋಡಿ!

ಈ ಕೋವಿಡ್ ವೈರಸ್‌ನ ಹೊಸ ರೂಪಾಂತರಗಳ ಉಗಮದ ನಂತರ ಅನೇಕ ನಿರ್ಬಂಧಗಳನ್ನು ಹೇರುತ್ತಿರುವುದರಿಂದ ಇ-ಕಲಿಕೆ ಮುಂದಿನ ಭವಿಷ್ಯವಾಗಲಿದೆ ಎಂದು ಶಫಿ ಭಾವಿಸುತ್ತಾರೆ.

ಶಫಿ ವಿಕ್ರಮನ್

ಶಫಿ ವಿಕ್ರಮನ್

  • Share this:
ಕೋವಿಡ್-19 ಸಾಂಕ್ರಾಮಿಕ( Covid-19) ರೋಗದ (Epidemic) ಹಾವಳಿಯಿಂದಾಗಿ ಬಹುತೇಕರು ಕಳೆದ ಎರಡು ವರ್ಷಗಳಲ್ಲಿ ಮನೆಯಲ್ಲಿ (Stay Home) ಕೂತು ತಮ್ಮ ಕಚೇರಿಯ ಕೆಲಸವನ್ನು ಬಿಟ್ಟು ಬೇರೆ ಏನು ಮಾಡಿರಲಿಕ್ಕಿಲ್ಲ.ಆದರೆ ಕೆಲವರು ಮಾತ್ರ ಈ ಸಮಯವನ್ನು ಏನಾದರೂ ಹೊಸದನ್ನು ಕಲಿತುಕೊಳ್ಳಲು ಬಲು ಚೆನ್ನಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಂತಹ ವ್ಯಕ್ತಿಗಳಲ್ಲಿ ಕೇರಳದ ತಿರುವನಂತಪುರಂ (Thiruvananthapuram) ನಿವಾಸಿಯಾದ ಶಫಿ ವಿಕ್ರಮನ್ (Shafi Vikraman) ಅವರು ಸಹ ಒಬ್ಬರು ಎಂದು ಹೇಳಬಹುದು.

16 ವಿವಿಧ ದೇಶಗಳಿಂದ ಬಂದ ಪ್ರಮಾಣ ಪತ್ರ
ಇವರು ಈ ಎರಡು ವರ್ಷಗಳಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 145ಕ್ಕೂ ಹೆಚ್ಚು ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇವರು ಪ್ರಿನ್ಸ್‌ಟನ್, ಯೇಲ್, ಕೊಲಂಬಿಯಾ, ಸ್ಟ್ಯಾನ್‌ಫೋರ್ಡ್ ಮತ್ತು ಇತರ ವಿದೇಶಿ ಪ್ರಮುಖ ವಿಶ್ವವಿದ್ಯಾಲಯಗಳಿಂದ 145ಕ್ಕೂ ಹೆಚ್ಚು ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ. ಎಲ್ಲವೂ ಈ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅವರು ಪಡೆದ ಪ್ರಮಾಣ ಪತ್ರಗಳು 16 ವಿವಿಧ ದೇಶಗಳಿಂದ ಬಂದಿವೆ.

ಇದನ್ನೂ ಓದಿ: ನಿಮ್ಮ Covid-19 ಲಸಿಕೆ ಪ್ರಮಾಣ ಪತ್ರ ಅಸಲಿಯೋ, ನಕಲಿಯೋ ತಿಳಿಯುವುದು ಹೇಗೆ?

ದೇಶದಲ್ಲಿ ಮೊದಲ ಬಾರಿಗೆ ಕೋವಿಡ್ ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ಶಫಿ ಈ ಕೋರ್ಸ್‌ಗಳಿಗೆ ಸೇರಲು ಪ್ರಾರಂಭಿಸಿದರು. ಅಂದಿನಿಂದ ಅವರು ಹಿಂತಿರುಗಿ ನೋಡಲೇ ಇಲ್ಲ. ವಿವಿಧ ಕೋರ್ಸ್‌ಗಳ ಮತ್ತು ಅವುಗಳ ಪ್ರಮಾಣ ಪತ್ರಗಳ ಬೇಟೆಯು ಒಂದು ಸಣ್ಣ ಕೋರ್ಸ್ ಮಾಡುವ ಮೂಲಕ ಪ್ರಾರಂಭ ಮಾಡಿದರು. ಆದರೆ ಶೀಘ್ರದಲ್ಲಿಯೇ ವಿಶ್ವದಾದ್ಯಂತ ಪ್ರಮುಖ ವಿಶ್ವವಿದ್ಯಾಲಯಗಳು ನೀಡುವ ಅನೇಕ ಕೋರ್ಸ್‌ಗಳಿಗೆ ಇದು ವಿಸ್ತರಿಸಿತು ಎಂದು ಹೇಳಲಾಗುತ್ತಿದೆ.

ಛಲ ಬಿಡದೆ ಮುಗಿಸಿದ ವ್ಯಕಿ
ಇದರ ಬಗ್ಗೆ ಮಾತನಾಡಿದ ಶಫಿ "ನಾನು ಮೊದಲು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದೊಂದಿಗೆ ಕೋರ್ಸ್ ಪ್ರಾರಂಭಿಸಿದೆ. ನಿಧಾನವಾಗಿ ನಾನು ನಿಗದಿಪಡಿಸಿದ ಸಮಯದೊಳಗೆ ಕೋರ್ಸ್‌ಗಳನ್ನು ಮುಗಿಸಲು ಕಲಿತೆ. ನಾನು ಆರಂಭದಲ್ಲಿ ಕೋರ್ಸ್ ಪ್ರಾರಂಭಿಸಿದಾಗ ನನಗೆ ತುಂಬಾನೇ ಕಷ್ಟವಾಯಿತು, ಆದರೂ ಛಲ ಬಿಡದೆ ಇದನ್ನು ಮುಂದುವರಿಸಿ ಮುಗಿಸಿದೆ” ಎಂದು ಹೇಳಿದರು.

ವಿಡಿಯೋ ನೋಡಿ:

ಶಫಿ ಅವರು ಕಲಿತ ಕೋರ್ಸ್‌ಗಳ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡು ಅವುಗಳನ್ನು ಆಯ್ಕೆ ಮಾಡಲಿಲ್ಲ, ಬದಲಾಗಿ ಅವರಿಗೆ ಪರಿಚಿತವಾದ ಕೆಲವು ಅಧ್ಯಯನ ಕ್ಷೇತ್ರಗಳನ್ನು ಅರಿಸಿಕೊಂಡರು. ಇದರ ಬಗ್ಗೆ ಶಫಿ ಖುದ್ದು "ನಾನು ಮೊದಲು ಕೋರ್ಸ್‌ಗಳ ಬಗ್ಗೆ ಹೆಚ್ಚು ಚೂಸಿಯಾಗಿರಲಿಲ್ಲ. ನನಗೆ ಆಸಕ್ತಿದಾಯಕವಾಗಿ ಕಾಣುವ ಕೋರ್ಸ್‌ಗಳನ್ನು ನಾನು ಯಾದೃಚ್ಛಿಕವಾಗಿ ಆಯ್ಕೆ ಮಾಡಿಕೊಂಡೆ. ಇದಲ್ಲದೆ, ನಾನು ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಕೋರ್ಸ್‌ಗಳನ್ನು ಮಾಡಿದ್ದೇನೆ" ಎಂದು ಹೇಳಿದರು.

ಕೆಲಸವನ್ನೇ ಬಿಟ್ಟರು
ಈ ಕಠಿಣವಾದ ಸಮಯದಲ್ಲಿ ಶಫಿ ಅವರಿಗೆ ಕೆಲವು ಕೋರ್ಸ್‌ಗಳನ್ನು ಮಾಡುವುದು ತುಂಬಾನೇ ಕಷ್ಟವಾಯಿತು, ಏಕೆಂದರೆ ಅವರು ಇದ್ದ ಕೆಲಸವನ್ನು ಬಿಟ್ಟಿದ್ದರು. ನಾನು ದಕ್ಷಿಣ ಭಾರತದಾದ್ಯಂತ, ಹೆಚ್ಚಾಗಿ ತಮಿಳುನಾಡಿನಲ್ಲಿ ಪ್ರಯಾಣ ಮಾಡಬೇಕಾಗಿತ್ತು. ಆ ಸಮಯದಲ್ಲಿ ಪ್ರಯಾಣಿಸಲು ಅನೇಕ ನಿರ್ಬಂಧಗಳು ಇದ್ದವು. ನಾನು ಬೇರೆಡೆ ನೆಲೆಸಲು ನಿರ್ಧರಿಸಿದೆ. ಆದ್ದರಿಂದ, ನಾನು ನನ್ನ ಕೆಲಸವನ್ನು ತ್ಯಜಿಸಬೇಕಾಯಿತು" ಎಂದು ಅವರು ಹೇಳಿದರು.

ಈ ಕೋವಿಡ್ ವೈರಸ್‌ನ ಹೊಸ ರೂಪಾಂತರಗಳ ಉಗಮದ ನಂತರ ಅನೇಕ ನಿರ್ಬಂಧಗಳನ್ನು ಹೇರುತ್ತಿರುವುದರಿಂದ ಇ-ಕಲಿಕೆ ಮುಂದಿನ ಭವಿಷ್ಯವಾಗಲಿದೆ ಎಂದು ಶಫಿ ಭಾವಿಸುತ್ತಾರೆ. ಐವಿ ಲೀಗ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುವುದು ನನ್ನ ಕನಸಾಗಿತ್ತು ಎಂದು ಶಫಿ ವಿಕ್ರಮನ್ ಹೇಳಿದ್ದಾರೆ. "ಈ ವಿಶ್ವವಿದ್ಯಾಲಯಗಳಿಂದ ಕೋರ್ಸ್‌ಗಳನ್ನು ಕಲಿಯುವುದು ನನ್ನ ಬಹುದಿನಗಳ ಕನಸಾಗಿತ್ತು" ಎಂದು ಅವರು ಹೇಳಿದರು.

ಇದನ್ನೂ ಓದಿ: Certificate: ಮಹಿಳೆಯ ಜನನ ಪ್ರಮಾಣಪತ್ರ ಉದ್ದವೆಷ್ಟು ಗೊತ್ತೇ? ಶಾಕ್‌ ಆಗ್ತೀರಾ..

ಕುಟುಂಬ ಬೆಂಬಲ
ಶಫಿಯ ಕುಟುಂಬವು ಅವನ ಜ್ಞಾನದ ಅನ್ವೇಷಣೆಯಲ್ಲಿ ಅತ್ಯಂತ ಬೆಂಬಲ ನೀಡಿತು. "ಸುಮಾರು 4-6 ತಿಂಗಳುಗಳವರೆಗೆ ನನಗೆ ಸರಿಯಾಗಿ ನಿದ್ರೆ ಇರಲಿಲ್ಲ. ನನ್ನ ಕುಟುಂಬವೂ ಆಘಾತಕ್ಕೊಳಗಾಗಿತ್ತು. ಆದರೆ ಹೇಗೋ ಎಲ್ಲಾ ಕೋರ್ಸ್‌ಗಳನ್ನು ಯಶಸ್ವಿಯಾಗಿ ಮುಗಿಸಿದೆ" ಎಂದು ಶಫಿ ಹೇಳಿದರು. ಶಫಿ ಈಗ ಇತ್ತೀಚೆಗೆ ನೋಂದಾಯಿಸಿಕೊಂಡ 22 ಕೋರ್ಸ್‌ಗಳನ್ನು ಮುಗಿಸುವ ಗುರಿ ಹೊಂದಿದ್ದಾರೆ. ಅವರು ಔಷಧ, ಹಣಕಾಸು, ರೋಬೋಟಿಕ್ಸ್, ಎಐ, ವಿಧಿವಿಜ್ಞಾನ ಮತ್ತು ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಈಗಾಗಲೇ ಮುಗಿಸಿದ್ದಾರೆ.
Published by:vanithasanjevani vanithasanjevani
First published: