Kerala to London: ಲಂಡನ್​ ಸುತ್ತುವ ಆಸೆ! ಸೈಕಲ್​ನಲ್ಲೇ 30 ಸಾವಿರ km ಪ್ರಯಾಣಿಸಲು ಹೊರಟ ಕೇರಳದ ಸಾಹಸಿ ಯುವಕ

ಸಾಮಾನ್ಯವಾಗಿ ಒತ್ತಡದ ಜೀವನದಲ್ಲಿ ಫಿಟ್​ನೆಸ್​ಗಾಗಿ ಜನರು ಹೆಚ್ಚಾಗಿ ಸೈಕ್ಲಿಂಗ್ ಮಾಡುತ್ತಾರೆ. ಆದರೆ ಫೈಜ್ ಅಶ್ರಫ್ ಅಲಿ ಕೇರಳದಿಂದ ಲಂಡನ್​ಗೆ ಸೈಕ್ಲಿಂಗ್ ಮೂಲಕ ಹೋಗಲು ನಿರ್ಧರಿಸಿದ್ದಾರೆ. ಸುಮಾರು 30,000 ಕಿ.ಮೀ ಪ್ರಯಾಣಿಸಲಿದ್ದಾರೆ. ಅಷ್ಟೇ ಏಕೆ 35 ಕ್ಕೂ ಹೆಚ್ಚು ದೇಶಗಳನ್ನು ಸುತ್ತಿಕೊಂಡು ಲಂಡನ್ ಸೇರಲಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ಈಗಂತೂ ಕನ್ಯಾಕುಮಾರಿಯಿಂದ (Kanyakumari) ಹಿಮಾಲಯಕ್ಕೆ (Himalaya) ಬೈಕ್​ನಲ್ಲಿ ಪ್ರಯಾಣ ಮಾಡುವುದು ಟ್ರೆಂಡ್ ಆಗಿ ಬಿಟ್ಟಿದೆ. ಇನ್​​ಸ್ಟಾಗ್ರಾಂ (instagram) ತೆರೆದು ನೋಡಿದರೆ ಇಂತಹ ಹಲವು ವಿಡಿಯೋಗಳು ಸಿಗುತ್ತವೆ. ಅದರಲ್ಲೂ ಯುವಕರಂತೂ ಇಂತಹ ಕನಸನ್ನು ಇಟ್ಟುಕೊಂಡು ಬೈಕ್ ಸ್ಟಾರ್ಟ್ ಮಾಡಿ ಹಿಮಾಲಯದ ಕಡೆಗೆ ತೆರಳುತ್ತಿದ್ದಾರೆ. ಅಷ್ಟೇ ಕೇರಳ (Kerala) ರಾಜ್ಯದಿಂದ ಬಹುತೇಕರು ಹಿಮಾಲಯದ ಕಡೆಗೆ ಪ್ರವಾಸ ಮಾಡುವುದನ್ನು ಕಾಣಬಹುದು. ಬೈಕ್ (Bike), ಸ್ಕೂಟರ್, ರಿಕ್ಷಾದ ಮೂಲಕ ಪ್ರಯಾಣಿಸುವ ವಿಡಿಯೋ ನೋಡಬಹುದು. ಆದರೆ ಇಲ್ಲೊಬ್ಬರು ಭಾರತದಿಂದ ವಿದೇಶಕ್ಕೆ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ. ಅಂದಹಾಗೆಯೇ ಅವರು ಸೈಕಲ್ ಮೂಲಕ ಲಂಡನ್ ಕಡೆಗೆ ತೆರಳುತ್ತಿದ್ದಾರೆ. ಹಡಗು, ವಿಮಾನದ ಮೂಲಕ ಪ್ರಯಾಣಿಸುವ ಈ ಕಾಲದಲ್ಲಿ ಕೇರಳ ಮೂಲದ ಯುವಕ ಸೈಕಲ್ ತುಳಿದು ಲಂಡನ್ ಸೇರಲು ಬಯಸಿರುವುದು ಸಾಹಸವೇ ಸರಿ.

    ಸಾಮಾನ್ಯವಾಗಿ ಒತ್ತಡದ ಜೀವನದಲ್ಲಿ ಫಿಟ್​ನೆಸ್​ಗಾಗಿ ಜನರು ಹೆಚ್ಚಾಗಿ ಸೈಕ್ಲಿಂಗ್ ಮಾಡುತ್ತಾರೆ. ಆದರೆ ಫೈಜ್ ಅಶ್ರಫ್ ಅಲಿ ಕೇರಳದಿಂದ ಲಂಡನ್​ಗೆ ಸೈಕ್ಲಿಂಗ್ ಮೂಲಕ ಹೋಗಲು ನಿರ್ಧರಿಸಿದ್ದಾರೆ. ಸುಮಾರು 30,000 ಕಿ.ಮೀ ಪ್ರಯಾಣಿಸಲಿದ್ದಾರೆ. ಅಷ್ಟೇ ಏಕೆ 35 ಕ್ಕೂ ಹೆಚ್ಚು ದೇಶಗಳನ್ನು ಸುತ್ತಿಕೊಂಡು ಲಂಡನ್ ಸೇರಲಿದ್ದಾರೆ.

    ಅಂದಹಾಗೆಯೇ, ಇಂತಹ ಸಾಹಸ ಮಾಡಲು ಕೆಲವರಿಂದ ಮಾತ್ರ ಸಾಧ್ಯ. ಈಗಂತೂ ಯುವಕರಿಗೆ ಇಂತಹ ಸಾಹಸವು ನೀರು ಕುಡಿದಂತೆ ಸುಲಭವಾಗಿದೆ. ಅದಕ್ಕೆ ಉದಾಹರಣೆ ಎಂದರೆ ಈ ಕೇರಳದ ಫೈಜ್ ಅಶ್ರಫ್ ಅಲಿ ಸೈಕಲ್ ತುಳಿದುಕೊಂಡು ಲಂಡನ್ ಪ್ರಯಾಣಿಸುವ ಸಾಹಸ.

    ಫೈಜ್ ಅಶ್ರಫ್ ಅಲಿ ಅವರು ವಿಪ್ರೋದಲ್ಲಿ ಕೆಲಸ ಮಾಡುತ್ತಿದ್ದು, ಸೈಕ್ಲಿಂಗ್ ಅನ್ನು ತುಂಬಾ ಇಷ್ಟಪಡುತ್ತಾರೆ. ಹೀಗಾಗಿ ಈ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಬರೋಬ್ಬರಿ 30 ಸಾವಿರ ಕಿ.ಮೀ ಪ್ರಯಾಣಿಸುವುದೆಂದರೆ ಸುಲಭದ ಮಾತಲ್ಲ.

    ಇದನ್ನೂ ಓದಿ: Iphone 14: ಆ್ಯಪಲ್​ ಪ್ರಿಯರಿಗೆ ಸಿಹಿ ಸುದ್ದಿ! ಮುಂದಿನ ತಿಂಗಳು ಐಫೋನ್​ 14 ಮಾರುಕಟ್ಟೆಗೆ ಬರುವುದು ಪಕ್ಕಾ?

    ಅಶ್ರಫ್ ಅಲಿ ಅವರು ಸೋಮವಾರ "ಆಜಾದಿ ಕಾ ಅಮೃತ್ ಮಹೋತ್ಸವ" ಆಚರಣೆಯಲ್ಲಿ ಭಾಗವಹಿಸುವ ಮೂಲಕ ಕೇರಳದ ರಾಜಧಾನಿಯಿಂದ ಲಂಡನ್ಗೆ ತಮ್ಮ ಸೈಕಲ್ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಕೇರಳ ಶಿಕ್ಷಣ ಸಚಿವ ವಿ ಶಿವನ್ಕುಟ್ಟಿ ಯಾತ್ರೆಗೆ ಚಾಲನೆ ನೀಡಿದರು.

    ಇದನ್ನು ಇಕೋ ವೀಲರ್ಸ್ ತಂಡ ಆಯೋಜಿಸಿದೆ. ಪ್ರಯಾಣವು ಪೂರ್ಣಗೊಳ್ಳಲು ಕನಿಷ್ಠ 450 ದಿನಗಳನ್ನು ತೆಗೆದುಕೊಳ್ಳುತ್ತದೆ. ಪ್ರಪಂಚದಾದ್ಯಂತ ಪ್ರೀತಿ ಮತ್ತು ಶಾಂತಿಯ ಸಂದೇಶವನ್ನು ಹರಡುವುದು ಇದರ ಉದ್ದೇಶವಾಗಿದೆ. ಅಲಿ ಅವರು 35 ದೇಶಗಳಲ್ಲಿ 30,000 ಕಿ.ಮೀ ದೂರ ಕ್ರಮಿಸಲಿದ್ದು, ಸುಮಾರು 450 ದಿನಗಳಲ್ಲಿ ಲಂಡನ್ ತಲುಪುವ ನಿರೀಕ್ಷೆಯಿದೆ. ಪಾಕಿಸ್ತಾನ ಮತ್ತು ಚೀನಾ ಅವರಿಗೆ ವೀಸಾ ನೀಡದ ಕಾರಣ, ಈ ಎರಡು ದೇಶಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ.



    ಇದನ್ನೂ ಓದಿ: Love Marriage: ಪ್ರೀತಿಸಿ ಮದ್ವೆಯಾದ ಜೋಡಿ, ಗ್ಯಾಂಗ್ ಕಟ್ಕೊಂಡು ಬಂದು ಹುಡುಗನ ಮನೆ ಮೇಲೆ ದಾಳಿ

    ಸೈಕಲ್​ನಲ್ಲಿ ಮುಂಬೈ ತಲುಪಿದ ನಂತರ, ಅಲಿ ಒಮಾನ್​ಗೆ ವಿಮಾನವನ್ನು ಏರುತ್ತಾರೆ ಮತ್ತು ಅಲ್ಲಿಂದ ಅವರು ತಮ್ಮ ಪ್ರಯಾಣವನ್ನು ಪುನರಾರಂಭಿಸುತ್ತಾರೆ. ಅವರು ಯುಎಇ, ಸೌದಿ ಅರೇಬಿಯಾ, ಬಹ್ರೇನ್, ಕುವೈತ್, ಇರಾಕ್, ಇರಾನ್ ಮತ್ತು ಟರ್ಕಿಯಂತಹ ದೇಶಗಳಿಗೆ ಪ್ರಯಾಣಿಸಲಿದ್ದಾರೆ. ಲಂಡನ್ ತಲುಪುವ ಮೊದಲು ಬಲ್ಗೇರಿಯಾ, ರೊಮೇನಿಯಾ, ಉಕ್ರೇನ್, ಆಸ್ಟ್ರಿಯಾ, ಇಟಲಿ, ಜರ್ಮನಿ ಮತ್ತು ಫ್ರಾನ್ಸ್​ನಂತಹ ಯುರೋಪಿಯನ್ ದೇಶಗಳ ಮೂಲಕ ಹಾದು ಹೋಗುವುದಾಗಿ ಅವರು ಹೇಳಿದ್ದಾರೆ.

    34 ವರ್ಷದ ಫೈಜ್ ಅಶ್ರಫ್ ಅಲಿ ಈ ಹಿಂದೆ ಐಟಿ ಪ್ರಮುಖ ಕಂಪನಿ ವಿಪ್ರೋದಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಕೆಲಸವನ್ನು ಬಿಟ್ಟು ಸೈಕ್ಲಿಂಗ್ ಮಾಡಲು ನಿರ್ಧರಿಸಿದರು. ಫೈಜ್ ಅಶ್ರಫ್ ಅಲಿ 2019 ರಲ್ಲಿ ಕೋಝಿಕೋಡ್​ನಿಂದ ಸಿಂಗಾಪುರಕ್ಕೆ ಒಬ್ಬರೇ ಸೈಕಲ್​ನಲ್ಲಿ ಪ್ರವಾಸ ಮಾಡಿದ್ದಾರೆ. ಇದು ಅವರ ಮೊದಲ ಸೈಕಲ್ ಪ್ರವಾಸವಾಗಿದೆ.
    Published by:Harshith AS
    First published: