ಬಿಸಿಯೂಟದ ಗುಣಮಟ್ಟ ಪರಿಶೀಲಿಸಲು ಮಕ್ಕಳೊಂದಿಗೆ ಊಟ ಮಾಡಿದ ಐಎಎಸ್​ ಅಧಿಕಾರಿ


Updated:June 25, 2018, 2:15 PM IST
ಬಿಸಿಯೂಟದ ಗುಣಮಟ್ಟ ಪರಿಶೀಲಿಸಲು ಮಕ್ಕಳೊಂದಿಗೆ ಊಟ ಮಾಡಿದ ಐಎಎಸ್​ ಅಧಿಕಾರಿ
(Source: District Collector Alappuzha/ Facebook)

Updated: June 25, 2018, 2:15 PM IST
ಅಲಪ್ಪುಳಾ : ಜಿಲ್ಲಾಧಿಕಾರಿಯೊಬ್ಬರು ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟದ ಗುಣಮಟ್ಟವನ್ನು ಅರಿಯಲು ಸಮೀಪದ ಸರಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಊಟ ಮಾಡಿದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕೇರಳದಲ್ಲಿ ಐಎಎಸ್ ಅಧಿಕಾರಿ ಎಸ್. ಸುಹಾಸ್ ಅವರು ಶಿಕ್ಷಣ ಇಲಾಖೆಯ ಮಾಜಿ ನಿರ್ದೇಶಕರಾದ ಲತಿಕಾ ಅವರೊಂದಿಗೆ ಬುಧವಾರ ನೀರ್​ಕುನ್ನಮ್​ನ ಸರಕಾರಿ ಶಾಲೆಗೆ ಭೇಟಿ ನೀಡಿದ್ದಾರೆ. ಬಳಿಕ ಇಲ್ಲಿ ಪೂರೈಕೆಯಾಗುತ್ತಿದ್ದ ಬಿಸಿಯೂಟದ ಗುಣಮಟ್ಟದ ಪರಿಶೀಲನೆಗೆಂದು ಮಕ್ಕಳೊಂದಿಗೆ ತಾವೂ ಕುಳಿತು ಊಟ ಮಾಡಿದ್ದಾರೆ. ಇದನ್ನು ತಮ್ಮ ಅಧಿಕೃತ ಫೇಸ್​ಬುಕ್​ ಪೇಜ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಈ ವಿಚಾರ ವೈರಲ್ ಆಗುತ್ತಿದ್ದಂತೆ ಎಲ್ಲರಿಂದ ಅಧಿಕಾರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


ಮಕ್ಕಳೊಂದಿಗೆ ಮಜ್ಜಿಗೆ, ಫ್ರೈ ಮಾಡಿದ ಬಟಾಟೆ, ಸೌತೇಕಾಯಿ ಪಲ್ಯದೊಂದಿಗೆ ಮಧ್ಯಾಹ್ನದ ಭೋಜನವಾಗಿದೆ ಎಂದು ಫೇಸ್​ಬುಕ್​ನಲ್ಲಿ ಅಧಿಕಾರಿ ಬರೆದುಕೊಂಡಿದ್ದಾರೆ.

ಇದಾದ ಬಳಿಕ ಶಾಲೆಯಲ್ಲಿರುವ ಲೈಬ್ರೇರಿ ಮತ್ತು ಕಂಪ್ಯೂಟರ್​ ಲ್ಯಾಬ್​ಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಶಾಲೆಯಲ್ಲಿ ಸ್ಥಳ ಕೊರತೆ ಬಗ್ಗೆ ಸಿಬ್ಬಂದಿ ಮಾಹಿತಿ ನೀಡಿದ್ದು, ಸಮಸ್ಯೆಗೆ ಪರಿಹಾರ ನೀಡುವುದಾಗಿ ಅಧಿಕಾರಿ ಭರವಸೆ ಕೊಟ್ಟಿದ್ದಾರೆ.
First published:June 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ