Ann Mary: ಕಾನೂನು ವಿದ್ಯಾರ್ಥಿನಿಗೆ ಬಸ್​ ಓಡಿಸೋ ಕ್ರೇಜ್​: ಒಜ್ಜದ ರಾಜ್ಯದಲ್ಲಿ ಈಕೆಯದ್ದೇ ಹವಾ

ಆನ್ನಾ ಮೇರಿ ಎಂಬ ಕೇರಳದ ಹುಡುಗಿಗೆ ಬಾಲ್ಯದಿಂದಲೂ ಅವಳ ತಂದೆಯ ರಾಯಲ್ ಎನ್‌ಫೀಲ್ಡ್ ಬುಲೆಟ್ ನ ಶಬ್ದ ಎಂದರೆ ತುಂಬಾನೇ ಇಷ್ಟ. ಆ ಇಷ್ಟ ಆಕೆಗೆ ಈ ಬೈಕ್ ಗಳ ಮತ್ತು ದೊಡ್ಡ ದೊಡ್ಡ ವಾಹನಗಳ ಬಗ್ಗೆ ಆಸಕ್ತಿ ಹುಟ್ಟಿಹಾಕಿತು. ಆಕೆ ಬುಲೆಟ್ ನ ಶಬ್ದ ಕೇಳಿದ ತಕ್ಷಣ ಗೇಟಿನ ಬಳಿಗೆ ಓಡುತ್ತಿದ್ದಳು ಮತ್ತು ತಂದೆಯ ಜೊತೆ ಒಂದು ಜಾಲಿ ರೈಡ್ ಹೋಗಿ ಬರುತ್ತಿದ್ದಳು. ಈಗ ಅವಳಿಗೆ ದೊಡ್ಡ ವಾಹನಗಳಾದ ಬಸ್ಸುಗಳು ಮತ್ತು ಲಾರಿಗಳ ಬಗ್ಗೆ ಅವಳ ಆಸಕ್ತಿ ಕೂಡ ಆಸಕ್ತಿ ಹೆಚ್ಚಿದ್ದು ಅದನ್ನೂ ಚಲಾಯಿಸುತ್ತಾಳಂತೆ.

ಆನ್ನಾ ಮೇರಿ

ಆನ್ನಾ ಮೇರಿ

  • Share this:
ಕೆಲವೊಬ್ಬರಿಗೆ ತಾವು ನೋಡಿದ ವಾಹನಗಳನ್ನು (Vehicles) ಜೀವನದಲ್ಲಿ ಒಮ್ಮೆಯಾದರೂ ಓಡಿಸಿ (Drive) ನೋಡಬೇಕು ಅಂತ ಆಸೆ ಇರುತ್ತದೆ. ಅದರಲ್ಲೂ ಈಗಿನ ಹುಡುಗಿಯರಿಗೆ (Girls) ಬೈಕ್ ಓಡಿಸುವುದು, ಕಾರು (Car) ಓಡಿಸುವುದು ಎಂದರೆ ತುಂಬಾನೇ ಇಷ್ಟ. ಆದರೆ ಇಲ್ಲೊಬ್ಬ ಹುಡುಗಿ ಕಾರು, ಬೈಕ್ (Bike) ಓಡಿಸಿ ಬೋರ್ ಆಗಿ ದೊಡ್ಡ ಬಸ್ಸನ್ನೇ ಓಡಿಸಿದ್ದಾರೆ ನೋಡಿ. ಆನ್ನಾ ಮೇರಿ ಎಂಬ ಕೇರಳದ (Kerala) ಹುಡುಗಿಗೆ ಬಾಲ್ಯದಿಂದಲೂ ಅವಳ ತಂದೆಯ ರಾಯಲ್ ಎನ್‌ಫೀಲ್ಡ್ ಬುಲೆಟ್ ನ (Bullet) ಶಬ್ದ ಎಂದರೆ ತುಂಬಾನೇ ಇಷ್ಟ. ಆ ಇಷ್ಟ ಆಕೆಗೆ ಈ ಬೈಕ್ ಗಳ ಮತ್ತು ದೊಡ್ಡ ದೊಡ್ಡ ವಾಹನಗಳ ಬಗ್ಗೆ ಆಸಕ್ತಿ ಹುಟ್ಟಿಹಾಕಿತು.

ಎಲ್ಲಾ ವಾಹನಗಳನ್ನು ಚಲಾಯಿಸಲು ಕಲಿತ ಯುವತಿ 
ಅವಳು ದೊಡ್ಡವಳಾಗುತ್ತಿದ್ದಂತೆ, ಅವಳು ಬೈಕ್ ಅನ್ನು ಓಡಿಸಬೇಕೆಂದು ಕನಸು ಕಂಡಳು. ತನ್ನ 15ನೇ ವಯಸ್ಸಿನಲ್ಲಿಯೇ ಅವಳನ್ನು ಸದಾ ಬೆಂಬಲಿಸುವ ತಂದೆ ಅವಳಿಗೆ ಬೈಕ್ ಓಡಿಸುವುದನ್ನು ಹೇಳಿಕೊಟ್ಟರು. ಕಾಲಾನಂತರದಲ್ಲಿ, ಅವಳು ಕಾರನ್ನು ಓಡಿಸುವುದನ್ನು ಸಹ ಕಲಿತಳು ಮತ್ತು ಶೀಘ್ರದಲ್ಲಿಯೇ ಸಂಪೂರ್ಣವಾಗಿ ಈ ಡ್ರೈವಿಂಗ್ ಅನ್ನು ಇಷ್ಟಪಡುವುದಕ್ಕೆ ಶುರು ಮಾಡಿದಳು. ಸಣ್ಣ ವಾಹನಗಳ ಮೇಲಿನ ಈ ಪ್ರೀತಿಯು ದೊಡ್ಡ ವಾಹನಗಳಾದ ಬಸ್ಸುಗಳು ಮತ್ತು ಲಾರಿಗಳ ಬಗ್ಗೆ ಅವಳ ಆಸಕ್ತಿಯನ್ನು ಹೆಚ್ಚಿಸಿತು.

ಆನ್ನಾ ಮೇರಿ ಏನ್ ಹೇಳ್ತಾರೆ ನೋಡಿ 
"ನಾನು ನನ್ನ ತಂದೆಯ ಬೈಕನ್ನು ಮೊದಲ ಬಾರಿಗೆ ಓಡಿಸಿದಾಗ ನಾನು ಅನುಭವಿಸಿದ ಸ್ವಾತಂತ್ರ್ಯವನ್ನು ನಾನು ಪ್ರೀತಿಸಿದೆ. ಆ ಅನುಭವವನ್ನು ಪದಗಳಲ್ಲಿ ವಿವರಿಸುವುದು ಕಷ್ಟ. ಈ ಬೈಕ್ ಸವಾರಿಗಳಲ್ಲಿ, ಇತರ ಬಸ್ಸುಗಳು ನನ್ನ ಸುತ್ತಲೂ ಚಲಿಸುವುದನ್ನು ನಾನು ನೋಡುತ್ತಿದ್ದೆ ಮತ್ತು ಅದನ್ನು ಓಡಿಸುವುದು ಹೇಗೆಂದು ಯೋಚಿಸುತ್ತಿದ್ದೆ. ನಾನು ಒಮ್ಮೆ ಬಸ್ ಓಡಿಸುವುದನ್ನು ಕಲಿತ ಮೇಲೆ, ಬಸ್ಸಿನಲ್ಲಿ ಪ್ರಯಾಣಿಕನಾಗಿ ಪ್ರಯಾಣಿಸುವುದು ನನಗೆ ಅಷ್ಟೊಂದು ಸಂತೋಷ ನೀಡಲಿಲ್ಲ, ನಾನು ಅದನ್ನು ಓಡಿಸಲು ಬಯಸಿದೆ" ಎಂದು ಮೇರಿ ಹೇಳುತ್ತಾರೆ. “ಬಸ್ ಓಡಿಸುವುದು ಹೇಗೆಂದು ತಿಳಿದಿದ್ದ ತನ್ನ ನೆರೆಮನೆಯ ಶರತ್ ನ ಸಹಾಯ ಪಡೆದುಕೊಂಡೆ. ಅವನು ತನಗೆ ತಿಳಿದಿದ್ದನ್ನು ನನಗೆ ಕಲಿಸಿದನು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:   POTS: ಗುರುತ್ವಾಕರ್ಷಣೆಯಿಂದ ಅಲರ್ಜಿ: 23 ಗಂಟೆ ಹಾಸಿಗೆಯಲ್ಲೇ ಕಳೆಯುವ ಮಹಿಳೆ!

"ನಾನು ಬಸ್ಸಿನಲ್ಲಿ ಕುಳಿತಾಗ, ಡ್ರೈವರ್ ಆದವರು ಅಂತಹ ದೊಡ್ಡ ವಾಹನವನ್ನು ಹೇಗೆ ಕುಶಲತೆಯಿಂದ ನಿರ್ವಹಿಸುತ್ತಾನೆ ಎಂಬುದನ್ನು ನಾನು ಯಾವಾಗಲೂ ಗಮನಿಸುತ್ತಿದ್ದೆ" ಎಂದು ಅವರು ವಿವರಿಸುತ್ತಾರೆ. "ಶರತ್ ಚೆಟ್ಟಾ ನನಗೆ ಸುಮಾರು ಒಂದು ತಿಂಗಳ ಕಾಲ ಡ್ರೈವಿಂಗ್ ಕಲಿಸಿದರು. ಅವರು ನನಗೆ ತುಂಬಾನೇ ಬೆಂಬಲ ನೀಡಿದರು ಮತ್ತು ಮಾರ್ಗದರ್ಶನ ಸಹ ನೀಡಿದರು" ಎಂದು ಹೇಳಿದರು.

ಎರ್ನಾಕುಲಂನ ಸರ್ಕಾರಿ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಈಕೆ
ಅವಳು ತನ್ನ 21ನೇ ಹುಟ್ಟುಹಬ್ಬಕ್ಕೆ ಕೆಲವು ತಿಂಗಳುಗಳ ಮೊದಲು ಬಸ್ ಓಡಿಸುವುದನ್ನು ಕಲಿಯಲು ಶುರು ಮಾಡಿದರು ಮತ್ತು ಭಾರಿ ವಾಹನದ ಪರವಾನಗಿಯನ್ನು ಪಡೆಯಲು ಡ್ರೈವಿಂಗ್ ಶಾಲೆಗೆ ಸೇರಿದಳು. ಇಂದು, ಅವರು ಪ್ರತಿ ಭಾನುವಾರ ಕೊಚ್ಚಿಯ ಸುತ್ತಲೂ 'ಹೇ ಡೇ' ಎಂಬ ಖಾಸಗಿ ಬಸ್ಸನ್ನು ಓಡಿಸುತ್ತಾರೆ. ಭಾರಿ ವಾಹನಗಳನ್ನು ಓಡಿಸುವ ತನ್ನ ಕನಸನ್ನು ಈಡೇರಿಸಿಕೊಂಡೆ ಎಂದು ಅವರು ಹೇಳುತ್ತಾರೆ.ಎರ್ನಾಕುಲಂನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ನಾಲ್ಕನೇ ವರ್ಷದ ವಿದ್ಯಾರ್ಥಿನಿಯಾಗಿರುವ ಈಕೆ ಭಾನುವಾರ ಬೆಳಿಗ್ಗೆ 7 ರಿಂದ ಸಂಜೆ 6.45 ರವರೆಗೆ ಕಕ್ಕನಾಡ್-ಪೆರುಂಪಡಪ್ಪು ಮಾರ್ಗದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುವ ಬಸ್ಸನ್ನು ಓಡಿಸಲು ಸಮಯವನ್ನು ತೆಗೆದುಕೊಳ್ಳುತ್ತಾರೆ. ಶೀಘ್ರದಲ್ಲಿಯೇ ತನ್ನ ಉಚ್ಚ ನ್ಯಾಯಾಲಯದ ಇಂಟರ್ನ್‌ಶಿಪ್ ಮುಗಿದ ನಂತರ ಅವಳು ಬಸ್ ಅನ್ನು ಮನೆಗೆ ಓಡಿಸಿಕೊಂಡು ಹೋಗುವವರಿದ್ದಾರೆ.

ವಾಹನ ಓಡಿಸುವ ಖುಷಿ ಬರೀ ಗಂಡಸರಿಗೇಕೆ?
ಪ್ರಯಾಣಿಕರು ಇರುವ ಬಸ್ ಅನ್ನು ಓಡಿಸಿದ ತನ್ನ ಮೊದಲ ಅನುಭವವು ತುಂಬಾನೇ ಒತ್ತಡದಿಂದ ಕೂಡಿದ್ದಷ್ಟೇ, ರೋಮಾಂಚಕವಾಗಿತ್ತು ಎಂದು ಇವರು ನೆನಪಿಸಿಕೊಳ್ಳುತ್ತಾರೆ. "ನನ್ನ 21ನೇ ಜನ್ಮದಿನದಂದು ನಾನು ಪರವಾನಗಿ ಪಡೆದ ನಂತರ, ಫೆಬ್ರವರಿ 2022 ರಲ್ಲಿ ನಾನು ಬಸ್ ಓಡಿಸಿದ ಮೊದಲ ದಿನವಾಗಿತ್ತು. ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿಯನ್ನು ನಾನು ಹೊಂದಿದ್ದರಿಂದ ನಾನು ತುಂಬಾ ನರ್ವಸ್ ಆಗಿದ್ದೆ" ಎಂದು ಹೇಳಿದ್ದಾರೆ .

ಇದನ್ನೂ ಓದಿ:  King Cobra: ಅಬ್ಬಬ್ಬಾ! 1 ವಾರ ಕಾರಿನಲ್ಲಿಯೇ ಅಡಗಿ ಕುಳಿತಿತ್ತಂತೆ ಈ ಕಾಳಿಂಗ ಸರ್ಪ

"ಪ್ರತಿಬಾರಿಯೂ ಮತ್ತೊಂದು ವಾಹನ ನನ್ನ ಬಸ್ ಅನ್ನು ಓವರ್ ಟೇಕ್ ಮಾಡಿದಾಗ, ನಾನು ಉದ್ವಿಗ್ನಳಾಗುತ್ತಿದ್ದೆ. ಬಸ್ಸಿನಲ್ಲಿ ಹತ್ತಿದ ಪ್ರತಿಯೊಬ್ಬ ಪ್ರಯಾಣಿಕನೂ ನನ್ನನ್ನು ಅನುಮಾನಾಸ್ಪದವಾಗಿ ನೋಡುತ್ತಿದ್ದರು. 'ಓಹ್, ಹುಡುಗಿಯೊಬ್ಬಳು ಈ ಬಸ್ಸನ್ನು ಓಡಿಸುತ್ತಿದ್ದಾಳೆ' ಎಂಬಂತಹ ಕಾಮೆಂಟ್ ಗಳೂ ನನಗೆ ಕೇಳಿಸುತ್ತಿದ್ದವು. ಇಷ್ಟು ತಿಂಗಳುಗಳು ಕಳೆದರೂ ಸಹ ಅವರ ಮುಖದಲ್ಲಿ ಅದೇ ಗೊಂದಲದ ಅಭಿವ್ಯಕ್ತಿಯನ್ನು ನಾನು ಇನ್ನೂ ನೋಡುತ್ತೇನೆ, 'ಹುಡುಗಿ ಏಕೆ ಬಸ್ ಓಡಿಸುತ್ತಿದ್ದಾಳೆ' ಅಂತ ಸಹ ತುಂಬಾ ಜನರು ಹೇಳುವುದುಂಟು” ಎಂದು ಅವರು ಹೇಳುತ್ತಾರೆ.ದೇಶದಲ್ಲಿ ಮಹಿಳಾ ಬಸ್ ಚಾಲಕರ ಸಂಖ್ಯೆ ತುಂಬಾ ಕಡಿಮೆ. ಅರ್ಬನ್ ಟ್ರಾನ್ಸ್‌ಪೋರ್ಟ್ ನ್ಯೂಸ್ ವರದಿಯ ಪ್ರಕಾರ, ಭಾರತದಲ್ಲಿ ನಗರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಕೇವಲ 17.5 ಪ್ರತಿಶತದಷ್ಟು ಮಹಿಳಾ ಉದ್ಯೋಗಿಗಳಿದ್ದಾರೆ. ಕಠಿಣ ಕೆಲಸದ ಪರಿಸ್ಥಿತಿಗಳ ಜೊತೆಗೆ, ಸಾರಿಗೆ ವಲಯದ ಸ್ಟೀರಿಯೊಟೈಪಿಕ್ ಪುರುಷ ಚಿತ್ರಣವೂ ಇದಕ್ಕೆ ಕಾರಣ ಎಂದು ವರದಿ ಹೇಳುತ್ತದೆ. ಮಹಿಳೆಯರು ಬಸ್ ಅನ್ನು "ನಿರ್ವಹಿಸಲು" ಸಾಧ್ಯವಿಲ್ಲ ಅಥವಾ ಅವರು ಬಸ್ ಓಡಿಸಿದರೆ ಅಪಘಾತಗಳು ಹೆಚ್ಚಾಗುತ್ತವೆ ಎಂಬ ನಂಬಿಕೆಯೂ ಇದೆ.

ಬಸ್ ಓಡಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳಂತೆ 
ಬಸ್ ಓಡಿಸುವಾಗ ಅವಳು ಮನಸ್ಸಿನಲ್ಲಿಟ್ಟುಕೊಳ್ಳುವ ಕೆಲವು ಪ್ರಮುಖ ವಿಷಯಗಳಿವೆ. "ಕಾರಿನಲ್ಲಿರುವಂತೆ, ನೀವು ಬಸ್ಸಿನಲ್ಲಿ ಸೀಟಿನ ಎತ್ತರವನ್ನು ಸರಿಹೊಂದಿಸಲು ಸಾಧ್ಯವಿಲ್ಲ. ಆಕ್ಸಿಲರೇಟರ್ ಅನ್ನು ತಲುಪಲು ಸೀಟಿನ ಮೇಲೆ ಹಿಂದಿನ ದಿಂಬುಗಳನ್ನು ಬಳಸುತ್ತೇನೆ. ಆರಂಭದಲ್ಲಿ, ನನ್ನನ್ನು ಓವರ್ ಟೇಕ್ ಮಾಡುವ ಯಾವುದೇ ವಾಹನವು ನನ್ನನ್ನು ತುಂಬಾ ಉದ್ವಿಗ್ನಗೊಳಿಸುತ್ತಿತ್ತು. ಈಗ, ನಾನು ಶಾಂತವಾಗಿರುತ್ತೇನೆ ಮತ್ತು ತಾಳ್ಮೆಯಿಂದ ಚಾಲನೆ ಮಾಡುತ್ತೇನೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ತಮ್ಮ ಗಮ್ಯಸ್ಥಾನಕ್ಕೆ ಕರೆದೊಯ್ಯುವುದು ನನ್ನ ಏಕೈಕ ಗಮನವಾಗಿದೆ" ಎಂದು ಅವರು ವಿವರಿಸುತ್ತಾರೆ.

ಇದನ್ನೂ ಓದಿ:   Viral Post: ಕಾರು ಖರೀದಿಸಿದ ಬಳಿಕ ಮಾಜಿ ಬಾಸ್ ಮತ್ತು ಮಾಜಿ ಗೆಳತಿಯರಿಗೆ ಥ್ಯಾಂಕ್ಸ್ ಹೇಳಿದ ವ್ಯಕ್ತಿ! ಯಾಕೆ?

ಅವಳು ಬಸ್ ಅನ್ನು ಓಡಿಸುವಾಗ ಸಮಯಪಟ್ಟಿ ಇರುವುದರಿಂದ ಅವಳು ಸಮಯ ನಿರ್ವಹಣೆಯನ್ನು ಸಹ ಅಭ್ಯಾಸ ಮಾಡಬೇಕಾಗುತ್ತದೆ. ಅವಳು ಕಾಲೇಜಿನಲ್ಲಿ ತನ್ನ ಸಮಯವನ್ನು ನ್ಯಾಯೋಚಿತವಾಗಿ ನಿರ್ವಹಿಸುವಂತೆ ಮತ್ತು ಅವಳ ಇಂಟರ್ನ್ಶಿಪ್ ನಲ್ಲಿ ತನ್ನ ಸಮಯವನ್ನು ವಿವೇಚನೆಯಿಂದ ನಿರ್ವಹಿಸುವಂತೆ, ಪ್ರತಿ ನಿಲುಗಡೆಯನ್ನು ನಿಖರವಾದ ಸಮಯದಲ್ಲಿ ತಲುಪಬೇಕು.

ಬಸ್ ಓಡಿಸುವಾಗ ಪ್ರತಿದಿನ ಕಲಿಯುವುದು ಇರುತ್ತದೆ
ಶರತ್ ಅವರ ಚಾಲನಾ ಪಾಠಗಳು ತನಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಿದವು ಎಂದು ಮೇರಿ ಹೇಳುತ್ತಾರೆ. "ಶರತ್ ಚೆಟ್ಟಾ ಅತ್ಯಂತ ತಾಳ್ಮೆ ಮತ್ತು ಬೆಂಬಲ ನೀಡುತ್ತಿದ್ದರು. ಅನೇಕ ಬಾರಿ ಬಸ್ ಇದ್ದಕ್ಕಿದ್ದಂತೆ ರಸ್ತೆಯ ಮಧ್ಯದಲ್ಲಿ ನಿಂತಾಗ ಹಿಂದೆ ಬರುವ ವಾಹನಗಳು ಹಿಂದೆ ಸಾಲುಗಟ್ಟಿ ನಿಂತಿರುತ್ತಿದ್ದವು. ಆದರೆ ಅವರು ಎಂದಿಗೂ ಹೆದರಲಿಲ್ಲ. ಅವರು ನನಗೆ ಎಂದು ಒಂದು ಮಾತನ್ನು ಸಹ ಹೇಳಲಿಲ್ಲ. ಅವರ ತಾಳ್ಮೆ ನನಗೆ ಬಸ್ ಕಲಿಯಲು ಸಹಾಯ ಮಾಡಿತು" ಎಂದು ಮೇರಿ ಹೇಳಿಕೊಂಡಿದ್ದಾರೆ.

"ನನ್ನ ಕುಟುಂಬವು ಹುಡುಗರು ಮತ್ತು ಹುಡುಗಿಯರ ನಡುವೆ ಎಂದಿಗೂ ಭೇದಭಾವ ಮಾಡಿಲ್ಲ. 'ನೀವು ಹುಡುಗಿಯಾಗಿರುವುದರಿಂದ ನೀವು ಇದನ್ನು ಅಥವಾ ಅದನ್ನು ಮಾಡಲು ಸಾಧ್ಯವಿಲ್ಲ' ಎಂದು ಅವರು ಎಂದಿಗೂ ಹೇಳಲಿಲ್ಲ. ಅವರು ನನ್ನನ್ನು ಸದಾ ಪ್ರೇರೇಪಿಸಿದರು ಮತ್ತು ನನ್ನ ಕನಸನ್ನು ಬೆಂಬಲಿಸಿದರು ಮತ್ತು ನನ್ನ ತಂದೆ ನನ್ನನ್ನು ನಂಬಿದ ಮೊದಲಿಗರು. ನನಗೆ 18 ವರ್ಷ ತುಂಬಿದ ನಂತರ ಅವರು ನನಗೆ ಒಂದು ಬುಲೆಟ್ ಖರೀದಿಸಿ ಕೊಟ್ಟರು" ಅಂತ ಹೇಳಿದ್ದಾರೆ.

ರೈಲನ್ನು ಸಹ ಓಡಿಸುವ ಆಸೆಯಂತೆ ಈಕೆದ್ದು 
ಮ್ಯಾಜಿಸ್ಟ್ರೇಟ್ ಆಗುವ ಗುರಿಯನ್ನು ಹೊಂದಿರುವ ಮೇರಿ, ಇತರ ಭಾರಿ ವಾಹನಗಳನ್ನು ಓಡಿಸುವ ಆಸೆಯಲ್ಲಿ ಮುಂದೆ ಜೆಸಿಬಿ ಪರವಾನಗಿಯನ್ನು ಪಡೆಯುವ ಗುರಿಯನ್ನು ಹೊಂದಿದ್ದಾರೆ. "ಡ್ರೈವಿಂಗ್ ಕೇವಲ ಹುಡುಗರಿಗೆ ಮಾತ್ರ ಅಲ್ಲ. "ಬಸ್ ದೊಡ್ಡದಾಗಿದೆ ಎಂದ ಮಾತ್ರಕ್ಕೆ, ಒಬ್ಬ ಮಹಿಳೆ ಅದನ್ನು ಓಡಿಸಲು ಸಾಧ್ಯವಿಲ್ಲ ಎಂದು ಅರ್ಥವಲ್ಲ. ವಾಸ್ತವವಾಗಿ, ನಾನು ರೈಲನ್ನು ಸಹ ಓಡಿಸಬೇಕೆಂದಿದ್ದೇನೆ" ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:  YouTubers Village: ಈ ಊರಿನ ಜನರೆಲ್ಲ ಯೂಟ್ಯೂಬರ್ಸ್​; ಎಲ್ರದ್ದೂ ಒಂದೊಂದು ಚಾನಲ್! ಸರ್ಕಾರಿ ಕೆಲಸವೂ ಬೇಡ್ವಂತೆ

"ಈ ಬಸ್ ಓಡಿಸುವುದರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅದೊಂದು ಅದ್ಭುತ ಜೀವನಾನುಭವ. ವಿಭಿನ್ನ ಜನರನ್ನು ಭೇಟಿಯಾಗುವುದರಿಂದ ಮತ್ತು ಅವರ ಕಥೆಗಳನ್ನು ಕೇಳುವುದರಿಂದ ತುಂಬಾನೇ ಕಲಿಯುವುದಕ್ಕೆ ಸಿಗುತ್ತದೆ. ನಾನು ಇತರ ಚಾಲಕರೊಂದಿಗೆ ಊಟ ಮಾಡುತ್ತಾ ಅವರೊಂದಿಗೆ ಮಾತನಾಡುವುದನ್ನು ಆನಂದಿಸುತ್ತೇನೆ. ಅವರು ನನಗಿಂತಲೂ ಹೆಚ್ಚಿನ ಜೀವನ ನೋಡಿದ್ದಾರೆ ಮತ್ತು ಅವರ ಅನುಭವಗಳು ನಿಜಕ್ಕೂ ನಮಗೆ ಒಂದು ಪಾಠ" ಎಂದು ಅನುಭವ ಹಂಚಿಕೊಂಡಿದ್ದಾರೆ.
Published by:Ashwini Prabhu
First published: