Farming: ಒಂದು ಎಕರೆಯಲ್ಲಿ100 ಬಗೆಯ ಔಷಧೀಯ ಸಸ್ಯ ಬೆಳೆದ ರೈತ, ಇಷ್ಟು ಮಾಡೋಕೆ ಆತ ಎಷ್ಟೆಲ್ಲಾ ಕಷ್ಟಪಟ್ಟಿದ್ದಾರೆ ನೋಡಿ

ಒಂದು ಎಕರೆ ಭೂಮಿಯಲ್ಲಿ ಎಲ್ಲೆಡೆ ಕಣ್ಣಾಯಿಸಿದರೂ ತಾಜಾ ಮತ್ತು ಹಸಿರು ಸಸ್ಯ ಸಂಕುಲಗಳಿಂದ ಕಂಗೊಳಿಸುವ ಕೃಷಿ ಅರಣ್ಯವನ್ನೇ ಸೃಷ್ಟಿಸಿದ್ದಾರೆ ಅಜಿತ್ ಕುಮಾರ್

ಅಜಿತ್ ಕುಮಾರ್

ಅಜಿತ್ ಕುಮಾರ್

  • Share this:
ಒಂದು ಎಕರೆ ಭೂಮಿ (One Acre) ಯಲ್ಲಿ ಏನೆಲ್ಲಾ ಬೆಳೆಯಬಹುದು..? 20 ವಿಭಿನ್ನ ಜಾತಿಯ ಹಣ್ಣಿನ ಮರಗಳು, 8 ವಿವಿಧ ಮಸಾಲೆ ಸಸ್ಯಗಳು, 20ಕ್ಕೂ ಹೆಚ್ಚು ವಿಭಿನ್ನ ಜಾತಿಯ ತರಕಾರಿ ಸಸ್ಯಗಳು ಮತ್ತು 50ಕ್ಕೂ ಹೆಚ್ಚಿನ ಪ್ರಭೇದದ ಔಷಧೀಯ ಸಸ್ಯಗಳನ್ನು ಬೆಳೆಯಲು ಸಾಧ್ಯವೇ..? ಖಂಡಿತಾ ಸಾಧ್ಯವಿದೆ ಎಂದು ಕೃಷಿಕ (Farmer) ಅಜಿತ್ ಕುಮಾರ್ (Ajith kumar) ತೋರಿಸಿಕೊಟ್ಟಿದ್ದಾರೆ. ತಮ್ಮ ಒಂದು ಎಕರೆ ಭೂಮಿಯಲ್ಲಿ ಎಲ್ಲೆಡೆ ಕಣ್ಣಾಯಿಸಿದರೂ ತಾಜಾ ಮತ್ತು ಹಸಿರು ಸಸ್ಯ ಸಂಕುಲಗಳಿಂದ ಕಂಗೊಳಿಸುವ ಕೃಷಿ ಅರಣ್ಯವನ್ನೇ ಸೃಷ್ಟಿಸಿದ್ದಾರೆ ಅವರು. ಸುಮಾರು 25 ವರ್ಷಗಳ ಹಿಂದೆ ಸಾವಯವ ಕೃಷಿಗೆ ಸಂಬಂಧಿಸಿದ ಸಂಗತಿಗಳನ್ನು ಆನ್ವೇಶಿಸಲು ಆರಂಭಿಸಿದ ಅಜಿತ್ ಕುಮಾರ್, ಅದನ್ನು ಅಭ್ಯಾಸ ಮಾಡಲು ಆರಂಭಿಸಿದರು ಮತ್ತು ಅದಕ್ಕೆ ಸಂಬಂಧಿಸಿದ ಅನೇಕ ಪಾಠಗಳನ್ನು ಕಷ್ಟಪಟ್ಟು ಕಲಿತರು.

ಶೂನ್ಯ ಬಜೆಟ್ ಕೃಷಿಯ ಬಗ್ಗೆ ಅರಿತ ರೈತ

ತಮ್ಮ ಕುಟುಂಬಕ್ಕೆ ಅಗತ್ಯ ಇರುವುದಕ್ಕಿಂತಲೂ ಹೆಚ್ಚು ಆಹಾರವನ್ನು ಉತ್ಪಾದಿಸಿದರೂ ಕೂಡ, ಅವರಿಗೆ ತಮ್ಮ ಪುಟ್ಟ ಕೃಷಿ ಭೂಮಿಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ಮಾಡಬಹುದು ಎಂದೆನಿಸಿತು. ಅದಕ್ಕೆ ಸರಿಯಾಗಿ, ಎರಡು ವರ್ಷಗಳ ಹಿಂದೆ , ಅವರಿಗೆ ಸುಭಾಷ್ ಪಾಲೇಕರ್ ಅವರ ಶೂನ್ಯ ಬಜೆಟ್ ಕೃಷಿಯ ಬಗ್ಗೆ ತಿಳಿದು ಬಂತು ಮತ್ತು ಅವರ ತರಬೇತಿ ಕೋರ್ಸ್‍ಗೆ ಸೇರಿದರು.

ಕಾಸರಗೋಡು ಹಸು ಖರೀದಿ

“ನಾನು ಸುಭಾಷ್ ಪಾಳೇಕರ್ ಅವರ ತರಬೇತಿ ಕೋರ್ಸ್ ಅನ್ನು ಮುಗಿಸಿ ಎಷ್ಟು ಆನಂದ ಪರವಶನಾಗಿದ್ದೆನೆಂದರೆ, ಮನೆಗೆ ಮರಳಿದ ಕೂಡಲೇ ದೇಸಿ ಹಸುವನ್ನು ಹುಡುಕಲು ಆರಂಭಿಸಿದೆ. ಸ್ನೇಹಿತನ ಸಹಾಯದಿಂದ ನನಗೆ ಸ್ಥಳೀಯ ಕೇರಳ ಜಾತಿಯ ಕಾಸರಗೋಡು ಹಸುವನ್ನು ಖರೀದಿಸಲು ಸಾಧ್ಯವಾಯಿತು. ಶೂನ್ಯ ಬಜೆಟ್ ಕೃಷಿಯಲ್ಲಿ ನಾವು ಸ್ಥಳೀಯ ದೇಸಿ ಹಸುವನ್ನು ಬಳಸಬೇಕು.

ಅವು ಪ್ರಮಾಣದ ವಿಷಯಕ್ಕೆ ಬಂದರೆ ಕಡಿಮೆ ಹಾಲನ್ನು ಉತ್ಪಾದಿಸುತ್ತವೆ, ಆದರೆ ಅದು ಹೆಚ್ಚು ಔಷಧೀಯ ಮೌಲ್ಯವನ್ನು ಹೊಂದಿರುತ್ತದೆ. ಸ್ಥಳೀಯ ದೇಸಿ ಹಸುವಿನ ಸೆಗಣಿ ಮತ್ತು ಮೂತ್ರವು ಆರೋಗ್ಯಕರ ಮಣ್ಣನ್ನು ಉತ್ತೇಜಿಸುವ ಸೂಕ್ಷ್ಮ ಜೀವಿಗಳ ಹೆಚ್ಚಿನ ಸಾಂದ್ರತೆಯನ್ನು ಒಳಗೊಂಡಿರುತ್ತದೆ. ಮತ್ತು ಅದರ ಪರಿಣಾಮವಾಗಿ ಸಸ್ಯಗಳು ಆರೋಗ್ಯಕರವಾಗಿ ಬೆಳೆಯುತ್ತವೆ.

ಸಾವಯವ ಕೃಷಿ ಉತ್ತಮ

ಹುಳುಗಳು ಮಣ್ಣಿನ ಪದರದ ಕೆಳಗಿನಿಂದ ಮೇಲಕ್ಕೆ ಚಲಿಸಲು ಸಹಾಯ ಮಾಡುತ್ತದೆ, ಅದರಿಂದಾಗಿ ಮಣ್ಣಿನ ಸುಧಾರಣೆಗೆ ಕೂಡ ಅನುಕೂಲವಾಗುತ್ತದೆ. ಒಂದೇ ಹಸುವಿನಿಂದ ಒಬ್ಬ ರೈತ 30 ಎಕರೆಯಷ್ಟು ಕೃಷಿ ಭೂಮಿಗೆ ಅಗತ್ಯವಿರುವ ಎಲ್ಲವನ್ನು ಉತ್ಪಾದಿಸಲು ಸಾಧ್ಯವಿದೆ..! ಶೂನ್ಯ ಬಾಹ್ಯ ಒಳಹರಿವಿನೊಂದಿಗೆ, ಇದು ಒಬ್ಬ ರೈತನಿಗೆ ವೆಚ್ಚಗಳನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ” ಎಂದು ತಮ್ಮ ಸಾವಯವ ಕೃಷಿಯ ಅನುಭವವನ್ನು ಬಿಚ್ಚಿಡುತ್ತಾರೆ ಅಜಿತ್ ಕುಮಾರ್.

ಇದನ್ನೂ ಓದಿ: Motivation: ಇಳಿವಯಸ್ಸಲ್ಲೂ ಕೃಷಿ ಬಗ್ಗೆ ಬುಕ್​ ಬರಿತಿದ್ದಾರಂತೆ ಈ ರೈತ, ಏನ್​ ಹುಮ್ಮಸ್ಸು ಅಲ್ವಾ!

“ನಾವು ಜೀವಾಮೃತವನ್ನು ಸಿಂಪಡಣೆ ಮಾಡಲು ಪ್ರಾರಂಭಿಸಿದಾಗಿನಿಂದ ನಮ್ಮ ಮಣ್ಣಿನ ಆಳ, ಬಣ್ಣ ಮತ್ತು ವಾಸನೆಯು ಗಣನೀಯವಾಗಿ ಸುಧಾರಿಸಿದೆ. ಯಾವಾಗಲೂ ಮಣ್ಣನ್ನು ಮುಚ್ಚಿ ಇಡುವುದರಿಂದ ಆ ಮಣ್ಣಿನಲ್ಲಿ ವಾಸಿಸುವ ಸೂಕ್ಷ್ಮ ಜೀವಿಗಳ ಮೇಲೆ ಸೂರ್ಯನ ಬಿಸಿಲಿನ ಹಾನಿಕಾರಕ ಪರಿಣಾಮಗಳನ್ನು ತಡೆಯಲು ಸಹಾಯವಾಗುತ್ತದೆ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯಕ್ಕೂ ಸಹಾಯ ಮಾಡುತ್ತದೆ. ಜೀವಾಮೃತದಿಂದ ಸುತ್ತಮುತ್ತಲಿನ ಸಸ್ಯಗಳ ಬೇರುಗಳು ನೀರು ಮತ್ತು ಪೋಷಕಾಂಶಗಳನ್ನು ಪಡೆಯಲಿ ಎಂದು ನಾವು ಜಮೀನಿನ ಸುತ್ತಲೂ ಹಲವಾರು ಕಂದಕಗಳನ್ನು ಅಗೆದಿದ್ದೇವೆ” ಎನ್ನುತ್ತಾರೆ ಅವರು.

ಈ ಬಹು ಪದರದ ಕೃಷಿ ವಿಧಾನವು, ಸೂರ್ಯನ ಬೆಳಕನ್ನು ಗರಿಷ್ಟವಾಗಿ ಬಳಸಿಕೊಳ್ಳುತ್ತದೆ ಮತ್ತು ರೈತರಿಗೆ ಸಣ್ಣ ಜಾಗದಿಂದ ಗರಿಷ್ಟ ಉತ್ಪಾದನೆಯನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ ಎನ್ನುತ್ತಾರೆ ಅವರು.

ಭಾರತೀಯ ರೈತರು ಸಾವಯವ ಕೃಷಿಗೆ ಬದಲಾಗುವುದು ನಿರ್ಣಾಯಕವಾಗಿದೆ, ಏಕೆ? “ಅದು ನಮ್ಮ ದೇಶದ ಆರೋಗ್ಯಕ್ಕೆ ನಿರ್ಣಾಯಕ. ಏಕೆಂದರೆ, ನಮಗೆ ಚಿಕ್ಕ ವಯಸ್ಸಿನಿಂದಲೇ, ಪರಿಸರ ನಮ್ಮ ತಾಯಿ ಮತ್ತು ನಾವದರ ಕಾಳಜಿ ವಹಿಸಬೇಕು ಎಂದು ಕಲಿಸಿಕೊಡಲಾಗಿದೆ. ಕೀಟನಾಶಕ, ಗೊಬ್ಬರ ಮತ್ತು ಕಳೆ ನಾಶಕಗಳ ಬಳಕೆ ಮಣ್ಣಿಗೆ , ಸಸ್ಯಗಳಿಗೆ ಹಾಗೂ ಪ್ರಾಣಿಗಳಿಗೆ ಅತ್ಯಂತ ಅಪಾಯಕಾರಿ. ಈ ಕೃಷಿ ವಿಧಾನವು ಭೂಮಿ ತಾಯಿಯನ್ನು ನಾಶಪಡಿಸುತ್ತಿದೆ. ಹೆಚ್ಚಾಗಿ ಪ್ರತಿಯೊಂದು ದೇಶಗಳಲ್ಲೂ “ನಾವೇನು ತಿನ್ನುತ್ತೇವೆಯೋ ಅದೇ ನಾವಾಗುತ್ತೇವೆ” ಎಂಬ ಅಭಿವ್ಯಕ್ತಿಯನ್ನು ಕಾಣಬಹುದು.

ನಾವು ನಿಜಕ್ಕೂ ಹಲವು ಕೃತಕ ಮತ್ತು ಅಪಾಯಕಾರಿ ರಾಸಾಯನಿಕಗಳನ್ನು ಸೇವಿಸಲು ಬಯಸುತ್ತೇವೆಯೆ? ಸಹಜವಲ್ಲದ ಕೃಷಿಯೂ ರೈತರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ; ಈ ರಾಸಾಯನಿಕಗಳು ಅಧಿಕ ಪ್ರಮಾಣದಲ್ಲಿ ಕ್ಯಾನ್ಸರ್ ಮತ್ತು ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತವೆ” ಎನ್ನುತ್ತಾರೆ ಅಜಿತ್ ಕುಮಾರ್.

ಇದನ್ನೂ ಓದಿ: Success Story: ಕೇವಲ 20 ಗುಂಟೆಯಲ್ಲಿ 72 ರಾಗಿ ತಳಿ: ಸಿರಿ ಧಾನ್ಯಗಳ ಸಂರಕ್ಷಣೆಗೆ ಟೊಂಕಕಟ್ಟಿ ನಿಂತ ಮತ್ತಿಗಟ್ಟಿ ರೈತ

ಅಜಿತ್ ಕುಮಾರ್ ಅವರ ತೋಟದಲ್ಲಿ ಕೂಜಾ ಹಲಸನ್ನು ಕೂಡ ಬೆಳೆಯಲಾಗುತ್ತದೆ. ಅದು ಬಹಳ ಹಿಂದಿನಿಂದಲೂ ಕೇರಳದ ಜನರು ಮೆಚ್ಚಿಕೊಂಡು ಬಂದಿರುವ ವಿಶೇಷ ಜಾತಿಯ ಹಲಸು. ಆದರೆ ಹಲವಾರು ಕಾರಣಗಳಿಂದ ಕೆಲವು ಮಂದಿ ವರಿಕ್ಕ ಹಲಸನ್ನು ಮಾತ್ರ ತಿನ್ನ ಇಷ್ಟ ಪಡುತ್ತಾರೆ. ವರಿಕ್ಕ ಹಲಸು ಕೇರಳದ ಮಾರುಕಟ್ಟೆಯಲ್ಲಿ ಸಾಮಾನ್ಯ, ಆದರೆ ಕೂಜಾ ಹಲಸು ಮರಗಳ ಕೆಳಗೆ ಬಿದ್ದು ಕೊಳೆಯುತ್ತಿರುತ್ತವೆ. ವರಿಕ್ಕ ಹಲಸು ಗಟ್ಟಿ ಮಾಂಸವನ್ನು ಹೊಂದಿದ್ದು ತಿನ್ನಲು ಸುಲಭ, ಆದರೆ ಕೂಜಾ ಹಲಸು ತಿನ್ನಲು ಕಷ್ಟವಾದರೂ ಅತ್ಯಂತ ರುಚಿಕರ.

ಅಜಿತ್ ಕುಮಾರ್ ಅವರ ಫಾರ್ಮ್‍ಗೆ ಭೇಟಿ ನೀಡುವುದು ಒಂದು ಗೌರವದ ಸಂಗತಿ, ಸೂಕ್ತವಾದ ಹವಾಮಾನದಲ್ಲಿ ಸಾವಯವಾಗಿ ಮತ್ತು ಸುಸ್ಥಿರ ರೀತಿಯಲ್ಲಿ ಸಮೃದ್ಧ ಆಹಾರವನ್ನು ಉತ್ಪಾದಿಸಬಹುದು ಎಂಬುದನ್ನು ಈ ಫಾರ್ಮ್ ಅನ್ನು ನೋಡಿ ಅರಿತುಕೊಳ್ಳಬಹುದು.
Published by:Pavana HS
First published: