Viral Photo: ಮುತ್ತು ಪೋಣಿಸಿದಂತೆ ಪ್ರಿಸ್ಕ್ರಿಪ್ಷನ್ ಬರೆದ ವೈದ್ಯ, ಫೋಟೋ ನೋಡಿ ದಂಗಾದ ನೆಟ್ಟಿಗರು!

ವೈದ್ಯರು ಬರೆದ ಪ್ರಿಸ್ಕ್ರಿಪ್ಷನ್ ಯಾರಿಗೂ ಅರ್ಥವಾಗುತ್ತಿಲ್ಲ. ಅದು ಕೇವಲ ಮೆಡಿಕಲ್​ ಶಾಪ್​ನರಿಗೆ ಮಾತ್ರ ಅರ್ಥವಾಗುತ್ತೆ. ಅವರನ್ನು ಬಿಟ್ಟರೆ ಮತ್ಯಾರಿಗೂ ನಿಜಕ್ಕೂ ಅವರ ಭಾಷೆ ಅರ್ಥವಾಗುದಿಲ್ಲ.

ವೈರಲ್​ ಆಗುತ್ತಿರುವ ಫೋಟೊ

ವೈರಲ್​ ಆಗುತ್ತಿರುವ ಫೋಟೊ

  • Share this:
ನಮಗೆ ಹುಷಾರಿಲ್ಲದಿದ್ದರೆ  (Fever) ಆಸ್ಪತ್ರೆ (Hospital) ಗೆ ಹೋಗುತ್ತೇವೆ. ಅಲ್ಲಿ ಪರೀಕ್ಷೆಗಳನ್ನು ಮಾಡಿದ ನಂತರ ಔಷಧಿಯ ಚೀಟಿ (Prescription) ಬರೆದುಕೊಡುತ್ತಾರೆ. ಮೆಡಿಕಲ್ ಶಾಪ್ (Medical Shop) ​ಗೆ ಅದುನ್ನ ಕರೆದುಕೊಂಡು ಹೋದರೆ ಔಷಧಿ ಕೊಡುತ್ತಾರೆ. ಆದರೆ ವೈದ್ಯರು ಬರೆದ ಪ್ರಿಸ್ಕ್ರಿಪ್ಷನ್ ಯಾರಿಗೂ ಅರ್ಥವಾಗುತ್ತಿಲ್ಲ. ಅದು ಕೇವಲ ಮೆಡಿಕಲ್​ ಶಾಪ್​ನರಿಗೆ ಮಾತ್ರ ಅರ್ಥವಾಗುತ್ತೆ. ಅವರನ್ನು ಬಿಟ್ಟರೆ ಮತ್ಯಾರಿಗೂ ನಿಜಕ್ಕೂ ಅವರ ಭಾಷೆ ಅರ್ಥವಾಗುದಿಲ್ಲ. ಚಿಕ್ಕ ಮಕ್ಕಳು ಹಾಳೆ ಮೇಲೆ ಗೀಚಿದಂತೆ ವೈದ್ಯರು ಬರೆದಿರುತ್ತಾರೆ. ಆದರೆ, ಇಲ್ಲೊಬ್ಬ ವೈದ್ಯರು (Doctor) ಮುತ್ತು ಪೋಣಿಸಿದಂತೆ ಔಷಧಿ ಚೀಟಿಯನ್ನು ಬರೆದಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣ (Social Media) ದಲ್ಲಿ ಸಿಕ್ಕಾಪಟ್ಟೆ ವೈರಲ್ (Viral)​ ಆಗುತ್ತಿದೆ. ಈ ವೈದ್ಯರು ಯಾರು ಎಂಬ ಚರ್ಚೆಯಾಗುತ್ತಿದೆ.

ಮುತ್ತು ಪೋಣಿಸದಂತೆ ಅಕ್ಷರ ಬರೆದ ವೈದ್ಯ! 

ಕೇರಳದ ಡಾ.ನಿತಿನ್ ನಾರಾಯಣನ್ ಅವರು ಪಾಲಕ್ಕಾಡ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಹುಟ್ಟೂರು ತ್ರಿಶೂರ್ ಜಿಲ್ಲೆಯ ಪಡಿಯೂರು. ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದಿದ್ದಾರೆ. ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್​ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಎಂಡಿ  ಪೂರ್ಣಗೊಳಿಸಿದ್ದರು. ಕಳೆದ ಮೂರು ವರ್ಷಗಳಿಂದ ಪಾಲಕ್ಕಾಡ್ ಸಿಎಚ್‌ಸಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ದೊಡ್ಡ ಅಕ್ಷರದಲ್ಲಿ ಪ್ರಿಸ್ಕ್ರಿಪ್ಷನ್ ಬರೆದ ವೈದ್ಯ!

ರೋಗಿಗಳಿಗೆ ಅರ್ಥವಾಗುವಂತೆ ವೈದ್ಯರು ಪ್ರಿಸ್ಕ್ರಿಪ್ಷನ್‌ಗಳನ್ನು ಬರೆಯಬೇಕು ಎಂದು ಹಲವು ಏಜೆನ್ಸಿಗಳು ಹೇಳುತ್ತಿದ್ದರೂ, ಇನ್ನೂ ಅನೇಕ ಜನರು ಪ್ರಿಸ್ಕ್ರಿಪ್ಷನ್‌ಗಳನ್ನು ಸ್ಪಷ್ಟವಾಗಿ ಬರೆಯುವುದಿಲ್ಲ. ಗೊಂದಲಮಯ ಎಂದು ಹೇಳುತ್ತಾರೆ. ಆದರೆ ನಿತಿನ್ ನಾರಾಯಣನ್ ಎಲ್ಲರಂತೆ ಅಲ್ಲ. ಪ್ರಿಸ್ಕ್ರಿಪ್ಷನ್ ಅನ್ನು ಕ್ಯಾಪಿಟಲ್ ಅಕ್ಷರಗಳಲ್ಲಿ ಬರೆಯುತ್ತಾರೆ. ಇದರಿಂದ ಮೆಡಿಕಲ್ ಶಾಪ್ ವ್ಯವಸ್ಥಾಪಕರು ಮತ್ತು ರೋಗಿಗಳಿಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ದೊಡ್ಡ ಅಕ್ಷರಗಳಲ್ಲಿ ಬರೆಯುವುದರಿಂದ ಇವರು ಬರೆದ ಔಷಧಿಗಳ ವಿವರಗಳು ಬಹಳ ಸುಲಭವಾಗಿ ಅರ್ಥವಾಗುತ್ತವೆ.

ಇದನ್ನೂ ಓದಿ: ಇದೊಂದು ಟ್ರಾಫಿಕ್ ಪ್ರೇಮ್​ ಕಹಾನಿ​, ಈ ಜೋಡಿ ಮದ್ವೆಯಾದ್ರೂ ಆ ರೋಡ್​ ಇನ್ನೂ ಸರಿಯಾಗಿಲ್ಲ!

ಪ್ರಿಸ್ಕ್ರಿಪ್ಷನ್ ಫೋಟೋ ಸಿಕ್ಕಾಪಟ್ಟೆ ವೈರಲ್!

ವೈದ್ಯರ ಪ್ರಿಸ್ಕ್ರಿಪ್ಷನ್ ಅರ್ಥವಾಗದೆ ರೋಗಿಗಳು ಗೊಂದಲಕ್ಕೊಳಗಾಗುತ್ತಾರೆ ಎಂದು ನಿತಿನ್ ನಾರಾಯಣನ್ ಹೇಳಿದರು.ಇಂತಹ ತೊಂದರೆ ತಪ್ಪಿಸುವ ಉದ್ದೇಶದಿಂದ ಔಷಧ ಚೀಟಿಯನ್ನು ಕ್ಯಾಪಿಟಲ್ ಅಕ್ಷರಗಳಲ್ಲಿ ಬರೆಯುತ್ತಾರೆ. ಬಾಲ್ಯದಿಂದಲೂ ಅವರ ಕೈಬರಹ ತುಂಬಾ ಚೆನ್ನಾಗಿತ್ತು, ರೌಂಡ್ ಅಂಡ್ ಕ್ಲಿಯರ್ ಆಗಿ ಬರೆಯುತ್ತಿದ್ದರು. ವೈದ್ಯನಾದ ನಂತರವೂ ಅದನ್ನು ಮುಂದುವರಿಸಿಕೊಂಡು ಬರುತ್ತಿದ್ದೇನೆ ಎಂದರು.

ವೈದ್ಯರು ಬರೆದ ಔಷಧಿ ಪತ್ರ


ನೆಟ್ಟಿಗರಿಂದ ವೈದ್ಯರಿಗೆ ಮೆಚ್ಚುಗೆ!

ರೋಗಿಯೊಬ್ಬರಿಗೆ ಬರೆದ ಪ್ರಿಸ್ಕ್ರಿಪ್ಷನ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ನಾಲ್ಕು ಬಗೆಯ ಔಷಧಗಳಿವೆ. ಯಾವ ಔಷಧಿಯನ್ನು ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು, ಎಷ್ಟು ಬಾರಿ, ಎಷ್ಟು ದಿನಗಳವರೆಗೆ ತೆಗೆದುಕೊಳ್ಳಬೇಕು ಎಂಬುದು ಸ್ಪಷ್ಟವಾಗಿದೆ. ನೆಟ್ಟಿಗರು ವೈದ್ಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮಂತಹ ವೈದ್ಯರು ಎಲ್ಲೆಲ್ಲೂ ಇದ್ದರೆ ಎಷ್ಟು ಚೆನ್ನ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇತರ ವೈದ್ಯರು ಕೂಡ ನಿತಿನ್ ನಾರಾಯಣನ್ ಅವರನ್ನು ಅನುಸರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಕೇರಳ ವಧುವಿನ ಫೋಟೋಶೂಟ್! ವಿಡಿಯೋ ಇಲ್ಲಿದೆ

ಇನ್ನು ಮುಂದೆಯಾದರು ಇವರನ್ನು ಕಂಡು ಉಳಿದ ವೈದ್ಯರು ಇದೇ ರೀತಿ ಬರೆದರೆ ರೋಗಿಗಳಿಗೂ ಸಹಾಯವಾಗುತ್ತೆ. ಚಿಕ್ಕಮಕ್ಕಳಂತೆ ಗೀಚದೇ ಎಲ್ಲರಿಗೂ ಅರ್ಥವಾಗುವಂತೆ ಬರೆದರೆ ಎಷ್ಟೋ ಜನರಿಗೆ ಸಹಾಯವಾಗುವದರಲ್ಲಿ ಅನುಮಾನವಿಲ್ಲ ಅಂತಿದ್ದಾರೆ ನೆಟ್ಟಿಗರು. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.
Published by:ವಾಸುದೇವ್ ಎಂ
First published: