Wedding Viral Video: ಮದುವೆ ಮಂಟಪದಲ್ಲಿ ವರನ ತುಂಟಾಟ! ನಾಚಿ ನೀರಾದ ವಧು

ಇಲ್ಲೊಂದು ಮದುವೆ ವಿಡಿಯೋ ವೈರಲ್ ಆಗಿದ್ದು ಮಂಟಪದಲ್ಲಿ ವರನ ತುಂಟಾಟಕ್ಕೆ ವಧು ನಾಚಿ ನೀರಾಗಿದ್ದಾಳೆ. ಇವರ ವಿಡಿಯೋ ಈಗ ವೈರಲ್ ಆಗಿದೆ.

ನಾಚಿದ ವಧು

ನಾಚಿದ ವಧು

  • Share this:
ನೆಟ್ಟಿಗರಿಗೆ ಮದುವೆ ವಿಡಿಯೋಗಳು ಆಲ್​ಟೈಂ ಫೇವರೇಟ್. ಪ್ರಪಂಚದ ಯಾವುದೇ ಮೂಲೆಯ ಮದುವೆ ವಿಡಿಯೋ ಆದರೂ ಸರಿ ನೆಟ್ಟಿಗರು ಮೆಚ್ಚಿ ನೋಡುತ್ತಾರೆ. ದೇಸಿ ಮದುವೆಗಳ (Desi Wedding) ವಿಡಿಯೋಗಳಂತೂ ಫನ್ನಿಯಾಗಿ, ಕೆಲವೊಮ್ಮೆ ಭಾವುಕವಾಗಿರುತ್ತವೆ. ಇವು ಇನ್​ಸ್ಟಾಗ್ರಾಮ್, ಫೇಸ್​ಬುಕ್ ಸೇರಿ ಹಲವು ಸೋಷಿಯಲ್ ಮೀಡಿಯಾ ಫ್ಲಾಟ್​​ಫಾರ್ಮ್​ಗಳಲ್ಲಿ ಸಖತ್ ವೈರಲ್ ಆಗುತ್ತವೆ. ಈಗ ಅಂಥದ್ದೇ ಒಂದು ಮದುವೆ ವಿಡಿಯೋ ವೈರಲ್ (Viral) ಆಗಿದೆ. ಈ ವಿಡಿಯೋದಲ್ಲಿ ಕೇರಳ (Kerala) ಜೋಡಿಯೊಂದರ (Couple) ಮದುವೆ (Marriage) ನಡೆಯುತ್ತಿದ್ದು ವರ ಮಂಟಪದಲ್ಲೇ ವಧುವನ್ನು ನಾಚಿಸಿದ್ದಾನೆ.

ಮದುವೆಗೆ ಮೊದಲು, ವಧು ಮತ್ತು ವರರು ಒಬ್ಬರಿಗೊಬ್ಬರು ತಿಳಿದಿರಲಿ ಅಥವಾ ಇಲ್ಲದಿರಲಿ, ಅವರು ಕೆಲವು ವಿವಾಹ ಶಾಸ್ತ್ರಗಳನ್ನು ಅನುಸರಿಸಬೇಕು. ಮದುವೆಯ ಸಭಾಂಗಣದಲ್ಲಿ ಮೌನವಾಗಿರಬೇಕು. ವಧು-ವರರು ಎಷ್ಟೇ ಪರಿಚಿತರಾದರೂ ಮದುವೆ ಮುಗಿಯುವವರೆಗೂ ಅಪರಿಚಿತರಾಗಿಯೇ ಇರುತ್ತಾರೆ. ಕೆಲವು ಮದುವೆಗಳಲ್ಲಿ, ಅವರ ಪದ್ಧತಿಯಂತೆ, ವಧು-ವರರು ಮಂಟಪದಲ್ಲಿಯೇ ಚುಂಬಿಸುತ್ತಾರೆ. ಹಿಂದೂ ವಿವಾಹಗಳು ಹಾಗಲ್ಲ. ಆದರೆ ಈ ಜೋಡಿ ಮಾತ್ರ ಮದುವೆ ಕ್ಷಣಗಳನ್ನು ಎಂಜಾಯ್ ಮಾಡಿದ್ದಾರೆ.

ತಾಳಿ ಕಟ್ಟುವ ಶುಭ ವೇಳೆ

ಇತ್ತೀಚಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ವಧು-ವರರ ಮದುವೆ ಸಂಬಂಧಿಕರ ಸಮ್ಮುಖದಲ್ಲಿ ನಡೆಯುತ್ತದೆ. ತಾಳಿ ಕಟ್ಟಿದ ನಂತರ ವರ ವಧುವಿಗೆ ಸಿಂಧೂರ ಹಚ್ಚುವ ಶಾಸ್ತ್ರ ನಡೆಯುತ್ತದೆ. ಪುರೋಹಿತರು ಒಂದೆಡೆ ಮಂತ್ರಗಳನ್ನು ಪಠಿಸುತ್ತಿದ್ದರೆ, ವರನು ತನ್ನ ಕೈಯಲ್ಲಿ ಸಿಂಧೂರ ತೆಗೆದುಕೊಂಡು ವಧುವಿನ ಹಣೆಯ ಮೇಲೆ ಉಜ್ಜುತ್ತಾನೆ. ನಂತರ ಎಲ್ಲರೂ ನೋಡುತ್ತಿದ್ದಂತೆ ವಧುವಿನ ಕೆನ್ನೆಗೆ ಮುತ್ತಿಡುತ್ತಾನೆ.

ನಾಚಿ ನೀರಾದ ವಧು

ವಧುವಿನ ಕೆನ್ನೆಗೆ ಮುತ್ತಿಟ್ಟ ನಂತರ, ವರನು ನಾಚಿಗೆಯಿಂದ ತನ್ನ ತಲೆಯನ್ನು ಮರೆಮಾಡುತ್ತಾನೆ. ಅವನು ಪಕ್ಕಕ್ಕೆ ತಿರುಗಿ ನಗುತ್ತಾನೆ. ಈ ಘಟನೆಯನ್ನು ನಿರೀಕ್ಷಿಸದ ಮದುಮಗಳು ನಾಚಿ ನೀರಾಗುತ್ತಾಳೆ. ಆದರೆ ಮಂಟಪದಲ್ಲಿದ್ದ ಹೆಂಗಸರು ಅಚ್ಚರಿಗೊಂಡು ನಗುತ್ತಾರೆ. ಕೊನೆಗೆ ಇಡೀ ಮದುವೆ ಮಂಟಪವೇ ನಗೆಗಡಲಲ್ಲಿ ತೇಲಿತು. ಮಂಟಪದ ಮುಂದೆ ಇದ್ದವರೂ ಸ್ವಲ್ಪ ಹೊತ್ತು ಹಾಯಾಗಿ ನಕ್ಕರು.






ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು 'ವೆಡ್ಡಿಂಗ್ ವರ್ಲ್ಡ್ ಪೇಜ್' ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಹಾಗಾಗಿಯೇ ಈ ವಿಡಿಯೋ ವೈರಲ್ ಆಗಿದೆ. ಈ ವೀಡಿಯೊ ಇದುವರೆಗೆ ಲಕ್ಷಗಟ್ಟಲೆ ವೀಕ್ಷಣೆಗಳನ್ನು ಪಡೆದಿದೆ ಮತ್ತು ಸಾವಿರಾರು ಲೈಕ್‌ಗಳನ್ನು ಪಡೆದುಕೊಂಡಿದೆ.

9 ಲಕ್ಷಕ್ಕೂ ಅಧಿಕ ಲೈಕ್ಸ್


ಈ ಕ್ಯೂಟ್ ವಿಡಿಯೋಗೆ 9 ಲಕ್ಷಕ್ಕಿಂತೂ ಅಧಿಕ ಲೈಕ್ಸ್ ಬಂದಿದೆ. ಕಮೆಂಟ್ ಮಾಡಿರುವ ನೆಟ್ಟಿಗರು ಜೋಡಿಗೆ ಶುಭ ಹಾರೈಸಿದ್ದಾರೆ. ಬಹಳಷ್ಟು ಜನರು ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದು ಸದ್ಯ ಈ ಕ್ಯೂಟ್ ಜೋಡಿ ಎಲ್ಲೆಡೆ ವೈರಲ್ ಆಗಿದ್ದಾರೆ.

ವರನ ನೋಡಿ ಭಾವುಕಳಾದ ವಧು, ವೈರಲ್ ವಿಡಿಯೋ

ಇಲ್ಲೊಬ್ಬ ವಧು ಭಾವುಕಳಾಗಿ ತನ್ನ ಕಣ್ಣೀರನ್ನು ತಡೆಯುವ ವ್ಯರ್ಥ ಪ್ರಯತ್ನವನ್ನು ಮಾಡುತ್ತಿರುವ ವಿಡಿಯೋ (Video) ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral) ಆಗಿದೆ.

ಎಟರ್ನಲ್ ವೆಡ್ಡಿಂಗ್ಸ್ ಎಂಬ ಇನ್ಸ್​ಸ್ಟಾಗ್ರಾಮ್ ಪೇಜ್ ಮದುವೆಯ ವಿಡಿಯೋ ಒಂದನ್ನು ಶೇರ್ ಮಾಡಿದೆ. ಚಿನ್ನದ ಬಣ್ಣದ ಸೀರೆಯುಟ್ಟ ವಧು ತನ್ನವರೊಂದಿಗೆ ಮಂಟಪಕ್ಕೆ ಬರುತ್ತಾಳೆ. ಮಂಟಪದತ್ತ ಬರುತ್ತಾ ತನ್ನ ವರನನ್ನು ನೋಡಿದ ವಧು ಖುಷಿಯಾಗುವುದಿಲ್ಲ, ಬದಲಾಗಿ ಜೋರಾಗಿ ಅಳುತ್ತಾಳೆ. ಆಕೆಯ ಜೊತೆಗಿದ್ದವರು ಆಕೆಯನ್ನು ಸಮಾಧಾನಿಸುತ್ತಾರೆ.

ಇತ್ತ ವಧುವನ್ನು ನೋಡಿದ ವರನೂ ಭಾವುಕನಾಗುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು. ವಧುವನ್ನು ನೋಡಿ ವರ ಕಣ್ಣೀರಾಗುವ ದೃಶ್ಯ ನೆಟ್ಟಿಗರ ಮನಸು ಗೆದ್ದಿದೆ.
Published by:Divya D
First published: