(VIDEO) ಹಣೆಗೆ ಮುತ್ತಿಕ್ಕಿ ಚರ್ಚ್​ನಲ್ಲೇ ಮಗುಬಿಟ್ಟು ಪರಾರಿಯಾದ ಅಪ್ಪ!


Updated:June 5, 2018, 3:48 PM IST
(VIDEO) ಹಣೆಗೆ ಮುತ್ತಿಕ್ಕಿ ಚರ್ಚ್​ನಲ್ಲೇ ಮಗುಬಿಟ್ಟು ಪರಾರಿಯಾದ ಅಪ್ಪ!

Updated: June 5, 2018, 3:48 PM IST
ಎಡಪ್ಪಳ್ಳಿ: ನವಜಾತ ಶಿಶುವಿನ ಹಣೆಗೆ ಮುತ್ತಿಕ್ಕಿ ಬಳಿಕ ಚರ್ಚ್​ನ ಒಳಗೆ  ಬಿಟ್ಟು ಪರಾರಿಯಾಗಲು ಯತ್ನಿಸಿದ ತಂದೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ತ್ರಿಶೂರ್​ನ ಬಿಟ್ಟೋ ಡೇವಿಸ್​ ಮತ್ತು ಪ್ರವಿತಾ ಡೇವಿಸ್​ ದಂಪತಿ ಕಳೆದ ವಾರ ಕೊಚ್ಚಿಗೆ ಆಗಮಿಸಿದ್ದರು. ತಂದೆ ಬಿಟ್ಟೋ ಡೇವಿಸ್​ ನವಜಾತ ಶಿಶುವಿನೊಂದಿಗೆ ಎಡಪ್ಪಲ್ಲಿಯ ಸೇಂಟ್ ಜಾರ್ಜ್ ಫೊರೆನ್ ಚರ್ಚ್​​ಗೆ ಆಗಮಿಸಿ ಮಗುವಿನ ಹಣೆಗೆ ಮುತ್ತನಿಟ್ಟು ಅಲ್ಲೇ ಇದ್ದ ಡಯಾಸ್​ ಕೆಳಗೆ ಅಡಗಿಸಿಟ್ಟು ಪರಾರಿಯಾಗಿದ್ದಾನೆ. ಮಗುವಿನ ಅದೃಷ್ಟಕ್ಕೆ ಈ ಎಲ್ಲಾ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅಲ್ಲಿನ ಸಿಬ್ಬಂದಿ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಜತೆಗೆ ಪೊಲೀಸರಿಗೂ ಮಾಹಿತಿ ತಲುಪಸಿದ್ದಾರೆ.

ದೂರು ದಾಖಲಿಸಿದ ಪೊಲೀಸರು ಬಿಟ್ಟು ಹಾಗೂ ಆತನ ಪತ್ನಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈತನಿಗೆ ಈಗಾಗಲೇ ಮೂರು ಮಕ್ಕಳಿದ್ದು ನಾಲ್ಕನೇ ಮಗು ಜನನದ ಬಳಿಕ ಸಮಾಜದಲ್ಲಿ ಅವಹೇಳನಕ್ಕೊಳಗಾಗುವ ಭಯದಿಂದ ಈ ಕೃತ್ಯ ಎಸಗಿರುವುದಾಗಿ ಬಿಟ್ಟೋ ತಪ್ಪೊಪ್ಪಿಕೊಂಡಿರುವುದನ್ನು ಪೊಲೀಸರು ತಿಳಿಸಿದ್ದಾರೆ.

First published:June 5, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ