• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • ಹನಿಮೂನ್​ನಲ್ಲಿ ಹಾಟ್​ ಪ್ರೀವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿದ ಕೇರಳದ ಜೋಡಿ: ಫೋಟೋಗಳು ವೈರಲ್​​..!

ಹನಿಮೂನ್​ನಲ್ಲಿ ಹಾಟ್​ ಪ್ರೀವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿದ ಕೇರಳದ ಜೋಡಿ: ಫೋಟೋಗಳು ವೈರಲ್​​..!

ಕೇರಳದ ಜೋಡಿಯ ಹಾಟ್​ ಫೋಟೋಶೂಟ್​

ಕೇರಳದ ಜೋಡಿಯ ಹಾಟ್​ ಫೋಟೋಶೂಟ್​

 • Share this:

ಮದುವೆ ದಿನ ಗಂಡು ಹೆಣ್ಣು ಹಸೆಮಣೆ ಏರು ಮುನ್ನ ಅಥವಾ ಮದುವೆನಂತರ ಈ ಹಿಂದೆ ಫೋಟೋಶೂಟ್​ ಮಾಡಿಸಲಾಗುತ್ತಿತ್ತು. ಆದರೆ ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತಿದೆ. ಈಗ ಮದುವೆಗೆ ಮುನ್ನ ಫೋಟೋಶೂಟ್​ ಮಾಡಿಸೋದು ಸಾಮಾನ್ಯವಾಗಿ ಹೋಗಿದೆ. ಅದನ್ನೇ ಪ್ರೀವೆಡ್ಡಿಂಗ್‌ ಫೋಟೋಶೂಟ್ ಎಂದು ಕರೆಯಲಾಗುತ್ತದೆ. ಇದೇ ಸದ್ಯದ‌ ಟ್ರೆಂಡ್. ಹಚ್ಚ ಹಸಿರಿನ ತಾಣಗಳು, ಗಿರಿ ಶ್ರೇಣಿಗಳ ಸಾಲು ಪೋಟೋಶೂಟ್​ಗೆ ಹೇಳಿ ಮಾಡಿಸಿದ ತಾಣಗಳು. ಹೀಗಾಗಿಯೇ ಜನರು ಹೆಚ್ಚಾಗಿ ಬೆಟ್ಟಗಳು, ಕಾಡು ಹಾಗೂ ನೀರು ಹರಿವ ಜಾಗಗಳಿಗೆ ಹೋಗಿ ಫೋಟೋಶೂಟ್​ ಮಾಡಿಸುತ್ತಾರೆ. ಆದರೆ ಈಗ ಪ್ರೀವೆಡ್ಡಿಂಗ್​ ಫೋಟೋಶೂಟ್​ ಎಲ್ಲೋ ಒಂದು ಕಡೆ ಮಿತಿಮೀರುತ್ತಿದೆ ಎಂದೆನಿಸುತ್ತಿದೆ. ಮದುವೆಗೂ ಮುನ್ನ ಮಾಡಿಸುವ ಫೋಟೋಶೂಟ್​ಗಳೂ ಸಹ ಸಖತ್​ ಹಾಟ್ ಹಾಗೂ ಬೋಲ್ಡ್​ ಸ್ವರೂಪ ಪಡೆದುಕೊಳ್ಳುತ್ತಿವೆ. ಈ ಹಿಂದೆಯೂ ಒಂದು ಪ್ರೀವೆಡ್ಡಿಂಗ್​ ಫೋಟೋಶೂಟ್​ಗೆ ಜೋಡಿಯೊಂದು ಸಖತ್ ಹಾಟಾಗಿ ಪೋಸ್ ಕೊಡುವ ಮೂಲಕ ಸುದ್ದಿಯಾಗಿದ್ದರು. 


ಈಗಲೂ ಸಹ ಕೇರಳ ಜೋಡಿಯೊಂದು ಪ್ರೀವೆಡ್ಡಿಂಗ್​ ಫೋಟೋಶೂಟ್​ನಲ್ಲಿ ಸಖತ್​ ಹಾಟ್​ ಹಾಗೂ ಬೋಲ್ಡಾಗಿ ಪೋಸ್​ ಕೊಟ್ಟಿದ್ದಾರೆ. ಸದ್ಯ ಫೋಟೋಶೂಟ್​ ವೈರಲ್​ ಆಗುತ್ತಿದೆ. ಇದನ್ನು ಕೆಲವರು ಇಷ್ಟಪಡುತ್ತಿದ್ದರೆ, ಅದಕ್ಕಿಂತ ಹೆಚ್ಚಾಗಿ ಟೀಕಿಸುತ್ತಿದ್ದಾರೆ.

top videos  ಕೇರಳದ ಜೋಡಿಗೆ ವಿವಾಹಕ್ಕೆ ಮೊದಲು ಮಾಡಿಸಬೇಕಾಗಿದ್ದ ಫೋಟೋಶೂಟ್​ಗೆ ಲಾಕ್​ಡೌನ್​ ಅಡ್ಡಿಯಾಗಿತ್ತು. ಅದಕ್ಕೆ ವಿವಾಹವಾದ ನಂತರ ಇವರು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಒಂದು ಎಸ್ಟೇಟ್​ನಲ್ಲಿ ಹನಿಮೂನ್​ಗೆ ಪ್ಲಾನ್​ ಮಾಡಿಕೊಂಡು ಹೋಗಿದ್ದಾರೆ.
  ನಂತರ ಅಲ್ಲೇ ತಮ್ಮ ಪ್ರೀವೆಂಡ್ಡಿ ಫೋಟೋಶೂಟ್​ ಅನ್ನು ಮದುವೆಯಾದ ನಂತರ ಮಾಡಿಸಿಕೊಂಡಿದ್ದಾರೆ. ಕಳೆದ ಗುರುವಾರ ಈ ಫೋಟೋಶೂಟ್​ ಮಾಡಿಸಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಈ ಜೋಡಿ.  ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ನೆಟ್ಟಿಗರು ಈ ಜೋಡಿ ಹಾಗೂ ಫೋಟೋಗ್ರಾಫರ್​ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾನಾ ರೀತಿ ಕಮೆಂಟ್​ಗಳನ್ನೂ ಮಾಡುತ್ತಿದ್ದಾರೆ.

  First published: