ಕೇರಳ ಕಾಂಗ್ರೆಸ್​ ಕಚೇರಿ OLXನಲ್ಲಿ ಮಾರಾಟ


Updated:June 10, 2018, 6:16 PM IST
ಕೇರಳ ಕಾಂಗ್ರೆಸ್​ ಕಚೇರಿ OLXನಲ್ಲಿ ಮಾರಾಟ

Updated: June 10, 2018, 6:16 PM IST
ತಿರುವನಂತಪುರಂ: ಕಳೆದ ಒಂದು ವಾರದಿಂದ ಕೇರಳದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದ ಬೆನ್ನಲ್ಲೇ ಕೇರಳದ ಕಾಂಗ್ರೆಸ್​ ಪ್ರದೇಶ್​ ಕಚೇರಿಯನ್ನು ಆನ್​ಲೈನ್​ನಲ್ಲಿ ಮಾರಟಕ್ಕಿಟ್ಟಿದ್ದಾರೆ.

 ಅನ್ಯೇಶ್​ ಎಂಬ ಹೆಸರಿನಡಿ ಈ ಪೋಸ್ಟ್​ ಮಾಡಲಾಗಿದ್ದು ಕೇವಲ 10,000 ರೂಗೆ ಈ ಕಚೇರಿಯನ್ನು ಮಾರಟಕ್ಕೆ ಇಡಲಾಗಿದೆ. ಈ ಕಚೇರಿಯ ಸಿತ್ತಳತೆ ಸೇರಿಂದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ಒಂದು ವಾರದಿಂದ ಕೇರಳದಲ್ಲಿ ರಾಜ್ಯ ಸಭಾ ಸ್ಥಾನದ ವಿಚಾರಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಲೇ ಇದ್ದವು.

ಇದರ ಮುಂದಿನ ಹಂತ ಎಂಬಂತೆ ಕೇರಳ ಕಾಂಗ್ರೆಸ್​(ಎಂ) ರಾಜ್ಯ ಸಭಾ ಸ್ಥಾನಕ್ಕೆ ಜೋಸ್​ ಕೆ ಮಣಿ ಆಯ್ಕೆ ಮಾಡಿ ನಿರ್ಧಾರ ಪ್ರಕಟಿಸಲಾಗಿತ್ತು. ಕೇರಳ ವಿಧಾನಸಭೆ ಚುನಾವಣಾ ಸೋಲಿಗೆ ಕಾಂಗ್ರೆಸ್​ ಕಾರಣ ಎಂದು ಯುಡಿಎಫ್​ ಆರೋಪಿದ ಹಿನ್ನಲೆ  2016ರಲ್ಲಿ  ಯುಡಿಎಫ್​ ಮೈತ್ರಿ ತೊರೆದು  ಕಾಂಗ್ರೆಸ್​ ಹೊರ ನಡೆದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಣಿ ಯುಡಿಎಫ್​ ಮೈತ್ರಿಯಿಂದ ನಾವು ಹೊರ ನಡೆದಿದ್ದು ನಮ್ಮ ಸದಸ್ಯರು ಸದನದಲ್ಲಿ ಪ್ರತ್ಯೇಕವಾಗಿ ಇರಲಿದ್ದಾರೆ ಎಂದಿತ್ತು. ಈ ಮತ್ತೆ  ಎರಡು ವರ್ಷದ ಬಳಿಕ ಈಗ ಮತ್ತೆ ಮೈತ್ರಿ ಪಕ್ಷವನ್ನು ಕಾಂಗ್ರೆಸ್​ ಸೇರಲಿದೆ.

ಈ ಬೆಳವಣಿಗೆ ನಡೆದ ಬೆನ್ನಲ್ಲೇ ಅಂತರ್ಜಾಲದಲ್ಲಿ ಕಿಡಿಗೇಡಿಯೊಬ್ಬ ಕಾಂಗ್ರೆಸ್​ ಕಚೇರಿಯನ್ನೇ ಮಾರಟಕ್ಕಿಟ್ಟಿದ್ದಾನೆ.
First published:June 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ