ಬರೋಬ್ಬರಿ 31 ಲಕ್ಷ ರೂ.ಗೆ ನಂಬರ್​ ಪ್ಲೇಟ್ ಖರೀದಿಸಿ ದಾಖಲೆ ನಿರ್ಮಿಸಿದ ಕೇರಳದ ಉದ್ಯಮಿ!

ದೇಶದಲ್ಲಿ ಮೊಬೈಲ್ ಯುಗದ ಆರಂಭದ ದಿನಗಳಲ್ಲಿ ನಾನು ಬಿಪಿಎಲ್​ ಮತ್ತು ಎಸ್ಕೋಟೆಲ್​ ಮೊಬೈಲ್ ಸೇವೆಯನ್ನು ಪಡೆದಿದ್ದೆ. ಈ ವೇಳೆ 98460 ಸಂಖ್ಯೆಯ ಪುನರಾವರ್ತಿತ ಸಂಖ್ಯೆಗಳನ್ನು ಖರೀದಿಸಿರುವುದಾಗಿ ಅವರು ತಿಳಿಸಿದ್ದಾರೆ.

zahir | news18
Updated:February 4, 2019, 3:59 PM IST
ಬರೋಬ್ಬರಿ 31 ಲಕ್ಷ ರೂ.ಗೆ ನಂಬರ್​ ಪ್ಲೇಟ್ ಖರೀದಿಸಿ ದಾಖಲೆ ನಿರ್ಮಿಸಿದ ಕೇರಳದ ಉದ್ಯಮಿ!
@The Independent
zahir | news18
Updated: February 4, 2019, 3:59 PM IST
ಹೊಸ ಕಾರು ಖರೀದಿ ಮಾಡಿ, ಅದಕ್ಕೆ ತಮಗಿಷ್ಟವಾದ ಫ್ಯಾನ್ಸಿ ನಂಬರ್ ಪಡೆಯಬೇಕೆಂಬುದು ಕೆಲವರ ಖಯಾಲಿ. ಅದಕ್ಕಾಗಿ ಸಾವಿರಾರು ರುಪಾಯಿ ಖರ್ಚು ಮಾಡುತ್ತಾರೆ. ಇನ್ನು ಕೆಲವರು ಲಕ್ಷ ಕೊಟ್ಟು ತಮಗೆ ಬೇಕಾದ ನಂಬರ್​ ಪಡೆದುಕೊಳ್ಳುತ್ತಾರೆ. ಆದರೆ ಕೇರಳದ ಉದ್ಯಮಿ ಕೆ.ಎಸ್​ ಬಾಲಗೋಪಾಲ್​ ತನ್ನ ಕಾರಿಗೆ ಫ್ಯಾನ್ಸಿ ನಂಬರ್ ಪಡೆಯಲು ಬರೋಬ್ಬರಿ 31 ಲಕ್ಷ ನೀಡಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ.

ಈ ಮೂಲಕ 2012 ರಲ್ಲಿ ಚಂಡೀಗಢದ ಅಮರ್ಜಿತ್ ಸಿಂಗ್ ನಿರ್ಮಿಸಿದ ದಾಖಲೆಯನ್ನು ಬಾಲಗೋಪಾಲ್ ಮುರಿದಿದ್ದಾರೆ. ಅಮರ್ಜಿತ್ ಸಿಂಗ್​ ಅವರು ತಮ್ಮ ಐಷಾರಾಮಿ ಸೆಡನ್​ ಕಾರಿಗೆ 0001 ನಂಬರ್ ಪಡೆಯಲು ಬರೋಬ್ಬರಿ 26.5 ಲಕ್ಷ ರೂ. ಪಾವತಿಸಿದ್ದರು. ಇದುವೇ ಈವರೆಗಿನ ಅತಿ ಹೆಚ್ಚು ಮೊತ್ತದ ರಿಜಿಸ್ಟರ್ ನಂಬರ್ ಹರಾಜು​ ಮೊತ್ತವಾಗಿತ್ತು.

ಈಗ ಬಾಲಗೋಪಾಲ್ ಪೋರ್ಷೆ - 718 ಬಾಕ್ಸ್​ಸ್ಟರ್ ಕಾರಿಗಾಗಿ KL-01 CK 01 ನಂಬರ್​ ಅನ್ನು ಹರಾಜಿನಲ್ಲಿ ಖರೀದಿಸಿದ್ದಾರೆ. 1.20 ಕೋಟಿ ಬೆಲೆಯ ಕಾರಿನ ನಂಬರ್​ಗಾಗಿ 31 ಲಕ್ಷ ರೂ. ವ್ಯಯಿಸಿದ್ದಾರೆ. ತಿರುವನಂತಪುರದಲ್ಲಿ ಔಷಧಿ ಕಂಪೆನಿಯನ್ನು ಹೊಂದಿರುವ ಬಾಲಗೋಪಾಲ್​ ಅವರು ತಮ್ಮ ಮೊಬೈಲ್ ನಂಬರುಗಳು, ಕಾರುಗಳು ಸೇರಿದಂತೆ ಪ್ರತಿಯೊಂದಕ್ಕೂ ಫ್ಯಾನ್ಸಿ ಟಚ್​ ನೀಡುತ್ತಾರೆ.​

2004 ರಲ್ಲಿ KL 01- AK 01 ನಂಬರ್​ಗಾಗಿ ಬಾಲಗೋಪಾಲ್ 3,05,000 ರೂ. ಪಾವತಿಸಿದ್ದರು. ಈ ಮೂಲಕ ತಿರುವನಂತಪುರಂನಲ್ಲಿ ನಂಬರ್ ಪ್ಲೇಟ್ ಹಾರಾಜು  ಆರಂಭಿಸಿದ ಮೊದಲ ವ್ಯಕ್ತಿಯಾಗಿ ಇವರು ಗುರುತಿಸಿಕೊಂಡರು. ಅಲ್ಲದೆ ಇವರ ಈ ಕ್ರೇಜ್​ನಿಂದ ಇಂದು ಪ್ರಾದೇಶಿಕ ಸಾರಿಗೆ ಇಲಾಖೆಗೆ ಉತ್ತಮ ಆದಾಯ ಕೂಡ ಬರುವಂತಾಗಿದೆ ಎನ್ನುತ್ತಾರೆ ಗೋಪಾಲ್.

ಈ ಬಾರಿಯ ಹರಾಜಿನಲ್ಲಿ ನನ್ನೊಂದಿಗೆ ನಂಬರ್​ಗಾಗಿ ಇಬ್ಬರು ಪ್ರಬಲ ಸ್ಪರ್ಧಿಗಳಿದ್ದರು. ಆದರೂ ನನ್ನಿಷ್ಟದ ನಂಬರ್​ ಅನ್ನು ಪಡೆಯಲು ಯಶಸ್ವಿಯಾದೆ. ಈ ಹಿಂದೆ 2017 ರಲ್ಲಿ ಟೊಯೊಟಾ ಲ್ಯಾಂಡ್​ ಕ್ರೂಸರ್​ಗೆ ನಾನು KL 01-CB1 ನಂಬರ್​ ಖರೀದಿಸಿ ದಾಖಲೆ ನಿರ್ಮಿಸಿದ್ದೆ. ಈ ನಂಬರ್​ ನನ್ನನ್ನು ಸೆಳೆಯಲು ಮುಖ್ಯಕಾರಣ ಇದು CBI ಎಂಬಂತೆ ಕಾಣುವುದು. ಇಷ್ಟೇ ಅಲ್ಲದೆ ತನ್ನ ಫಾರ್ಮಾ ಕಂಪೆನಿಗೂ ಬಾಲಗೋಪಾಲ್ ಫ್ಯಾನ್ಸಿ ಸಂಖ್ಯೆಯ ಮೊಬೈಲ್​ ನಂಬರ್​ ಅನ್ನು ಖರೀದಿಸಿದ್ದಾರಂತೆ.

ಇದನ್ನೂ ಓದಿ: ಸುಮಲತಾ ಅವರಿಗೆ ಟಿಕೆಟ್​ ನೀಡಿ, ಗೆಲ್ಲಿಸಿ ಕೊಡುವ ಭರವಸೆ ನನ್ನದು: ಮಾಜಿ ಸಿಎಂ ಸಿದ್ಧರಾಮಯ್ಯಗೆ ನಟ ದರ್ಶನ್ ಮನವಿ?

ದೇಶದಲ್ಲಿ ಮೊಬೈಲ್ ಯುಗದ ಆರಂಭದ ದಿನಗಳಲ್ಲಿ ನಾನು ಬಿಪಿಎಲ್​ ಮತ್ತು ಎಸ್ಕೋಟೆಲ್​ ಮೊಬೈಲ್ ಸೇವೆಯನ್ನು ಪಡೆದಿದ್ದೆ. ಈ ವೇಳೆ 98460 ಸಂಖ್ಯೆಯ ಪುನರಾವರ್ತಿತ ಸಂಖ್ಯೆಗಳನ್ನು ಖರೀದಿಸಿರುವುದಾಗಿ ಅವರು ತಿಳಿಸಿದ್ದಾರೆ. ಇದಾದ ಬಳಿಕ ಬಿಎಸ್​ಎನ್​ಎಲ್ ಕಂಪೆನಿಯ ಫ್ಯಾನ್ಸಿ​ ನಂಬರ್​ಗಳನ್ನು ಖರೀದಿಸಿದೆ ಎನ್ನುತ್ತಾರೆ ಬಾಲಗೋಪಾಲ್. ಅಂದಹಾಗೆ ವಿಶ್ವದಲ್ಲೇ ಅತಿ ಹೆಚ್ಚು ಬೆಲೆಗೆ ನಂಬರ್​ ಪ್ಲೇಟ್​ ಬಿಕರಿಯಾಗಿದ್ದು ಇಂಗ್ಲೆಂಡ್​ನಲ್ಲಿ. F1  ನಂಬರ್​ ಬರೋಬ್ಬರಿ 132 ಕೋಟಿಗೆ ಹರಾಜಾಗುವ ಮೂಲಕ  ವಿಶ್ವ ದಾಖಲೆ ನಿರ್ಮಿಸಿದೆ.
Loading...

 ಇದನ್ನೂ ಓದಿ: ಈ ಕಾರು ಖರೀದಿಸಲು ಕೋಟ್ಯಾಧಿಪತಿಗಳಿಗೂ ಸಾಧ್ಯವಾಗುತ್ತಿಲ್ಲ! ಯಾಕೆ ಗೊತ್ತಾ?

First published:February 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ