ಹುಡುಗಿಯರ ಕೈಗೆ ಗೇರ್ ನೀಡಿ ಲೈಸೆನ್ಸ್ ಕಳೆದುಕೊಂಡ ಚಾಲಕ: ವಿಡಿಯೋ ಫುಲ್ ವೈರಲ್

ಕಾಲೇಜು ವಿದ್ಯಾರ್ಥಿನಿಯರು ಬಸ್​ನಲ್ಲಿ ಕೇರಳ-ಗೋವಾ ರಸ್ತೆ ಪ್ರವಾಸದ ಕೈಗೊಂಡಿದ್ದರು. ಈ ವೇಳೆ ಚಾಲಕನು ಬಸ್‌ನ ಗೇರ್‌ಗಳನ್ನು ಬದಲಿಸಲು ಬಸ್ಸಿನಲ್ಲಿರುವ ಹುಡುಗಿಯರಿಗೆ ಅನುಮತಿ ನೀಡಿದ್ದಾನೆ.

news18-kannada
Updated:November 19, 2019, 6:30 PM IST
ಹುಡುಗಿಯರ ಕೈಗೆ ಗೇರ್ ನೀಡಿ ಲೈಸೆನ್ಸ್ ಕಳೆದುಕೊಂಡ ಚಾಲಕ: ವಿಡಿಯೋ ಫುಲ್ ವೈರಲ್
kerala bus driver
  • Share this:
ಪ್ರಯಾಣಿಕರ ಸುರಕ್ಷತೆಯನ್ನು ಕಡೆಗಣಿಸಿ ಬಸ್ ಚಲಾಯಿಸಿದ್ದಕ್ಕಾಗಿ ಚಾಲಕನ ಪರವಾನಗಿಯನ್ನು ರದ್ದುಪಡಿಸಿದ ಘಟನೆ ಕೇರಳದಲ್ಲಿ ನಡೆದಿದೆ. ಬಸ್ ಚಾಲನೆ ವೇಳೆ ಹುಡಗುಗಿಯರಿಂದ ಗೇರುಗಳನ್ನು ಬದಲಾಯಿಸಲು ಚಾಲಕ ಅವಕಾಶ ನೀಡಿದ್ದನು. ಈ ಹಿನ್ನೆಲೆಯಲ್ಲಿ ಡ್ರೈವರ್​ನ ಲೈಸನ್ಸ್​ ರದ್ದು ಮಾಡಲಾಗಿದೆ ಎಂದು ಕೇರಳ ಆರ್​ಟಿಒ ಅಧಿಕಾರಿ ತಿಳಿಸಿದ್ದಾರೆ.

ಕಾಲೇಜು ವಿದ್ಯಾರ್ಥಿನಿಯರು ಬಸ್​ನಲ್ಲಿ ಕೇರಳ-ಗೋವಾ ರಸ್ತೆ ಪ್ರವಾಸದ ಕೈಗೊಂಡಿದ್ದರು. ಈ ವೇಳೆ ಚಾಲಕನು ಬಸ್‌ನ ಗೇರ್‌ಗಳನ್ನು ಬದಲಿಸಲು ಬಸ್ಸಿನಲ್ಲಿರುವ ಹುಡುಗಿಯರಿಗೆ ಅನುಮತಿ ನೀಡಿದ್ದಾನೆ. ಹುಡುಗಿಯರು ಗೇರ್​ಗಳನ್ನು ಬದಲಿಸುತ್ತಿದ್ದ ವೇಳೆ ಸಹಪಾಠಿಗಳು ವಿಡಿಯೋ ಚಿತ್ರೀಕರಿಸಿಕೊಂಡಿದ್ದರು.

ಇದನ್ನೂ ಓದಿ: ರಾಧಿಕಾ ಕುಮಾರಸ್ವಾಮಿ ಜೆಡಿಎಸ್ ಪಕ್ಷದಿಂದಲೇ ರಾಜಕೀಯಕ್ಕೆ ಇಳಿಯುತ್ತಾರಾ? ಇಲ್ಲಿದೆ ಉತ್ತರ

ಈ ವಿಡಿಯೋವನ್ನು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡುತ್ತಿದ್ದಂತೆ ಭಾರೀ ವೈರಲ್ ಆಗಿತ್ತು. ಹಾಗೆಯೇ ವಿಡಿಯೋ ಆರ್‌ಟಿಒ ಅಧಿಕಾರಿಗಳು ಕೂಡ ನೋಡಿದ್ದಾರೆ. ಅದರಂತೆ ಚಾಲಕ ವಯನಾಡಿನ ಎಂ. ಶಾಜಿ ಅವರನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಬಳಿಕ  ವಿಚಾರಣೆ ನಡೆಸಿ ಸಾರ್ವಜನಿಕರ ಪ್ರಾಣದೊಂದಿಗೆ ಚೆಲ್ಲಾಟವಾಡಿದ ಹಾಗೂ ಅಸುರಕ್ಷತೆಯ ಚಾಲನೆಯಡಿಯಲ್ಲಿ ಆರು ತಿಂಗಳ ಕಾಲ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಿದ್ದಾರೆ.


 
First published:November 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ