ಅದೊಂದು ಕಾಲವಿತ್ತು. ಮಹಿಳೆಯರು (Women) ಕೇವಲ ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಇರುತ್ತಿದ್ದರು. ಎಲ್ಲಿಯೂ ಹೊರಗೆ ಹೋಗಲು ಮನೆಯಲ್ಲಿ ಅವಕಾಶಗಳೇ ಇರುತ್ತಾ ಇರಲ್ಲಿಲ್ಲ. ಮನೆಯಲ್ಲಿಯೇ ಮನೆಯವರ ಸೇವೆಗಳನ್ನು ಮಾಡಿಕೊಂಡು, ಕೆಲಸಗಳನ್ನು ಮಾಡಿಕೊಂಡು ಇರಬೇಕಾಗಿತ್ತು. ವಿದ್ಯಾಭ್ಯಾಸಕ್ಕೂ ಕೂಡ ಅವಕಾಶನೇ ಸಿಗುತ್ತಾ ಇರಲ್ಲಿಲ್ಲ. ಇದರ ಜೊತೆಗೆ ಮನೆಯಲ್ಲಿ ಯಾವ ಹುಡುಗನನ್ನು ತೋರಿಸುತ್ತಾರೆಯೋ ಅವರ ಜೊತೆಯೇ ಇಷ್ಟವೋ ಕಷ್ಟವೋ ಮದುವೆ ಆಗಲೇಬೇಕಿತ್ತು. ಆದರೆ ಕಾಲ ಬದಲಾಂತೆಯೇ ಮಾನುಷ್ಯರೂ ಬದಲಾಗಲು (Update) ಆರಂಭವಾದರು. ಹೆಣ್ಣು 4 ಜನರೊಂದಿಗೆ ಬೆರೆತು, ಹೊರಗೆ ಹೋಗಿ ಕೆಲಸ ಮಾಡಲು ಮತ್ತು ವಿದ್ಯಾಭ್ಯಾಸ ಮಾಡಲು ಅನುವುಮಾಡಿಕೊಡಲಾಯಿತು. ಪುರುಷ ಸಮಾಜದಲ್ಲಿ ಮಹಿಳೆಯು ಸಾಧನೆಗಳನ್ನು ಮಾಡಲು ದಾಪುಗಾಲನ್ನು ಇಡಲು ಆರಂಭಿಸಿದರು.
ಯೆಸ್, ಯಾಕೆ ಇಷ್ಟೆಲ್ಲಾ ಹೇಳ್ತಾ ಇರೋದು ಅಂದ್ರೆ, ಇಲ್ಲೊಂದು ವಿಡಿಯೋ ಸಖತ್ ವೈರಲ್ ಆಗಿದೆ. ಮದುವೆ ಮನೆಯಲ್ಲಿ ವೈರಲ್ ಆದಂತಹ ಸುದ್ಧಿ. ಅದೊಂದು ಕಾಲದಲ್ಲಿ ಹಸಮಣೆಯಲ್ಲಿಯೇ ತನ್ನ ಹುಡುಗನನ್ನು ನೋಡುತ್ತಿದ್ದಳು ವಧು, ಆದರೆ, ಇತ್ತೀಚಿನ ಕಾಲದಲ್ಲಿ ಮದುವೆಯ ಮೊದಲೇ ಪ್ರಿ ವೆಡ್ಡಿಂಗ್ ಫೋಟೋಶೂಟ್ಸ್ಗಳನ್ನು ಹಮ್ಮಿಕೊಳ್ಳುತ್ತಾರೆ. ಇದರಿಂದ ಬಾಂದವ್ಯ ಇನ್ನಷ್ಟು ಬಿಗಿಯಾಗುತ್ತದೆ ಎಂಬ ಕಾರಣವಿರಬಹುದೇನೋ ಗೊತ್ತಿಲ್ಲ.
ಚಂಡೆಯ ಶಬ್ಧವನ್ನು/ವಾದ್ಯವನ್ನು ಕೇಳುತ್ತಾ ಎಂಥವರಿಗಾದ್ರೂ ಮೈ ಝುಮ್ ಅಂತ ಅನಿಸುತ್ತೆ. ನಿಂತ ಜಾಗದಲ್ಲಿಯೇ ಕುಣಿಯಬೇಕು ಅಂತ ಅನಿಸುತ್ತೆ. ಚಂಡೆಗಾಗಿ ಅದೆಷ್ಟೋ ದಿವಸಗಳ ಕಾಲ ನಿರಂತರ ಅಭ್ಯಾಸ ಇದ್ದೇ ಇರುತ್ತದೆ. ಅವರ ಕೈ, ಬೆರಳುಗಳು ಫುಲ್ ಗಾಯಗೊಂಡಿರುತ್ತದೆ. ಅದಕ್ಕಾಗಿಯೇ ಅದೆಷ್ಟೇ ಜನರು ಚೆಂಡೆಗಳನ್ನು ಬಡಿಯುತ್ತಾ ಇದ್ದರೂ ಕೂಡ, ಒಂದೇ ಬೀಟ್ ಕೇಳುತ್ತೆ. ಇದೀಗ ಅಂತದ್ದೇ ಒಂದು ವಿಡಿಯೋ ವೈರಲ್ ಆಗಿದೆ.
ಏನಿದು ವೈರಲ್ ವಿಷಯ?
ಕೇರಳದ ಮದುಮಗಳು ಮದುವೆಯ ದಿನ ಶೃಂಗಾರ ಮಾಡಿಕೊಂಡು ಹಸೆಮಣೆ ಏರಿ ಕೂತು ಪೂಜೆಯನ್ನು ಮಾಡುತ್ತಿರುವುದನ್ನು ನೋಡಿರುತ್ತೇವೆ. ಆದರೆ, ಇಲ್ಲಿ ಓರ್ವ ಮದುಮಗಳು ಒಂದು ದೊಡ್ಡ ಚಂಡೆಯ ತಂಡದೊಂದಿಗೆ ತನ್ನ ಮದುವೆಯ ದಿನ ಎಷ್ಟು ಸಖತ್ ಆಗಿ ಚಂಡೆಯನ್ನು ಭಾರಿಸುತ್ತಾ ಇದ್ದಾರೆ ಅಂದ್ರೆ, ನೀವೆ ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ: ಈ ಮೀನುಗಳಿಗೆ ಹಳದಿ ಬಣ್ಣದ ರಕ್ತವಿರುತ್ತಂತೆ ಚಿತ್ರ ವಿಚಿತ್ರ ಲೋಕಗಳ ರಹಸ್ಯ ಇದು!
ಮದುವೆ ಮನೆಗೆ ಬಂದವರೆಲ್ಲರೂ ಮೂಕವಿಸ್ಮಿತರಾಗಿ ಆಕೆಯನ್ನೇ ನೋಡುತ್ತಾ ಇರುತ್ತಾರೆ. ಮದುಮಗಳಂತೂ ಚಂಡೆ ಬೀಟ್ಗೆ ತಕ್ಕುದಾಗಿ ಆಕೆಯೂ ಕೂಡ ಸೂಪರ್ ಆಗಿ ಚಂಡೆಯನ್ನು ಭಾರಿಸುತ್ತಾ ವರನನ್ನು ಗ್ರ್ಯಾಂಡ್ ವೆಲ್ಕಮ್ ಮಾಡಿಕೊಳ್ಳುತ್ತಾರೆ ಮಧುಮಗಳು.
ಈ ದೃಶ್ಯವನ್ನು ನೋಡುತ್ತಾ ಇದ್ದರೆ ಎಂಥವರಿಗಾದರೂ ಅಯ್ಯೋ ನಾನು ಕೂಡ ನನ್ನ ಮದುವೆಗೆ ಇಷ್ಟೇ ಎಂಜಾಯ್ ಮಾಡಬೇಕು ಅಂತ ಅನಿಸುತ್ತೆ. ಯಾಕಂದ್ರೆ ಆ ಮದುಮಗಳು ಅಷ್ಟು ಚೆಂದ ರೆಡಿ ಆಗಿ ಚೆಂಡೆಯನ್ನು ಸಖತ್ ಆಗಿ ಭಾರಿಸುತ್ತಾ ನೃತ್ಯವನ್ನು ಮಾಡುತ್ತಾ ಇರುತ್ತಾರೆ. ಜೊತೆಯಲ್ಲಿ ಚೆಂಡೆಯ ಹುಡುಗರೂ ಕೂಡ ಹಾಗೆ ಚೆಂಡೆ ಬಡಿಯುತ್ತಾ ತಾಳಕ್ಕೆ ತಕ್ಕಂತೆ ನೃತ್ಯ ಮಾಡುತ್ತಾರೆ. ಸದ್ಯಕ್ಕೆ ಇ ವಿಡಿಯೋ ಸಖತ್ ವೈರಲ್ ಆಗ್ತಾ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ