ತಿರುವನಂತಪುರಂ (ಅ.18) : ಕಳೆದ ಎರಡು ದಿನಗಳಿಂದ ಕೇರಳದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಿನ ಜನರ ಜೀವನ ಅಸ್ತವ್ಯಸ್ತವಾಗಿದೆ. ನದಿಗಳು ಉಕ್ಕಿ ಹರಿಯುತ್ತಿದೆ. ಮನೆ, ರಸ್ತೆ ಎಲ್ಲಾ ಕಡೆಗಳಲ್ಲಿ ನೀರು ನುಗ್ಗಿದೆ. ಬಹುತೇಕರ ಜೀವನ ಸಂಕಷ್ಟಕ್ಕೆ ಈಡಾಗಿದೆ. ಇಂತಹ ಸಮಯದಲ್ಲಿ ಆಲಪ್ಪುಜಾದಲ್ಲಿ (Alappuzha) ಯುವ ಜೋಡಿಗಳಾದ ಆಕಾಶ್ ಮತ್ತು ಐಶ್ವರ್ಯ ವಿವಾಹವಾಗಿದ್ದಾರೆ. ಅಚ್ಚರಿ ವಿಚಾರವೆಂದರೆ ಪ್ರವಾಹದ ನಡುವೆಯು ಪಾತ್ರೆಯೊಂದರ (Large Vessel ) ಮೇಲೆ ಕುಳಿತುಕೊಂಡು ದೇವಸ್ಥಾನ ತಲುಪಿ ಆ ಬಳಿಕ ಇಬ್ಬರು ವಿವಾಹವಾಗುವ ಮೂಲಕ ಒಂದಾಗಿದ್ದಾರೆ. ಸದ್ಯ ಈ ಸ್ಟೋರಿ ವೈರಲ್ ಆಗಿದೆ.
ಆಕಾಶ್ ಮತ್ತು ಐಶ್ವರ್ಯ ಈ ಮೊದಲು ಕುಟುಂಬ ಸಮ್ಮುಖದಲ್ಲಿ ಅಕ್ಟೋಬರ್ 18ರಂದು ತಮ್ಮ ವಿವಾಹ ನಿಗದಿ ಪಡಿಸಿಕೊಂಡಿದ್ದರು. ಆದರೆ ಕೇರಳದಲ್ಲಿ ಕಳೆದ ಎರಡು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿದ್ದ, ಕೆಲವೆಡೆ ಪ್ರವಾಹ ಎದುರಾಗಿತ್ತು. ಯುವ ಜೋಡಿಗಳಿದ್ದ ಆಲಪ್ಪುಳ ತಲವಾಡಿಯಲ್ಲೂ ರಸ್ತೆಯೆಲ್ಲಾ ಜಲಾವೃತಗೊಂಡಿತ್ತು. ಆದರೆ ಆಕಾಶ್ ಮತ್ತು ಐಶ್ವರ್ಯ ಏನೇಯಾದರು ವಿವಾಹವಾಗಬೇಕು ಎಂದುಕೊಂಡಿದ್ದರು. ಅದರಂತೆ ದೊಡ್ಡ ಪಾತ್ರೆಯೊಂದನ್ನು ಬಳಸಿಕೊಂಡು ಅಲ್ಲಿನ ಹತ್ತಿರದ ಪನಯನ್ನೂರ್ಕಾವು ದೇವಸ್ಥಾನದಲ್ಲಿ ಹೋಗಿ ವಿವಾಹವಾಗಿದ್ದಾರೆ. ಸದ್ಯ ಯುವ ಜೋಡಿ ದೊಡ್ಡ ಪಾತ್ರೆಯಲ್ಲಿ ಕುಳಿತುಕೊಂಡು ದೇವಸ್ಥಾನ ತೆರಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಳೆ ಬರಲಿ, ಪ್ರವಾಹವೇ ಇರಲಿ ಮದುವೆ ಆಗಲೇ ಬೇಕು ಎಂದುಕೊಂಡಿದ್ದ ಆಕಾಶ್ ಮತ್ತು ಐಶ್ವರ್ಯ ಅಕ್ಟೋಬರ್ 18ರಂದು ವಿವಾಹವಾಗಿದ್ದಾರೆ. ಆದರೆ ಮಳೆಯಿಂದ ವಾಹನದಲ್ಲಿ ಮಂಟಪಕ್ಕೆ ತೆರಳುವುದು ತುಂಬಾ ಕಷ್ಟವಿತ್ತು. ಆ ಕಾರಣಕ್ಕೆ ನೀರಿನಲ್ಲಿ ತೇಲುವ ದೊಡ್ಡ ಪಾತ್ರೆ ಬಳಸಿಕೊಂಡ ಮಂಟಪ ಸೇರಿದ್ದಾರೆ. ಮದುವೆಯ ಸಮಯದಲ್ಲಿ ಹತ್ತಿರದ ಸಂಬಂಧಿಗಳು ಮಾತ್ರ ಹಾಜರಿದ್ದರು. ವಿವಾಹದ ಬಳಿಕ ನವ ದಂಪತಿಗಳು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
Read Also: Shahrukh Khan: ನಟನೋರ್ವನಿಗೆ ರಾತ್ರಿ ಕರೆ ಮಾಡಿ ನಾನು ನಿನ್ನನ್ನು ಮದುವೆಯಾಗಲೇ ಎಂದಿದ್ದರಂತೆ ಶಾರುಖ್ ಖಾನ್!
ಭಾರೀ ಮಳೆಯಿಂದಾಗಿ ಕೊಟ್ಟಾಯಂ ಜಿಲ್ಲೆಯ ಕೂಟಿಕಲ್ ಮತ್ತು ಇಡುಕ್ಕಿಯ ಕೊಕ್ಕಾಯಾರ್ ಪ್ರದೇಶದಲ್ಲಿ ಹಾನಿಗೊಳಗಾಗಿದೆ. ಮಳೆಯ ತೀವ್ರತೆಯಿಂದಾಗಿ ರಾಜ್ಯದಲ್ಲಿ ಮಕ್ಕಳು ಸೇರಿದಂತೆ 25 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಧಾರಾಕಾರ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಭಾರೀ ಭೂಕುಸಿತ ಉಂಟಾಗಿದೆ.
Read Also: Bill Gates ಮಗಳ ಮದುವೆ.. ಕುದುರೆ ಸವಾರಿ ಹೋಗುತ್ತಿದ್ದ ಗೆಳೆಯನನ್ನು ವರಿಸಿದ ಜೆನಿಫರ್ ಗೇಟ್ಸ್!
ಎರಡು ದಿನ ಸುರಿದ ಮಳೆಯಲ್ಲಿ ಅಣೆಕಟ್ಟುಗಳು ವೇಗವಾಗಿ ತುಂಬುತ್ತಿರುವುದರಿಂದ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇಡುಕ್ಕಿ ಅಣೆಕಟ್ಟಿಗೆ ಆರೆಂಜ್ ಅಲರ್ಟ್ ಮತ್ತು ಎಡಮಲಯಾರ್ ಜಲಾಶಯಕ್ಕೆ ನೀಲಿ ಅಲರ್ಟ್ ನೀಡಲಾಗಿದೆ. ಇಂದು ಭಾರೀ ಗಾಳಿ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ