• Home
  • »
  • News
  • »
  • trend
  • »
  • Special House: ಮರವನ್ನು ಬಳಸದೇ ಇಲ್ಲೊಂದು ಮನೆ ನಿರ್ಮಾಣವಾಗಿದೆ! ನೀವೂ ಟ್ರೈ ಮಾಡಬಹುದು

Special House: ಮರವನ್ನು ಬಳಸದೇ ಇಲ್ಲೊಂದು ಮನೆ ನಿರ್ಮಾಣವಾಗಿದೆ! ನೀವೂ ಟ್ರೈ ಮಾಡಬಹುದು

ಸಾಂದರ್ಭಿಕ  ಚಿತ್ರ

ಸಾಂದರ್ಭಿಕ ಚಿತ್ರ

ಇಲ್ನೋಡಿ.. ಕೇರಳದ ಪಥನಂತಿಟ್ಟ ಜಿಲ್ಲೆಯ ರನ್ನಿಯ ಸಾಮಾಜಿಕ ಕಾರ್ಯಕರ್ತೆ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞೆ ಲಯಾ ಜೋಶುವಾ ಅವರು ಒಂದೂ ಮರವನ್ನು ಕತ್ತರಿಸದೆ ಕಡಿಮೆ ವೆಚ್ಚದಲ್ಲಿ ಪ್ರಕೃತಿಯ ಮಡಿಲಲ್ಲಿ ಒಂದು ಸುಂದರವಾದ ಮನೆಯನ್ನು ಕಟ್ಟಿಕೊಂಡಿದ್ದಾರೆ.

  • Trending Desk
  • Last Updated :
  • Kerala, India
  • Share this:

    ‘ಗಿಡ ಮರಗಳನ್ನು ( Plant trees) ನಿಮ್ಮ ಅನುಕೂಲಕ್ಕೆ ಅಂತ ಕತ್ತರಿಸಬೇಡಿ (Do not cut) ,ಗಿಡ ಮರಗಳನ್ನು ಉಳಿಸಿ ಕಾಡು ಬೆಳೆಸಿ’ ಅಂತ ಹೇಳುವುದನ್ನು ನಾವು ಸುಮಾರು ಸಾರಿ ಕೇಳಿರುತ್ತೇವೆ. ಆದರೂ ನಮ್ಮ ಮನೆಯನ್ನು ನಿರ್ಮಿಸಿಕೊಳ್ಳುವಾಗ (While building a house) ಎಷ್ಟೋ ಗಿಡ ಮರಗಳನ್ನು ಕತ್ತರಿಸಿ ಅವುಗಳನ್ನು ಮನೆಯ ನಿರ್ಮಾಣಕ್ಕೆ ಬಳಸಿಕೊಂಡಿರುತ್ತೇವೆ. ಇದೇ ರೀತಿ ನಾವು ನಮ್ಮ ಅನುಕೂಲಕ್ಕೆ ಮರಗಳನ್ನು ಕತ್ತರಿಸುತ್ತಾ ಹೋದರೆ ಮುಂದೊಂದು ದಿನ ನಾವು ನಮ್ಮ ಮಕ್ಕಳಿಗೆ ಮರ ಹೀಗಿತ್ತು(Children's), ಇದನ್ನೇ ಮರ ಅಂತ ಅನ್ನೋದು ಅಂತ ಫೋಟೋ (Photo) ತೋರಿಸಿ ಹೇಳಬೇಕಾದ ಪರಿಸ್ಥಿತಿ ಬರಬಹುದು. ಇಂತಹ ಪರಿಸ್ಥಿತಿ ಬರಬಾರದು ಅಂತ ಹೇಳಿದರೆ, ಮರಗಳನ್ನು ಕತ್ತರಿಸದೆ ಮತ್ತು ಮರಗಳನ್ನು ಬಳಸದೆ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಮುಂದಾಗಬೇಕು.


    ಸಾಂದರ್ಭಿಕ ಚಿತ್ರ


    ಒಂದೂ ಮರ ಕತ್ತರಿಸದೆ ಪ್ರಕೃತಿಯ ಮಡಿಲಲ್ಲಿ ನಿರ್ಮಾಣವಾಯ್ತು ಸುಂದರ ಮನೆ


    ಇಲ್ನೋಡಿ.. ಕೇರಳದ ಪಥನಂತಿಟ್ಟ ಜಿಲ್ಲೆಯ ರನ್ನಿಯ ಸಾಮಾಜಿಕ ಕಾರ್ಯಕರ್ತೆ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞೆ ಲಯಾ ಜೋಶುವಾ ಅವರು ಒಂದೂ ಮರವನ್ನು ಕತ್ತರಿಸದೆ ಕಡಿಮೆ ವೆಚ್ಚದಲ್ಲಿ ಪ್ರಕೃತಿಯ ಮಡಿಲಲ್ಲಿ ಒಂದು ಸುಂದರವಾದ ಮನೆಯನ್ನು ಕಟ್ಟಿಕೊಂಡಿದ್ದಾರೆ. "ಭವಿಷ್ಯತ್ತನ್ನು ಶ್ರೀಮಂತಗೊಳಿಸಲು ಮತ್ತು ವರ್ತಮಾನವನ್ನು ಚೆನ್ನಾಗಿ ಬದುಕಲು ಭೂತಕಾಲವನ್ನು ಸಂರಕ್ಷಿಸುವುದು ನಮ್ಮ ತತ್ವವಾಗಿದೆ" ಎಂದು ಇವರು ಹೇಳುತ್ತಾರೆ.


    ಪ್ರಕೃತಿಯ ಮಡಿಲಲ್ಲಿ ಮನೆ ಮಾಡಿಕೊಂಡ ಲಯಾ


    ಈ ತತ್ವ ಅವರು ಸುಮಾರು 10 ವರ್ಷಗಳ ಹಿಂದೆ ನಿರ್ಮಿಸಿಕೊಂಡ ಸುಂದರವಾದ ಮನೆಯಲ್ಲಿ ಪ್ರತಿಬಿಂಬಿಸುತ್ತದೆ ಎಂದು ಹೇಳಬಹುದು. ಪ್ರಕೃತಿಗೆ ಹತ್ತಿರವಾದ ಮತ್ತು ತಮ್ಮ ಹೃದಯಕ್ಕೆ ಹತ್ತಿರವಾದ ಮನೆಯನ್ನು ಅವರು ಬಯಸಿದ್ದರು ಎಂದು ಅವರು ಹೇಳುತ್ತಾರೆ. ಸುಮಾರು 2,700 ಚದರ ಅಡಿಯ ಮನೆ, ಹಚ್ಚ ಹಸಿರಿನ ಪರಿಸರದ ನಡುವೆ, ಅವರು ಬಯಸಿದಂತೆಯೇ ನಿರ್ಮಿಸಿಕೊಂಡಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


    ಸುಮಾರು 30 ವರ್ಷಗಳಿಂದ ಪರಿಸರ ಕಾರ್ಯಕರ್ತೆಯಾಗಿ ಮತ್ತು ಪ್ರಕೃತಿ ಚಿಕಿತ್ಸಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಅವರ ಮನೆಯನ್ನು ಸಾಧ್ಯವಾದಷ್ಟು ಪರಿಸರ ಸ್ನೇಹಿಯಾಗಿಸುವ ಬಗ್ಗೆ ಬಹಳ ನಿರ್ದಿಷ್ಟತೆ ಹೊಂದಿದ್ದರು ಎಂದು ಲಯಾ ಹೇಳುತ್ತಾರೆ. "ನಾವು ಯಾವುದೇ ಮರಗಳನ್ನು ಕತ್ತರಿಸದೆ ಅಥವಾ ಹಾನಿ ಮಾಡದೆ ಮನೆಯನ್ನು ನಿರ್ಮಿಸಲು ಬಯಸಿದ್ದೇವು" ಎಂದು ಅವರು ಹೇಳುತ್ತಾರೆ.


     ಇದನ್ನೂ ಓದಿ: Bengaluru Rain: ರಾಜಧಾನಿಯಲ್ಲಿ ಮಳೆಯೋ ಮಳೆ; ಮತ್ತೆ ಮುಳುಗಡೆ ಭೀತಿಯಲ್ಲಿ ಬೆಂಗಳೂರು!


    ಮರವನ್ನು ಬಳಸದೆ ಮಾಡಿರುವ ಪರಿಸರಸ್ನೇಹಿ ಮನೆ ಹೇಗಿದೆ ಗೊತ್ತೇ?


    ಎರಡು ಅಂತಸ್ತಿನ ಸುಸ್ಥಿರ ಮನೆಯನ್ನು ಇನ್ನಷ್ಟು ವಿಶಿಷ್ಟವಾಗಿಸಿದ್ದು ಅದರ ನಿರ್ಮಾಣದಲ್ಲಿ ಬಳಸಲಾದ ವಸ್ತುಗಳು ಅಂತಾನೆ ಹೇಳಬಹುದು. ಮನೆಯನ್ನು ಹೆಚ್ಚಾಗಿ ಬಂಡೆಗಳು, ಕಾಡಿನ ಕಲ್ಲುಗಳು ಮತ್ತು ಛಾವಣಿ ಹೆಂಚುಗಳಿಂದ ಮಾಡಲಾಗಿದೆ. ಬಳಸಿದ ಮರವು ಹೆಚ್ಚಾಗಿ ನೆಲಸಮಗೊಳಿಸಿದ ಮನೆಗಳಿಂದ ಮರುಬಳಕೆ ಮಾಡಿದ ಮರವಾಗಿದೆ. ಈ ಎಲ್ಲಾ ಸಾಮಗ್ರಿಗಳನ್ನು ಸ್ಥಳದ 15 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸಂಗ್ರಹಿಸಲಾಗಿದೆ ಎಂದು ಅವರು ಹೇಳುತ್ತಾರೆ.


    ಒಳ್ಳೆಯ ವಾಸ್ತುಶಿಲ್ಪಿಯನ್ನು ಹುಡುಕುವುದು ಸವಾಲಾಗಿತ್ತಂತೆ!


    ಲಯಾ ಮತ್ತು ಆಕೆಯ ಪತಿ ಜೋಶುವಾ ಫಿಲಿಪ್ ಸುಸ್ಥಿರ ಮನೆಯನ್ನು ನಿರ್ಮಿಸುವ ಬಗ್ಗೆ ನಿರ್ದಿಷ್ಟವಾಗಿದ್ದರೂ, ಅವರ ಬೇಡಿಕೆಗಳನ್ನು ಅರ್ಥಮಾಡಿಕೊಳ್ಳುವ ವಾಸ್ತುಶಿಲ್ಪಿಯನ್ನು ಹುಡುಕುವುದು ಇನ್ನೊಂದು ಬೇರೆ ಸವಾಲಾಗಿತ್ತು ಎಂದು ಅವರು ಹೇಳುತ್ತಾರೆ.


    "ನಮ್ಮ ಮನೆಯ ವಾಸ್ತುಶಿಲ್ಪಿ ಜೋಸೆಫ್ ಮ್ಯಾಥ್ಯೂ ಅವರನ್ನು ಭೇಟಿಯಾದದ್ದು ನಮ್ಮ ಅದೃಷ್ಟ ಅಂತಾನೆ ಹೇಳಬೇಕು. ನಮ್ಮ ಕನಸನ್ನು ನನಸು ಮಾಡಿಕೊಳ್ಳಲು ಅವರು ನಮಗೆ ತುಂಬಾನೇ ಸಹಾಯ ಮಾಡಿದರು" ಎಂದು ಲಯಾ ಅವರು ಹೇಳುತ್ತಾರೆ.


    ವಾಸ್ತುಶಿಲ್ಪಿ ಮ್ಯಾಥ್ಯೂ ಈ ಮನೆಯ ಬಗ್ಗೆ ಏನ್ ಹೇಳ್ತಾರೆ ಕೇಳಿ..


    ಕಲಾವಿದ ಮತ್ತು ವಿನ್ಯಾಸಕಾರ ಜೋಸೆಫ್ ಮ್ಯಾಥ್ಯೂ "ಪರಿಸರ ಸ್ನೇಹಿ ಅಂಶಗಳನ್ನು ಸಾಧ್ಯವಾದಷ್ಟು ಬೆಳೆಸಲು ನನ್ನ ಕಲ್ಪನೆ ಮತ್ತು ಆಲೋಚನೆಗಳನ್ನು ಬಳಸಲು ಲಯಾ ಮತ್ತು ಜೋಶುವಾ ನನಗೆ ಸಂಪೂರ್ಣವಾದ ಸ್ವಾತಂತ್ರ್ಯವನ್ನು ನೀಡಿದರು. ಇದು ನನ್ನ ಆರಂಭಿಕ ಯೋಜನೆಗಳಲ್ಲಿ ಒಂದಾಗಿತ್ತು ಮತ್ತು ನಮ್ಮ ಆಸಕ್ತಿಗಳು ಚೆನ್ನಾಗಿ ಹೊಂದಿಕೆಯಾಗುತ್ತಿದ್ದವು” ಎಂದು ಹೇಳಿದರು. ಜೋಸೆಫ್ ಕಳೆದ 14 ವರ್ಷಗಳಿಂದ ಸುಸ್ಥಿರ ಮತ್ತು ಕಡಿಮೆ ವೆಚ್ಚದ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ.


    ಇದನ್ನೂ ಓದಿ: Puneeth Rajkumar: ಶಿವಮೊಗ್ಗದಲ್ಲಿ ಅಪ್ಪು ಪುಣ್ಯಸ್ಮರಣೆ; ಅಭಿಮಾನಿಗಳಿಗೆ ಭರ್ಜರಿ ಬಾಡೂಟ


    ಬಂಡೆಗಳು, ಕಾಡಿನ ಕಲ್ಲುಗಳು ಮತ್ತು ಹೆಂಚುಗಳಿಂದ ನಿರ್ಮಿಸಲಾದ ಗೋಡೆಗಳು..


    2013 ರಲ್ಲಿ ಮನೆಯ ನಿರ್ಮಾಣ ಶುರುವಾಯಿತು ಮತ್ತು ಕಲ್ಲಿನ ಗಾರೆ ಕೆಲಸ ಅಸಾಮಾನ್ಯವಲ್ಲದಿದ್ದರೂ, ನಿರ್ಮಾಣದಲ್ಲಿ ಬಳಸಲಾದ ಹೆಚ್ಚಿನ ಕಲ್ಲುಗಳು ದೊಡ್ಡ ಬಂಡೆಗಳು ಮತ್ತು ಕಾಡಿನ ಕಲ್ಲುಗಳು. ಈ ಸ್ಥಳದ ಸುತ್ತಮುತ್ತಲಿನ ಭೂಮಿಯಲ್ಲಿ ಹೆಚ್ಚಾಗಿ ಈ ಬಂಡೆಗಳು ಕಂಡುಬರುತ್ತವೆ ಎಂಬ ಅಂಶಕ್ಕಾಗಿ ಈ ಮನೆ ಎದ್ದು ಕಾಣುತ್ತದೆ.


    "ನಮ್ಮ ಮನೆಯ ಸುತ್ತಲಿನ ಪ್ರದೇಶವು ದೊಡ್ಡ ಕಲ್ಲುಗಳು ಮತ್ತು ಬಂಡೆಗಳ ಉಪಸ್ಥಿತಿಗೆ ಹೆಸರುವಾಸಿಯಾಗಿದೆ ಮತ್ತು ವಿವಿಧ ಗಾತ್ರದ ಈ ಕಲ್ಲುಗಳನ್ನು ನಮ್ಮ ಕಾಂಪೌಂಡ್ ಮತ್ತು ಕೃಷಿ ಭೂಮಿಯಿಂದ ಅವು ಒಂದು ಹಂತದಲ್ಲಿ ಮನೆಯ ನಿರ್ಮಾಣದ ಕೆಲಸಕ್ಕೆ ಬರುತ್ತವೆ ಎಂಬ ಭರವಸೆಯಿಂದ ಸಂಗ್ರಹಿಸಿದೆ" ಎಂದು ಲಯಾ ಹೇಳುತ್ತಾರೆ.


    ಅವರು ನಿರೀಕ್ಷಿಸಿದಂತೆ, ಮನೆಯ ಗೋಡೆಗಳ ನಿರ್ಮಾಣದ ಸಮಯದಲ್ಲಿ ಆ ಬಂಡೆಗಳು ಮತ್ತು ಕಲ್ಲುಗಳು ತುಂಬಾನೇ ಸಹಾಯಕ್ಕೆ ಬಂದವು. ಕಾರಿಡಾರ್ ನಲ್ಲಿರುವ ಮರದ ಕಂಬಗಳನ್ನು ಸಹ ದೊಡ್ಡ ಬಂಡೆಗಳ ಮೇಲೆ ನಿಲ್ಲಿಸಲಾಗಿದೆ. "ಸುಮಾರು 20 ಪ್ರತಿಶತ ಮನೆಯನ್ನು ಈ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ" ಎಂದು ಜೋಸೆಫ್ ಹೇಳುತ್ತಾರೆ.


    ಮನೆಯ ನಿರ್ಮಾಣ ಕಾರ್ಯದಲ್ಲಿ ಏನೆಲ್ಲಾ ಬಳಸಲಾಗಿತ್ತು?


    ಮನೆಯ ಗೋಡೆಗಳನ್ನು ನಿರ್ಮಿಸಲು ಅವರು ಛಾವಣಿ ಹೆಂಚುಗಳನ್ನು ಸಹ ಬಳಸಿದ್ದಾರೆ. ವಾಸ್ತವವಾಗಿ, ಮೇಲಿನ ಮಹಡಿಯನ್ನು ಹೆಚ್ಚಾಗಿ ಸಿಮೆಂಟ್ ಬಳಸಿ ಜೋಡಿಸಲಾದ ಸ್ಟ್ಯಾಕ್ಡ್ ರೂಫ್ ಹೆಂಚುಗಳನ್ನು ಬಳಸಿ ನಿರ್ಮಿಸಲಾಗಿದೆ.


    "ನನ್ನ ಹೆಚ್ಚಿನ ಪರಿಸರ ಸ್ನೇಹಿ ನಿರ್ಮಾಣಗಳಲ್ಲಿ ನಾನು ಈ ವಿಧಾನವನ್ನು ಬಳಸುತ್ತೇನೆ. ಹಳೆಯ ಚಾವಣಿ ಹೆಂಚುಗಳನ್ನು ನೆಲಸಮ ಮಾಡಿದ ಮನೆಗಳಿಂದ ನಾನು ಸಂಗ್ರಹಿಸುತ್ತೇನೆ. ಸಾಮಾನ್ಯ ಸುಟ್ಟ ಕೆಂಪು ಇಟ್ಟಿಗೆಗಳಿಗಿಂತ ಛಾವಣಿಯ ಹೆಂಚುಗಳು ಬಲವಾಗಿರುತ್ತವೆ ಮತ್ತು ಹೆಚ್ಚು ಸುಸ್ಥಿರವಾಗಿರುತ್ತವೆ. ಛಾವಣಿಯ ಹೆಂಚುಗಳಿಂದ ಮಾಡಿದ ಗೋಡೆಗಳು ದಪ್ಪವಾಗಿರುತ್ತವೆ, ಇನ್ಸುಲೇಶನ್ ಅನ್ನು ಒದಗಿಸುತ್ತವೆ ಮತ್ತು ಮನೆಯನ್ನು ತಂಪಾಗಿಡುತ್ತವೆ" ಎಂದು ಜೋಸೆಫ್ ವಿವರಿಸುತ್ತಾರೆ.


    “ಸುಮಾರು 50 ಪ್ರತಿಶತ ಮನೆಯನ್ನು ಛಾವಣಿಯ ಹೆಂಚುಗಳನ್ನು ಬಳಸಿ ನಿರ್ಮಿಸಲಾಗಿದ್ದು, ಉಳಿದವುಗಳನ್ನು ಸಿಮೆಂಟ್ ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾಗಿದೆ" ಎಂದು ಅವರು ಹೇಳುತ್ತಾರೆ.


    ನಿರ್ಮಾಣದಲ್ಲಿ ಸಿಮೆಂಟ್ ಇದ್ದರೂ, ಬಳಕೆಯನ್ನು ಸುಮಾರು 30 ಪ್ರತಿಶತಕ್ಕೆ ಇಳಿಸಲು ಸಾಧ್ಯವಾಯಿತು ಎಂದು ಜೋಸೆಫ್ ಹೇಳುತ್ತಾರೆ. "ನಾವು ಮೊದಲ ಮಹಡಿಯ ಛಾವಣಿಯ ಮೇಲೆ ಫಿಲ್ಲರ್ ಸ್ಲ್ಯಾಬ್ ತಂತ್ರವನ್ನು ಸಹ ಬಳಸಿದ್ದೇವೆ, ಅಲ್ಲಿ ನಾವು ಕಾಂಕ್ರೀಟ್ ನಡುವೆ ಚಾವಣಿ ಹೆಂಚುಗಳನ್ನು ಬಳಸಿದ್ದೇವೆ, ಆ ಮೂಲಕ ಕಾಂಕ್ರೀಟ್ ಪರಿಮಾಣವನ್ನು ಕಡಿಮೆ ಮಾಡುತ್ತೇವೆ ಮತ್ತು ಉತ್ತಮ ಥರ್ಮಲ್ ಇನ್ಸುಲೇಶನ್ ಅನ್ನು ಒದಗಿಸುತ್ತೇವೆ" ಎಂದು ಅವರು ವಿವರಿಸುತ್ತಾರೆ.


    ಮನೆಯ ಹೊರಭಾಗದಲ್ಲಿ ಪ್ಲಾಸ್ಟರ್ ಮಾಡಲಾಗಿಲ್ಲ ಮತ್ತು ಕಲ್ಲಿನ ಗೋಡೆಗಳು ಮತ್ತು ಛಾವಣಿಯ ಹೆಂಚಿನ ಗೋಡೆಗಳನ್ನು ಹೊಂದಿದೆ. "ಒಳಾಂಗಣಕ್ಕೆ ಮಾತ್ರ ಪ್ಲಾಸ್ಟರ್ ಮಾಡಲಾಗಿದೆ. ಅಲ್ಲದೆ, ನಾವು ಛಾವಣಿಯ ಹೆಂಚಿನ ಗೋಡೆಗಳ ಹೊರಭಾಗವನ್ನು ಹೊಳಪುಗೊಳಿಸಿದ್ದೇವೆ" ಎಂದು ಅವರು ಹೇಳುತ್ತಾರೆ.


     ಇದನ್ನೂ ಓದಿ: Deepavali Celebration: ಬೆಂಗಳೂರಲ್ಲಿ ಪಟಾಕಿ ಸಿಡಿಸಲು 2 ಗಂಟೆ ಮಾತ್ರ ಅವಕಾಶ! ಇದು ದೀಪಾವಳಿ ಹಬ್ಬದ ರೂಲ್ಸ್​!


    ಮರವನ್ನು ಮರುಬಳಕೆ ಮಾಡಿದ್ದಾರಂತೆ!


    ಮನೆಯ ಮತ್ತೊಂದು ವಿಶೇಷವೆಂದರೆ ಮರದ ಸುಸ್ಥಿರ ಬಳಕೆ, ಇವೆಲ್ಲವೂ ಅವರ ಪೂರ್ವಜರ ಮನೆಯಿಂದ ಮತ್ತು ಹಳೆಯ ನೆಲಸಮಗೊಳಿಸಿದ ಮನೆಗಳಿಂದ ತಂದಿರುವುದು.


    "ನಾವು ಯಾವುದೇ ಹೊಸ ಪೀಠೋಪಕರಣಗಳನ್ನು ಖರೀದಿಸಿಲ್ಲ, ನಾವು ನಮ್ಮ ಪೂರ್ವಜರ ಮನೆಯಿಂದ ಹಳೆಯ ಮತ್ತು ಮುರಿದ ಪೀಠೋಪಕರಣಗಳನ್ನು ಮರುಬಳಕೆ ಮಾಡಿದ್ದೇವೆ. ನಮ್ಮ ಹಾಲ್ ನಲ್ಲಿ ಒಂದು ಟೀಪಾಯ್ ಸಹ ಇದೆ, ಅದನ್ನು ನನ್ನ ಗಂಡನ ಬಾಲ್ಯದ ತೊಟ್ಟಿಲಿನಿಂದ ಮರು ರೂಪಿಸಲಾಯಿತು" ಎಂದು ಲಯಾ ಹೇಳುತ್ತಾರೆ.


    ಭವ್ಯ ಕಾರಿಡಾರ್ ನ ಅಂಚಿನಲ್ಲಿರುವ ಮರದ ಕಂಬಗಳನ್ನು, ಇಡೀ ಮನೆಯಲ್ಲಿ ತನ್ನ ನೆಚ್ಚಿನ ಸ್ಥಳ ಎಂದು ಲಯಾ ಹೇಳುತ್ತಾರೆ.


    "ನಾವು ಹಳೆಯ ಮನೆಗೆ ಭೇಟಿ ನೀಡಿದಾಗಲೆಲ್ಲಾ, ನಾವು ಅಲ್ಲಿಂದ ಸ್ಫೂರ್ತಿ ಪಡೆಯುತ್ತಿದ್ದೆವು. ಕಿಲಿ-ವಾಥಿಲ್ ಎಂಬ ಸಣ್ಣ ಲಂಬವಾದ ಕಿಟಕಿ ಕಾರಿಡಾರ್ ಗೆ ಅಭಿಮುಖವಾಗಿದೆ, ಅಲ್ಲಿಂದ ಮನೆಯೊಳಗಿನ ಜನರು ಮುಂಭಾಗದ ಅಂಗಳವನ್ನು ನೋಡಬಹುದು. ಇದು ಸಾಂಪ್ರದಾಯಿಕ ಕೇರಳದ ಮನೆಗಳಿಂದ ಸ್ಫೂರ್ತಿ ಪಡೆದಿದೆ" ಎಂದು ಅವರು ವಿವರಿಸುತ್ತಾರೆ.


    ಈ ಮನೆಯು ಕಾರಿಡಾರ್, ಲಿವಿಂಗ್ ರೂಮ್, ತೆರೆದ ಅಡುಗೆಮನೆ, ಊಟದ ಸ್ಥಳ, ಅಂಗಳ ಮತ್ತು ನೆಲಮಹಡಿಯಲ್ಲಿ ಜೋಡಿಸಲಾದ ಸ್ನಾನಗೃಹಗಳೊಂದಿಗೆ ಎರಡು ಮಲಗುವ ಕೋಣೆಗಳನ್ನು ಸಹ ಇದು ಒಳಗೊಂಡಿದೆ. ಎರಡನೇ ಮಹಡಿಯಲ್ಲಿ ಎರಡು ಮಲಗುವ ಕೋಣೆಗಳಿವೆ.


    "ನಮಗೆ ಇಲ್ಲಿ ನಿಜವಾಗಿಯೂ ಎಸಿ ಹಾಕಿಸುವ ಅಗತ್ಯವಿಲ್ಲ, ಏಕೆಂದರೆ ನಮ್ಮ ಮನೆಯ ಸುತ್ತಲೂ ಗಿಡ ಮರಗಳಿವೆ" ಎಂದು ಲಯಾ ಹೇಳುತ್ತಾರೆ.ಆಕ್ಸೆಡ್ ಬಳಸಿ ಮಾಡಲಾದ ಕಾರಿಡಾರ್ ಹೊರತುಪಡಿಸಿ ಮನೆಯ ಹೆಚ್ಚಿನ ಭಾಗಗಳಲ್ಲಿ ಸಾಂಪ್ರದಾಯಿಕ ಟೆರಾಕೋಟಾ ಟೈಲ್ಸ್ ಬಳಸಿ ನೆಲಹಾಸು ಮಾಡಲಾಗಿದೆ. ಇದನ್ನು ನಂತರ ಟೈಲ್ ಗಳಿಂದ ಬದಲಾಯಿಸಲಾಯಿತು.


    "ತುಲನಾತ್ಮಕವಾಗಿ ಕಡಿಮೆ ಬಜೆಟ್ ಹೊಂದಿರುವ ಒಳಾಂಗಣ ಸೇರಿದಂತೆ ನಾವು ಸುಮಾರು 20 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಯಿತು" ಎಂದು ಅವರು ಹೇಳುತ್ತಾರೆ.

    First published: