ಗೊಂಬೆಗಳೊಂದಿಗೆ (Dolls) ಲೈಂಗಿಕವಾಗಿ ತೊಡಗಿಸಿಕೊಂಡಿರುವ ಕಜಕಿಸ್ತಾನದ ದೇಹದಾರ್ಢ್ಯ ಪಟು (Kazakhstani bodybuilder) ಯೂರಿ ಟೊಲೊಚ್ಕೊ (Yuri Tolochko) ಬಲ್ಗೇರಿಯಾದಲ್ಲಿ ತನ್ನ ಎರಡನೇ ಸೆಕ್ಸ್ ಡಾಲ್ ಪತ್ನಿ ಲೂನಾರೊಂದಿಗೆ ಒಂದು ವಾರ ಕಳೆದರು. ಯೂರಿ ತನ್ನ ಹೊಸ ಪ್ಲಾಸ್ಟಿಕ್ ಮನದನ್ನೆ ಲೂನಾ(Doll Luna)ರೊಂದಿಗೆ ಬಲ್ಗೇರಿಯಾ(Bulgaria)ದಲ್ಲಿ ಹನಿಮೂನ್ನ (Honeymoon) ರಸನಿಮಿಷಗಳನ್ನು ಕಳೆದಿದ್ದಾರೆ. ಯೂರಿಯವರ ಮೊದಲ ಸೆಕ್ಸ್ ಡಾಲ್ ಮಾರ್ಗೊ (Margo) ಮುರಿದು ಹೋದ ನಂತರ ಯೂರಿ ತಮ್ಮ ಎರಡನೇ ಸೆಕ್ಸ್ ಡಾಲ್ ಲೂನಾರೊಂದಿಗೆ ಹೊಸ ಪ್ರೀತಿಯನ್ನು ಕಂಡುಕೊಂಡಿರುವಂತೆ ತೋರುತ್ತಿದೆ. ಲೂನಾರೊಂದಿಗೆ ಸಂಪೂರ್ಣ ನಗರವನ್ನು ಅಡ್ಡಾಡಿರುವ ಯೂರಿ ತಮ್ಮ 110,000 ಫಾಲೋವರ್ಸ್ ಇರುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಡೈಲಿ ಸ್ಟಾರ್ ವರದಿ ಮಾಡಿರುವಂತೆ ದಂಪತಿ ಬ್ಯುಸಿನೆಸ್ ಟೂರ್ ಎಂಬುದಾಗಿ ಪ್ರವಾಸ ಕೈಗೊಂಡಿದ್ದರೂ ಬಹಳಷ್ಟು ಸಮಯ ಲೈಂಗಿಕವಾಗಿ ತೊಡಗಿಕೊಂಡಿದ್ದರು ಎಂಬುದಾಗಿ ಉಲ್ಲೇಖಿಸಿದೆ. ಇದು ಕೆಲಸದ ನಿಮಿತ್ತ ಕೈಗೊಂಡ ಪ್ರವಾಸವಾಗಿದ್ದರೂ ತುಂಬಾ ರೋಮಾಂಚನಕಾರಿಯಾಗಿತ್ತು. ಹಾಗಾಗಿ ನಾನು ಇದನ್ನು ಹನಿಮೂನ್ ಎಂಬುದಾಗಿ ಪರಿಗಣಿಸಿದ್ದೇನೆ.
ನಾವು ರಾಜಧಾನಿ ಸೋಫಿಯಾದಲ್ಲಿ ಒಂದು ವಾರ ಜೊತೆಯಾಗಿ ಸಮಯ ಕಳೆದಿದ್ದು ನಿಜಕ್ಕೂ ಇದು ಆನಂದಮಯವಾಗಿತ್ತು ಎಂಬುದಾಗಿ ಬಾಡಿಬಿಲ್ಡರ್ ಯೂರಿ ಟೊಲೊಚ್ಕೊ ತಿಳಿಸಿದ್ದಾರೆ. ತಮ್ಮ ಕೆಲಸದ ಸಮಯದಲ್ಲಿ ಬಹಳಷ್ಟು ಜನರನ್ನು ಭೇಟಿಯಾಗಿರುವುದಾಗಿ ತಿಳಿಸಿರುವ ಯೂರಿ ಹೋಟೆಲ್ ಕೊಠಡಿಯಲ್ಲಿ ಸಮಯ ಕಳೆದಿರುವುದಾಗಿ ತಿಳಿಸಿದ್ದಾರೆ.
ಇದೇ ಸಮಯದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಲೈವ್ ಆಗಿ ತಮ್ಮ ಫಾಲೋವರ್ಗಳಿಗೆ ಕಾಣಿಸಿಕೊಂಡ ಯೂರಿ ತಮಗಾಗಿ ಕಾಯುತ್ತಿದ್ದ ಅಭಿಮಾನಿಗಳನ್ನು ಸಂತುಷ್ಟಗೊಳಿಸಿದರು. ರೊಮ್ಯಾಂಟಿಕ್ ಭೋಜನದ ಅವಿಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡ ಯೂರಿ, ತಮ್ಮ ಗೊಂಬೆ ಪತ್ನಿ ಲೂನಾರನ್ನು ನೋಡಿ ವೇಟರ್ ಹೇಗೆ ಆಶ್ಚರ್ಯ ವ್ಯಕ್ತಪಡಿಸಿದನು ಎಂಬುದನ್ನು ತಿಳಿಸಿದ್ದಾರೆ.
ಅದೇ ರೀತಿ ಹೋಟೆಲ್ನಲ್ಲಿದ್ದ ಇತರರು ಯೂರಿ ಹಾಗೂ ಅವರ ಗೊಂಬೆ ಪತ್ನಿಯ ಫೋಟೋಗಳನ್ನು ಕೂಡ ಕ್ಲಿಕ್ಕಿಸಿಕೊಂಡರು ಎಂಬುದಾಗಿ ತನ್ನ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಯೂರಿ ತನ್ನನ್ನು ಒಪೆರಾ ನಿರ್ದೇಶಕ, ಸಾರ್ವಜನಿಕ ಭಾಷಣಕಾರ ಮತ್ತು ಪ್ರದರ್ಶಕ ಎಂದು ಪ್ರಚಾರಪಡಿಸಿದ್ದು, ಶೀಘ್ರದಲ್ಲೇ ಪೋರ್ನ್ ಇಂಡಸ್ಟ್ರೀಗೆ ಕಾಲಿಡುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುವ ಇರಾದೆ ಹೊಂದಿದ್ದಾರೆ. ನನ್ನನ್ನು ಇಷ್ಟಪಡುವ ಹಾಗೂ ನಾನು ಇಷ್ಟಪಡುವ ಜನರು ನನ್ನ ಬಹಿರಂಗ ಮಾತನಾಡುವಿಕೆಯನ್ನು ಮೆಚ್ಚಿಕೊಳ್ಳುತ್ತಾರೆ. ನನ್ನ ಲೈಂಗಿಕತೆಯನ್ನು ಬಹಿರಂಗವಾಗಿ ತೋರ್ಪಡಿಸಲು ನಾನು ಇಷ್ಟಪಡುತ್ತೇನೆ ಎಂದು ಯೂರಿ ಡೈಲಿ ಸ್ಟಾರ್ಗೆ ತಿಳಿಸಿದ್ದಾರೆ.
ತಮಗೆ ಆರಾಮದಾಯಕವಾಗಿ ಪೋಸ್ಟ್ ಮಾಡಲು ಸಾಧ್ಯವಾಗುವ ಭಾಷೆಯ ಆಯ್ಕೆ ಮಾಡಿಕೊಂಡಿರುವ ಯೂರಿ ಋಣಾತ್ಮಕತೆಯಿಂದ ದೂರವಿರುವ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮ ಖಾತೆಯನ್ನು ರಷ್ಯನ್ನಿಂದ ಇಂಗ್ಲಿಷ್ಗೆ ಬದಲಾಯಿಸಿಕೊಂಡಿದ್ದಾರೆ.
ಇನ್ನೊಂದು ಸೆಕ್ಸ್ ಡಾಲ್ ಲೋಲಾನೊಂದಿಗೆ ಯೂರಿ ಸಂಪರ್ಕದಲ್ಲಿರುವುದರಿಂದ ವಿವಾಹದ ಉಂಗುರಗಳನ್ನು ಧರಿಸುವುದಿಲ್ಲವೆಂದು ಹೇಳಿಕೊಂಡಿದ್ದಾರೆ.
ತಾವು ಭೇಟಿ ನೀಡಿದ ಕ್ಲಬ್ನಲ್ಲಿರುವ ಕಪ್ಪು ವರ್ಣದ ಲೋಹದ ಆಶ್ಸ್ಟ್ರೇಯನ್ನು ಇಷ್ಟಪಟ್ಟಿರುವುದಾಗಿ ಬಹಿರಂಗವಾಗಿ ತಿಳಿಸಿದ್ದಾರೆ. ಕಳೆದ ನವೆಂಬರ್ನಲ್ಲಿ ಅತಿ ದೊಡ್ಡ ಸಮಾರಂಭದಲ್ಲಿ ಅವರು ಮಾರ್ಗೊವನ್ನು ವಿವಾಹವಾಗಿದ್ದಾಗ ವೈವಾಹಿಕ ಪರಿಕಲ್ಪನೆಯನ್ನು ಮರು ವ್ಯಾಖ್ಯಾನಿಸಿದ್ದರು. ತಮ್ಮ ಮೊದಲ ಗೊಂಬೆ ಮುರಿದ ನಂತರ ಕಜಕಿಸ್ತಾನದ ಬಾಡಿ ಬಿಲ್ಡರ್ ಹೊಸ ಸೆಕ್ಸ್ ಡಾಲ್ ಅನ್ನು ಹನಿಮೂನ್ಗೆ ಒಯ್ದಿದ್ದಾರೆ. ಕಳೆದ ವರ್ಷ ತನ್ನ ಗೊಂಬೆ ಮುರಿದಿದ್ದಕ್ಕೆ ವಿರಹ ವೇದನೆ ಅನುಭವಿಸುತ್ತಿದ್ದೇನೆ ಎಂದು ಕಣ್ಣೀರು ಹಾಕಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ