Police Humanity- ಇಡೀ ಜೀವಮಾನ ಗಳಿಕೆಯ ಹಣ ಕಳೆದುಕೊಂಡ ವೃದ್ಧ; ನೆರವಿಗೆ ಬಂದ ಪೊಲೀಸ್ ಅಧಿಕಾರಿ

ಬೀದಿಬದಿ ವ್ಯಾಪಾರ ಮಾಡುತ್ತಾ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ 90 ವರ್ಷದ ವೃದ್ಧ ಕಷ್ಟಪಟ್ಟು ಉಳಿಸಿದ 1 ಲಕ್ಷ ರೂ ಹಣವನ್ನು ಕಳ್ಳರು ದೋಚಿದ್ದರು. ದಿಕ್ಕೆಟ್ಟು ಕೂತಿದ್ದ ಕಾಶ್ಮೀರೀ ಅಜ್ಜನ ನೆರವಿಗೆ ಅಲ್ಲಿನ ಪೊಲೀಸ್ ಅಧಿಕಾರಿಯೊಬ್ಬರು ಧಾವಿಸಿದ್ದಾರೆ.

ಶ್ರೀನಗರದ ಬೀದಿಬದಿ ಮಾರಾಟಗಾರ ಅಬ್ದುಲ್ ರೆಹಮಾನ್

ಶ್ರೀನಗರದ ಬೀದಿಬದಿ ಮಾರಾಟಗಾರ ಅಬ್ದುಲ್ ರೆಹಮಾನ್

  • Share this:
ಈಗಂತೂ ಕೋವಿಡ್-19 ಸಾಂಕ್ರಾಮಿಕ ರೋಗದಿಂದ (Covid-19) ಬಹುತೇಕ ಮಧ್ಯಮವರ್ಗದ ಜನರು ತಮ್ಮ ಕುಟುಂಬದ ಖರ್ಚನ್ನು ನಿಭಾಯಿಸಲು ಕಷ್ಟವಾಗುತ್ತಿರುವುದನ್ನು ನಾವೆಲ್ಲಾ ನೋಡುತ್ತಿದ್ದೇವೆ. ಅದರಲ್ಲಿಯೂ ಈ ಬೀದಿ ಬದಿಯಲ್ಲಿ ಕುಳಿತು ಚಿಕ್ಕ ಪುಟ್ಟ ವ್ಯಾಪಾರ (Street vendors) ಮಾಡಿಕೊಂಡು ಜೀವನ ನಡೆಸುವವರ ಪಾಡಂತೂ ಕೇಳಲೇಬಾರದು. ಇಂತಹ ಸಂದರ್ಭದಲ್ಲಿ ಯಾರೋ ಕಳ್ಳರು ನಮ್ಮ ಜೀವಮಾನದ ಉಳಿತಾಯ (Lifetime savings money) ದೋಚಿಕೊಂಡು ಹೋದರೆ ನಮಗೆ ಎಷ್ಟು ಕಷ್ಟವಾಗಬಹುದು. ಇದೇ ರೀತಿಯ ಘಟನೆ ಶ್ರೀನಗರದಲ್ಲಿ (Srinagar) ನಡೆದಿದೆ. ನಗರದ ಬೊಹ್ರಿ ಕಾದಲ್ (Bohri Kadal) ಎಂಬ ಪ್ರದೇಶದಲ್ಲಿ 90 ವರ್ಷದ ಶೇಂಗಾ ಮಾರಾಟ ಮಾಡುವ ಅಬ್ದುಲ್ ರೆಹಮಾನ್ (Abdul Rehman) ತಮ್ಮ ಜೀವನದುದ್ದಕ್ಕೂ ಉಳಿತಾಯ ಮಾಡಿಟ್ಟ ಹಣವನ್ನು ಶನಿವಾರ ಕಳ್ಳರು ದೋಚಿದ್ದಾರೆ.

ಈಗ ವೃದ್ಧನಿಗೆ ತನ್ನದೇ ಅಂತಿಮ ಸಂಸ್ಕಾರಕ್ಕಾಗಿ ಜೋಡಿಸಿಟ್ಟ ಹಣವನ್ನು ಕಳ್ಳರು ದೋಚಿಕೊಂಡು ಹೋದ ಮೇಲೆ ಏನು ಮಾಡಬೇಕು ಎಂದು ತೋಚದಂತಾಗಿದೆ. ಒಬ್ಬಂಟಿಗನಾಗಿ ವಾಸಿಸುತ್ತಿರುವ ರೆಹಮಾನ್ ತನ್ನೊಂದಿಗೆ 1 ಲಕ್ಷ ರೂಪಾಯಿ ಇಟ್ಟುಕೊಂಡಿದ್ದರು. ದರೋಡೆಕೋರರು ಕಳೆದ ವಾರ ಅವರನ್ನು ಥಳಿಸಿ ಮತ್ತು ಅವರ ಎಲ್ಲಾ ಜೀವಮಾನದ ಉಳಿತಾಯದ ಹಣವನ್ನು ಕದ್ದೊಯ್ದು ಹೋಗಿದ್ದಾರೆ.

ವೃದ್ಧನ ಅಳಲು: 

ರೆಹಮಾನ್ ತಮ್ಮ ಆಳಲನ್ನು ತೋಡಿಕೊಂಡ ವಿಡಿಯೋವೊಂದು ಇಡೀ ಕಾಶ್ಮೀರದಲ್ಲಿ ವೈರಲ್ ಆಯಿತು. ಇದು ಹಿರಿಯ ಪೊಲೀಸ್ ಅಧೀಕ್ಷಕ ಸಂದೀಪ್ ಚೌಧರಿ ಗಮನಕ್ಕೆ ಬಂದಿತು. ರೆಹಮಾನ್ ಕಥೆ ಕೇಳಿದ ಅಧಿಕಾರಿ ಚೌಧರಿ ಕೂಡಲೇ ಆ ವೃದ್ಧನಿಗೆ ಸಹಾಯ ಮಾಡಲು ನಿರ್ಧರಿಸಿದರು.

ಇದನ್ನೂ ಓದಿ: ಭಾರತ ಮೂಲದ ಕಮಲಾಗೆ 85 ನಿಮಿಷ ವಿಶ್ವದ ಅತ್ಯುನ್ನತ ಅಧಿಕಾರ; ಕಾರಣ ಇದು

ಹಿರಿಯ ಪೊಲೀಸ್ ಅಧೀಕ್ಷಕ ಸಂದೀಪ್ ಚೌಧರಿ (Sandeep Chaudhary) ತಮ್ಮ ಜೇಬಿನಿಂದ ರೆಹಮಾನ್‌ಗೆ 1 ಲಕ್ಷ ರೂಪಾಯಿಗಳನ್ನು ನೀಡಿ ಆ ವೃದ್ಧನಿಗೆ ಸಹಾಯ ಮಾಡಿದ್ದಾರೆ. ಈ ಸಹಾಯವು ರೆಹಮಾನ್ ಮುಖದಲ್ಲಿ ಮಾಯವಾದ ನಗುವನ್ನು ಮತ್ತೆ ತಂದು ಕೊಟ್ಟಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಎಸ್​ಪಿ ಸಂದೀಪ್ ಚೌಧರಿಗೆ ಸಲ್ಯೂಟ್: 

ಈ ಸಹಾಯ ನೋಡಿದ ಎಸ್‌ಎಂಸಿಯ ಉಪಮೇಯರ್ ಪರ್ವೇಜ್ ಅಹ್ಮದ್ ಖಾದ್ರಿ (Parvez Ahmed Qadri) ಇದನ್ನು ತಮ್ಮ ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡು "ಬೀದಿ ಬದಿಯ ವ್ಯಾಪಾರಿ ತನ್ನ ಉಳಿತಾಯದ ಹಣ ಕಳೆದುಕೊಂಡು ತುಂಬಾ ಕಷ್ಟದಲ್ಲಿದ್ದಾಗ, ಸಹಾಯ ಮಾಡಿದ ಹಿರಿಯ ಪೊಲೀಸ್ ಅಧಿಕಾರಿ ಸಂದೀಪ್ ನಿರ್ಧಾರ ಪ್ರಶಂಸನೀಯ. ಅಬ್ದುಲ್ ರೆಹಮಾನ್ ತನ್ನ ಅಂತಿಮ ಸಂಸ್ಕಾರಕ್ಕಾಗಿ ಶ್ರಮದಾಯಕ ಹಣ ಉಳಿಸಿದ್ದರು, ಅವರಿಗೆ ಸಹಾಯ ಮಾಡಿದ ನಿಮಗೆ ಸೆಲ್ಯೂಟ್ ಸರ್" ಎಂದು ಬರೆದುಕೊಂಡಿದ್ದಾರೆ.


ಸ್ಥಳೀಯ ಪೊಲೀಸರು ಕಳ್ಳತನದ ಪ್ರಕರಣದ ಬಗ್ಗೆ ಕೇಸು ದಾಖಲಿಸಿಕೊಂಡಿದ್ದು, ದರೋಡೆಕೋರರನ್ನು ಹಿಡಿಯಲು ತನಿಖೆ ನಡೆಸುತ್ತಿದ್ದಾರೆ. ಈ ಪೊಲೀಸ್ ಅಧಿಕಾರಿಯ ಸಹಾಯಕ್ಕೆ ನೆಟ್ಟಿಗರು ಪ್ರಶಂಸೆ ಮಾಡಿದ್ದಾರೆ.

ಇದನ್ನೂ ಓದಿ: Vegetarians: ಸಸ್ಯಾಹಾರಿ ಪ್ರಯಾಣಿಕರಿಗೆ ಸಿಹಿಸುದ್ದಿ! ಇನ್ಮುಂದೆ ರೈಲುಗಳಲ್ಲಿ ದೊರೆಯಲಿದೆ ಶುದ್ಧ ವೆಜ್ ಫುಡ್..!

"ದರೋಡೆಗೊಳಗಾದ, ವೃದ್ದನಿಗೆ ತನ್ನ ಜೇಬಿನಿಂದ ಹಣ ನೀಡಿ ಸಹಾಯ ಮಾಡಿರುವುದು ಈ ಪೊಲೀಸ್ ಅಧಿಕಾರಿಯ ಉದಾರ ಮನಸ್ಸಿಗೆ ಹಿಡಿದ ಕೈಗನ್ನಡಿ ಆಗಿದೆ. ಒಟ್ಟಿನಲ್ಲಿ ಇದು ಒಂದು ಅದ್ಭುತ ಕೆಲಸ” ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ.

"ಶ್ರೀನಗರದ ಜನರೇ, ಈ ವೃದ್ದ ಹೆಚ್ಚು ಹಣ ಸಂಪಾದಿಸಲು ನಾವು ಸಹಾಯ ಮಾಡೋಣ. ನೀವು ಬೊಹ್ರಿ ಕಾದಲ್ ಸ್ಥಳವನ್ನು ಹಾದು ಹೋಗಬೇಕಾದರೆ, ಈ ವೃದ್ದ ಮಾರುವ ಶೇಂಗಾವನ್ನು ದಯವಿಟ್ಟು ಖರೀದಿಸಲು ಪ್ರಯತ್ನಿಸಿ" ಎಂದು ಇನ್ನೊಬ್ಬರು ಬರೆದಿದ್ದಾರೆ.
Published by:Vijayasarthy SN
First published: