Banarasi saree: ಕಾಶಿ ಘಾಟ್‍ಗಳ ವಿನ್ಯಾಸಗಳುಳ್ಳ ಬನಾರಸಿ ಸೀರೆಗೆ ಈಗ ಬೇಡಿಕೆ

ಘಾಟ್‍ಗಳ ಮತ್ತು ಐತಿಹಾಸಿಕ ಕಟ್ಟಡಗಳ ಹಿನ್ನೆಲೆಯ ವಿನ್ಯಾಸಗಳುಳ್ಳ ಸೀರೆಗಳಿಗೆ ದೇಶದೆಲ್ಲೆಡೆಯಿಂದ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಿಂದ ಆರ್ಡರ್‌ಗಳು ಬರುತ್ತಿವೆ ಎಂದು ಹೇಳುತ್ತಾರೆ ಅಲ್ಲಿನ ನೇಕಾರರು.

ಬನಾರಸಿ ಸೀರೆ

ಬನಾರಸಿ ಸೀರೆ

  • Share this:
ಕಾಶಿ (Kashi) ಕೇವಲ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರವಾಗಿ ಮಾತ್ರವಲ್ಲ, ಒಂದು ಐತಿಹಾಸಿಕ ಮತ್ತು ಸಾಂಸ್ಕೃತಿಕ ನಗರಿಯಾಗಿಯೂ ಹೆಸರುವಾಸಿಯಾಗಿದೆ. ಕಾಶಿ ಎಂದೊಡನೆ ಥಟ್ಟನೆ ನೆನಪಾಗುವುದು, ಭಕ್ತರಿಗೆ ಮತ್ತು ಪ್ರವಾಸಿಗರಿಗೆ ವಿಭಿನ್ನ ಅನುಭವಗಳನ್ನು ನೀಡುವ ಅಲ್ಲಿನ ಘಾಟ್‍ಗಳು (Ghats). ಕಾಶಿಯ ಘಾಟ್‍ಗಳು ಅಲ್ಲಿನ ಪಾವಿತ್ರ್ಯತೆ, ಸಂಸ್ಕೃತಿ ಮತ್ತು ಹಲವು ವೈಶಿಷ್ಟ್ಯಗಳನ್ನು ಪ್ರತಿನಿಧಿಸುತ್ತವೆ. ಕಾಶಿಯ ಘಾಟ್‍ಗಳು ಎಷ್ಟು ಜನಪ್ರಿಯವೋ, ಅಲ್ಲಿನ ಸೀರೆಗಳು ಕೂಡ ಅಷ್ಟೇ ಜನಪ್ರಿಯ. ಬಹಳ ಹಿಂದಿನ ಕಾಲದಿಂದ ಭಾರತ ದೇಶದಾದ್ಯಂತ ಬನಾರಸಿ ಸೀರೆಗಳು (Banarasi Saree) ತಮ್ಮದೇ ಆದ ಸ್ಥಾನವನ್ನು ಸ್ಥಾಪಿಸಿಕೊಂಡಿವೆ. ಏಕೆಂದರೆ, ವಿಶ್ವನಾಥನ ತಾಣದ ಸೀರೆಗಳ ಸೌಂದರ್ಯವೇ ಅಂತದ್ದು. ಬನಾರಸಿ ಸೀರೆಗಳ ಕಲಾತ್ಮಕತೆಗೆ ಮಾರು ಹೋಗದವರಿಲ್ಲ.

ಕಾಶಿಯ ಘಾಟ್‍ಗಳು ಮತ್ತು ಕಾಶಿಯ ಸೀರೆ

ಕಾಶಿಯ ಖ್ಯಾತಿಯನ್ನು ಎತ್ತಿ ಹಿಡಿದಿರುವ ಈ ಎರಡು ಅಂಶಗಳು ಒಂದರಲ್ಲೊಂದು ಸಂಯೋಜಿತಗೊಂಡರೆ ಹೇಗಿರುತ್ತದೆ..? ಅಲ್ಲಿನ ನೇಕಾರರು ಕೂಡ ಹೀಗೆಯೇ ಆಲೋಚಿಸಿ, ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಹೌದು, ಕಾಶಿಯ ಘಾಟ್‍ಗಳನ್ನು ಸೀರೆಗಳಲ್ಲಿ ಚಿತ್ರಿಸುವ ಮೂಲಕ ಕಾಶಿಯ ಎರಡೂ ಆಕರ್ಷಣೆಗಳನ್ನು ಒಂದಾಗಿಸುವ ಪರಿಕಲ್ಪನೆಗೆ ನಾಂದಿ ಹಾಡಿದ್ದಾರೆ ಅವರುಗಳು. ನೇಕಾರರ ಈ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದ್ದು, ಘಾಟ್‍ಗಳ ಮತ್ತು ಐತಿಹಾಸಿಕ ಕಟ್ಟಡಗಳ ಹಿನ್ನೆಲೆಯ ವಿನ್ಯಾಸಗಳುಳ್ಳ ಆ ಸೀರೆಗಳ ಬೇಡಿಕೆ ಸಿಕ್ಕಾಪಟ್ಟೆ ಹೆಚ್ಚಾಗಿದೆಯಂತೆ.

ಸೀರೆಗೆ ಹೆಚ್ಚಿದ ಬೇಡಿಕೆ

ಪೂರ್ವ ಉತ್ತರ ಪ್ರದೇಶ ರಫ್ತುದಾರರ ಸಂಘದ ಮಾಜಿ ಅಧ್ಯಕ್ಷ ಮುಕುಂದ್ ಅಗರ್‌ವಾಲ್‌, ಘಾಟ್‍ಗಳ ಚಿತ್ತಾರವುಳ್ಳ ಸೀರೆಗಳಿಗೆ ಬೇಡಿಕೆ ಹೆಚ್ಚಿದೆ ಎಂಬುದನ್ನು ಒಪ್ಪಿಕೊಂಡಿದ್ದು, “ಘಾಟ್‍ಗಳ ಮತ್ತು ಐತಿಹಾಸಿಕ ಕಟ್ಟಡಗಳ ಹಿನ್ನೆಲೆಯ ವಿನ್ಯಾಸಗಳುಳ್ಳ ಸೀರೆಗಳನ್ನು ದೀರ್ಘಕಾಲದಿಂದ ತಯಾರಿಸಲಾಗುತ್ತಿದೆ. ಆದರೆ ಅವುಗಳಿಗೆ ಬೇಡಿಕೆ ಹೆಚ್ಚಿದ್ದು, ಕಳೆದ ತಿಂಗಳು ಅಥವಾ ಅದಕ್ಕಿಂತ ಕೊಂಚ ಹಿಂದಿನ ಸಮಯದಿಂದ” ಎಂದು ಹೇಳಿದ್ದಾರೆ.

ಘಾಟ್‍ಗಳ ಮತ್ತು ಐತಿಹಾಸಿಕ ಕಟ್ಟಡಗಳ ಹಿನ್ನೆಲೆಯ ವಿನ್ಯಾಸಗಳುಳ್ಳ ಸೀರೆಗಳಿಗೆ ದೇಶದೆಲ್ಲೆಡೆಯಿಂದ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಿಂದ ಆರ್ಡರ್‌ಗಳು ಬರುತ್ತಿವೆ ಎಂದು ಹೇಳುತ್ತಾರೆ ಅಲ್ಲಿನ ನೇಕಾರರು.

ವಿಶೇಷ ವಿನ್ಯಾಸ ದ ಸೀರೆ

“ಒಂದು ಸೀರೆಯಲ್ಲಿ ಘಾಟ್‍ಗಳ ಅಥವಾ ಕಟ್ಟಡಗಳ ವಿನ್ಯಾಸಗಳನ್ನು ಮಾಡಲು ನನಗೆ ಒಂದು ವಾರ ಬೇಕಾಯಿತು. ಈ ಬೇಡಿಕೆ ಹೆಚ್ಚುತ್ತಿರುವುದರಿಂದ, ನಾನು ಪ್ರತಿ ವಾರ ಸುಮಾರು ನಾಲ್ಕು ಸೀರೆಗಳನ್ನು ನೇಯುತ್ತೇನೆ” ಎಂದು ಹೇಳುತ್ತಾರೆ, ಅಲ್ಲಿನ ಬಂಕರ್ ಕಾಲೋನಿಯಲ್ಲಿ ವಾಸಿಸುವ ಓರ್ವ ಮಾಸ್ಟರ್ ನೇಕಾರ ಇರ್ಫಾನ್ ಬಾಬು.

ಇದನ್ನು ಓದಿ: ಮಾರ್ಚ್​ 23ರಂದು ಉದಯಿಸಲಿರುವ ಗುರು; ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ

“ನಾವು ಘಾಟ್‍ಗಳ ವಿನ್ಯಾಸವುಳ್ಳ ಸೀರೆಗಳನ್ನು ಜನರಿಗೆ ತೋರಿಸಿದಾಗ, ಅವರು ಅವುಗಳನ್ನು ತುಂಬಾ ಪ್ರಶಂಸೆ ಮಾಡುತ್ತಾರೆ“ ಎಂದು ಹೇಳುತ್ತಾರೆ ಬಾಬು.

“ಘಾಟ್‍ಗಳ ವಿನ್ಯಾಸಗಳನ್ನು ಹೊಂದಿರುವ ಸೀರೆಗಳು ಮಹಿಳೆಯರಲ್ಲಿ ಜನಪ್ರಿಯವಾಗಿವೆ. ಏಕೆಂದರೆ ಅವು ಸಾಂಪ್ರದಾಯಿಕ ಲುಕ್ ನೀಡುತ್ತದೆ” ಎಂದು ಹೇಳುತ್ತಾರೆ ಜಿಐ ತಜ್ಞ ಡಾ.ರಜನೀಕಾಂತ್.

1000 ಕೋಟಿ ವಹಿವಾಟು 

ವ್ಯಾಪಾರಿಗಳ ಪ್ರಕಾರ, ಬನಾರಸಿ ವಸ್ತ್ರ ಉದ್ಯಮ ವಾರ್ಷಿಕ ಸುಮಾರು 1000 ಕೋಟಿ ರೂ. ಗಳಿಗೂ ಹೆಚ್ಚಿನ ವಹಿವಾಟು ಹೊಂದಿದೆ. ಘಾಟ್‍ಗಳ ವಿನ್ಯಾಸವನ್ನು ನೇಯ್ಗೆ ಮಾಡಲ್ಪಟ್ಟ ಸೀರೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ, ಬಹಳಷ್ಟು ಮಂದಿ ನೇಕಾರರು ತಾವು ಕೂಡ ಅಂತಹ ವಿನ್ಯಾಸಗಳನ್ನು ಸೃಷ್ಟಿಸಲು ಆರಂಭಿಸಿದ್ದಾರೆ ಅಥವಾ ಆರಂಭಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಇದನ್ನು ಓದಿ: Zodiac Sign: ಕೋಪ ಬಂದಾಗ ಈ ರಾಶಿಯವರೊಂದಿಗೆ ಮಾತ್ರ ಜಗಳಕ್ಕೆ ಇಳಿಯಬೇಡಿ

“ಘಾಟ್‍ಗಳ ವಿನ್ಯಾಸವುಳ್ಳ ಸೀರೆಗಳಿಗೆ ಭಾರಿ ಬೇಡಿಕೆ ಇರುವುದರಿಂದ ನಾನು ಕೂಡ ಅದನ್ನು ನೇಯುವುದನ್ನು ಪ್ರಾರಂಭಿಸಬೇಕೆಂದು ನಿರ್ಧರಿಸಿದ್ದೇನೆ” ಎಂದು ಹೇಳುತ್ತಾರೆ ಹಿರಿಯ ನೇಕಾರ ಸೈಫ್ ಅನ್ಸಾರಿ.

ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಈ ಘಾಟ್‍ಗಳ ವಿನ್ಯಾಸವುಳ್ಳ ಸೀರೆಗಳಿಗೆ ಭಾರಿ ಬೇಡಿಕೆ ಇದೆ ಎಂಬುದನ್ನು ಕಾಶಿಯ ನೇಕಾರರು ಒಪ್ಪಿಕೊಳ್ಳುತ್ತಾರೆ. ಅಲ್ಲದೆ, “ಘಾಟ್‍ಗಳ ವಿನ್ಯಾಸಗಳನ್ನು ನೇಯ್ಗೆ ಮಾಡಲಾದ ಬನಾರಸಿ ಸೀರೆಗಳಿಗೆ ಮಹಾರಾಷ್ಟ್ರದ ಹಲವು ಮಂದಿ ಖರೀದಿದಾರರು ಆರ್ಡರ್ ನೀಡಿದ್ದಾರೆ” ಎಂದು ನೇಕಾರರು ಹೇಳಿದ್ದಾರೆ.
Published by:Seema R
First published: