ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಅಂದು ವಿಶೇಷ ಕಾರ್ಯಕ್ರಮಗಳು ಎಲ್ಲೆಡೆ ನಡೆಯಲಿವೆ. ನೇರಳೆ ಬಣ್ಣವು ಆ ದಿನದ ಡ್ರೆಸ್ಸಿಂಗ್ ಕೋಡ್.
ಇದರ ಪ್ರಯುಕ್ತ ಕರ್ನಾಟಕ ಸರ್ಕಾರದ ಮಯೂರ ಗ್ರೂಪ್ ಆಫ್ ಹೊಟೇಲ್‌ಗಳಲ್ಲಿ ರೂಮ್ ಬುಕ್ಕಿಂಗ್‌ನಲ್ಲಿ ಶೇಕಡಾ 50 ರಷ್ಟು ವಿಶೇಷ ರಿಯಾಯಿತಿ ನೀಡುತ್ತಾ ಇದೆ. ಹಾಗೆರಯೇ ಫುಡ್ಗಳ ಮೇಲೆ ಶೇಕಡಾ 20 ರಷ್ಟು ರಿಯಾಯಿತಿಯನ್ನು ಎಲ್ಲಾ ಮಹಿಳೆಯರಿಗೆ ನೀಡುತ್ತಾರಂತೆ.
ಇದಕ್ಕಾಗಿ ಹಲವಾರು ಕಡೆಗಳಲ್ಲಿ ನಾನಾರೀತಿಯ ಆಫರ್ಗಳು ಇರುತ್ತದೆ. ಮಹಿಳೆಯರು ಇದನ್ನು ಉಪಯೋಗಿಸಿಕೊಳ್ಳಬೇಕು. ಹಾಗೇ ಇಲ್ಲೊಂದು ವಿಷಯ ವೈರಲ್ ಆಗ್ತಾ ಇದೆ.
ಹೀಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಮಾರ್ಚ್ 6 ರಿಂದ ಮಾರ್ಚ್ 10ರ ವರೆಗೆ ಈ ಕೊಡುಗೆಯನ್ನು ಉಪಯೋಗಿಸಿಕೊಳ್ಳಿ ಎಂದು ತಿಳಿಸಿದೆ.
ಮಾರ್ಚ್ 06 ರಿಂದ 10 ರವರೆಗೆ ಈ ಆಫರ್ ಇರಲಿದ್ದು, ಸೋಲೋ, ಫ್ಯಾಮಿಲಿ ಹಾಗೆಯೇ ಸ್ನೇಹಿತರೊಂದಿಗೆ ಪ್ರಯಾಣಿಸುವ ಮಹಿಳಾ ಪ್ರವಾಸಿಗರಿಗೆ 50% ರಿಯಾಯಿತಿ ನೀಡಲಾಗುತ್ತಿದೆ.
ರಾಜ್ಯದ ಮೈಸೂರು, ಶ್ರೀರಂಗಪಟ್ಟಣ, ಮಡಿಕೇರಿ, ಹಂಪಿ, ಆಲಮಟ್ಟಿ, ನಂದಿ ಬೆಟ್ಟ, ವಿಜಯಪುರ ಮತ್ತು ಊಟಿಯಲ್ಲೂ ಕೂಡ ಮಯೂರ ಹೋಟೆಲ್‌ಗಳಿವೆ. ಹೀಗಾಗಿ ಎಲ್ಲಾ ಮಹಿಳಾ ಪ್ರವಾಸಿಗರು ಈ ಸೌಲಭ್ಯವನ್ನು ಪಡೆದುಕೊಳ್ಳಲು ಎಂದು ಕೆಎಸ್‌ಟಿಡಿಸಿ ಮನವಿ ಮಾಡಿಕೊಂಡಿದೆ.
ಈಗಾಗಲೇ ಈ ಆಫರ್ ಆರಂಭವಾಗಿದ್ದು 10 ನೇ ತಾರೀಖಿನೊಳಗೆ ಬೇಗ ಈ ಹೊಟೇಲ್ಗಳಿಗೆ ಹೋಗಿ ಬೇಕಾದ ತಿಂಡಿ ತಿನಿಸುಗಳನ್ನು ಸೇವಿಸಬಹುದಾಗಿದೆ. ಇದು ವುಮೆನ್ಸ್ ಡೇ ಸ್ಪೆಷಲ್!
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ