Mobile Chatting: ಚಾಟ್ ಮಾಡ್ರೋ ಚಾಟ್ ಮಾಡಿ! ಮೊಬೈಲ್ ಚಾಟಿಂಗ್‌ನಲ್ಲಿ ಕನ್ನಡಿಗರೇ ನಂಬರ್ ಒನ್!

ಭಾರತದಲ್ಲಿ (India) ಅತಿ ಹೆಚ್ಚು ಮೊಬೈಲ್ ಚಾಟಿಂಗ್ ಮಾಡುವ ರಾಜ್ಯ ಎಂಬ ಹಣೆಪಟ್ಟಿ ಮಹಾರಾಷ್ಟ್ರಕ್ಕೆ (Maharashtra) ಇತ್ತು. ಇದೀಗ ಮಹಾರಾಷ್ಟ್ರವನ್ನು ಹಿಂದಿಕ್ಕಿ, ಆ ಮೊದಲ ಸ್ಥಾನಕ್ಕೆ (Number One) ಕರ್ನಾಟಕ (Karnataka) ಏರಿದೆ. ಮಹಾರಾಷ್ಟ್ರ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಇಳಿದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ಕನ್ನಡಿಗರು (Kannadigas) ಈಗೀಗ ಬಹಳ ಸ್ಮಾರ್ಟ್ (Smart) ಆಗುತ್ತಿದ್ದಾರಂತೆ. ಅಂದರೆ ಡಿಜಿಟಲ್‌ ತಂತ್ರಜ್ಞಾನಕ್ಕೆ (Digital technology) ಹೆಚ್ಚಾಗಿ ಒಗ್ಗಿಕೊಳ್ಳುತ್ತಿದ್ದಾರಂತೆ. ಮೊಬೈಲ್‌ನಲ್ಲಿ ಮಾತಾಡೋದು (Talk on mobile) ಕಡಿಮೆ ಮಾಡಿ, ಚಾಟಿಂಗ್‌ (Chatting) ಮಾಡೋದ್ರಲ್ಲೇ ಫುಲ್ ಬ್ಯುಸಿ (Full Busy) ಆಗಿದ್ದಾರಂತೆ. ಹೀಗಂತ ನಾವು ಹೇಳ್ತಿಲ್ಲ, ಇತ್ತೀಚಿನ ಸರ್ವೆಯೊಂದು (Survey) ಹೇಳುತ್ತಿದೆ. ಹೌದು, ಭಾರತದಲ್ಲಿ (India) ಅತಿ ಹೆಚ್ಚು ಮೊಬೈಲ್ ಚಾಟಿಂಗ್ ಮಾಡುವ ರಾಜ್ಯ ಎಂಬ ಹಣೆಪಟ್ಟಿ ಮಹಾರಾಷ್ಟ್ರಕ್ಕೆ (Maharashtra) ಇತ್ತು. ಇದೀಗ ಮಹಾರಾಷ್ಟ್ರವನ್ನು ಹಿಂದಿಕ್ಕಿ, ಆ ಮೊದಲ ಸ್ಥಾನಕ್ಕೆ (Number One) ಕರ್ನಾಟಕ (Karnataka) ಏರಿದೆ. ಮಹಾರಾಷ್ಟ್ರ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಇಳಿದಿದೆ. ಶೇರ್ ಚಾಟ್ (Share Chat) ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ವಿಚಾರ ಬಹಿರಂಗವಾಗಿದೆ. ನಿನ್ನೆ ರಿಲೀಸ್ ಮಾಡಿದ ವರದಿಯಲ್ಲಿ ಚಾಟಿಯೆಸ್ಟ್ ರಾಜ್ಯಗಳ ಪಟ್ಟಿಯಲ್ಲಿ (List of Chattiest States) ಕರ್ನಾಟಕ ಮೊದಲ ಸ್ಥಾನದಲ್ಲಿ ಇದೆಯಂತೆ.

ಟಾಪ್ 5 ಚಾಟಿಯೆಸ್ಟ್ ರಾಜ್ಯಗಳ ಪಟ್ಟಿ

ಭಾರತದ ಚಾಟಿಯೆಸ್ಟ್ ರಾಜ್ಯಗಳ ಪಟ್ಟಿಯಲ್ಲಿ ಇಷ್ಟು ವರ್ಷ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿತ್ತು. ಇದೀಗ ಕರ್ನಾಟಕ ಮೊದಲ ಸ್ಥಾನಕ್ಕೆ ಏರಿದ್ದರೆ, ಮಹಾರಾಷ್ಟ್ರ 2ನೇ ಸ್ಥಾನಕ್ಕೆ ಇಳಿದಿದೆ. ಇನ್ನುಳಿದಂತೆ ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ತೆಲಂಗಾಣ ಟಾಪ್ 5 ಚಾಟಿಯೆಸ್ಟ್ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಪ್ರತಿ ರಾಜ್ಯದ ಬಳಕೆದಾರರ ಚಾಟಿಂಗ್ ಎಂಗೇಜ್ಡ್ ಟೈಮಿಂಗ್ ಜೊತೆಗೆ ಬಹು ವೇದಿಕೆಗಳಲ್ಲಿ ಮೌಲ್ಯಮಾಪನ ಮಾಡಿದೆ.

ಕರ್ನಾಟಕದಲ್ಲಿ 11 ಮಿಲಿಯನ್‌ಗಿಂತ ಅಧಿಕ ಜನರಿಂದ ಚಾಟಿಂಗ್

ಕರ್ನಾಟಕದಲ್ಲಿ 11 ಮಿಲಿಯನ್​ಗಿಂತಲೂ ಅಧಿಕ ಜನರು ಸಾಮಾಜಿಕ ಮಾಧ್ಯಮದಲ್ಲಿ​ ಚಾಟ್​ ಮಾಡುತ್ತಿರುವುದು ಅಧ್ಯಯನದಲ್ಲಿ ಗೊತ್ತಾಗಿದೆ. ಕರ್ನಾಟಕವು 11.3 ಮಿಲಿಯನ್ ಬಳಕೆದಾರರೊಂದಿಗೆ ಮಾಸಿಕ ಚಾಟಿಂಗ್ ಎಂಗೇಜ್‌ನೊಂದಿಗೆ ತಮ್ಮ ಸ್ಥಳೀಯ ಭಾಷೆಯಲ್ಲಿ ತೊಡಗಿಸಿಕೊಳ್ಳುವ ಭಾರತದಾದ್ಯಂತ ಚಾಟಿಯೆಸ್ಟ್ ಪ್ರದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸಾವಿರಾರು ಅಭಿಮಾನಿಗಳೊಂದಿಗೆ ತೊಡಗಿಸಿಕೊಳ್ಳಲು ಸಿನಿಮಾ ಮತ್ತು ಟಿವಿ ಉದ್ಯಮಗಳು ನಿರಂತರವಾಗಿ ಲೈವ್ ಆಡಿಯೋ, ಚಾಟ್‌ ರೂಂಗಳಿಂದ ಶೇರ್ ಚಾಟ್ ಕರ್ನಾಟಕದಲ್ಲಿ ಸಾಕಷ್ಟು ಬಝ್ ಅನ್ನು ಸೃಷ್ಟಿಸಿದೆ.

ಇದನ್ನೂ ಓದಿ: Viral Invitation Card: ಇದು ಮಾತ್ರೆ ಅಲ್ಲ ಕಣ್ರೀ, ಮದುವೆ ಇನ್ವಿಟೇಷನ್ ಕಾರ್ಡ್! ಫಾರ್ಮಾಸಿಸ್ಟ್-ನರ್ಸ್ ಜೋಡಿಯ ಕ್ರಿಯೇಟಿವ್ ಐಡಿಯಾ

ಚಾಟಿಂಗ್‌ನಲ್ಲಿ ತೊಡಗಿಸಿಕೊಳ್ಳುವ ಜನರು

ಸಾವಿರಾರು ಬಳಕೆದಾರರು ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳನ್ನು ಲೈವ್ ಆಡಿಯೊ ಚಾಟ್‌ರೂಮ್‌ಗಳ ಮೂಲಕ ವೀಕ್ಷಿಸಿ ಕನ್ನಡ ಕ್ಷೇತ್ರದಲ್ಲಿ ಸಾಕಷ್ಟು ಹವಾ ಸೃಷ್ಟಿಸಿದ್ದಾರೆ. ಶೇರ್​ಚಾಟ್​ನಲ್ಲಿ 0.26 ಮಿಲಿಯನ್‌ಗಿಂತಲೂ ಹೆಚ್ಚು ಕನ್ನಡ ಬಳಕೆದಾರರು ತಿಂಗಳೊಂದರಲ್ಲಿ ಸುಮಾರು 3.1 ಮಿಲಿಯನ್ ಅನನ್ಯ ವಿಷಯವನ್ನು ವೀಕ್ಷಿಸಿದ್ದಾರೆ. ಜನಪ್ರಿಯ ಕನ್ನಡ ಚಾಟ್‌ರೂಮ್‌ಗಳಾದ ನಮ್ಮ ಅಡ್ಡ, ನಟರು, ಗಾಯಕರು, ಪತ್ರಕರ್ತರು, ವೈದ್ಯರು ಮತ್ತು ಸಾಹಿತಿಗಳು ವಿವಿಧ ವಿಷಯಗಳಲ್ಲಿ ಚರ್ಚಿಸಲು ಇದನ್ನು ಬಳಕೆ ಮಾಡಿದ್ದಾರೆ.

 ಚಾಟಿಂಗ್‌ನಲ್ಲಿ ತೊಡಗುವವರು ಯಾರು?

ಪ್ಲಾಟ್‌ಫಾರ್ಮ್‌ನಲ್ಲಿ 0.26 ಮಿಲಿಯನ್‌ಗಿಂತಲೂ ಹೆಚ್ಚು ಕನ್ನಡ ರಚನೆಕಾರರು ಒಂದು ತಿಂಗಳಲ್ಲಿ ವಿವಿಧ ಥೀಮ್‌ಗಳಲ್ಲಿ ಸುಮಾರು 3.1 ಮಿಲಿಯನ್ ಅನನ್ಯ ವಿಷಯವನ್ನು ತಲುಪಿಸಿದ್ದಾರೆ. ವೇದಿಕೆಯಲ್ಲಿ ನಡೆಯುತ್ತಿರುವ ಜನಪ್ರಿಯ ಕನ್ನಡ ಚಾಟ್‌ರೂಮ್‌ಗಳಲ್ಲಿ ಒಂದಾದ ನಮ್ಮ ಅಡ್ಡ, ಇದು ನಟರು, ಗಾಯಕರು, ಪತ್ರಕರ್ತರು, ವೈದ್ಯರು ಮತ್ತು ಸಾಹಿತಿಗಳನ್ನು ತಮ್ಮ ಪರಿಣತಿಯ ಪ್ರಕಾರಗಳನ್ನು ಚರ್ಚಿಸಲು ಅಧಿವೇಶನಗಳನ್ನು ನಡೆಸಲು ಆಹ್ವಾನಿಸುತ್ತದೆ.

ಇದನ್ನೂ ಓದಿ: Facebookನಲ್ಲಿ ಫೇಸ್ ನೋಡದೇ ಲವ್ ಮಾಡಿದ! ಮದುವೆ ವೇಳೆ ಗೊತ್ತಾಯ್ತು ಆಕೆ ಹುಡುಗಿಯಲ್ಲ, ಆಂಟಿ!

ಮಹಾರಾಷ್ಟ್ರಕ್ಕೆ 2ನೇ ಸ್ಥಾನ

ಇನ್ನು ಮಹಾರಾಷ್ಟ್ರವು 10 ಮಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರೊಂದಿಗೆ ವಿವಿಧ ವೇದಿಕೆಯಲ್ಲಿ ತೊಡಗಿಸಿಕೊಂಡಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 0.18 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು 2.1 ಮಿಲಿಯನ್ ವಿಷಯಗಳನ್ನು ಮೇಲೆ ಶೇರ್​ಚಾಟ್​ ಬಳಕೆ ಮಾಡಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದ ಖ್ಯಾತ ವ್ಯಕ್ತಿಗಳು ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ಆಡಿಯೊ ಚಾಟ್‌ರೂಮ್‌ನಲ್ಲಿ ಒಬ್ಬರನ್ನೊನ್ನರು ಸಂಧಿಸಿದ್ದರು ಅಂತ ವರದಿ ಹೇಳಿದೆ.
Published by:Annappa Achari
First published: