Kareena Kapoor: ಶವಾಸನದ ಪ್ರಯೋಜನಗಳ ಬಗ್ಗೆ ಕರೀನಾ ಕಪೂರ್ ಹೇಳಿದ್ದು ಹೀಗೆ..!

ಶವಾಸನದ ಭಂಗಿ ನೋಡಲು ತುಂಬಾ ಸುಲಭವಾಗಿ ಕಂಡರೂ ಅದನ್ನು ಪರಿಪೂರ್ಣವಾಗಿ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ ಎಂದು ತಜ್ಞರು ಹೇಳುತ್ತಾರೆ.

ಕರೀನಾ ಕಪೂರ್​

ಕರೀನಾ ಕಪೂರ್​

  • Share this:
ಇತ್ತೀಚೆಗೆ ಜನರು ತಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಮತ್ತು ತಮ್ಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿ ದಿನ ತಮ್ಮ ಮನೆಯಲ್ಲಿ ಯೋಗ ಮಾಡುತ್ತಿದ್ದಾರೆ. ಇಂದಿನ ಒತ್ತಡದ ಜೀವನದಲ್ಲಿ ನಮ್ಮನ್ನು ನಾವು ತುಂಬಾ ಪ್ರಶಾಂತವಾಗಿ ಇರಿಸಿಕೊಳ್ಳಲು ಯೋಗವು ತುಂಬಾ ಮುಖ್ಯವಾಗಿದೆ.ಚಿತ್ರರಂಗದ ಅನೇಕ ನಟ ನಟಿಯರು ತಾವು ಬೆಳಗ್ಗೆ ಜಿಮ್‌ನಲ್ಲಿ ವ್ಯಾಯಾಮ ಮಾಡಿದ ನಂತರ ಯೋಗಭ್ಯಾಸ ಮಾಡುವುದನ್ನು ಸಹ ರೂಢಿಸಿಕೊಂಡಿರುವುದನ್ನು ನಾವು ನೋಡಬಹುದು. ನೀವು ಜಿಮ್‌ನಲ್ಲಿ ವ್ಯಾಯಾಮ ಮಾಡಿದ ನಂತರ ಅಥವಾ ಯೋಗಭ್ಯಾಸ ಮಾಡಿದ ನಂತರ ನಿಮ್ಮ ದೇಹ ಆಯಾಸಗೊಂಡಿದ್ದರೆ, ನೀವು ಶವಾಸನ ಮಾಡುವುದರಿಂದ ನಿಮ್ಮ ಇಡೀ ದೇಹದಲ್ಲಿ ಆಯಾಸ ಕಡಿಮೆಯಾಗಿ ತುಂಬಾ ವಿಶ್ರಾಂತಿ ದೊರೆಯುತ್ತದೆ ಎಂದು ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಹೇಳುತ್ತಾರೆ.

ಶವಾಸನದ ಭಂಗಿ ನೋಡಲು ತುಂಬಾ ಸುಲಭವಾಗಿ ಕಂಡರೂ ಅದನ್ನು ಪರಿಪೂರ್ಣವಾಗಿ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ ಎಂದು ತಜ್ಞರು ಹೇಳುತ್ತಾರೆ. ತಾವು ಶವಾಸನ ಮಾಡುವ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು"ಇಷ್ಟೊಂದು ಆರಾಮ ಮತ್ತು ಪ್ರಶಾಂತತೆಯನ್ನು ನಾನು ಎಂದಿಗೂ ಅನುಭವಿಸಿರಲಿಲ್ಲ. ವ್ಯಾಯಾಮದ ನಂತರ ಯೋಗಾಭ್ಯಾಸ ಮಾಡಿದ ನಂತರ ಶವಾಸನ ಮಾಡುವುದು ತುಂಬಾ ಒಳ್ಳೆಯದು” ಎಂದು ಶೀರ್ಷಿಕೆಯಲ್ಲಿ ಬರೆದು ಕೊಂಡಿದ್ದಾರೆ.

Yoga practice, Shavasana, Kareena Kapoor, Kareena fitness, Yoga, Yoga asana, ಶವಾಸನ, ಶವಾಸನ ಭಂಗಿ, ಬಾಲಿವುಡ್ ನಟಿ, ಕರೀನಾ ಕಪೂರ್, ಯೋಗಾಭ್ಯಾಸ, Yoga practice, Shavasana, Kareena Kapoor, Kareena fitness, Yoga, Yoga asana, ಶವಾಸನ, ಶವಾಸನ ಭಂಗಿ, ಬಾಲಿವುಡ್ ನಟಿ, ಕರೀನಾ ಕಪೂರ್, ಯೋಗಾಭ್ಯಾಸKareena Kapoor says Shavasana is must after yoga practice ae
ಶವಾಸನ ಮಾಡುತ್ತಿರುವ ಕರೀನಾ ಕಪೂರ್​


ನೀವು ಯೋಗಾಭ್ಯಾಸದ ನಂತರ ಶವಾಸನವನ್ನು ಏಕೆ ಮಾಡಬೇಕು?

ಈ ಶವಾಸನ ಭಂಗಿಯು ನಿಮ್ಮ ಮಾನಸಿಕ ಮತ್ತು ಶಾರೀರಿಕ ವ್ಯವಸ್ಥೆಯನ್ನು ಒಟ್ಟಿಗೆ ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಯೋಗಭ್ಯಾಸದ ನಂತರ ಇದನ್ನು ಮಾಡುವುದರಿಂದ ನಿಮಗೆ ಅನೇಕ ಪ್ರಯೋಜನಗಳಿವೆ. ಶವಾಸನ ದೇಹದಲ್ಲಿ ಜಾಗೃತಿಯನ್ನು ಬೆಳೆಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಮನಸ್ಸು ಮತ್ತು ಇಂದ್ರಿಯಗಳನ್ನು ಶಾಂತಗೊಳಿಸುತ್ತದೆ. ನಿಮ್ಮ ದೇಹವನ್ನು ತಂಪಾಗಿರಿಸಲು ಕಠಿಣವಾದ ವ್ಯಾಯಾಮದ ನಂತರ ಶವಾಸನವನ್ನು ಮಾಡುವುದು ಎಂದಿಗೂ ತಪ್ಪಿಸಿಕೊಳ್ಳಬೇಡಿ,” ಎಂದು ಯೋಗ ತರಬೇತುದಾರ ಶಿಖಾ ಶರ್ಮಾ ಹೇಳುತ್ತಾರೆ.

ಇದನ್ನೂ ಓದಿ: Abhishek Bachchan: 45.75 ಕೋಟಿಗೆ ಐಷಾರಾಮಿ ಮನೆ ಮಾರಿದ ಅಭಿಷೇಕ್ ಬಚ್ಚನ್..!

ಶವಾಸನ ಭಂಗಿಯನ್ನು ಹೇಗೆ ಮಾಡುವುದು?

ನಿಮ್ಮ ಕಾಲುಗಳನ್ನು ಒಂದರಿಂದ ಎರಡು ಅಡಿ ಅಂತರದಲ್ಲಿ ಆರಾಮದಾಯಕ ಸ್ಥಿತಿಯಲ್ಲಿ ಹರಡಿಸಿ.

ನಿಮ್ಮ ಎರಡು ತೋಳುಗಳನ್ನು ದೇಹದಿಂದ ಸ್ವಲ್ಪ ದೂರದಲ್ಲಿಡಿ. ಅಂಗೈಗಳನ್ನು ಮೇಲ್ಮುಖವಾಗಿ ಆಕಾಶದ ಕಡೆಗೆ ತಿರುಗಿಸಿಡಿ.

ಕುತ್ತಿಗೆಯನ್ನು ವಿಶ್ರಾಂತಿಯಲ್ಲಿರಿಸಿ.

ನಿಮ್ಮ ಕಣ್ಣುಗಳನ್ನು ಮುಚ್ಚಿ. ದೇಹದ ಮೇಲೆ ಗಮನ ಕೇಂದ್ರೀಕರಿಸಿ, ಸಾಮಾನ್ಯವಾಗಿ ನೀವು ಹೇಗೆ ಉಸಿರಾಡುತ್ತಿರೋ ಹಾಗೆಯೇ ಆರಾಮಾಗಿ ಉಸಿರಾಡಿ.

ನಂತರ ದೇಹದ ಪ್ರತಿಯೊಂದು ಭಾಗದ ಮೇಲೆ ನಿಮ್ಮ ಗಮನ ಕೇಂದ್ರಿಕರಿಸಿ ಮತ್ತು ಆ ದೇಹದ ಭಾಗವನ್ನು ವಿಶ್ರಾಂತಿ ಮಾಡಲು ಮನಸ್ಸಿನಲ್ಲಿ ಹೇಳಿಕೊಳ್ಳಲು ಪ್ರಾರಂಭಿಸಿರಿ.

ಶವಾಸನದಿಂದ ಹೇಗೆ ಪರಿಣಾಮಕಾರಿ ಫಲಿತಾಂಶ ಪಡೆಯುವುದು?

ನಟಿ ಕರೀನಾ ಪ್ರಕಾರ, ನೀವು ಮಾಡುತ್ತಿರುವ ಶವಾಸನ ಸರಿಯಾಗಿದೆ ಮತ್ತು ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಖಚಿತಪಡಿಸಿಕೊಳ್ಳಲು ನೀವು ಕೆಲವು ಕೆಲಸಗಳನ್ನು ಮಾಡಬೇಕು.

"ನೀವು ನಿಮ್ಮ ಪ್ರತಿಯೊಂದು ಬಾರಿಯ ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಿ ಮತ್ತು ಮಾನಸಿಕವಾಗಿ ಒತ್ತಡ ಹೋಗಲಾಡಿಸಲು ನಿಮ್ಮ ದೇಹದ ಪ್ರತಿಯೊಂದು ಭಾಗದ ಮೇಲೆ ನೀವು ಗಮನ ಹರಿಸಿ” ಎಂದು ಕರೀನಾ ಹೇಳಿದ್ದಾರೆ.

ಇದನ್ನೂ ಓದಿ: Amrutha Ramamoorthy: ಅದ್ಧೂರಿಯಾಗಿ ನಡೆಯಿತು ನಟಿ ಅಮೃತಾರ ಸೀಮಂತ ಕಾರ್ಯಕ್ರಮ: ಇಲ್ಲಿವೆ ಫೋಟೋಗಳು..!

ಒಂದು ನಿರ್ದಿಷ್ಟವಾದ ಸಮಯದಲ್ಲಿ ಒಂದು ದೇಹದ ಭಾಗದ ಮೇಲೆ ಗಮನ ಹರಿಸಿ ಮತ್ತು ನೀವು ಬೆಳಗ್ಗೆ ಮಾಡುವ ವ್ಯಾಯಾಮದ ನಂತರ ಶವಾಸನ ಅಭ್ಯಾಸ ಮಾಡುವುದು ಒಳ್ಳೆಯದು ಎಂದು ಯೋಗ ತರಬೇತುದಾರರಾದ ಇರಾ ತ್ರಿವೇದಿ ಹೇಳುತ್ತಾರೆ.


Published by:Anitha E
First published: