• Home
  • »
  • News
  • »
  • trend
  • »
  • Viral Video: ಅದೇ ಶಿವ, ಅದೇ ಫಾರೆಸ್ಟ್ ಆಫೀಸರ್, ಆದ್ರೆ ಇದು ಕಾಂತಾರ ಅಲ್ಲ! ಹೆಂಗಿದೆ ಕಾಣಿ ಮಕ್ಕಳಾಟ!

Viral Video: ಅದೇ ಶಿವ, ಅದೇ ಫಾರೆಸ್ಟ್ ಆಫೀಸರ್, ಆದ್ರೆ ಇದು ಕಾಂತಾರ ಅಲ್ಲ! ಹೆಂಗಿದೆ ಕಾಣಿ ಮಕ್ಕಳಾಟ!

ರೀಲ್ಸ್​ ಮಾಡುತ್ತಿರುವ ಮಕ್ಕಳು

ರೀಲ್ಸ್​ ಮಾಡುತ್ತಿರುವ ಮಕ್ಕಳು

Trend Video: ಹೋಯ್, ಇಲ್ಲೊಂದು ವಿಷಯ ಇದೆ ಬನ್ನಿ ಮಾರೇ...ಒಮ್ಮೆ ನೋಡಿ ಅಲಾ. ಮಕ್ಕಳು ಎಂಥಾ ಚೆಂದದ ವಿಡಿಯೋ ಮಾಡಿದ್ದಾರೆ ಗೊತ್ತಾ. ಅದು ಯಾವ ಸಿನಿಮಾದ ಡೈಲಾಗ್​ ಗೊತ್ತುಂಟಾ? ಕೆಳೆಗೆ ನೋಡಿ ವಿಡಿಯೋ ಉಂಟು. ಗಮ್ಮತ್ತಾಗಿದೆ ಮಾತ್ರ.

  • Share this:

ಬಸ್​ಲ್ಲಿ ನಿಂತಾಗ, ದಾರಿಯಲ್ಲಿ ಹೋಗುವಾಗ ಯಾವುದಾದರೂ ಒಂದು ಮೂಲೆಯಿಂದ ಒಂದು ಮ್ಯೂಸಿಕ್ (Music)​ ಕೇಳುವುದು ಸಾಮಾನ್ಯವಾಗಿದೆ. ಅರೆ! ಯಾವ್ದು ಆ ಮ್ಯೂಸಿಕ್​ ಅಂತ ಒಬ್ಬೊಬ್ಬರಿಗೆ ಅನುಮಾನ ಬಂದಿರಬಹುದು. ಅದೇ  ಮಾರೇ, ಕಾಂತಾರ ಸಿನಿಮಾದ ಮ್ಯೂಸಿಕ್, ಸಾಂಗ್ಸ್ ಮತ್ತು ಡೈಲಾಗ್​. ಎಲ್ಲೇ ಹೋದ್ರು ಕೂಡ ಕಾಂತಾರ (Kantara) ಸಿನಿಮಾದ ಹವ ಅಂತು ಇನ್ನು ಫ್ರೆಶ್​ (Fresh) ಆಗಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿಯೂ ಕಾಂತಾರ ಸಿನಿಮಾವು ರಾರಾಜಿಸುತ್ತಿರುವುದು ಹೆಮ್ಮೆಯ ವಿಚಾರ ಅಂತಾನೇ ಹೇಳಬಹುದು. ಇನ್ನು ಇನ್ಸ್ಟಾಗ್ರಾಮ್​, ಫೇಸ್​ಬುಕ್​ ಖಾತೆಗಳನ್ನು ಓಪನ್​ ಮಾಡಿದ್ರೆ ಸಾಕು ಕಾಂತಾರ ಸಿನಿಮಾದ ಹಾಡು, ಡೈಲಾಗ್​ಗಳಿಗೆ ಡಬ್​, ರೀಲ್ಸ್​ ಮಾಡಿದ್ದೇ ಕಾಣ್ತಾವೆ.


ಹೌದು, ಸಿಂಗಾರ ಸಿರಿಯೇ ಹಾಡಿಗಂತು ರೀಲ್ಸ್​ಗಳನ್ನುಮಾಡುವುದು ಫುಲ್​ ಟ್ರೆಂಡ್​ ಆಗಿಬಿಟ್ಟಿದೆ. ಇನ್ನು ರಿಶಬ್​ ಶೆಟ್ಟಿಯ ಒಂದಷ್ಟು ಫೇಮಸ್​ ಡೈಲಾಗ್​ಗಳ ರೀಲ್ಸ್​ ಕೇಳೋದೇ ಬೇಡ. ಶಿವ ಮತ್ತು ಲೀಲಾ ಕೇವಲ ಕಾಂತಾರದಲ್ಲಿ ಮಾತ್ರವಲ್ಲದೇ ನಮ್ಮ ಮೊಬೈಲ್​ನಲ್ಲಿ ಸಾಮಾಜಿಕ ಜಾಲತಾಣ ಓಪನ್​ ಮಾಡಿದ್ರೆ ಸಾಕು. ಎಲ್ರೂ ಶಿವ ಮತ್ತು ಲೀಲ ಆಗಿಬಿಟ್ಟಿದ್ದಾರೆ. ಇವರಿಬ್ಬರ ಹಾಡಿಗೆ, ಡೈಲಾಗ್​ಗಳಿಗೆ ರೀಲ್ಸ್​ ಮಾಡುವ ಮೂಲಕ  ಹೆಸರುವಾಸಿಯಾಗಿಬಿಟ್ಟಿದೆ.


ಇನ್ನು ಈ ಸಿನಿಮಾವನ್ನು ಅದೆಷ್ಟೋ ಬೇರೆ ಬೇರೆ ಇಂಡಸ್ರ್ಟಿಯ ನಟರು, ನಿರ್ದೇಶಕರು ಕಂಡು ಉತ್ತಮ ಪ್ರತಿಕ್ರಿಯೆಯನ್ನು, ವಿಮರ್ಶೆಯನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಡಿದ್ದಾರೆ. ಅದು ಎರಡು ಮೂರು ಬಾರಿ ಈ ಚಿತ್ತವನ್ನು ನೋಡಿದ ವಿಚಾರವೂ ಉಂಟು. ಇದೊಂದು ರೀತಿಯ ಕನ್ನಡ ಚಿತ್ರರಂಗದ ಡೆವಲಪ್​ಮೆಂಟ್​ ಸ್ಟೋರಿ ಅಂದರೂ ತಪ್ಪಾಗಲಾರದು.


ಇದನ್ನೂ ಓದಿ: ಕಾಂತಾರ ಈಗ ಅತ್ಯಧಿಕ ರೇಟಿಂಗ್ ಪಡೆದ ಭಾರತೀಯ ಸಿನಿಮಾ! IMDBನಲ್ಲಿ ಟಾಪ್


ದೊಡ್ಡವರು ಮಾತ್ರವಲ್ಲದೇ ಚಿಕ್ಕಮಕ್ಕಳು ಕೂಡ ರೀಲ್ಸ್​ ಮಾಡಲು ಶುರು ಹಚ್ಕೊಂಡಿದ್ದಾರೆ. ಪುಟ್ಟ ಮಕ್ಕಳು ಏನು ಮಾಡದ್ರೂ ಚೆಂದ ಅಲ್ವಾ? ಮಾತಾಡೋದು, ಡ್ಯಾನ್ಸ್​ ಮಾಡೋದು, ಹಾಡು ಹೀಗೆ ಎಂಥ ಮಾಡಿದ್ರೂ ಚೆಂದ.


ಇಷ್ಟೆಲ್ಲಾ ಯಾಕೆ ಹೇಳ್ತಾ ಇರೋದು ಅಂದ್ರೆ, ಇಲ್ಲೊಂದು ಮಕ್ಕಳ ಗುಂಪು ಕಾಂತಾರ ಸಿನಿಮಾದ ಫೇಮಸ್​ ಡೈಲಾಗ್​ಗಳಲ್ಲಿ ಒಂದಾದ ಡೈಲಾಗ್​ನ ರೀಲ್ಸ್​ ಮಾಡಿದ್ದಾರೆ. ಕ್ಯೂಟ್​ ಆಗಿ ಆಕ್ಟಿಂಗ್​ ಮಾಡಿರುವ ಈ ಮಕ್ಕಳ ವಿಡಿಯೋ ಸಖತ್​ ಆಗಿ ವೈರಲ್​ ಆಗಿದೆ. ತಮ್ಮ ವಾಟ್ಸಾಪ್​ ಸ್ಟೇಟಸ್​, ಇನ್ಸ್ಟಾಗ್ರಾಮ್​ ​ ರೀಲ್ಸ್​ ಹೀಗೆ ಎಲ್ಲೆಡೆ ಪೋಸ್ಟ್​, ಶೇರ್​ಗಳನ್ನು ಮಾಡುವ ಮೂಲಕ ಟ್ರೆಂಡ್​ ಕ್ರಿಯೇಟ್​ ಆಗಿದೆ.


ಮಕ್ಕಳು ಮಾಡಿದ ರೀಲ್ಸ್​ ಅಲ್ಲಿ ಏನಿದೆ?


ಮಕ್ಕಳು ಸೇರಿ ಕಾಂತಾರ ಸಿನಿಮಾದಲ್ಲಿ ಬರುವ  "ನಿಮ್ ಅಪ್ನಿಗೆ ಹುಟ್ಟಿದ್ರೆ ಬಂದ್ ಮಾಡ್ಸಾ" ಈ ಡೈಲಾಗ್​ ಸಖತ್​ ಟ್ರೆಂಡ್.​ ಇದರ ಜೊತೆ ರಿಶಬ್​  ಕಂಬಳದಲ್ಲಿ ಕೋಣವನ್ನು ಓಡಿಸುತ್ತಾ "ಬಿಡಿಯಾ" ಎಂದು ಜೋರಾಗಿ ಹೇಳುತ್ತಾರೆ. ಇದನ್ನು ಕೂಡ ಒಂದು ಪುಟ್ಟ ಹುಡುಗ ಕಂಬಳದ ಗೆಟ್ಅಪ್​ ಹಾಕಿ, ಕರುವನ್ನು ಹಿಡಿದು ಓಡಿಸುತ್ತಾನೆ. ಇದಂತೂ ನೋಡೋಕೆ ಸಖತ್​ ಮಜವಾಗಿದೆ ಮತ್ತು ಕ್ಯೂಟಾಗಿದೆ. ಹೀಗಾಗಿಯೇ ಇಷ್ಟೊಂದು ಟ್ರೆಂಡ್​ ಕ್ರಿಯೇಟ್​ ಆಗ್ತಾ ಇರೋದು.ಇದನ್ನೂ ಓದಿ: ಕಾಂತಾರ ಸಿನಿಮಾ ವೀಕ್ಷಿಸಿ ಪ್ರತಿಕ್ರಿಯಿಸಿದ ಪ್ರಭಾಸ್! ಏನಂದ್ರು?


ದಿನಕ್ಕೆ ನೂರಾರು ಜನ  ರೀಲ್ಸ್​ ಮಾಡುತ್ತಾರೆ ಆದರೆ ಈ ಮಕ್ಕಳ ವಿಡಿಯೋ ಮಾತ್ರ ವಿಭಿನ್ನವಾಗಿದೆ ಎಂದೇ ಹೇಳ್ಬೋದು.  ಇನ್ನು ಸದ್ಯದವರೆಗೂ ಈ ಸಿನಿಮಾದ ಹವ ಕಮ್ಮಿ ಅಂತೂ ಆಗಲ್ಲ ಅನ್ಬೋದು. ಮುಂದಿನ ದಿನಗಳಲ್ಲಿ ಇನ್ನೂ ಯಾವ ರೀತಿಯ ಈ ಸಿನಿಮಾದ ಡೈಲಾಗ್​ಗಳು ಬರಲಿವೆ ಎಂಬುದು ಕಾದು ನೋಡಬೇಕಾಗಿದೆ.

First published: