• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Dr Bro Videos: ಕಿಸ್​ ಕೊಟ್ಟ 5 ನಿಮಿಷಕ್ಕೇ ಕೈ ಕೊಟ್ಟ ಹುಡುಗಿ, ನೋವಿನಲ್ಲಿ ಮತ್ತೊಬ್ಬರನ್ನು ತಬ್ಬಿಕೊಂಡ ಡಾಕ್ಟರ್​ ಬ್ರೋ!

Dr Bro Videos: ಕಿಸ್​ ಕೊಟ್ಟ 5 ನಿಮಿಷಕ್ಕೇ ಕೈ ಕೊಟ್ಟ ಹುಡುಗಿ, ನೋವಿನಲ್ಲಿ ಮತ್ತೊಬ್ಬರನ್ನು ತಬ್ಬಿಕೊಂಡ ಡಾಕ್ಟರ್​ ಬ್ರೋ!

ಡಾಕ್ಟರ್​ ಬ್ರೋ

ಡಾಕ್ಟರ್​ ಬ್ರೋ

ಚಿಕ್ಕ ವಯಸ್ಸಿಗೆ ದೇಶ ವಿದೇಶ ಸುತ್ತುವ ಈತನನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ದೇಶ-ವಿದೇಶಗಳನ್ನು ಸುತ್ತುತ್ತ ನಮ್ಮ ಜನರಿಗೆ ಕನ್ನಡದಲ್ಲೇ ಅರ್ಥಮಾಡಿಸುವ ಫೇಮಸ್​ ಯೂಟ್ಯೂಬರ್​ ಡಾಕ್ಟರ್​ ಬ್ರೋ.

  • Share this:

ನಮಸ್ಕಾರ​ ದೇವ್ರು.. ಇದನ್ನು ಕೇಳಿದ ಕೂಡಲೇ ನಿಮ್ಮ ತಲೆಯಲ್ಲಿ ಒಬ್ಬನ ಮುಖ ನೆನೆಪಿಗೆ ಬರುತ್ತೆ. ಆತನ ಮಾತುಗಳ, ಆತನ ವಿಡಿಯೋ (Videos) ಗಳು, ಬೇರೆ ಬೇರೆ ದೇಶಗಳಲ್ಲೂ ಕನ್ನಡ(Kannada)ದ ಕಂಪು ಹರಿಸುತ್ತಿರೋ ವ್ಯಕ್ತಿ ನಿಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತಾರೆ. ಆತ ಇನ್ಯಾರು ಬೇರೆ ಅಲ್ಲ ಡಾ.ಬ್ರೋ (Dr Bro). ಹೌದು, ಯುಟ್ಯೂಬ್(YouTube)ನಲ್ಲಿ ಡಾ .ಬ್ರೋ ಅಂತಾನೆ ಫೇಮಸ್ (Famous)​ ಆಗಿರುವ ಈ ಯುವಕ ಕನ್ನಡಿಗರಿಗೇ ಅಂಗೈನಲ್ಲೆ ಇಡೀ  ಜಗತ್ತನೇ (World) ತೋರಿಸುತ್ತಾನೆ. ಇತ್ತೀಚೆಗಂತೂ ಕನ್ನಡಿಗರಿಗೆ ಡಾಕ್ಟರ್ ಬ್ರೋ ಚಿರಪರಿಚಿತ. ಡಾಕ್ಟರ್​​ ಬ್ರೋ ಅಂದಕೂಡಲೇ ಎಲ್ಲರಿಗೂ ಥಟ್​ ಅಂತ ನೆನಪಾಗಿ ಬಿಡುತ್ತಾರೆ ಗಗನ್​. ಸಾಧಿಸುವ ಛಲ ಇದ್ದರೆ ಸಾಕು ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು.  ಹೆಚ್ಚಿನ ಮಂದಿ ಜೀವನದಲ್ಲಿ ಯಶಸ್ಸಿ (Success)  ನ ಹಾಗೂ ಹಣ(Money)ದ ಆಸೆಯಿಂದ ಅಡ್ಡದಾರಿ ಹಿಡಿಯುತ್ತಾರೆ. ಆದರೆ ಎಲ್ಲರಂತಲ್ಲ ಡಾಕ್ಟರ್​ ಬ್ರೋ.


ಸಿಕ್ಕಾಪಟ್ಟೆ ಫೇಮಸ್​ ಡಾಕ್ಟರ್ ಬ್ರೋ!


ಚಿಕ್ಕ ವಯಸ್ಸಿಗೆ ದೇಶ ವಿದೇಶ ಸುತ್ತುವ ಈತನನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ದೇಶ-ವಿದೇಶಗಳನ್ನು ಸುತ್ತುತ್ತ ನಮ್ಮ ಜನರಿಗೆ ಕನ್ನಡದಲ್ಲೇ ಅರ್ಥಮಾಡಿಸುವ ಫೇಮಸ್​ ಯೂಟ್ಯೂಬರ್​ ಡಾಕ್ಟರ್​ ಬ್ರೋ. ಡಾಕ್ಟರ್​ ಬ್ರೋ ಇತ್ತೀಚೆಗೆ ವಿಡಿಯೋವೊಂದನ್ನು ತಮ್ಮ ಇನ್​ಸ್ಟಾಗ್ರಾಮ್​ ಪೇಜ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ  ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಎಡಿಟ್​ ಮಾಡಿರುವ ಡಾಕ್ಟರ್​ ಬ್ರೋ. ಉಪ್ಪಿದಾದಾ ಎಂಬಿಬಿಎಸ್​ ಸಿನಿಮಾದ ಹಾಡನ್ನು ವಿಡಿಯೋಗೆ ಸೇರಿಸಿದ್ದಾರೆ.


ಕೊಟ್ಲು ಕೊಟ್ಲು ಕೈ ಕೊಟ್ಲು ಎಂದ ಡಾ ಬ್ರೋ!


ವಿಡಿಯೋ ಮಾಡುವಾಗ ಒಂದಿಷ್ಟು ಹುಡುಗ-ಹುಡುಗಿಯರು ಬಂದು ಡಾಕ್ಟರ್​ ಬ್ರೋ ಅವರನ್ನು ಮಾತನಾಡಿಸಿದ್ದಾರೆ. ಆದರೆ ಒಂದು ಹುಡುಗಿ ಮಾತ್ರ ಡಾಕ್ಟರ್​ ಬ್ರೋ ಜೊತೆ ಸೆಲ್ಫಿಗೆ ಪೋಸ್​ ಕೊಟ್ಟಿದ್ದಾರೆ. ಜೊತೆಗೆ ಡಾಕ್ಟರ್ ಬ್ರೋ ಜೊತೆ ಸೇರಿ ಒಂದಿಷ್ಟು ತರಲೆ ಸಹ ಮಾಡಿದ್ದಾರೆ. ಡಾಕ್ಟರ್​ ಬ್ರೋ ಅವರ ಕ್ಯಾಮರಾಗೆ ಕಿಸ್​ ಕೊಟ್ಟಿದ್ದಾರೆ. ಈ ಹುಡುಗಿಯ ತುಂಟಾಟಕ್ಕೆ ಮನಸೋತಿದಂತೆ ಕಾಣಿಸಿಕೊಂಡಿದ್ದಾರೆ ಗಗನ್​.


ಕಿಸ್​ ಕೊಟ್ಟ 5 ನಿಮಿಷಕ್ಕೆ ಅಲ್ಲಿಂದ ಎಸ್ಕೇಪ್​!


ಈ ಹುಡುಗಿ ಗಗನ್​ ಜೊತೆ ತುಂಟಾಟ ಮಾಡಿದ 5 ನಿಮಿಷದಲ್ಲೇ ಅಲ್ಲಿಂದ ಬೇರೊಬ್ಬರ ಜೊತೆ ಗಾಡಿಯಲ್ಲಿ ಕೂತು ಹೋಗಿದ್ದಾರೆ. ಈ ವಿಡಿಯೋಗೆ ಕೊಟ್ಲು ಕೊಟ್ಲು ಕೈ ಕೊಟ್ಲು ಹಾರ್ಟ ಅನ್ನು ಹಿಂಡಿ ಕೈ ಕೊಟ್ಲು ಎಂಬ ಹಾಡನ್ನು ಸೇರಿಸಿದ್ದಾರೆ. ಮತ್ತೆ ಇದೇ ಹಾಡಿನಲ್ಲಿ ಆಮೇಲೆ ಏನಾಯ್ತು ಎಂಬ ಸಾಲು ಬರುತ್ತೆ ಅದಕ್ಕೆ ಗಗನ್​ ತಾನು ಪ್ರವಾಸ ಮಾಡುವಾಗ ಕೋತಿಗಳ ಜೊತೆ ಕಳೆದ ತುಣುಕನ್ನು ಹಾಕಿ ಎಡಿಟ್ ಮಾಡಿದ್ದಾರೆ. ಐಶ್ವರ್ಯ ಬಂದ್ಳು ಅಂತ ಆಡಿಯೋ ಸಿಂಕ್ ಮಾಡಿದ್ದಾರೆ.
ಇದನ್ನೂ ಓದಿ: ನಮಸ್ಕಾರ ದೇವ್ರು, ಹೀಗ್​ ಅನ್ನುತ್ತಲೇ ದುಡ್ಡು ಮಾಡ್ತಿರೋ ಯುಟ್ಯೂಬರ್​​! ವಿಡಿಯೋಗಳಿಂದಲೇ ತಿಂಗಳಿಗೆ ಇಷ್ಟೊಂದು ಸಂಪಾದನೆನಾ?


2016ರಲ್ಲಿ ಯುಟ್ಯೂಬ್​ ಚಾನೆಲ್​ ಆರಂಭಿಸಿದ್ದ ಡಾ ಬ್ರೋ!


ಲೈಸೆನ್ಸ್ ಇಲ್ಲದೇ ಹೋದರೂ ತನ್ನ ಹದಿನಾರನೆ ವಯಸ್ಸಿಗೆ ‌ಕಾರು ಓಡಿಸಲು ಶುರು ಮಾಡಿದ್ದ. ಭರತನಾಟ್ಯ ಕಲಿತು ಅದರ ಕ್ಲಾಸ್‌ ನಡೆಸಿದ್ದ, ಫೋಟೋಗ್ರಫಿ, ವಿಡಿಯೂ ಗ್ರಫಿ ಕಲಿತ.  2016 ರಲ್ಲಿ ತನ್ನದೇ ಆದ ಯೂ ಟ್ಯೂಬ್‌ ಚಾನೆಲ್ ಶುರು ಮಾಡಿದ್ದ. ಅದುವೇ ಡಿ ಆರ್ ಬ್ರೋ ಅಂದರೆ ಡಾ ಬ್ರೋ. ಪ್ರಾರಂಭದಲ್ಲಿ ಕಾಮಿಡಿ ವಿಡಿಯೋವನ್ನು ಮಾಡಿ ಅಪ್ಲೋಡ್ ಮಾಡಿ, ಬರು ಬರುತ್ತಾ ಸಿನಿಮಾ ನಟ ನಟಿಯರ ಇಂಟರ್ವ್ಯೂ ಮಾಡಿ ಹಾಕುತ್ತಿದ್ದ. ‌ರಾಜ್ಯದ ಬೇರೆ ಬೇರೆ ಕಡೆ ಸುತ್ತಾಡಿ ಅಲ್ಲಿನ‌ ವಿವರ ಕೊಡಲು ಶುರುಮಾಡಿದ್ದ, ರಾಜ್ಯ ಹೋಗಿ ಅಂತರಾಜ್ಯ, ನಂತರ ದೇಶ, ವಿದೇಶ ಸುತ್ತಿದ್ದ.


ತಿಂಗಳಿಗೆ ಎರಡು ಲಕ್ಷ ದುಡಿತಾರಾ ಡಾ ಬ್ರೋ!


ತನ್ನ 22 ನೇ ವಯಸ್ಸಿಗೇ ಪೂರ್ತಿ ದೇಶ ಸುತ್ತಿರುವ‌ ಖ್ಯಾತಿ ಗಗನ್​ ಅವರದ್ದು. ಆದರೆ ಇಷ್ಟೆಲ್ಲಾ ಮಾಡಲು ಗಗನ್‌ ಒಂದೇ ಒಂದು ರೂಪಾಯಿ ತನ್ನ‌ ಹೆತ್ತವರಿಂದಾಗಲಿ ಇನ್ಯಾರ ಬಳಿಯಿಂದಲೂ ಪಡೆದಿಲ್ಲ. ತಾನೇ ದುಡಿದ ಹಣದಿಂದ ಈ ಸಾಧನೆ ಮಾಡಿರುವ ಗಗನ್ ಅಲಿಯಾಸ್ ಡಾ ಬ್ರೋ ತನ್ನ ವಿಡಿಯೋಗಳಿಂದಲೇ ತಿಂಗಳಿಗೆ 900 ಡಾಲರ್​ ಅಂದರೆ ಎರಡು ಲಕ್ಷಕ್ಕೂ ಹೆಚ್ಚಿನ ಹಣ ಸಂಪಾದಿಸುತ್ತಾನೆ ಅಂತ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

Published by:ವಾಸುದೇವ್ ಎಂ
First published: