• Home
  • »
  • News
  • »
  • trend
  • »
  • Kacha Badam ಮೀರಿಸೋ ಟ್ಯಾಲೆಂಟ್ ನಮ್ಮಲ್ಲೇ ಇದೆ, ಇವ್ರ ಹಪ್ಪಳದ ಹಾಡು ಈಗ ಸಖತ್ ವೈರಲ್, ವಿಡಿಯೋ ನೋಡಿ

Kacha Badam ಮೀರಿಸೋ ಟ್ಯಾಲೆಂಟ್ ನಮ್ಮಲ್ಲೇ ಇದೆ, ಇವ್ರ ಹಪ್ಪಳದ ಹಾಡು ಈಗ ಸಖತ್ ವೈರಲ್, ವಿಡಿಯೋ ನೋಡಿ

ಅಜ್ಜನ ವಿಡಿಯೋ ವೈರಲ್​

ಅಜ್ಜನ ವಿಡಿಯೋ ವೈರಲ್​

ಕೆಲ ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಕಚ್ಚಾ ಬಾದಾಮ್​ ರೀತಿಯ ಕನ್ನಡ ಪ್ರತಿಭೆಯೊಬ್ಬರ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.  ಅಲ್ಲಿ ಅವರು ಕಡಲೆ ಕಾಯಿ ಮಾರಲು ಹಾಡು ಹಾಡಿದ್ದರೆ, ಇಲ್ಲಿ ಅಜ್ಜ ತನ್ನ ಹಪ್ಪಳ ಮಾರಲು ಹೇಗೆ ಹಾಡಿದ್ದಾರೆ ಅಂತ ಕೆಳಗಿರುವ ವಿಡಿಯೋದಲ್ಲಿ ನೋಡಿ.

  • Share this:

ಇದು ಫಾಸ್ಟ್​ ಫುಡ್ (Fast Food)​ ಯುಗ.. ಊಟ ಆರ್ಡರ್​​ ಮಾಡಿದ ಕೂಡಲೇ ಹೇಗೆ ಫಾಸ್ಟಾಗಿ ಡೆಲಿವರಿ ಆಗುತ್ತೋ ಹಾಗೇ ಇಲ್ಲಿ ಯಾರು ಬೇಕಾದರೂ ಕ್ಷಣ ಮಾತ್ರದಲ್ಲಿ ಫೇಮಸ್ ​(Famous) ಆಗಬಹುದು. ಇಂಟರ್​ನೆಟ್ (Internet)​ ಮೂಲಕ ಹಲವು ಪ್ರತಿಭೆಗಳು ಬೆಳಕಿಗೆ ಬಂದಿವೆ. ಕಳೆದ ಕೆಲದಿನಗಳಿಂದ ಯಾರ ಫೋನ್ (Phone)​ ನೋಡಿದರು ಈಗ ಒಂದು ಹಾಡಿನದ್ದೇ ಸದ್ದು. ಫೇಸ್​ಬುಕ್ ​(Facebook) ನೋಡಿದರೂ ಕಚ್ಚಾ ಬಾದಾಮ್ (Kaccha Badam)​, ವಾಟ್ಸ್​ಆ್ಯಪ್ ​(Whatsapp) ನೋಡಿದರು ಕಚ್ಚಾ ಬದಾಮ್​, ಇನ್​ಸ್ಟಾಗ್ರಾಂ(Instagram)ನಲ್ಲಂತೂ ಕೇಳಲೇ ಬೇಡಿ ಅದರಲ್ಲೇ ಈ ಹಾಡು ಇಷ್ಟು ಫೇಮಸ್​ ಆಗಿದ್ದು. ಮೊದಲ ಬಾರಿಗೆ ಕೇಳಿದಾಗ ವಿಚಿತ್ರವೆನ್ನಿಸುವ ಈ ಹಾಡು, ಬಳಿಕ ಪದೇ ಪದೇ ಕೇಳಿಸಿಕೊಳ್ಳಬೇಕು ಎನ್ನಿಸುತ್ತೆ.


ಸಿಕ್ಕಾಪಟ್ಟೆ ಫೇಮಸ್​ ಕಚ್ಚಾ ಬಾದಾಮ್​ ಸಾಂಗ್​!


ಎಲ್ಲ ಭಾಷೆಯ ಸೆಲೆಬ್ರಿಟಿಗಳು (Celebrity) ಕೂಡ ಈ ಹಾಡಿಗೆ ರೀಲ್ಸ್ (Reels) ಮಾಡಿ ಅಪ್​ಲೋಡ್​ ಮಾಡಿದ್ದಾರೆ. ರಿಂಗ್​ಟೂನ್​, ಕಾಲರ್​ ಟೂನ್ ಕೂಡ ಕಚ್ಚಾ ಬಾದಾಮ್ ಅನ್ನುತ್ತೆ. ಭುವನ್ ಬದ್ಯಕರ್ ಎಂಬುವವರು ಬೈಕ್‌ನಲ್ಲಿ ಶೇಂಗಾ (ಬಡವರ ಬಾದಾಮಿ)ಯನ್ನು ಊರು ಊರಿಗೆ ತೆರಳಿ ಅಲ್ಲಿನ ದೇವಸ್ಥಾನ, ಅಂಗಡಿಗಳಲ್ಲಿ ಮಾರುತ್ತಾರೆ. ಹೀಗೆ ಮಾರುವಾಗ ಅವರು ಒಂದು ಹಾಡು ಹಾಡಿದ್ದರು. ಅದನ್ನೇ ಯಾರೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.


ಪಶ್ಚಿಮ ಬಂಗಾಳದ ನಿವಾಸಿ ಭುವನ್​ ಬದ್ಯಕರ್​!


ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಲಕ್ಷ್ಮೀನಾರಾಯಣಪುರ ಪಂಚಾಯತ್‌ಗೆ ಒಳಪಟ್ಟ ಕುರಲ್ಜುರಿ ಗ್ರಾಮದ ನಿವಾಸಿ ಭುವನ್‌ಗೆ ಪತ್ನಿ, ಇಬ್ಬರು ಪುತ್ರರು, ಒಬ್ಬಳು ಮಗಳು ಇದ್ದಾಳೆ. ಕಚ್ಚಾ ಬಾದಾಮ್ ಹಾಡು ಫೇಮಸ್ ಆಗುತ್ತಿದ್ದಂತೆ ಇವರ ಕಡಲೆಕಾಯಿ ವ್ಯಾಪಾರ ಜೋರಾಗಿ ನಡೆಯುತ್ತಿದೆಯಂತೆ. ಇದಾದ ಬಳಿಕ ಅವರು ಸೌರವ್​ ಗಂಗೂಲಿ ನಡೆಸಿಕೊಡುತ್ತಿರುವ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಹೋಗಿದ್ದಾರೆ.


ಕಚ್ಚಾ ಬಾದಾಮ್​ ಮೀರಿಸೋ ಟ್ಯಾಲೆಂಟ್ ನಮ್ಮಲ್ಲೇ ಇದೆ!


ಹೌದು, ಕೆಲ ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಕಚ್ಚಾ ಬಾದಾಮ್​ ರೀತಿಯ ಕನ್ನಡ ಪ್ರತಿಭೆಯೊಬ್ಬರ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.  ಅಲ್ಲಿ ಅವರು ಕಡಲೆ ಕಾಯಿ ಮಾರಲು ಹಾಡು ಹಾಡಿದ್ದರೆ, ಇಲ್ಲಿ ಅಜ್ಜ ತನ್ನ ಹಪ್ಪಳ ಮಾರಲು ಹೇಗೆ ಹಾಡಿದ್ದಾರೆ ಅಂತ ಕೆಳಗಿರುವ ವಿಡಿಯೋದಲ್ಲಿ ನೋಡಿ. ಕಚ್ಚಾ ಬಾದಾಮ್​ ಹಾಡಿಗಿಂತ ಸೂಪರ್​ ಆಗಿ ಈ ಅಜ್ಜ ಹಾಡು ಹೇಳುತ್ತಾ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಮಾರುತ್ತಾರೆ. ಇದನ್ನು ಯಾರೋ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.ಇದನ್ನೂ ಓದಿ: ಮೂರೇ ದಿನದಲ್ಲಿ ನೂರು ಕೋಟಿ ಕ್ಲಬ್​ ಸೇರಿದ ಅಜಿತ್​ `ವಲಿಮೈ’! ವಿಜಯ್ ಫ್ಯಾನ್ಸ್​ ಕಣ್ಣು ಕೆಂಪಾಗಿದ್ದೇಕೆ?


ಸಿಕ್ಕಾಪಟ್ಟೆ ವೈರಲ್ ಆಯ್ತು ಹಪ್ಪಳ ಮಾರುವ ಅಜ್ಜನ ಹಾಡು!


ಹೌದು, ಈ ಅಜ್ಜನ ಹಾಡು ಈಗ ಸಖತ್​ ವೈರಲ್ ಆಗಿದೆ. ‘ಹುರುಳಿಕಾಳು ಹಪ್ಪಳ, ಅಕ್ಕಿ ಹಪ್ಪಳ, ಚಕ್ಕುಲಿ, ನಿಪ್ಪಟ್ಟು, ಕೋಡುಬಳಿ, ಉಪ್ಪಿನ ಕಾಯಿ ಬೇಕೇನಣ್ಣ.. ನಿನಗೆ ಬೇಕೆನಣ್ಣ ಪಾಡು ಪಾಡು ಪಪ್ಪಾಡು..ಎಂದು ಹಾಡುವ ಅಜ್ಜ ಯಾವ ಊರಿನವರೂ, ಹೆಸರೂ ತಿಳಿದುಬಂದಿಲ್ಲ. ಈ ಹಾಡಿನ ವಿಡಿಯೋವನ್ನು ಎಲ್ಲರೂ ಶೇರ್​ ಮಾಡುತ್ತಿದ್ದಾರೆ. ನಮ್ಮ ದೇಸಿ ಪ್ರತಿಭೆ ನೋಡಿ.. ಕಚ್ಚಾ ಬಾದಾಮ್​ಗಿಂತ ಎಷ್ಟು ಸೂಪರ್​ ಆಗಿ ಹಾಡುತ್ತಿದ್ದಾರೆ ಅಂತ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.


ಇದನ್ನೂ ಓದಿ: ಮೊಬೈಲ್​ ಓಪನ್​ ಮಾಡಿದ್ರೆ ಸಾಕು `ಕಚ್ಚಾ ಬಾದಾಮ್​’ ಕ್ವಾಟ್ಲೆ.. ಈ ಹಾಡು ಹಾಡಿದ ಪುಣ್ಯಾತ್ಮನಾದ್ರೂ ಯಾರು? ಇಲ್ಲಿದೆ ನೋಡಿ ಡೀಟೆಲ್ಸ್​!

ಬೆಂಗಾಲಿ ಬಾಬು ತರಹದ ಲಕ್ಕು ಎಲ್ಲರಿಗೂ ಹೊಡೆಯಲ್ಲ. ಹೊಡೆದ್ರೆ ಹಿಂಗೆ ಹೊಡೆಯತ್ತೆ. ಹೊಡೆಸಿಕೊಳ್ಳೋ ತಾಳ್ಮೆಇರಬೇಕಷ್ಟೇ. ಕಸುಬು ನೆಟ್ಟಗೆ ಮಾಡುವವನು ಯಾವತ್ತೂ ಹೆಸರಿನ ಹಿಂದೆ ಬೀಳಬಾರದು. ಬಾಯಿ ಚಪಲಕ್ಕೆ ಬೀಳಬಾರದು. ಹಾಡೋನಿಗೆ ಹಾದಿ ಖಂಡಿತ ಸಿಗತ್ತೆ. ಓದಿದವನಿಗೆ ಓಣಿಯೂ ಸಿಗುತ್ತೆ ಎಂಬುದಕ್ಕೆ ಇದೇ ಸಾಕ್ಷಿ.

Published by:Vasudeva M
First published: