• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Republic day: ಗಣರಾಜ್ಯೋತ್ಸವದ ಕರ್ನಾಟಕದ ಸ್ತಬ್ಧಚಿತ್ರದಲ್ಲಿ ಕಮಲಾ ದೇವಿ ಚಟ್ಟೋಪಾಧ್ಯಾಯ ಚಿತ್ರ

Republic day: ಗಣರಾಜ್ಯೋತ್ಸವದ ಕರ್ನಾಟಕದ ಸ್ತಬ್ಧಚಿತ್ರದಲ್ಲಿ ಕಮಲಾ ದೇವಿ ಚಟ್ಟೋಪಾಧ್ಯಾಯ ಚಿತ್ರ

ಕಮಲದೇವಿ ಚಟ್ಟೋಪಾಧ್ಯಯ

ಕಮಲದೇವಿ ಚಟ್ಟೋಪಾಧ್ಯಯ

Kamaladevi Chattopadhyay: ಗಾಂಧೀಜಿಯವರ ಅನುಯಾಯಿಯಾಗಿ ಅನೇಕ ಸಾಮಾಜಿಕ ಸುಧಾರಣೆಗಳನ್ನು ತರುವಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯರು ಯಶಸ್ವಿಯಾದರು..ಹಲವು ದಶಕಗಳ ಕಾಲ ಸ್ವಾತಂತ್ರ್ಯ ಸಂಗ್ರಾಮ, ಮಹಿಳಾ ಸಬಲೀಕರಣ, ಕರಕುಶಕಲ, ಕೈಮಗ್ಗ ಕಲೆಗೆ ನವಚೈತನ್ಯ ತುಂಬುವ ಕೆಲಸ ಮಾಡಿದರು

  • Share this:

ಗಣತಂತ್ರದ ಹಬ್ಬಕ್ಕೆ(Republic Day) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ(National Capital Delhi) ಸಕಲ ಸಿದ್ಧತೆಗಳು(Preparation)ಆರಂಭವಾಗಿವೆ.. ಈಗಾಗಲೇ ಗಣರಾಜ್ಯೋತ್ಸವದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳ ಅಂತಿಮ ಹಂತದ ಸಿದ್ದತೆ ನಡೆಯುತ್ತಿದೆ. ಅದರಲ್ಲೂ ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಸ್ಥಬ್ಧಚಿತ್ರಗಳ(Tableaux) ಆಯ್ಕೆಯಾಗಿದ್ದು ಯಾವ ಯಾವ ರಾಜ್ಯಗಳ (State ರಾಜಪಥದಲ್ಲಿ(Rajapatha) ತಮ್ಮ ರಾಜ್ಯಗಳ ಕಲೆಯನ್ನು ಅನಾವರಣ ಮಾಡುವ ಸ್ತಬ್ಧಚಿತ್ರಗಳನ್ನು ಮೆರವಣಿಗೆ ಮಾಡಬೇಕು ಎನ್ನುವುದು ಸಹ ಅಂತಿಮವಾಗಿದೆ. ವಿಶೇಷ ಅಂದರೆ ಸತತ 13 ನೇ ಬಾರಿಗೆ ಕರ್ನಾಟಕದ(Karnataka) ಸ್ತಬ್ಧಚಿತ್ರ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದು, ವಿಶೇಷ ವ್ಯಕ್ತಿಯೊಬ್ಬರ ಕಲಾಕೃತಿ ಸ್ತಬ್ಧಚಿತ್ರದಲ್ಲಿ ಇರಲಿದೆ


'ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು'


ಸತತ 13 ನೇ ಬಾರಿಗೆ ಗಣರಾಜ್ಯೋತ್ಸವದ ಸ್ತಬ್ಧ ಚಿತ್ರ ಮೆರವಣಿಗೆ ಆಯ್ಕೆಯಾಗಿರುವ ಕರ್ನಾಟಕ ಈ ಬಾರಿ 'ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು' ಎಂಬ ವಿಷಯಾಧಾರಿತ ಸ್ತಬ್ಧಚಿತ್ರದ ಮೆರವಣಿಗೆಯನ್ನು ಸಿದ್ಧಪಡಿಸಲಿದೆ.


ಸ್ತಬ್ಧಚಿತ್ರದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯರ ಚಿತ್ರ ಕೂಡ ಇರಲಿದೆ. ನೋಡಲು ಬಂಗಾಳಿ ಹೆಸರಿನಂತೆ ಕಾಣುವ ಕಮಲಾದೇವಿ ಚಟ್ಟೋಪಾಧ್ಯಾಯ ಯಾರು, ಅವರಿಗೂ ಕರ್ನಾಟಕಕ್ಕೂ ಏನು ಸಂಬಂಧ ಎನ್ನುವ ಮಾಹಿತಿ ಇಲ್ಲಿದೆ.


Kamaladevi Chattopadhyay part of Karnataka s tableau at Republic Day parade
ಕರ್ನಾಟಕದ ಸ್ತಬ್ಧಚಿತ್ರ


ಕಡಲ ನಗರಿ ಮಂಗಳೂರಿನ ಕಮಲಾದೇವಿ ಚಟ್ಟೋಪಾಧ್ಯಾಯ


ಈ ಬಾರಿಯ ಗಣರಾಜ್ಯೋತ್ಸವದ ರಾಜ್ಯದ ಸ್ತಬ್ಧಚಿತ್ರ ದಲ್ಲಿ ಇರುವ ಚಿತ್ರಗಳಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯರ ಚಿತ್ರವು ಕೂಡ ಒಂದು.. ದೇಶ ಕಂಡ ಸ್ವಾತಂತ್ರ ಹೋರಾಟಗಾರ್ತಿ ಸಮಾಜ ಸುಧಾರಕಿ ಕಮಲಾದೇವಿ ಚಟ್ಟೋಪಧ್ಯಾಯ ಅವರು ಮೂಲತಃ ಮಂಗಳೂರಿನವರು.


1903 ಎಪ್ರಿಲ್ 3 ರಂದು ಮಂಗಳೂರಿನಲ್ಲಿ‌ ಜನಿಸಿದ ಕಮಲಾದೇವಿ ದೇವಿ ತನ್ನ 87ವರ್ಷದ ಜೀವಿತಾವಧಿಯಲ್ಲಿ ಅಪೂರ್ವ ಸಾಧನೆ ಮೆರೆದಿದ್ದಾರೆ. ಮಂಗಳೂರಿನ ಅನಂತಯ್ಯ ಧಾರೇಶ್ವರ್ ಮತ್ತು ಗಿರಿಜಾಬಾಯಿ ದಂಪತಿಯ ಪುತ್ರಿಯಾಗಿ ಜನಿಸಿದ ಕಮಲಾದೇವಿಯ ಬಾಲ್ಯ ವರ್ಣರಂಜಿತವಾಗಿರಲಿಲ್ಲ.


ಕೇವಲ 15ನೇ ವರ್ಷದಲ್ಲಿ ಬಾಲ್ಯ ವಿವಾಹ ಎಂಬ ಶಾಪಕ್ಕೆ ಗುರಿಯಾದರು. ದುರಾದೃಷ್ಟ ಎನ್ನುವಂತೆ ಚಿಕ್ಕವಯಸ್ಸಿನಲ್ಲೇ ಕಮಲದೇವಿ ಪತಿ ಹಾಗೂ ತಂದೆ ಇಬ್ಬರನ್ನು ಕಳೆದುಕೊಂಡರು..ಹೀಗಾಗಿ ವಿಧಿ ಇಲ್ಲದೆ ಮುಂದಿನ ವಿದ್ಯಾಭ್ಯಾಸ ಕಮಲಾದೇವಿ ಚೆನ್ನೈಗೆ ತೆರಳಿದರು..


ಇದನ್ನೂ ಓದಿ: ನಿಮಗೆ ಗೊತ್ತೇ ಗಣರಾಜ್ಯೋತ್ಸವದ ಮೆರವಣಿಗೆಯಿಂದ ಒಮ್ಮೆ ತಿರಸ್ಕಾರವಾಗಿತ್ತು ಕರ್ನಾಟಕದ ಸ್ತಬ್ಧಚಿತ್ರ!


ಚೆನ್ನೈನಲ್ಲಿ ಹರೀಂದ್ರನಾಥ ಚಟ್ಟೋಪಾಧ್ಯಾಯರ ಪರಿಚಯ


ಬಾಲ್ಯವಿವಾಹದ ಸಂಕಷ್ಟಕ್ಕೆ ಸಿಲುಕಿ ಬಾಲ್ಯದಲ್ಲಿ ದುರಂತ ಜೀವನವನ್ನು ಅನುಭವಿಸಿದ್ದ ಕಮಲಾದೇವಿ ಅವರು ವಿದ್ಯಾಭ್ಯಾಸಕ್ಕೆಂದು ಚೆನ್ನೈಗೆ ತೆರಳಿದ್ದ ವೇಳೆ, ಅವರಿಗೆ ಅಲ್ಲಿ ಶ್ರೇಷ್ಠ ಕವಿ ನಾಟಕಕಾರ ಹರೀಂದ್ರನಾಥ ಚಟ್ಟೋಪಾಧ್ಯಾಯರು ಪರಿಚಯವಾಯಿತು.


ಈ ಪರಿಚಯ ಮುಂದೆ ಪ್ರೇಮಕ್ಕೆ ತಿರುಗಿ ಇವರಿಬ್ಬರೂ ಸತಿಪತಿಗಳಾದರು. ಗಂಡನೊಂದಿಗೆ ಲಂಡನ್‌ಗೆ ತೆರಳಿದ ಕಮಲಾದೇವಿ ಲಂಡನ್‌ನ ಬೆಡ್ ಫೋರ್ಡ್ ಕಾಲೇಜು ಸೇರಿಕೊಂಡು ಸಮಾಜಶಾಸ್ತ್ರದ ಅಧ್ಯಯನ ಮಾಡಿದರು.


ಲಂಡನ್ನಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ಸ್ವಾತಂತ್ರ್ಯ ಹೋರಾಟದ ಕಿಚ್ಚು


ಪತಿಯ ಜೊತೆಯಲ್ಲಿ ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ, ಮಹಾತ್ಮ ಗಾಂಧೀಜಿಯವರ ಅಸಹಕಾರ ಚಳುವಳಿಯ ಬಗ್ಗೆ ವಿಷಯ ತಿಳಿದುಕೊಂಡ ಕಮಲದೇವಿ ಚಟ್ಟೋಪಾಧ್ಯಯ ಅವರು ಗಂಡನ ಬಿಟ್ಟು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು.


ಗಾಂಧೀಜಿಯವರ ಅನುಯಾಯಿಯಾಗಿ ಅನೇಕ ಸಾಮಾಜಿಕ ಸುಧಾರಣೆಗಳನ್ನು ತರುವಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯರು ಯಶಸ್ವಿಯಾದರು..ಹಲವು ದಶಕಗಳ ಕಾಲ ಸ್ವಾತಂತ್ರ್ಯ ಸಂಗ್ರಾಮ, ಮಹಿಳಾ ಸಬಲೀಕರಣ, ಕರಕುಶಕಲ, ಕೈಮಗ್ಗ ಕಲೆಗೆ ನವಚೈತನ್ಯ ತುಂಬುವ ಕೆಲಸ ಮಾಡಿದರು.


ನಿರಾಶ್ರಿತರ ಪುನರ್ವಸತಿ ಗೆ ಶ್ರಮಿಸಿದ ಕಮಲಾದೇವಿ


ಸ್ವಾತಂತ್ರ್ಯದ ಜೊತೆಯಲ್ಲಿಯೇ ದೇಶವಿಭಜನೆಯಾಗಿ ಲಕ್ಷಾಂತರ ನಿರಾಶ್ರಿತರು ಭಾರತಕ್ಕೆ ಬರತೊಡಗಿದಾಗ, ಕಮಲಾದೇವಿ 'ಭಾರತೀಯ ಸಹಕಾರಿ ಒಕ್ಕೂಟ'ವನ್ನು ಸ್ಥಾಪಿಸಿ, ನಿರಾಶ್ರಿತರ ಪುನರ್ವಸತಿಗೆ ಪ್ರಯತ್ನಿಸಿದರು. ಕಮಲಾದೇವಿಯವರ ಪ್ರಯತ್ನದ ಫಲವಾಗಿ ದೆಹಲಿಯಲ್ಲಿ ಫರಿದಾಬಾದ್‌ ಎಂಬ ಗ್ರಾಮವನ್ನು ಸ್ಥಾಪಿಸಿ ಸುಮಾರು ಮೂವತ್ತು ಸಾವಿರ ಪಠಾಣರಿಗೆ ನೆಲೆಯಾದರು.


ಇದನ್ನೂ ಓದಿ: Dehliಯ ರಾಜ್‍ಪಥ್‍ನಲ್ಲಿ ಈ ಬಾರಿ ಕರ್ನಾಟಕದ ಕರಕುಶಲ ವಸ್ತುಗಳ ತೊಟ್ಟಿಲು ಸ್ತಬ್ದಚಿತ್ರ ಪ್ರದರ್ಶನ


ಕಮಲಾದೇವಿ ಅವರಿಗೆ ಸಂದಿದೆ ವಿವಿಧ ಪ್ರಶಸ್ತಿಗಳ ಗೌರವ


ಕಮಲಾದೇವಿ ಅವರು ಮಾಡಿದ ಅಭೂತಪೂರ್ವ ಕೆಲಸಗಳನ್ನು ಮೆಚ್ಚಿ ಸರ್ಕಾರ ಅವರಿಗೆ ಪದ್ಮಭೂಷಣ, ಪದ್ಮ ವಿಭೂಷಣ ನೀಡಿ ಗೌರವಿಸಿದೆ. ಇದಲ್ಲದೆ ರಾಮನ್‌ ಮ್ಯಾಗ್ಸಸ್ಸೇ, ಸಂಗೀತ ನಾಟಕ ಅಕಾಡೆಮಿ, ಮೊದಲಾದ ಪ್ರಶಸ್ತಿಗಳು ಅರಸಿಬಂದವು.


ಇವರಿಂದಾಗಿಯೇ ರಾಷ್ಟ್ರೀಯ ನಾಟಕ ಶಾಲೆ, ಸಂಗೀತ ನಾಟಕ ಅಕಾಡೆಮಿ, ಸೆಂಟ್ರಲ್‌ ಕಾಟೇಜ್‌ ಇಂಡಸ್ಟ್ರೀಸ್‌ ಎಂಪೋರಿಯಂ, ಕ್ರಾಫ್ಟಸ್‌ ಕೌನ್ಸಿಲ್‌ ಆಫ್‌ ಇಂಡಿಯಾ ಸ್ಥಾಪನೆಯಾದವು.

First published: