Kacha Badam: ರಾತ್ರೋ ರಾತ್ರಿ ಸ್ಟಾರ್​ ಆಗಿದ್ದ ‘ಕಚ್ಚಾ ಬಾದಾಮ್’ ಭುಬನ್​ ಜೀವನ ನರಕ!

ಕಚ್ಚಾ ಬದಮ್​

ಕಚ್ಚಾ ಬದಮ್​

ಜನಪ್ರಿಯತೆಯ ಅಲೆಯಲ್ಲಿ ತೇಲಾಡಿದ ಭುಬನ್ ಈಗ ತಮ್ಮ ಜೀವನೋಪಾಯಕ್ಕಾಗಿ ಹೆಣಗಾಡುತ್ತಿದ್ದಾರಂತೆ ಅಂತ ಹೇಳಲಾಗುತ್ತಿದೆ ನೋಡಿ.

  • Share this:

ಈ ಹಿಂದೆ ‘ಕಚ್ಚಾ ಬಾದಾಂ’ ಎಂಬ ಒಂದು ಹಾಡು ಸಾಮಾಜಿಕ ಮಾಧ್ಯಮದಲ್ಲಿ (Social Media) ರಾತ್ರೋರಾತ್ರಿ ತುಂಬಾನೇ ಜನಪ್ರಿಯತೆ ಗಳಿಸಿತ್ತು. ಇದನ್ನು ಹಾಡಿದ ಭುಬನ್ ಬಡ್ಯಾಕರ್ ಸಹ ತುಂಬಾನೇ ಫೇಮಸ್ ಆಗಿದ್ದು ನಮಗೆಲ್ಲಾ ಗೊತ್ತೇ ಇದೆ. ಸಾಮಾಜಿಕ ಮಾಧ್ಯಮಗಳನ್ನು ಒಮ್ಮೆ ತೆರೆದರೆ ಸಾಕು ಈ ಹಾಡಿನ ಅನೇಕ ರೀತಿಯ ರೀಲ್ಸ್ ಗಳು ನೋಡೋದಕ್ಕೆ ಸಿಗುತ್ತಿದ್ದವು, ಅಷ್ಟರ ಮಟ್ಟಿಗೆ ಆ ಹಾಡು ಜನಪ್ರಿಯವಾಗಿತ್ತು ಅಂತ ಹೇಳಬಹುದು. ಸಖತ್ ವೈರಲ್ ಆದ ಈ ಕಚ್ಚಾ ಬಾದಾಂ ಹಾಡನ್ನು ಹಾಡಿದ್ದು ಒಬ್ಬ ಕಡಲೆಕಾಯಿ ಮಾರಾಟ ಮಾಡುವ ವ್ಯಕ್ತಿ ಭುಬನ್ ಬಡ್ಯಾಕರ್. ಈ ಹಾಡಿನ ಖ್ಯಾತಿ ನಂತರ ಬಡ್ಯಾಕರ್ ಸಹ ಒಬ್ಬ ಸೆಲೆಬ್ರಿಟಿ ಆಗಿದ್ದರು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಹೀಗೆ ಜನಪ್ರಿಯತೆಯ ಅಲೆಯಲ್ಲಿ ತೇಲಾಡಿದ ಭುಬನ್ ಈಗ ತಮ್ಮ ಜೀವನೋಪಾಯಕ್ಕಾಗಿ ಹೆಣಗಾಡುತ್ತಿದ್ದಾರಂತೆ ಅಂತ ಹೇಳಲಾಗುತ್ತಿದೆ ನೋಡಿ.


ಜೀವನ ಸಾಗಿಸಲು ಹೆಣಗಾಡುತ್ತಿರುವ ಭುಬನ್ ಬಡ್ಯಾಕರ್


ಭುಬನ್ ಬಡ್ಯಾಕರ್ ತಮ್ಮ ಕಚ್ಚಾ ಬಾದಾಂ ಹಾಡಿನಿಂದ ರಾತ್ರೋರಾತ್ರಿ ವೈರಲ್ ಸೆನ್ಸೇಷನ್ ಆದವರು. ಇವರು ಬಿರ್ಭುಮ್ ನ ದುಬ್ರಾಜ್ಪುರ ನಗರದ ಲಕ್ಷ್ಮಿನಾರಾಯಣಪುರ ಗ್ರಾಮದ ನಿವಾಸಿ. ಭುಬನ್ ಈಗ ಜೀವನೋಪಾಯಕ್ಕಾಗಿ ಹೆಣಗಾಡುತ್ತಿದ್ದಾರಂತೆ ನೋಡಿ.


ವರದಿಗಳ ಪ್ರಕಾರ, ಭುಬನ್ ತನ್ನ ಹಳ್ಳಿಯನ್ನು ತೊರೆದಿದ್ದಾರೆ ಮತ್ತು ತಿಂಗಳುಗಳಿಂದ ಮನೆಯಿಂದ ದೂರವಾಗಿದ್ದಾರೆ. ಆನಂದ ಬಜಾರ್ ಡಿಜಿಟಲ್ ನ ವರದಿಯ ಪ್ರಕಾರ, ಅವರ ಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಲಾದ ಮನೆ ಕೂಡ ಖಾಲಿಯಾಗಿದ್ದು ಅದಕ್ಕೆ ಬೀಗ ಜಡಿಯಲಾಗಿದೆ. ಸದ್ಯಕ್ಕೆ ಭುಬನ್ ದುಬ್ರಾಜ್ಪುರ ನಗರದಲ್ಲಿ ವಾಸಿಸುತ್ತಿದ್ದಾರೆ.


ಬಂದ ಹಣದಲ್ಲಿ ತನಗಾಗಿ ಮನೆಯನ್ನು ಕಟ್ಟಿಸಿಕೊಂಡಿದ್ದಾರಂತೆ..


ಅವರು ತಮ್ಮ ವಿಳಾಸವನ್ನು ಏಕೆ ಬದಲಾಯಿಸಿದ್ದಾರೆ ಎಂದು ಕೇಳಿದಾಗ, ಕಚ್ಚಾ ಬಾದಾಂ ಹಾಡು ವೈರಲ್ ಆದ ಕಾರಣ ಅವರು ರಾತ್ರೋರಾತ್ರಿ ಶ್ರೀಮಂತರಾದರು ಎಂದು ಜನರು ಭಾವಿಸಿದರೂ, ಅವರು ಆರ್ಥಿಕವಾಗಿ ಅಷ್ಟೊಂದು ಸ್ಥಿರವಾಗಿರಲಿಲ್ಲ ಎಂದು ಭುಬನ್ ಪತ್ರಿಕೆಗೆ ತಿಳಿಸಿದರು.


ಅವರು ಸಂಪಾದಿಸಿದ ಹಣದಿಂದ ಒಂದು ಮನೆಯನ್ನು ಕಟ್ಟಿಸಿದ್ದಾರೆ. ಹಾಗಾಗಿ ಈಗ ಅವರ ಬಳಿ ಹೆಚ್ಚಿನ ಹಣ ಉಳಿದಿಲ್ಲ ಎಂದು ಅವರು ಹೇಳಿದರು.


ಇದನ್ನೂ ಓದಿ: ಒಂದೇ ಮರದಲ್ಲಿ 300 ಬಗೆಯ ಮಾವಿನ ಹಣ್ಣುಗಳು, ಈ ಮರ ಭಾರತದಲ್ಲಿಯೇ ಇದ್ಯಂತೆ!


ಕೆಲವು ಜನರ ಬೇಡಿಕೆಗಳ ಪ್ರಕಾರ ಪಾವತಿಸಲು ಸಾಧ್ಯವಾಗದ ಕಾರಣ, ಅವರು ತಮ್ಮ ಐಫೋನ್ ಅನ್ನು ಸಹ ತೆಗೆದುಕೊಂಡು ಹೋದರು ಎಂದು ಭುಬನ್ ಹೇಳಿದರು.


"ಅವರು ನನ್ನ ಫೋನ್ ಅನ್ನು ತೆಗೆದುಕೊಂಡರು ಮತ್ತು ಆದ್ದರಿಂದ ನಾನು ಆ ಮನೆಯಿಂದ ಓಡಿ ಬಂದೆ. ಅವರು ನನ್ನಿಂದ ಹಣವನ್ನು ಬಯಸಿದ್ದರು, ಅದನ್ನು ನಾನು ನೀಡಲು ಸಾಧ್ಯವಾಗಲಿಲ್ಲ. ನಾನು ಮಲಗಿದ್ದಾಗ ಅವರು ನನ್ನ ಐಫೋನ್ ತೆಗೆದುಕೊಂಡರು" ಎಂದು ಅವರು ಬಂಗಾಳಿ ಭಾಷೆಯಲ್ಲಿ ಹೇಳಿದರು.


ಭುಬನ್ ಪ್ರಸ್ತುತ ತನ್ನ ಮಗನೊಂದಿಗೆ ದುಬ್ರಾಜ್ಪುರದಲ್ಲಿ ವಾಸಿಸುತ್ತಿದ್ದು, ಅಲ್ಲಿ ಜೀವನಕ್ಕಾಗಿ ಕೆಲವು ಸಣ್ಣ-ಪುಟ್ಟ ಕೆಲಸಗಳನ್ನು ಮಾಡುತ್ತಾ ಜೀವನವನ್ನು ಸಾಗಿಸುತ್ತಿದ್ದಾರೆ ಅಂತ ಹೇಳಲಾಗುತ್ತಿದೆ.


ಭುಬನ್ ಅವರಿಗೆ ಮೋಸ ಮಾಡಿದ್ರಂತೆ ಕೆಲವರು


ಆಜ್ ತಕ್ ಬಾಂಗ್ಲಾ ಜೊತೆಗಿನ ಸಂವಾದದಲ್ಲಿ, ಭುಬನ್ ಅವರು ಕಂಪನಿಯಿಂದ ಮೋಸ ಹೋಗಿದ್ದಾರೆ ಮತ್ತು ಅವರು ತಮ್ಮ ಹಾಡನ್ನು ಹಾಡಲು ಅಥವಾ ಅದನ್ನು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.


ಪ್ರಸ್ತುತ, ಬಡ್ಯಾಕರ್ ಸಣ್ಣ ಕೆಲಸಗಳನ್ನು ಮಾಡುವ ಮೂಲಕ ತಿಂಗಳಿಗೆ ಕೆಲವು ಸಾವಿರ ರೂಪಾಯಿಗಳನ್ನು ಸಂಪಾದಿಸುವ ಮೂಲಕ ಜೀವನ ಸಾಗಿಸುತ್ತಿದ್ದಾರೆ.
ಬಿರ್ಭುಮ್ ಮೂಲದ ಕಂಪನಿ ಮತ್ತು ಅದರ ಮಾಲೀಕರು ಇಂಡಿಯನ್ ಪರ್ಫಾರ್ಮಿಂಗ್ ರೈಟ್ ಸೊಸೈಟಿ ಲಿಮಿಟೆಡ್ ಹೆಸರಿನಲ್ಲಿ ತನ್ನ ಹಾಡನ್ನು ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಕ್ಕಾಗಿ 3 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದಾರೆ ಎಂದು ವರದಿಯಾಗಿದೆ.
ಆದರೆ ಆ ಹಾಡಿಗೆ ತನ್ನ ಕೃತಿಸ್ವಾಮ್ಯವನ್ನು ಮಾರಾಟ ಮಾಡುವ ಕಾಗದಕ್ಕೆ ಸಹಿ ಹಾಕಿದ್ದೇನೆ ಎಂದು ಬಡ್ಯಾಕರ್ ಗೆ ತಿಳಿದಿರಲಿಲ್ಲವಂತೆ ಎಂದು ಹೇಳಿಕೊಂಡಿದ್ದಾರೆ.

First published: