• Home
  • »
  • News
  • »
  • trend
  • »
  • Kaali Puja Graphic: ಬಣ್ಣಕ್ಕಿಂತ ಪರಿಶುದ್ಧ ಮನಸ್ಸು ಸುಂದರ ಎಂಬ ಸಂದೇಶ ಸಾರಿದ ಕಾಳಿಯ ಗ್ರಾಫಿಕ್ಸ್

Kaali Puja Graphic: ಬಣ್ಣಕ್ಕಿಂತ ಪರಿಶುದ್ಧ ಮನಸ್ಸು ಸುಂದರ ಎಂಬ ಸಂದೇಶ ಸಾರಿದ ಕಾಳಿಯ ಗ್ರಾಫಿಕ್ಸ್

ವೈರಲ್ ಫೋಟೋ

ವೈರಲ್ ಫೋಟೋ

Kaali Puja Graphic: ಫೇರ್‌ನೆಸ್ ಕ್ರೀಮ್‌ಗಳ ಮಾರುಕಟ್ಟೆಗಳಿಗೆ  ಪಾಠವೊಂದನ್ನು ಕಲಿಸಲೆಂದೇ ಅಲ್ಟಿಮ್ಯಾಡ್ ಮೀಡಿಯಾ ಗ್ರಾಫಿಕ್ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದು ಸಮಾಜಕ್ಕೆ ಅತ್ಯುತ್ತಮ ಸಂದೇಶವೊಂದನ್ನು ಸಾರಿದೆ.

  • Share this:

ಬಿಳಿ ಹಾಗೂ ಕಪ್ಪು (Black And White)  ವರ್ಣದ ನಡುವಿನ ಬೇದ ಭಾವ ಇಂದು ನಿನ್ನೆಯದಲ್ಲ. ಹಿಂದಿನಿಂದಲೂ ಬಿಳಿ ಬಣ್ಣ ಎಂಬುದು ಶ್ರೇಷ್ಟ ಹಾಗೂ ಕಪ್ಪು ಬಣ್ಣವನ್ನು ತಿರಸ್ಕಾರದ (Neglect) ನೋಟದಿಂದಲೇ ನೋಡುತ್ತಿದೆ. ಬಟ್ಟೆಗಳ ಬಣ್ಣದಿಂದ ಹಿಡಿದು ಮೈಯ ಬಣ್ಣದವರೆಗೆ ಕಪ್ಪು ಎಂಬುದು ಅನಿಷ್ಟ, ಅವಲಕ್ಷಣ ಹಾಗೂ ಶಾಪ ಎಂದೇ ಪರಿಗಣಿತವಾಗಿದೆ. ಇದಕ್ಕೆ ಹೊಂದಿಕೊಂಡಂತೆ ಅದೆಷ್ಟೋ ಸೌಂದರ್ಯ ಉತ್ಪನ್ನ(Beauty Products)  ಕಂಪನಿಗಳು ಇದನ್ನೇ ಬಂಡವಾಳವನ್ನಾಗಿಸಿ ಕಪ್ಪು ತ್ವಚೆಯನ್ನು ಬಿಳಿ ಬಣ್ಣಕ್ಕೆ ಮಾರ್ಪಡಿಸುವ ಜಾಹೀರಾತುಗಳನ್ನು ಪ್ರದರ್ಶಿಸುವ ಮೂಲಕ ಕಪ್ಪು ವರ್ಣದವರನ್ನು ಮೂಲೆಗೊತ್ತುವಂತೆ ಮಾಡಿದೆ.


ಸಮಾಜಕ್ಕೆ ಖಡಕ್ ಸಂದೇಶ


ಇದೀಗ ಇಂತಹ ಫೇರ್‌ನೆಸ್ ಕ್ರೀಮ್‌ಗಳ ಮಾರುಕಟ್ಟೆಗಳಿಗೆ  ಪಾಠವೊಂದನ್ನು ಕಲಿಸಲೆಂದೇ ಅಲ್ಟಿಮ್ಯಾಡ್ ಮೀಡಿಯಾ ಗ್ರಾಫಿಕ್ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದು ಸಮಾಜಕ್ಕೆ ಅತ್ಯುತ್ತಮ ಸಂದೇಶವೊಂದನ್ನು ಸಾರಿದೆ.


ಅಕ್ಟೋಬರ್ 24 ರಂದು ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಒರಿಸ್ಸಾದಂತಹ ಪೂರ್ವ ಭಾರತದ ಅನೇಕ ಭಾಗಗಳಲ್ಲಿ ಕಾಳಿ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೀಪಾವಳಿಯೊಂದಿಗೆ ಆಚರಿಸಲಾಗುವ ಕಾಳಿ ಪೂಜೆಯು ಈ ಭಾಗಗಳಲ್ಲಿ ಪ್ರಾಮುಖ್ಯತೆಯನ್ನು ಹೊಂದಿದ್ದು ಅತ್ಯಂತ ಪೂಜಿನೀಯ ಎಂದೆನಿಸಿದೆ.


ಗ್ರಾಫಿಕ್ ಚಿತ್ರದಲ್ಲಿರುವ ಸಂದೇಶವೇನು?


ಕಾಳಿಪೂಜೆಯ ಸಮಯದಲ್ಲಿ ಪರಸ್ಪರ ಶುಭಾಶಯಗಳ ವಿನಿಮಯ ಸರ್ವೇ ಸಾಮಾನ್ಯವಾದುದು. ಆದರೆ ಅಲ್ಟಿಮೀಡಿಯಾ ಸಂಸ್ಥೆಯು ದುರ್ಗಾಪೂಜೆಯ ಶುಭಾಶಯವನ್ನು ವಿನಿಮಯ ಮಾಡಲು ಸುಂದರವಾದ ಗ್ರಾಫಿಕ್ ಚಿತ್ರವೊಂದನ್ನು ಬಳಸಿಕೊಂಡಿದ್ದು ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರಿದೆ. ಸಂಸ್ಥೆಯು ನಿರ್ಮಿಸಿರುವ ಗ್ರಾಫಿಕ್‌ನಲ್ಲಿ ಕಾಳಿ ದೇವಿಯು ಫೇರ್‌ನೆಸ್ ಕ್ರೀಮ್ ಅನ್ನು ತನ್ನ ಕಾಲುಗಳಿಂದ ತುಳಿಯುತ್ತಿರುವುದನ್ನು ಕಾಣಬಹುದಾಗಿದೆ.


ಹಿಂದೂ ಶಾಸ್ತ್ರಗಳಲ್ಲಿ ಕಾಳಿಮಾತೆಯನ್ನು ಕಪ್ಪು ವರ್ಣದಲ್ಲಿ ತೋರಿಸಲಾಗಿದೆ. ಅಂತೆಯೇ ಕಪ್ಪನೆಯ ಬಣ್ಣದ ಕಾಲುಗಳನ್ನು ಹೊಂದಿರುವ ದೇವಿಯು ತನ್ನ ಕಾಲಿನಿಂದ ಫೇರ್‌ನೆಸ್ ಕ್ರೀಮ್ ಅನ್ನು ತುಳಿಯುತ್ತಿದ್ದು ಬೋಯೆಯ್ ಗೆಚ್ಚೆ ಎಂದು ಬಾಂಗ್ಲಾ ಭಾಷೆಯಲ್ಲಿ ಉಲ್ಲೇಖಿಸಲಾಗಿದೆ. ನನಗೆ ಯಾವುದರ ಬಗ್ಗೆಯೂ ಚಿಂತೆಯಿಲ್ಲ ಎಂಬ ಅರ್ಥವನ್ನು ಈ ಸಂದೇಶ ನೀಡಿದೆ. ಕಪ್ಪು ತ್ವಚೆಯುಳ್ಳವರನ್ನು ಸಮಾಜವು ತಿರಸ್ಕೃತ ರೂಪದಲ್ಲಿ ಕಾಣುತ್ತಿದ್ದು ಬಿಳಿ ಬಣ್ಣವು ಶ್ರೇಷ್ಟ ಎಂಬುದಾಗಿ ಸೌಂದರ್ಯದ ಮಾನದಂಡವನ್ನು ತಿರಸ್ಕರಿಸುವುದನ್ನು ಈ ಗ್ರಾಫಿಕ್ ಪ್ರದರ್ಶಿಸಿದೆ.


ಇದನ್ನೂ ಓದಿ: ಇದು ಅಂತಿಂತ ಕಣ್ಣಲ್ಲ ಬ್ಯಾಟರಿ ಕಣ್ಣು, ಕ್ಯಾನ್ಸರ್‌ನಿಂದ ದೃಷ್ಟಿ ಕಳೆದುಕೊಂಡ ವ್ಯಕ್ತಿಯ ಆವಿಷ್ಕಾರ ನೋಡಿ


ಬಳಕೆದಾರರಿಂದ ಉತ್ತಮ ಅಭಿಪ್ರಾಯ


ಅಲ್ಟಿಮೀಡಿಯಾದ ಫೇಸ್‌ಬುಕ್ ಪುಟದಲ್ಲಿ ಕಾಳಿ ಪೂಜೆ ಶುಭಾಶಯವು ಸಾವಿರಾರು ಲೈಕ್‌ಗಳನ್ನು ಪಡೆದುಕೊಂಡಿದೆ. ಅಂತೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆದಾರರು ಇದನ್ನು ಹಲವಾರು ಬಾರಿ ಹಂಚಿಕೊಂಡಿದ್ದಾರೆ.


ಟ್ವಿಟರ್‌ನಲ್ಲಿ ಈ ಗ್ರಾಫಿಕ್ ಅನ್ನು ಹಂಚಿಕೊಳ್ಳುವಾಗ, ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಅನಿಸಿಕೆಯನ್ನು ಬರೆದುಕೊಂಡಿದ್ದು ನಾನು ಇಂದು ನೋಡಿದ ಅತ್ಯಂತ ಶಕ್ತಿಶಾಲಿ ಚಿತ್ರಗಳಲ್ಲಿ ಇದು ಒಂದಾಗಿದೆ. ಕಾಳಿ ಮಾತೆಯು ತನ್ನ ಕಾಲುಗಳಿಂದ ಫೇರ್‌ನೆಸ್ ಕ್ರೀಮ್ ಅನ್ನು ಹುಡಿಮಾಡುತ್ತಿದ್ದು ಆಕೆ ಇಂತಹ ವಿಷಯಗಳ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳುತ್ತಿರುವುದು ಕಾಣಬಹುದು, ಇಂತಹ ಸಂದೇಶಗಳನ್ನು ಹಂಚಿಕೊಳ್ಳಿ ಹಾಗೂ ಅಂತಹವುಗಳಲ್ಲಿ ನಂಬಿಕೆಯನ್ನಿರಿಸಿ. ಗೌರವರ್ಣ ಎಂಬುದು ಮಾತ್ರ ಸುಂದರವಲ್ಲ. ಕಳಂಕವಿಲ್ಲದ ಮನಸ್ಸು ಸುಂದರವಾದುದು ಎಂದು ಬರೆದುಕೊಂಡಿದ್ದಾರೆ.


ಮತ್ತೊಬ್ಬ ಟ್ವಿಟರ್ ಬಳಕೆದಾರರು ಕೂಡ ಗ್ರಾಫಿಕ್‌ ಕುರಿತು ಅನಿಸಿಕೆಯನ್ನು ಹಂಚಿಕೊಂಡಿದ್ದು, ಈ ಚಿತ್ರವನ್ನು ವಿವರಿಸಿದ್ದಕ್ಕಾಗಿ ಧನ್ಯವಾದಗಳು. ಬಿಳಿ/ಕಪ್ಪು ವರ್ಣ ಎಂಬುದು ಹದಿಹರೆಯದವರನ್ನು ಹೆಚ್ಚು ಕಂಗೆಡಿಸಿದ್ದು ಹೆಚ್ಚಿನವರಲ್ಲಿ ಈ ಭಾವನೆ ಜೀವನಪೂರ್ತಿ ಇರುವಂತೆ ಮಾಡುತ್ತದೆ. ಹೆಚ್ಚಿನವರಿಗೆ ತಮ್ಮಲ್ಲಿರುವ ಸೌಂದರ್ಯ ಹಾಗೂ ಬಣ್ಣದೊಂದಿಗೆ ಸಂತೋಷವಾಗಿರುವುದು ಅತ್ಯಂತ ಸವಾಲಿನ ಸಂಗತಿ ಎಂದೆನಿಸಿದೆ. ಈ ಚಿತ್ರವೂ ಅತ್ಯಂತ ಬಲವಾದ ಸಂದೇಶವನ್ನು ಸಾರಿದೆ. ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಸಂದೇಶ ಅದ್ಭುತವಾಗಿದೆ ಹಾಗೂ ಸಮಾಜಕ್ಕೆ ಇಂತಹ ಸಂದೇಶಗಳ ಅಗತ್ಯವಿದೆ ಎಂದು ಇನ್ನೊಬ್ಬರು ಬಳಕೆದಾರರು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: ಈ ವಿಮಾನ ಹತ್ತಲು ಚೆಕ್-ಇನ್​ ಮಾಡ್ಬೇಕು, ಆದ್ರೆ ಟೇಕ್​ ಆಫ್ ಮಾತ್ರ ಆಗಲ್ಲ


ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆ


ವಿಶ್ವ ಆರೋಗ್ಯ ಸಂಸ್ಥೆಯ 2019 ರ ಸಂಶೋಧನೆಯ ಪ್ರಕಾರ, ಭಾರತದಲ್ಲಿ ಚರ್ಮವನ್ನು ಶ್ವೇತವರ್ಣಕ್ಕೆ ಮಾರ್ಪಡಿಸುವ ಉದ್ಯಮವು (ಪಾದರಸವನ್ನು ಒಳಗೊಂಡಿರುವ ಹಾಗೂ ಒಳಗೊಂಡಿರದೇ ಇರುವ ಉತ್ಪನ್ನ) ಚರ್ಮಕಾಳಜಿ ಮಾರುಕಟ್ಟೆಯ 50% ದಷ್ಟನ್ನು ಪ್ರತಿನಿಧಿಸುತ್ತದೆ. ಅದಾಗ್ಯೂ, ಅಭಯ್ ಡಿಯೋಲ್ ಹಾಗೂ ಸಾಯಿ ಪಲ್ಲವಿಯಂತಹ ಬಾಲಿವುಡ್ ಸ್ಟಾರ್ ನಟ ನಟಿಯರು ಗೌರವರ್ಣವನ್ನು ಅನುಮೋದಿಸುವ ಜಾಹೀರಾತುಗಳಲ್ಲಿ ಅಭಿನಯಿಸುವುದನ್ನು ಬಹಿರಂಗವಾಗಿ ನಿರಾಕರಿಸುವ ಮೂಲಕ, ಫೇರ್‌ನೆಸ್ ಉತ್ಪನ್ನಗಳ ವಿರುದ್ಧ ಟೀಕೆಗಳು ಹೆಚ್ಚುತ್ತಿವೆ.

Published by:Sandhya M
First published: