Viral News: ಖೈದಿಗಳ ಆಹಾರ ಸೇವಿಸಿದ ನ್ಯಾ.ಬಿ.ವೀರಪ್ಪ! ಜೈಲಿನಲ್ಲೊಂದು ರೌಂಡ್

ನ್ಯಾ.ಬಿ. ವೀರಪ್ಪ ಜೈಲಿನ ಆಹಾರ ಸೇವಿಸುತ್ತಿರುವುದು

ನ್ಯಾ.ಬಿ. ವೀರಪ್ಪ ಜೈಲಿನ ಆಹಾರ ಸೇವಿಸುತ್ತಿರುವುದು

ಜೈಲಿನ ಊಟದ‌ಕೋಣೆಗೆ ಹೋದ ನ್ಯಾಯಮೂರ್ತಿಗಳು ಅಲ್ಲಿ ಕೈದಿಗಳೇ ತಯಾರಿಸಿದ್ದ ಅನ್ನ-ಸಾರು, ಚಪಾತಿ ಸವಿದರು. ಸಂಜೆಯ ಊಟಕ್ಕಾಗಿ ತಂದಿಟ್ಟದ್ದ ಮಟನ್ ಸಹ ಪರಿಶೀಲಿಸಿದರು. ಜೈಲಿನಲ್ಲಿ ತಯಾರಿಸಲಾಗಿದ್ದ ಊಟ ಹಾಗೂ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕೆಲವೊಂದು ಸಲಹೆಗಳನ್ನು ನೀಡಿದರು.

ಮುಂದೆ ಓದಿ ...
  • Share this:

ಧಾರವಾಡ(ಮೇ.21): ಕಾರಾಗೃಹ ವಾಸ ಅಂದ್ರೆ ಅದೊಂದು ಜೀವನದ ಕರಾಳ ಅಧ್ಯಾಯ ಅಂತಾನೇ ಹೇಳಬಹುದು. ಸಜೆಯೇ ಆಗಿರಲಿ, ವಿಚಾರಾಧೀನ ಕೈದಿಯೇ ಇರಲಿ, ಕಾರಾಗೃಹಕ್ಕೆ (Prison) ಬಂದು ಬಿಟ್ರೆ, ಅಲ್ಲಿ ದೂರು ದುಮ್ಮಾನ, ಕಷ್ಟ ಸುಖ ಕೇಳೋರೆ ಇಲ್ಲ ಅಂತಾ ಭಾವಿಸಲಾಗುತ್ತೆ. ಆದ್ರೆ ಕಾರಾಗೃಹ ವಾಸಿಗಳ ದುರು ದುಮ್ಮಾನ ಕೇಳೋಕು ನಾವಿದ್ದೇವೆ ಅನ್ನೋದನ್ನು ಧಾರವಾಡದ (Dharawad) ಕೇಂದ್ರ ಕಾರಾಗೃಹಕ್ಕೆ ಹೈಕೋರ್ಟ್ ನ್ಯಾಯಮೂರ್ತಿಗಳೇ (High Court Judge) ಭೇಟಿ‌ನೀಡಿದ್ದಾರೆ. ಧಾರವಾಡ ಕೇಂದ್ರ ಕಾರಾಗೃಹಕ್ಕೆ ಕರ್ನಾಟಕ ಹೈಕೋರ್ಟ್ (Karnataka High court) ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರೋ ಬಿ. ವೀರಪ್ಪ ಅವರು ದೀಢೀರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಜೈಲಿನ ಒಂದು ರೌಂಡ್ ಹಾಕಿದರು.


ಮೊದಲು ಕೈದಿಗಳ ಊಟಕ್ಕೆ ಆಹಾರ ಸಾಮಗ್ರಿ ಸಂಗ್ರಹಿಸಿಟ್ಟಿದ್ದ ಗೋದಾಮಿಗೆ ಭೇಟಿ ನೀಡಿದ ಅವರು, ಆಹಾರ ಸಾಮಗ್ರಿಗಳನ್ನು ಪರೀಶೀಲಿಸಿದರು. ಬಳಿಕ ಗ್ರಂಥಾಲಯಕ್ಕೆ ಭೇಟಿ‌ನೀಡಿ ಪುಸ್ತುಗಳ‌ಮಾಹಿತಿ ಪಡೆದರು. ಆಗ ವೀರ ಸಾವರಕರ ಪುಸ್ತಕ ಯಾಕಿಲ್ಲ ಎಂದು ಕೇಳಿ, ಸಾವರಕರ ಪುಸ್ತಕ ತರಿಸಿ ಅಂತಾ ಸಲಹೆ ನೀಡಿದರು.


ಜೈಲಿನ ಊಟದ ಬಗ್ಗೆ ಮೆಚ್ಚುಗೆ


ತದನಂತರ ಜೈಲಿನ ಊಟದ‌ಕೋಣೆಗೆ ಹೋದ ನ್ಯಾಯಮೂರ್ತಿಗಳು ಅಲ್ಲಿ ಕೈದಿಗಳೇ ತಯಾರಿಸಿದ್ದ ಅನ್ನ-ಸಾರು, ಚಪಾತಿ ಸವಿದರು. ಸಂಜೆಯ ಊಟಕ್ಕಾಗಿ ತಂದಿಟ್ಟದ್ದ ಮಟನ್ ಸಹ ಪರಿಶೀಲಿಸಿದರು. ಜೈಲಿನಲ್ಲಿ ತಯಾರಿಸಲಾಗಿದ್ದ ಊಟ ಹಾಗೂ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕೆಲವೊಂದು ಸಲಹೆಗಳನ್ನು ನೀಡಿದರು.


ಕಾರಾಗೃಹ ಉತ್ತಮವಾಗಿದೆ


ಕಾರಾಗೃಹದಲ್ಲಿ ಖೈದಿಗಳಿಗಿ ಮೂಲಭೂತ ಸೌಲಭ್ಯಗಳ ಕುರಿತು ಕೆಲ ದೂರುಗಳು ಬಂದಿದ್ದವು. ಈ ಹಿನ್ನೆಲೆ ರಾಜ್ಯದ ಕಾರಾಗೃಹಗಳಿಗೆ ದೀಢೀರ್ ಭೇಟಿ‌ನೀಡಿ ಕಾರಾಗೃಹಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಆದರೆ ಈವರೆಗೆ ಹಲವು ಕಾರಾಗೃಹಗಳನ್ನು ಭೇಟಿ‌ನೀಡಿದ್ದೆನೆ, ಧಾರವಾಡ ಕೇಂದ್ರ ಕಾರಾಗೃಹ ಉತ್ತಮ‌ ವಾತಾವರಣ ದಿಂದ‌ಕೂಡಿದೆ. ಎಲ್ಲ ವ್ಯವಸ್ಥೆ ಇವೆ. ಕೆಲವು ಬದಲಾವಣೆ ಕುರಿತು ಸಲಹೆ‌ಯನ್ನು ಜೈಲ್‌ ಅಧೀಕ್ಷಕರಿಗೆ ನೀಡಲಾಗಿದೆ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.


ಕೈದಿಗಳ ಮನ ಪರಿವರ್ತನೆ ಬಗ್ಗೆಯೂ ಜಾಗೃತಿ


ಈ ಅನೀರಿಕ್ಷಿತ ಭೇಟಿಯಲ್ಲಿ ಅವರು, ಕೈದಿಗಳ ಊಟ, ಆರೋಗ್ಯದ ಜೊತೆಗೆ ಕೈದಿಗಳ ಮನ ಪರಿವರ್ತನೆ ಬಗ್ಗೆಯೂ ಜಾಗೃತಿ ಮೂಡಿಸಿದರು. ಅಲ್ಲದೇ ತಮ್ಮ ಮೇಲಿರೋ ವ್ಯಾಜ್ಯಗಳಲ್ಲಿ ಹಾಗೂ ಶಿಕ್ಷೆಗೆ ಮೇಲ್ಮನವಿ ಸಲ್ಲಿಸಲು ಕೋರ್ಟ್ನಲ್ಲಿ ವಕೀಲರನ್ನು ನೇಮಿಸಿಕೊಳ್ಳಲಾಗದ ಕೈದಿಗಳಿಗೆ ತಮ್ಮ ಪ್ರಾಧಿಕಾರದಿಂದ ಲಭ್ಯ ಇರೋ ಕಾನೂನು ನೆರವಿನ ಬಗ್ಗೆಯೂ ತಿಳಿ ಹೇಳಿದರು.


ಇದನ್ನೂ ಓದಿ: Love Story: ಪುಟಿನ್‌ ಪುತ್ರಿಯ‌ ಲವ್‌ ಸ್ಟೋರಿ! ಲವರ್​ ನೋಡಲು 50 ಬಾರಿ ಮನೆಯಿಂದ ಓಡಿ ಹೋಗಿದ್ದಾಳೆ ಈಕೆ


ಜೈಲಿನಲ್ಲಿರೋ ಎಫ್ಎಂ ಕೇಂದ್ರದಲ್ಲಿಯೂ ಕೈದಿಗಳನ್ನು ಉದ್ದೇಶಿಸಿ ಮಾತನಾಡಿದರು. ಸುಮಾರು ಎರಡು ಗಂಟೆಗಳ ಕಾಲ ಜೈಲಿನ ಅಂಗಳದಲ್ಲಿಇದ್ದ ಅವರು, ಪ್ರತಿಯೊಂದನ್ನು ಸುದೀರ್ಘವಾಗಿ ಪರಿಶೀಲಿಸಿ, ಪ್ರತಿಯೊಂದರ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ಇನ್ನು ಹೈನುಗಾರಿಕೆ ವಿಭಾಗದಲ್ಲಿ ಕೆಲ ಗೋವುಗಳ ಮೈ ಸವರಿ ಸರಳತೆ ಮೆರೆದರು. ನಂತರ ಮಹಿಳಾ ಕೈದಿಗಳ ವಿಭಾಗಕ್ಕೂ ತೆರಳಿ, ಕುಂದುಕೊರತೆ ಆಲಿಸಿದರು.


ದಿಢೀರ್ ಭೇಟಿ


ದೀಢೀರ್ ಆಗಿ ಕಾರಾಗೃಹಕ್ಕೆ‌ ನ್ಯಾಯಮೂರ್ತಿಗಳು ಭೇಟಿ‌ನೀಡಿದರು. ಕಾರಾಗೃಹದ ಎಲ್ಲ ವಿಭಾಗಗಳಿಗೆ ಭೇಟಿ‌ನೀಡಿದರು. ನಾವು ಅವರಿಗೆ ಕಾರಾಗೃಹದ ಹಾಗೂ ಕೈದಿಗಳ ಕುರಿತು ಮಾಹಿತಿ‌ನೀಡಿದ್ದೆವೆ. ಕೆಲವು ಸಲಹೆಗಳನ್ನು‌ ನೀಡಿದ್ದಾರೆ ಅವುಗಳನ್ನು ಪಾಲನೆ ಮಾಡುತ್ತೆವೆ ಎಂದು ಜೈಲು ಅಧೀಕ್ಷಕ ಎಂ.ಎ. ಮರಿಗೌಡರ ಹೇಳಿದರು.


ಸೌಲಭ್ಯಗಳ ಪರಿಶೀಲನೆ


ಕಾರಾಗೃಹದಲ್ಲಿರೋ ಕೈದಿಗಳಿಗೆ ಕಾನೂನು ಬದ್ಧವಾಗಿ ಸಿಗಬೇಕಿರೋ ಸೌಲಭ್ಯಗಳನ್ನು ಪರಿಶೀಲಿಸುವ ಜೊತೆಗೆ ಅವರಿಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಲಭ್ಯ ಇರೋ ಸಹಾಯಗಳ ಬಗ್ಗೆಯೂ ಖುದ್ದು ತಿಳಿವಳಿಕೆ ನೀಡಲು ನ್ಯಾಯಮೂರ್ತಿಗಳು ಆಗಮಿಸಿದ್ದರು, ಈ ಸಮಯದಲ್ಲಿ ಪ್ರಾಧಿಕಾರದ ಜಿಲ್ಲಾ ಮಟ್ಟದ ಪ್ರಮುಖರು ಅವರೊಂದಿಗೆ ಹಾಜರಿದ್ದರು.


ಇದನ್ನೂ ಓದಿ: Teachers Exam: ಇಂದು ಶಿಕ್ಷಕರ ನೇಮಕಾತಿ ಪರೀಕ್ಷೆ! ಪರೀಕ್ಷೆ ಕೇಂದ್ರಗಳಲ್ಲಿ ಸಂಪೂರ್ಣ ಭದ್ರತೆ


ಕಾರಾಗೃಹದ ಭೇಟಿ‌ಬಳಿಕ ಜಿಲ್ಲಾಸ್ಪತ್ರೆ ಹಾಗೂ ಡಿಮಾನ್ಸ್  ಆಸ್ಪತ್ರೆಗೆಭೇಟ ನೀಡಿ ರೋಗಿಗಳ ಕುಂದುಕೊರತೆಗಳನ್ನು ಆಲಿಸಿದರು.

top videos
    First published: