Viral Video: ದೋಸೆ ಬೇಕಾ ದೋಸೆ... ಈ ವ್ಯಕ್ತಿ ನೋಡಿ ತನ್ನ ಸೈಕಲ್‌ ಮೇಲೆಯೇ 100ಕ್ಕೂ ಹೆಚ್ಚು ವೆರೈಟಿ ದೋಸೆ ಮಾಡ್ತಾನಂತೆ!

ತಳ್ಳು ಗಾಡಿಗಳಲ್ಲಿ ಅಬ್ಬಬ್ಬಾ ಎಂದರೆ ಒಂದು 10 ವಿಧದ ದೋಸೆ ಮಾಡುವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ 100ಕ್ಕೂ ಹೆಚ್ಚು ವಿಧದ ದೋಸೆಗಳನ್ನು ಮಾಡುತ್ತಾನೆ, ಅದೂ ತನ್ನ ಸೈಕಲ್ ಮೇಲೆ ಅಂತ ಹೇಳಿದ್ರೆ ನೀವು ನಂಬಲೇಬೇಕು!

100 ಹೆಚ್ಚು ವಿಧದ ದೋಸೆ ಮಾಡುವ ವ್ಯಾಪಾರಿ

100 ಹೆಚ್ಚು ವಿಧದ ದೋಸೆ ಮಾಡುವ ವ್ಯಾಪಾರಿ

  • Share this:
    ನಾವು ಬೀದಿ ಬದಿಯಲ್ಲಿ (Street Side) ಇರುವಂತಹ ಚಿಕ್ಕ ಪುಟ್ಟ ಹೋಟೆಲ್‌ಗಳಲ್ಲಿ (Hotel) ಮತ್ತು ತಳ್ಳು ಗಾಡಿಗಳಲ್ಲಿ ಅಬ್ಬಬ್ಬಾ ಎಂದರೆ ಒಂದು 10 ವಿಧದ ದೋಸೆ (Dosa) ಮಾಡುವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ 100ಕ್ಕೂ ಹೆಚ್ಚು ವಿಧದ ದೋಸೆಗಳನ್ನು ಮಾಡುತ್ತಾನೆ, ಅದು ಎಲ್ಲಿ, ದೊಡ್ಡ ಹೋಟೆಲ್‌ನಲ್ಲಿ ಅಂದುಕೊಂಡಿದ್ದರೆ, ಅದು ತಪ್ಪು. 100ಕ್ಕೂ ಹೆಚ್ಚು ವಿಧದ ದೋಸೆಗಳನ್ನು ಈತ ಮಾಡುವುದು ತನ್ನ ಸೈಕಲ್ (Cycle) ಮೇಲೆ ಅಂತ ಹೇಳಿದ್ರೆ, ನೀವು ನಂಬುವುದೇ ಇಲ್ಲ. ಆದರೆ ಇದು ನೀವು ನಂಬಲೇಬೇಕಾದ ಸತ್ಯ ಘಟನೆ, ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಆಹಾರಕ್ಕೆ (Food) ಸಂಬಂಧಪಟ್ಟಂತಹ ವಿಡಿಯೋಗಳನ್ನೇ (Video) ನಾವು ಹೆಚ್ಚಾಗಿ ನೋಡುತ್ತಿದ್ದೇವೆ. ಅದು ಯಾವುದೋ ಹೊಸ ರೀತಿಯ ಆಹಾರ ಪ್ರಯೋಗವಾಗಿರಬಹುದು, ನಮ್ಮನ್ನು ಬೆರಗುಗೊಳಿಸುವ ಪಾಕವಿಧಾನಗಳು (Recipe) ಆಗಿರಬಹುದು ಮತ್ತು ಹೊಟೇಲ್ (Hotel) ನಡೆಸುವವರ ಕಥೆಗಳು ಸಹ ಆಗಿರಬಹುದು. ಇತ್ತೀಚೆಗೆ, ಅಂತಹದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ಹರಿದಾಡುತ್ತಿದ್ದು, ವೈರಲ್ ಆಗಿದೆ ನೋಡಿ.

    ಸೈಕಲ್‌ ಮೇಲೆಯೆ ಮಾಡ್ತಾನೆ 100ಕ್ಕೂ ಹೆಚ್ಚು ವಿಧದ ದೋಸೆ

    ಇಲ್ಲಿ ಒಬ್ಬ ವ್ಯಕ್ತಿಯು 100ಕ್ಕಿಂತಲೂ ಹೆಚ್ಚು ವಿಧದ ದೋಸೆಗಳನ್ನು ತನ್ನ ಸೈಕಲ್ ಮೇಲೆ ಮಾಡಿ ಕೊಡುತ್ತಾನೆ. ಈಗ, ಒಂದು ದೋಸೆಯನ್ನು ತಯಾರಿಸುವುದು ಎಷ್ಟು ಕಷ್ಟ ಎಂದು ನಮಗೆಲ್ಲರಿಗೂ ತಿಳಿದಿದೆ. ಇದನ್ನು ಬೇಯಿಸಲು ಪ್ರತ್ಯೇಕವಾದ ಒಂದು ಸ್ಥಳ ಮತ್ತು ಇದಕ್ಕೆ ಬೇಕಾಗಿರುವ ಇತರ ಪದಾರ್ಥಗಳನ್ನು ಇಡಲು ಪ್ರತ್ಯೇಕವಾದ ಸ್ಥಳದ ಅಗತ್ಯವಿದೆ.

    ಆದರೆ ಇವರು ಅವರ ಸೈಕಲ್ ಮೇಲೆಯೇ ಇದನ್ನೆಲ್ಲಾ ಮಾಡುವುದನ್ನು ನೋಡಿ ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

    ವೈರಲ್ ಆಯ್ತು ಬಿಸಿ ಬಿಸಿ ದೋಸೆ ಮಾಡುವ ವಿಡಿಯೋ

    ಇನ್‌ಸ್ಟಾಗ್ರಾಮ್ ಖಾತೆಯ ‘ಥಿಂಗ್ಸ್ ಟು ಈಟ್ ಇನ್ ಮುಂಬೈ’ ಪುಟದಲ್ಲಿ ಅಪ್‌ಲೋಡ್ ಮಾಡಿದ ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ತನ್ನ ಸೈಕಲ್ ಪಕ್ಕದಲ್ಲಿ ನಿಂತು ಗ್ರಾಹಕರಿಗೆ ಬೇಕಾದ ರೀತಿಯ ಬಿಸಿ ಬಿಸಿ ದೋಸೆಗಳನ್ನು ಮಾಡಿ ಕೊಡುವುದನ್ನು ನಾವು ನೋಡಬಹುದು.

    ಅವನ ಸೈಕಲ್‌ನಲ್ಲಿ ದೋಸೆಯನ್ನು ಬೇಯಿಸಲು ಬೇಕಾದ ಚಿಕ್ಕ ತಾತ್ಕಾಲಿಕ ಅನಿಲದ ವ್ಯವಸ್ಥೆಯನ್ನು ಸಹ ಮಾಡಿಕೊಂಡಿರುವುದನ್ನು ನಾವು ಇದರಲ್ಲಿ ನೋಡಬಹುದು. ನಂತರ ಅದೇ ಒಂದು ಫಲಕದಲ್ಲಿ, ಅವನು ತನಗೆ ಅಗತ್ಯವಿರುವ ಪದಾರ್ಥಗಳಿಂದ ತುಂಬಿದ ಕಂಟೇನರ್‌ಗಳನ್ನು ಇಟ್ಟಿದ್ದಾನೆ.

    ಇದನ್ನೂ ಓದಿ: Breakfast Recipe: ಬೆಳಗ್ಗಿನ ತಿಂಡಿಗೆ ಫಟಾಫಟ್ ಅಂತ ರೆಡಿ ಮಾಡಿ ಕಡಲೆಹಿಟ್ಟಿನ ದೋಸೆ

    27 ವರ್ಷಗಳಿಂದ ದೋಸೆ ಮಾಡುತ್ತಿರುವ ವ್ಯಕ್ತಿ

    ಈ ಫಲಕದಿಂದ ವಸ್ತುಗಳನ್ನು ಆರಿಸಿಕೊಂಡು ಅವರು ದೋಸೆಯನ್ನು ಬೇಯಿಸುತ್ತಾರೆ ಮತ್ತು ಅದನ್ನು ಗ್ರಾಹಕರಿಗೆ ಉಣ ಬಡಿಸುತ್ತಾರೆ. ‘ಥಿಂಗ್ಸ್ ಟು ಈಟ್ ಇನ್ ಮುಂಬೈ’ ಪ್ರಕಾರ “ಕಠಿಣ ಪರಿಶ್ರಮಿ ಮುಂಬೈನ ಮಲಾಡ್‌ನಲ್ಲಿ ಕಳೆದ 27 ವರ್ಷಗಳಿಂದ ತನ್ನ ಸೈಕಲ್ ಮೇಲೆ ವಿವಿಧ ರೀತಿಯ ದೋಸೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

    ಈಗ ಅವರು 100ಕ್ಕೂ ಹೆಚ್ಚು ವಿಧದ ದೋಸೆಗಳನ್ನು ತಯಾರಿಸಬಹುದಾಗಿದೆ” ಎಂದು ವಿಡಿಯೋ ಶೀರ್ಷಿಕೆಯಲ್ಲಿ ಬರೆದಿರುವುದನ್ನು ನೋಡಬಹುದಾಗಿದೆ.






    ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್

    ಈ ವಿಡಿಯೋ ಅಪ್‌ಲೋಡ್ ಮಾಡಿದಾಗಿನಿಂದಲೂ ಇದನ್ನು 7,42,000 ಜನರು ವೀಕ್ಷಿಸಿದ್ದು, 73 ಸಾವಿರಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ ಮತ್ತು ನೂರಾರು ಜನರು ಇದಕ್ಕೆ ತಮ್ಮ ಕಾಮೆಂಟ್‌ಗಳನ್ನು ಸಹ ನೀಡಿದ್ದಾರೆ.

    ಈ ವಿಡಿಯೋ ನೋಡಿದ ಒಬ್ಬ ವ್ಯಕ್ತಿಯು "ಈ ದೋಸೆ ತುಂಬಾನೇ ಸ್ವಾದಿಷ್ಟಕರ ಎನ್ನಿಸುತ್ತದೆ. ದೇವರು ಈ ಮನುಷ್ಯನನ್ನು ಆಶೀರ್ವದಿಸಲಿ, ಮತ್ತು ಅವರ ಕಠಿಣ ಪರಿಶ್ರಮಕ್ಕೆ ತಕ್ಕ ಯಶಸ್ಸು ಅವನಿಗೆ ಸಿಗಲಿ" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬರು "ತುಂಬಾ ಕಠಿಣ ಪರಿಶ್ರಮಿ, ನಿಮಗೆ ಒಳ್ಳೆಯದಾಗಲಿ ಅಂಕಲ್" ಎಂದು ಬರೆದಿದ್ದಾರೆ.

    ನೆಟ್ಟಿಗರಿಂದ ಹೊಗಳಿಕೆಗಳ ಸುರಿಮಳೆ

    ಇನ್ನೊಬ್ಬ ವ್ಯಕ್ತಿಯು "ಈ ದೋಸೆಗಳು ತುಂಬಾನೇ ರುಚಿಕರವಾಗಿ ಕಾಣುತ್ತವೆ, ನಾನು ಅದನ್ನು ಒಮ್ಮೆಯಾದರೂ ತಿನ್ನಲು ಬಯಸುತ್ತೇನೆ" ಎಂದು ಬರೆದು ಕೊಂಡಿದ್ದಾರೆ. ಅವರ ಸೈಕಲ್ ಮೇಲೆ ಹಾಕಿಕೊಟ್ಟ ದೋಸೆ ತಿಂದ ಅನೇಕ ಜನರು "ಈ ವ್ಯಕ್ತಿ ನಮ್ಮ ಮನೆಯ ಹತ್ತಿರ ಒಂದು ಸ್ಥಳದಲ್ಲಿ ಬರುತ್ತಾರೆ, ಅವನು ಅದ್ಭುತ ದೋಸೆಗಳನ್ನು ಮಾಡಿ ಕೊಡುತ್ತಾರೆ ಮತ್ತು ನಾನು ಪ್ರತಿದಿನ ಕಾಲೇಜಿಗೆ ಹೋಗುವಾಗ ಇಲ್ಲಿಯೇ ದೋಸೆ ತಿಂದು ಹೋಗುತ್ತೇನೆ" ಎಂದು ಹೇಳಿದ್ದಾರೆ.

    ಇದನ್ನೂ ಓದಿ: Tomato Benefits: ಖಾಲಿ ಹೊಟ್ಟೆಯಲ್ಲಿ ಟೊಮೆಟೊ ತಿಂದ್ರೆ ಏನೆಲ್ಲಾ ಪ್ರಯೋಜನವಿದೆ ಗೊತ್ತಾ?

    ಇನ್ನು ಕೆಲವರು ಈ ಸೈಕಲ್ ಅಂಕಲ್‌ನ ನಿಖರವಾದ ಸ್ಥಳವನ್ನು ಕೇಳಿದ್ದಾರೆ, ಅವರನ್ನು ಹೋಗಿ ಭೇಟಿ ಮಾಡಿ ದೋಸೆಗಳನ್ನು ಸೇವಿಸಿ ಬರುವುದಾಗಿ ಹೇಳಿದ್ದಾರೆ.
    Published by:Annappa Achari
    First published: