Missed Call for LPG: ಹೊಸಾ ಎಲ್ಪಿಜಿ ಕನೆಕ್ಷನ್ ತಗೊಳ್ಬೇಕಾ? ಒಂದು ಮಿಸ್ಡ್ ಕಾಲ್ ಕೊಟ್ರೆ ಸಾಕು ಬುಕಿಂಗ್ ಆಗೋಗುತ್ತೆ, ಹೀಗೆ ಮಾಡಿ!

LPG Booking: ಬರೀ ಹೊಸಾ ಕನೆಕ್ಷನ್ ತೆಗೆದುಕೊಳ್ಳೋಕೆ ಮಾತ್ರ ಅಲ್ಲ, ಸಿಲಿಂಡರ್ ಬುಕ್ ಮಾಡೋಕೆ ಕೂಡಾ ಈ ಮಿಸ್ಡ್ ಕಾಲ್ ಸೌಕರ್ಯ ಬಳಸಬಹುದು. ಒಂದು ಮಿಸ್ಡ್ ಕಾಲ್ ಕೊಟ್ರೆ ಮನೆ ಬಾಗಿಲಿಗೇ ಸಿಲಿಂಡರ್ ತಂದು ಕೊಡ್ತಾರೆ. ಇದಕ್ಕಿಂತ ಸುಲಭದ ವಿಧಾನ ಖಂಡಿತಾ ಇನ್ಯಾವ್ದೂ ಇಲ್ಲ ಬಿಡಿ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    New LPG Connection: ಒಂದು ಹೊಸಾ ಎಲ್ಪಿಜಿ ಕನೆಕ್ಷನ್ ಪಡೆಯಬೇಕು ಅಂದ್ರೆ ಅದಕ್ಕಾಗಿ ದಿನಗಟ್ಟಲೆ ಗ್ಯಾಸ್ ಏಜೆನ್ಸಿಗೆ ಓಡಾಡೋದೇ ಆಗೋಗುತ್ತೆ ಅಂತ ಅನೇಕರು ಗೊಣಗುತ್ತಾರೆ. ಇರೋ ಬರೋ ದಾಖಲೆಗಳನ್ನೆಲ್ಲಾ (Documents) ಗುಡ್ಡೆ ಹಾಕಿಕೊಂಡು ಪದೇ ಪದೇ ಹೋಗಿ ಬಂದರೇನೇ ಕೆಲ್ಸ ಸರಿಯಾಗೋದು, ಅಷ್ಟು ಮಾಡಿದ್ರೂ ಇನ್ಯಾವ್ದೋ ಅರ್ಜಿ ಸರಿಯಾಗಿಲ್ಲ ಅಂತ ಮತ್ತಷ್ಟು ತಡವಾಗುತ್ತೆ ಅನ್ನೋ ಕಂಪ್ಲೇಂಟ್ ಕೂಡಾ ಇದೆ. ಇನ್ನು ಕೆಲವು ಬಾರಿಯಂತೂ ತಮ್ಮ ಮನೆಗಿಂತ ಬಹಳ ದೂರವಿರೋ ಗ್ಯಾಸ್ ಏಜೆನ್ಸಿ (Gas Agency) ಆಫೀಸಿಗೆ ಹೋಗಿ ಬರೋಕೆ ಬಹಳ ಹಣ, ಸಮಯ ಎಲ್ಲವನ್ನೂ ಖರ್ಚು ಮಾಡ್ಬೇಕಾದ ಅನಿವಾರ್ಯತೆಯಲ್ಲಿ ಹಲವರು ಇರುತ್ತಾರೆ. ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯೋಕೆ ಒಂದು ಸರಳ ಮಾರ್ಗ ಈಗಿದೆ. ನಿಮ್ಮ ಫೋನ್​ ನಿಂದ ನಾವು ತಿಳಿಸೋ ಈ ನಂಬರ್​ಗೆ ಒಂದು ಮಿಸ್ಡ್ ಕಾಲ್ (Missed Call) ಕೊಟ್ರೆ ಸಾಕು, ನಿಮ್ಮ ಹೆಸರಿನಲ್ಲಿ ಗ್ಯಾಸ್ ಬುಕಿಂಗ್ ಆಗಿಬಿಡುತ್ತದೆ.

    ನೀವು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಗ್ರಾಹಕರಾಗಿದ್ದರೆ ನಿಮಗೆ ಇದು ಸಖತ್ ಒಳ್ಳೆ ಸುದ್ದಿ. ಸರ್ಕಾರದ ಒಡೆತನವಿರುವ ಈ ಸಂಸ್ಥೆ ಇಂಡೇನ್ (Indane) ಹೆಸರಿನ ಮೂಲಕ ಅಡುಗೆ ಅನಿಲ ವಹಿವಾಟು ನಡೆಸುತ್ತದೆ. ಕೇವಲ ಒಂದು ಮಿಸ್ಡ್ ಕಾಲ್ ನೀಡೋ ಮೂಲಕ ಹೊಸಾ ಕನೆಕ್ಷನ್ ಪಡೆಯುವ ಸೌಕರ್ಯವನ್ನು ಇಂಡೇನ್ ಪರಿಚಯಿಸಿದೆ.

    ನೀವು ಮಾಡಬೇಕಾಗಿರೋದು ಇಷ್ಟೇ. 8454955555 ಈ ಸಂಖ್ಯೆಗೆ ನಿಮ್ಮ ರೆಜಿಸ್ಟರ್ಡ್ ಸಂಖ್ಯೆಯಿಂದ ಒಂದು ಮಿಸ್ಡ್ ಕಾಲ್ ಕೊಟ್ಟರೆ ಸಾಕು, ಹೊಸಾ ಎಲ್​ ಪಿ ಜಿ ಸಂಪರ್ಕವನ್ನು ಸಂಸ್ಥೆಯವರು ನಿಮ್ಮ ಮನೆ ಬಾಗಿಲಿಗೇ ತಲುಪಿಸುತ್ತಾರೆ. ಇದನ್ನು ಖುದ್ದು ಇಂಡಿಯನ್ ಆಯಿಲ್ ಸಂಸ್ಥೆ ತನ್ನ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದೆ.

    ಹೊಸಾ ಸಿಲಿಂಡರ್ ಬುಕ್ ಮಾಡೋಕೂ ಮಿಸ್ಡ್ ಕಾಲ್ ಬಳಸಬಹುದೇ?

    ಈಗಾಗಲೇ ನೀವು ಇಂಡೇನ್ ಗ್ರಾಹಕರಾಗಿದ್ದರೆ ಸಿಲಿಂಡರ್ ರೀಫಿಲ್ ಪಡೆಯೋಕೂ ಈ ಸಂಖ್ಯೆ ಉಪಯೋಗಕ್ಕೆ ಬರಲಿದೆ. ಮತ್ತೆ ಅದೇ ಸಂಖ್ಯೆ 8454955555 ಗೆ ಒಂದು ಮಿಸ್ಡ್ ಕಾಲ್ ಕೊಟ್ಟರೆ ಸಾಕು, ನಿಮ್ಮ ಮನೆ ಬಾಗಿಲಿಗೆ ಹೊಸಾ ಸಿಲಿಂಡರ್ ತಂದುಕೊಡ್ತಾರೆ. ಆದರೆ ನಿಮ್ಮ ಮೊಬೈಲ್ ನಂಬರ್ ಇಂಡೇನ್ ಅವರ ಬಳಿ ರೆಜಿಸ್ಟರ್ ಆಗಿರಬೇಕು. ಅದನ್ನು ಖಚಿತಪಡಿಸಿಕೊಂಡರೆ ಉಳಿದೆಲ್ಲವೂ ಬಹಳ ಸುಲಭವಾಗಲಿದೆ.

    ಮಿಸ್ಡ್ ಕಾಲ್ ಸೌಲಭ್ಯದಿಂದ ಏನೆಲ್ಲಾ ಪ್ರಯೋಜನ ಪಡೆದುಕೊಳ್ಳಬಹುದು?

    ಮೊದಲನೆಯದಾಗಿ ಈಗಾಗಲೇ ಸಂಪರ್ಕ ಇರುವ ಗ್ರಾಹಕರು ಸಿಲಿಂಡರ್ ಬುಕ್ ಮಾಡಲು ಇದನ್ನು ಬಳಸಬಹುದು. ಎರಡನೆಯದಾಗಿ ಹೊಸಾ ಕನೆಕ್ಷನ್ ಬೇಕಿದ್ದರೆ ಆಗಲೂ ಮಿಸ್ಡ್ ಕಾಲ್ ಸೌಕರ್ಯ ಬಳಸಬಹುದು. ಕಸ್ಟಮರ್ ಕೇರ್ ಗೆ ಕರೆ ಮಾಡಿ ಗಂಟೆಗಟ್ಟಲೆ ಫೋನ್​ನಲ್ಲೇ ಸಮಯ ಕಳೆಯಬೇಕಾದ ಸಮಸ್ಯೆ ಇಲ್ಲ. ಮಿಸ್ಡ್ ಕಾಲ್ ಆದ್ದರಿಂದ ಸ್ವಲ್ಪವೂ ಹಣ ಖರ್ಚಾಗಲ್ಲ. ಹಿರಿಯ ನಾಗರಿಕರು, ಗ್ರಾಮೀಣ ಭಾಗಗಳಲ್ಲಿ ವಾಸಿಸುವವರು ಇವರಿಗೆಲ್ಲಾ ಈ ಸೌಲಭ್ಯ ಬಹಳ ಅತ್ಯಗತ್ಯ. ಹೆಚ್ಚು ಕಿರಿಕಿರಿ ಇಲ್ಲದೇ ಕೆಲಸ ಆಗಿಬಿಡುತ್ತದೆ.

    ಸಿಲಿಂಡರ್ ಬುಕ್ ಮಾಡೋದು ಅಂದ್ರೆ ಅದೇ ಒಂದಷ್ಟು ದಿನಗಳ ಓಡಾಟದ ರಗಳೆಯ ಕೆಲಸ ಎನ್ನುವವರಿಗೆಲ್ಲಾ ಇದು ಅತ್ಯುತ್ತಮ ಅವಕಾಶ. ಗ್ರಾಹಕರಿಗೆ ಪ್ರಯೋಜನವಾಗುವಂಥಹಾ ಇಂಥಾ ಸೌಕರ್ಯಗಳ ಅವಶ್ಯಕತೆ ಕೂಡಾ ಬಹಳ ಇದೆ.
    Published by:Soumya KN
    First published: