ಪ್ರತಿಯೊಬ್ಬರೂ ಹಣ (Money) ಗಳಿಸಲು ಬೇರೆ ಬೇರೆ ರೀತಿಯಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಕೆಲವರು ಚಿಕ್ಕ ವಯಸ್ಸಿನಲ್ಲೇ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಕೆಲವರು ತಮ್ಮ ಕುಟುಂಬದ ಸಂಕಷ್ಟದ ಪರಿಸ್ಥಿತಿಯಿಂದ ಕೆಲಸ ಮಾಡಬೇಕಾಗಿದ್ದರೆ, ಇನ್ನು ಕೆಲವರು ತಮ್ಮ ಉತ್ಸಾಹದಿಂದ ತಮ್ಮ ನೆಚ್ಚಿನ ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಇದೇ ರೀತಿಯಾಗಿ ಅನೇಕರು ಚಿಕ್ಕ ವಯಸ್ಸಿನಿಂದಲೇ ದುಡಿಯುವವರು ಕೂಡ ಇರುತ್ತಾರೆ. ಹುಟ್ಟುವಾಗಲೇ ಬಂಗಾರದ ಚಮಚದಿಂದ ಹಾಲು (Milk) ಕುಡಿಯುವವರು ಇರುತ್ತಾರೆ. ಅವರಿಗೆ ಕಷ್ಟ ಅಂದ್ರೆ ಏನು ಅಂತಲೇ ತಿಳಿದಿರುವುದಿಲ್ಲ. ವಿಭಿನ್ನ, ವಿಚಿತ್ರ, ವಿಲಕ್ಷಣಗಳನ್ನು ಮಾಡಿ ಹಣ ಗಳಿಸಿದವರು ಇದೀಗ ವೈರಲ್ (Viral) ಆಗಿದ್ದಾರೆ. ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಅತಿ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಸಂಪತ್ತು ಗಳಿಸಿದ ಅಂತಹ ಮತ್ತೊಬ್ಬ ವ್ಯಕ್ತಿಯ ಬಗ್ಗೆ.
ಕೇವಲ 6 ಗಂಟೆಯಲ್ಲಿ 8 ಕೋಟಿ ರೂಪಾಯಿ ಗಳಿಸಿರುವುದಾಗಿ 19 ವರ್ಷದ ಯುವತಿಯೊಬ್ಬಳು ಹೇಳಿಕೊಂಡಿದ್ದಾಳೆ. ಈ ಘಟನೆ 2021ರಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಹುಡುಗಿಯ ಹೆಸರು ಡೇನಿಯಲ್ ಬ್ರೆಗೊಲಿ. ಈಕೆ ವೃತ್ತಿಯಲ್ಲಿ ಮಾಡೆಲ್. ಕೋಟಿಗಟ್ಟಲೆ ಸಂಪತ್ತು ಮಾಡಿದ್ದೇನೆ ಎನ್ನುತ್ತಾಳೆ. ಬ್ರೆಗೋಲಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು Instagram ನಲ್ಲಿ 16.2 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ಗಳ ಹೊರತಾಗಿ, ಅವರು ಖಾಸಗಿ ಸೆಷನ್ಗಳಿಗಾಗಿ ಜನರಿಗೆ ಶುಲ್ಕ ವಿಧಿಸುತ್ತಾರೆ ಎಂದು ಯುಎಸ್ ಮೂಲದ ಬ್ರೆಗ್ರೋಲಿ ಹೇಳುತ್ತಾರೆ.
View this post on Instagram
ಬ್ರೆಗೋಲಿ ಅಂದ್ರೆ ಅದೆಷ್ಟೋ ಹುಡುಗರ ಧಿಲ್ ಜಲ್ ಜಲ್ ಅನ್ನುತ್ತಂತೆ. ಹೀಗಾಗಿಯೇ ಆಕೆ ದಿನೇ ದಿನೇ ಶ್ರೀಮಂತಳಾಗುತ್ತಾ ಇರೋದು. ಡಾಲರ್ ಲೆಕ್ಕದಲ್ಲಿ ಆಕೆಯ ಖಾತೆ ಭರ್ತಿ ಆಗುತ್ತಾ ಇದೆ.
ಬ್ರೆಗೋಲಿ 6 ಗಂಟೆಗಳಲ್ಲಿ 8 ಕೋಟಿ ಗಳಿಸಿದೆ ಎಂದು ಓನ್ಲಿ ಫ್ಯಾನ್ಸ್ ವಕ್ತಾರರು ವೆರೈಟಿ ಡಾಟ್ ಕಾಮ್ಗೆ ಖಚಿತಪಡಿಸಿದ್ದಾರೆ. ಬ್ರೆಗೋಲಿ ಇದನ್ನು 2021ರಲ್ಲಿ ಗಳಿಸಿದ ಹಣದ ರಶೀದಿಯನ್ನು ಹಂಚಿಕೊಂಡಿದ್ದಾರೆ. ಈ ಸುದ್ಧಿ ಇದೀಗ ಸಖತ್ ಸುದ್ಧಿಯಲ್ಲಿ ಇದೆ.
ಇದನ್ನೂ ಓದಿ: ಆಡುವ ವಯಸ್ಸಲ್ಲಿ ಸನ್ಯಾಸತ್ವ ಸ್ವೀಕರಿಸಿದ ಪುಟ್ಟ ಬಾಲಕಿ!
ತನ್ನನ್ನು ಫ್ಯಾಷನ್ ಐಕಾನ್ ಎಂದು ಪರಿಗಣಿಸುವ ಬ್ರೆಗೊಲಿ, ತನ್ನ ಅಂದವನ್ನು ಯಾರಿಗೂ ಮೀರಿಸಲು ಆಗುವುದಿಲ್ಲ ಎಂದು ಹೇಳುತ್ತಾರೆ. ತನ್ನ ಯಶಸ್ಸಿನ ಸಂಪೂರ್ಣ ಕ್ರೆಡಿಟ್ ಅನ್ನು ಅವಳು ತನಗೆ ತಾನೇ ಕೊಟ್ಟುಕೊಳ್ಳುತ್ತಾಳೆ. ಅವಳು ತನ್ನ ಎಲ್ಲಾ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುತ್ತಾಳೆ. ಅವಳು ಚಿಕ್ಕ ವಯಸ್ಸಿನಿಂದಲೂ ಮಾಡೆಲ್ ಆಗಿದ್ದಾಳೆ. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಗಳಿಕೆಯ ರಶೀದಿಯನ್ನು ಹಂಚಿಕೊಂಡಿದ್ದಾಳೆ. ಅವಳು ಒಂದು ವರ್ಷದಲ್ಲಿ $52 ಮಿಲಿಯನ್ ಗಳಿಸಿದ್ದಾಳೆ ಎಂದು ಹೇಳುತ್ತಾಳೆ.
ನೋಡಿದ್ರದಲ್ವಾ ಕೇವಲ ಒಂದು ಇನ್ಸ್ಟಾಗ್ರಾಮ್ನಿಂದ ಎಷ್ಟೆಲ್ಲಾ ಹಣವನ್ನು ಗಳಿಸಬಹುದು ಅಂತ. ಕೇವಲ ಆಕೆಯ ಪ್ರೊಫೈಲ್ ಪಿಕ್ ನೋಡಲು ಜನರು ಮುಗಿಬಿದ್ದು ಹಣ ಕೊಟ್ಟು ನೋಡ್ತಾರೆ ಅಂದ್ರೆ ಎಂತಾ ಮಾಡೆಲ್ ಇರಬಹುದು ಅಲ್ವಾ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ