(VIDEO) ರಿಪೋರ್ಟಿಂಗ್​ ವೇಳೆ ಅಸಭ್ಯವಾಗಿ ವರ್ತಿಸಿದ ಕಿಡಿಗೇಡಿಗೆ ಭೂತ ಬಿಡಿಸಿದ ಪತ್ರಕರ್ತೆ..!

news18
Updated:June 27, 2018, 9:19 PM IST
(VIDEO) ರಿಪೋರ್ಟಿಂಗ್​ ವೇಳೆ ಅಸಭ್ಯವಾಗಿ ವರ್ತಿಸಿದ ಕಿಡಿಗೇಡಿಗೆ ಭೂತ ಬಿಡಿಸಿದ ಪತ್ರಕರ್ತೆ..!
Photo credit: SportTV
news18
Updated: June 27, 2018, 9:19 PM IST
ನ್ಯೂಸ್ 18 ಕನ್ನಡ

ರಷ್ಯಾ (ಜೂ. 27): ರಷ್ಯಾದ ಏಕಟೇನ್ ಬರ್ಗ್​​ನಲ್ಲಿ ಬ್ರೆಜಿಲ್ ಪತ್ರರ್ತೆಯೊಬ್ಬರು ಹುಚ್ಚು ಅಭಿಮಾನಿಯನ್ನು ಹಿಗ್ಗಾಮುಗ್ಗ ಜಾಡಿಸಿದ ಘಟನೆ ನಡೆದಿದೆ.

ಜಪಾನ್ ಮತ್ತು ಸೆನೆಗಲ್ ನಡುವೆ ನಡೆಯಬೇಕಿದ್ದ ವಿಶ್ವಕಪ್ ಟೂರ್ನಿಯ ಪಂದ್ಯದ ಕುರಿತು ಬ್ರೆಜಿಲ್ ಪತ್ರಕರ್ತೆ ಜೂಲಿಯಾ ಗಿಮಾರಾಸ್ ಅವರು ನೇರಪ್ರಸಾರದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಆಕೆಗೆ ದುಷ್ಕರ್ಮಿಯೋರ್ವ ಮುತ್ತು ನೀಡಲು ಪ್ರಯತ್ನಿಸಿದ್ದಾನೆ. ಆತ ಹತ್ತಿರ ಬರುತ್ತಿದ್ದಂತೆಯೇ ಅರಿತ ಪತ್ರಕರ್ತೆ ಕೂಡಲೇ ದೂರಸರಿದು, ಲೈವ್​​ನಲ್ಲೇ ಹಿಗ್ಗಾಮುಗ್ಗಾ ಜಾಡಿಸಿದ್ದಾಳೆ.

‘ಮೊದಲು ಹೆಣ್ಣು ಮಕ್ಕಳನ್ನು ಗೌರವಿಸುವುದನ್ನು ಕಲಿಯಿರಿ, ಎಂದಿಗೂ ಯಾರಿಗೂ ಈ ರೀತಿ ಮಾಡದಿರಿ’ ಎಂದು ಜಾಡಿಸಿದ್ದು, ತಕ್ಷಣ ಆತ ಕ್ಷಮೆ ಯಾಚಿಸಿದ್ದಾನೆ. ಇವೆಲ್ಲವನ್ನೂ ಲೈವ್ ಟೆಲಿಕಾಸ್ಟ್ ಮಾಡಿದ ಸುದ್ದಿವಾಹಿನಿ ಪತ್ರಕರ್ತೆಯ ಪರ ನಿಂತಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

First published:June 27, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ