ಇದೊಂದು ಅಪರೂಪದ ಘಟನೆಯಾಗಿದ್ದು, ಬೋಸ್ಟನ್ ವರದಿಗಾರ್ತಿಯೊಬ್ಬರು ಕಳೆದುಹೋಗಿದ್ದ ಶ್ವಾನವೊಂದನ್ನು ನೇರ ಪ್ರಸಾರ ಕಾರ್ಯಕ್ರಮದ ಮೂಲಕವೇ ಹುಡುಕಿದ್ದಾರೆ. ಅಲ್ಲದೇ ಈ ಘಟನೆಯಲ್ಲಿ ಸಂಶಯಾಸ್ಪದ ವ್ಯಕ್ತಿಯಾಗಿರುವ ಆರೋಪಿಯನ್ನು ಪೊಲೀಸರಿಗೆ ಹಿಡಿದುಕೊಟ್ಟಿರುವ ಘಟನೆ ಇಂಟರ್ನೆಟ್‌ನಲ್ಲಿ ಬಹಳವೇ ಸದ್ದು ಮಾಡುತ್ತಿದೆ. WHDH-TVಯ ವರದಿಗಾರ್ತಿ ಮೇ 9 ರಂದು ಜೂಲಿಯಾನ ಮಾಝಾ ಮತ್ತು ಕ್ಯಾಮರಾಮ್ಯಾನ್ ಜಾನ್‌ಗ್ರೂಸಿವರ್ ಕೇಂಬ್ರಿಡ್ಜ್‌ನಲ್ಲಿ ಶ್ವಾನ ಕಳ್ಳನನ್ನು ಚಿತ್ರೀಕರಿಸುತ್ತಿದ್ದರು. ಅವರು ಟೈಟಸ್ ಎಂಬ 13 ವರ್ಷದ ಜರ್ಮನ್ ಶ್ವಾನದ ಬಗ್ಗೆ ವರದಿ ಮಾಡಿದ್ದಾರೆ. ಈ ನಾಯಿಯನ್ನು ಮೇ 7 ರಂದು ಇದರ ಮಾಲೀಕನ ಕಾರಿನಿಂದ ಕಳವು ಮಾಡಲಾಗಿದೆ. ಟೈಟಸ್ ಶ್ವೇತ ವರ್ಣದ ಶ್ವಾನವಾಗಿದ್ದು, ಕಂದು ಬಣ್ಣದ ತಲೆಯನ್ನು ಹೊಂದಿದ್ದು, ತನ್ನ ದೇಹದ ಮೇಲ್ಮೈನಲ್ಲಿ ಚುಕ್ಕಿಗಳನ್ನು ಹೊಂದಿದ್ದು, ಕೇಸರಿ ಬಣ್ಣದ ತನ್ನ ಹೆಸರಿನ ಕುತ್ತಿಗೆ ಪಟ್ಟಿಗೆಯನ್ನು ಹಾಕಿಕೊಂಡಿದೆ.
ಈ ಘಟನೆಯನ್ನು ಟ್ವಿಟ್ಟರ್‌ನಲ್ಲಿ ವಿವರಿಸುತ್ತಾ ಜೂಲಿಯಾನ ಮಾಝಾ ಶ್ವಾನ ಕಳೆದುಹೋದ ಸ್ಥಳದಿಂದ ವರದಿ ಮಾಡಿರುವ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವರದಿ ಮಾಡುವ ಹಂತದಲ್ಲೇ ಶ್ವಾನ ಕಳುವಾಗಿದ್ದ ಪಾರ್ಕಿಂಗ್ ಸ್ಥಳಕ್ಕೆ ಬಂದಿದ್ದಾರೆ. ಅಲ್ಲಿ ಒಬ್ಬ ವ್ಯಕ್ತಿ ಟೈಟಸ್‌ನನ್ನೇ ಹೋಲುವಂತಹ ಶ್ವಾನವೊಂದರ ಜೊತೆಗೆ ವಾಕಿಂಗ್ ಮಾಡುತ್ತಿದ್ದರು. ಅಲ್ಲಿ ಸುದೀರ್ಘ ಸಂಭಾಷಣೆ ನಡೆಸಿದ ಜೂಲಿಯಾನ ಆತನೇ ಶ್ವಾನದ ಕಳ್ಳ ಎನ್ನುವುದನ್ನು ಆತನ ಬಾಯಿಯಿಂದಲೇ ಹೇಳಿಸಿದ್ದಾರೆ.
ಕೋವಿನ್ ಪೋರ್ಟಲ್‌ನಲ್ಲಿ ಕೋವಿಡ್-19 ಲಸಿಕೆ ಸ್ಲಾಟ್, ಒಟಿಪಿ ವಿಳಂಬ; ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್ ಹಾವಳಿ..!
ಎರಡೂವರೆ ನಿಮಿಷದ ಈ ವಿಡಿಯೋದಲ್ಲಿ ಜೂಲಿಯಾನ ಒಂದು ಸಣ್ಣ ಸೂಚನೆ ಮೂಲಕ ಕ್ಯಾಮರಾಮ್ಯಾನ್‌ಗೆ ಈ ಘಟನೆ ಚಿತ್ರೀಕರಿಸಲು ಹೇಳಿದರು. ಕ್ಯಾಮರಾಮ್ಯಾನ್ ಆ ಸಂಭಾಷಣೆಯನ್ನು ಶೂಟ್ ಮಾಡುವುದಕ್ಕೆ ಆರಂಭಿಸಿದ್ದರು. ಪೊಲೀಸರು ಬರುವವರೆಗೂ ಈ ಮಾತುಕತೆ ನಡೆದಿದ್ದು, ಪೊಲೀಸರ ಆಗಮನದೊಂದಿದೆ ಟೈಟಸ್ ತನ್ನ ಮಾಲೀಕನನ್ನು ಸೇರಿದೆ.
ಇನ್ನು Inside Editionಗೆ ಈ ಬಗ್ಗೆ ಮಾತನಾಡುತ್ತಾ ಜೂಲಿಯಾನ, ಮೊದಲು ನಾಯಿಯನ್ನು ಸಾಕಲು ಈ ಶ್ವಾನದ ನೇಮ್ ಟ್ಯಾಗ್ ನೋಡಬಹುದೇ ಎಂದು ಕೇಳಲು ಬಯಸಿದ್ದಾಳೆ. ಆದರೆ ಮಾತು ಮುಂದುವರಿದಂತೆ ಆತ ಟೈಟಸ್ ಅನ್ನು ತಾನೇ ತೆಗೆದುಕೊಂಡಿರುವುದಾಗಿ ಹೇಳಿದ್ದಾನೆ.
'ಟೈಟಸ್ ಕಾರಿನಲ್ಲಿ ಕುಳಿತು ಬೊಗಳುತ್ತಿತ್ತು. ಆದ್ದರಿಂದ ಅದನ್ನು ವಾಕಿಂಗ್‌ಗೆ ಕರೆದುಕೊಂಡು ಹೋದೆ, ಇದು ಸಣ್ಣ ತಪ್ಪು, ಆದರೆ ಅಪಹರಣವಲ್ಲ' ಎಂದು ಆರೋಪಿ ವಿವರಿಸಿದ್ದಾನೆ. ವರದಿಗಾರ್ತಿಯು ಕೇಂಬ್ರಿಡ್ಜ್ ಘಟನೆಯನ್ನು ವಿವರಿಸಿದ ನಂತರ ಪೊಲೀಸರು ಕೆಲವೇ ನಿಮಿಷಗಳಲ್ಲಿ ಅಲ್ಲಿಗೆ ಬಂದಿದ್ದು ಟೈಟಸ್ ಅದರ ಮಾಲೀಕ ಗ್ರೇಗ್ ಸೀಸ್ಜ್ಕೀವಿಕ್ಸ್ ಅವರ ಬಳಿ ಸುರಕ್ಷಿತವಾಗಿ ತಲುಪಿದೆ.
ಈ ಶ್ವಾನದ ಮಾಲೀಕ ಗ್ರೇಗ್ ಕಣ್ತುಂಬಿಕೊಂಡು ಟೈಟಸ್ ಅನ್ನು ಅಪ್ಪಿಕೊಂಡಿದ್ದಾರೆ. ಟೈಟಸ್ ಕೂಡ ತನ್ನ ಮಾಲೀಕನನ್ನು ನೋಡಿದೊಡನೇ ಅಷ್ಟೇ ಖುಷಿಯಾಗಿ ಪ್ರತಿಕ್ರಿಯೆ ನೀಡಿದೆ. ಜೂಲಿಯಾನ ಜೊತೆಗೆ ಮಾತನಾಡಿದ ಗ್ರೇಗ್ 'ಆ ವ್ಯಕ್ತಿ ವಾಪಾಸ್ಸು ಬಂದಿದ್ದು ಖುಷಿ ಆಯಿತು ಮತ್ತು ನೀವು ಅಲ್ಲಿದ್ದು ಇದನ್ನು ಸಾಧಿಸಿದಿರಿ' ಎಂದು ಹರ್ಷ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ