• Home
  • »
  • News
  • »
  • trend
  • »
  • Viral Video: ಚಂಡಮಾರುತದ ಬಗ್ಗೆ ವರದಿ ಮಾಡಲು ಹೋದ ಪತ್ರಕರ್ತನ ಸ್ಥಿತಿ ಏನಾಗಿದೆ ನೋಡಿ, ಭಯ ಹುಟ್ಟಿಸೋದು ಗ್ಯಾರಂಟಿ!

Viral Video: ಚಂಡಮಾರುತದ ಬಗ್ಗೆ ವರದಿ ಮಾಡಲು ಹೋದ ಪತ್ರಕರ್ತನ ಸ್ಥಿತಿ ಏನಾಗಿದೆ ನೋಡಿ, ಭಯ ಹುಟ್ಟಿಸೋದು ಗ್ಯಾರಂಟಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರಿ ಮಳೆಯಲ್ಲಿ, ಕೊರೆಯುವ ಚಳಿಯಲ್ಲಿ, ಚಂಡಮಾರುತಗಳೇ ಇರಲಿ ನಮಗೆ ಅಲ್ಲಿ ಏನು ನಡೆಯುತ್ತಿದೆ? ಅಲ್ಲಿನ ಪರಿಸ್ಥಿತಿ ಹೇಗಿದೆ? ಅಂತ ತೋರಿಸುವವರು ಈ ಸುದ್ದಿ ಮಾಧ್ಯಮ (Media) ದವರು ಅಂತ ಹೇಳಿದರೆ ತಪ್ಪಾಗುವುದಿಲ್ಲ.

  • Share this:

ಇತ್ತೀಚೆಗೆ ಬೆಂಗಳೂರಿನ  (Bengaluru) ಲ್ಲಿ ಬಿಟ್ಟುಬಿಡದೆ ಸುರಿದ ಭಾರಿ ಮಳೆ (Rain)  ಯಿಂದಾಗಿ ದೊಡ್ಡ ದೊಡ್ಡ ಬಂಗಲೆಗಳಲ್ಲಿ ಮತ್ತು ವಿಲ್ಲಾ(Villa) ಗಳಲ್ಲಿ ಮೊಣಕಾಲು ಎತ್ತರಕ್ಕೆ ನೀರು ನಿಂತು ಜನಜೀವನ ಅಸ್ತವ್ಯಸ್ತವಾಗಿದ್ದನ್ನು ನಾವೆಲ್ಲಾ ಟಿವಿ (TV) ಯಲ್ಲಿ ನೋಡಿಯೇ ಇರುತ್ತೇವೆ. ಇಂತಹ ಸಂದರ್ಭದಲ್ಲಿ ಯಾರೊಬ್ಬರು ತಮ್ಮ ಮನೆಯಿಂದ ಹೊರಗೆ ಹೋಗುವುದಿಲ್ಲ, ಏಕೆಂದರೆ ಅದು ಜೀವಕ್ಕೆ ಅಪಾಯ (Danger) ವಾಗಬಹುದು ಅಂತ ಅವರಿಗೆ ಗೊತ್ತಿರುತ್ತದೆ. ಆದರೆ ಇಂತಹ ಭಾರಿ ಮಳೆಯಲ್ಲಿ, ಕೊರೆಯುವ ಚಳಿಯಲ್ಲಿ, ಚಂಡಮಾರುತಗಳೇ ಇರಲಿ ನಮಗೆ ಅಲ್ಲಿ ಏನು ನಡೆಯುತ್ತಿದೆ? ಅಲ್ಲಿನ ಪರಿಸ್ಥಿತಿ ಹೇಗಿದೆ? ಅಂತ ತೋರಿಸುವವರು ಈ ಸುದ್ದಿ ಮಾಧ್ಯಮ (Media) ದವರು ಅಂತ ಹೇಳಿದರೆ ತಪ್ಪಾಗುವುದಿಲ್ಲ.


ವರದಿಗಾರರ ಪಾಡು ಯಾರಿಗೂ ಬೇಡ!


ಹೌದು.. ಮಾಧ್ಯಮದಲ್ಲಿ ಕೆಲಸ ಮಾಡುವ ವರದಿಗಾರರು ಆ ಸ್ಥಳಕ್ಕೆ ಖುದ್ದಾಗಿ ಹೋಗಿ ಅಲ್ಲಿ ನಿಂತು ಆ ಪರಿಸ್ಥಿತಿಯ ಬಗ್ಗೆ ಸಾರ್ವಜನಿಕರಿಗೆ ತಿಳಿಸುತ್ತಾರೆ. ಅನೇಕ ಬಾರಿ ಮೊಣಕಾಲುದ್ದಕ್ಕೂ ನೀರು ನಿಂತುಕೊಂಡಿರುವ ಸ್ಥಳಗಳಿಗೆ ಹೋಗಿ ಅಲ್ಲಿ ನಿಂತುಕೊಂಡು ವರದಿ ನೀಡುವುದನ್ನು ನಾವು ಅನೇಕ ಬಾರಿ ಟಿವಿ ನ್ಯೂಸ್ ನಲ್ಲಿ ನೋಡಿರುತ್ತೇವೆ.


ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದ್ದು, ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಇಯಾನ್ ಚಂಡಮಾರುತದ ವೀಡಿಯೋದಲ್ಲಿ ಏನಿದೆ?


ಇಯಾನ್ ಚಂಡಮಾರುತವು ಫ್ಲೋರಿಡಾ ಪರ್ಯಾಯ ದ್ವೀಪದಲ್ಲಿ ಹೆಚ್ಚಿನ ಗಾಳಿ, ಭಾರಿ ಮಳೆ ಮತ್ತು ಹಿಮವು ವಿನಾಶಕಾರಿಯಾಗಿ ಅಪ್ಪಳಿಸುವುದನ್ನು ಮುಂದುವರಿಸಿದೆ. ಇಂಟರ್ನೆಟ್, ವ್ಯಾಪಕ ಪ್ರವಾಹ, ಆಸ್ತಿ ಹಾನಿ ಮತ್ತು ವಿದ್ಯುತ್ ಕಡಿತದ ವೀಡಿಯೋಗಳಿಂದ ತುಂಬಿ ತುಳುಕುತ್ತಿದೆ ಅಂತ ಹೇಳಬಹುದು. ಈ ವಿನಾಶಕಾರಿ ಚಂಡಮಾರುತದ ನಡುವೆ ನಿಂತಾಗ ಹವಾಮಾನ ತಜ್ಞ ಜಿಮ್ ಕ್ಯಾಂಟೋರ್ ಅವರ ಪಾದಗಳು ನೆಲಕ್ಕೆ ತಾಕಲು ಸಹ ಬಿಡುತ್ತಿಲ್ಲ. ಅಷ್ಟರ ಮಟ್ಟಿಗೆ ಮಳೆ, ಗಾಳಿಯಿಂದ ಕೂಡಿತ್ತು ಆ ಚಂಡಮಾರುತ ಅಂತ ಹೇಳಬಹುದು. ಈ ಭಯ ಬೀಳಿಸುವ ವೀಡಿಯೋ ಈಗ ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದೆ.


ಫ್ಲೋರಿಡಾದ ಫೋರ್ಟ್ ಮೇಯರ್ಸ್ ಪ್ರದೇಶದಲ್ಲಿ ಕ್ಯಾಂಟೋರ್ ನೆಲದ ಮೇಲೆ ನಿಂತು, 150 ಮೈಲಿ ವೇಗದಲ್ಲಿ ಎಂದರೆ ಗಂಟೆಗೆ 240 ಕಿಲೋಮೀಟರ್ ವೇಗದಲ್ಲಿ ಬೀಸುವ ಪ್ರವರ್ಗ 4 ರ ಚಂಡಮಾರುತದ ಬಗ್ಗೆ ವರದಿ ಮಾಡುತ್ತಿದ್ದಾಗ ಮರದ ಕೊಂಬೆಯೊಂದು ಅವನ ಕಾಲುಗಳಿಗೆ ಬಡಿದು ಅವನನ್ನು ಬೀಳುವಂತೆ ಮಾಡಿತು.


ಇದನ್ನೂ ಓದಿ: ಲೇಟಾಗಿ ಬಂದ ಡೆಲಿವರಿ ಬಾಯ್​ಗೆ ಆರತಿ ಎತ್ತಿದ ಗ್ರಾಹಕ, ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು!


ಆ ಸಮಯದಲ್ಲಿ ವರದಿಗಾರನು ಮತ್ತೆ ಎದ್ದು ನಿಲ್ಲಲು ಹೆಣಗಾಡಿದನು, ಸಹಾಯಕ್ಕಾಗಿ ಬೀದಿಯ ಫಲಕವನ್ನು ಹಿಡಿದುಕೊಂಡನು. ಬಲವಾದ ಗಾಳಿಯಿಂದಾಗಿ ವರದಿಗಾರನಿಗೆ ಎದ್ದು ನಿಲ್ಲಲು ಸಹ ಸಾಧ್ಯವಾಗಲಿಲ್ಲ. ಅವರು ವೀಡಿಯೋದಲ್ಲಿ "ನಾನು ಎದ್ದು ನಿಲ್ಲಲು ಸಹ ಸಾಧ್ಯವಿಲ್ಲ. ನಾನು ಗಾಳಿಗೆ ಹಾರಿ ಹೋಗುತ್ತೇನೆ" ಎಂದು ಹೇಳಿದರು.


ಚಂಡಮಾರುತದ ಅಬ್ಬರ ಹೇಗಿದೆ ಗೊತ್ತೇ?


ಚಂಡಮಾರುತ ಕೇಂದ್ರದ ಪ್ರಕಾರ, ಫ್ಲೋರಿಡಾದ ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತದ ಅಬ್ಬರ ಉಲ್ಬಣಗೊಂಡಿದೆ ಮತ್ತು ಒಳನಾಡಿನಲ್ಲಿ ಮುಂದುವರಿದಂತೆ ಕಡಿಮೆಯಾಗಲು ಪ್ರಾರಂಭಿಸಿದೆ.ಒಂದು ವೆಬ್‌ಸೈಟ್ ವರದಿಯ ಪ್ರಕಾರ, ಫ್ಲೋರಿಡಾದಲ್ಲಿ ಬುಧವಾರ ಸಂಜೆ ಸುಮಾರು 20 ಲಕ್ಷ ಗ್ರಾಹಕರು ವಿದ್ಯುತ್ ಇಲ್ಲದೆ ಪರದಾಡಬೇಕಾಯಿತು, ಇದರಲ್ಲಿ ಒಟ್ಟು 11 ದಶಲಕ್ಷಕ್ಕೂ ಹೆಚ್ಚು ಗ್ರಾಹಕರು ರಾಜ್ಯದ ನೈಋತ್ಯ ಪ್ರದೇಶಗಳಲ್ಲಿ ವಾಸ ಮಾಡುವವರಾಗಿದ್ದು, ಈ ಪ್ರದೇಶ ಚಂಡಮಾರುತದ ಅಬ್ಬರಕ್ಕೆ ಹೆಚ್ಚು ಹಾನಿಗೊಳಗಾಗಿದೆ ಎಂದು ಹೇಳಲಾಗುತ್ತಿದೆ.


ಇಯಾನ್ ಚಂಡಮಾರುತವು ಫ್ಲೋರಿಡಾದಾದ್ಯಂತ ಮತ್ತು ಆಗ್ನೇಯ ರಾಜ್ಯಗಳಾದ ಜಾರ್ಜಿಯಾ ಮತ್ತು ದಕ್ಷಿಣ ಕೆರೊಲಿನಾದ ಹಲವಾರು ಮಿಲಿಯನ್ ಜನರ ಮೇಲೆ ಪರಿಣಾಮ ಬೀರಲಿದೆ.ಚಂಡಮಾರುತದ ಪರಿಸ್ಥಿತಿಗಳು ಇನ್ನೂ ಹದಗೆಡುತ್ತಿರುವ ಹಿನ್ನಲೆಯಲ್ಲಿ, ಮುನ್ಸೂಚಕರು ಮುಂಬರುವ ವಿಪತ್ತಿನ ಬಗ್ಗೆ ಈಗಾಗಲೇ ಜನರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ನಿಮ್ಮ ಬುದ್ಧಿವಂತಿಕೆಗೆ ಇಲ್ಲಿದೆ ಸವಾಲು, 9 ಸೆಕೆಂಡ್​​ ಒಳಗೆ ರೂಂನಲ್ಲಿರುವ ಪಿಶಾಚಿ ಹುಡುಕಿ ನೋಡೋಣ


"ಇದು ಮುಂಬರುವ ಅನೇಕ ವರ್ಷಗಳವರೆಗೆ ನಾವು ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಚಂಡಮಾರುತವಾಗಲಿದೆ" ಎಂದು ರಾಷ್ಟ್ರೀಯ ಹವಾಮಾನ ಸೇವೆಯ ನಿರ್ದೇಶಕ ಕೆನ್ ಗ್ರಹಾಂ ಹೇಳಿದ್ದಾರೆ. ಫ್ಲೋರಿಡಾದ ಗವರ್ನರ್ ರಾನ್ ಡಿಸಾಂಟಿಸ್, ರಾಜ್ಯವು "ಅತ್ಯಂತ ಕೆಟ್ಟದಾದ ಎರಡು ದಿನಗಳನ್ನು ಎದುರಿಸಲಿದೆ" ಎಂದು ಹೇಳಿದ್ದಾರೆ.

Published by:ವಾಸುದೇವ್ ಎಂ
First published: