• Home
  • »
  • News
  • »
  • trend
  • »
  • Viral Video: ಏನಪ್ಪಾ ಇವ್ನು, 6 ಭಾಷೆಯಲ್ಲಿ ಸುದ್ದಿ ಕೊಡ್ತಾನೆ! 'ಜೇಮ್ಸ್ ಬಾಂಡ್' ಅಂತಿದ್ದಾರೆ ನೆಟ್ಟಿಗರು

Viral Video: ಏನಪ್ಪಾ ಇವ್ನು, 6 ಭಾಷೆಯಲ್ಲಿ ಸುದ್ದಿ ಕೊಡ್ತಾನೆ! 'ಜೇಮ್ಸ್ ಬಾಂಡ್' ಅಂತಿದ್ದಾರೆ ನೆಟ್ಟಿಗರು

ಫಿಲಿಪ್ ಕ್ರೌಥರ್

ಫಿಲಿಪ್ ಕ್ರೌಥರ್

ರಷ್ಯಾ-ಉಕ್ರೇನ್ ಬಿಕ್ಕಟ್ಟನ್ನು ವರದಿ ಮಾಡುವ ಟಿವಿ ಪತ್ರಕರ್ತ ಆರು ವಿಭಿನ್ನ ಭಾಷೆಗಳಲ್ಲಿ ವರದಿಯನ್ನು ನೀಡಿದ ನಂತರ ಇವರ ಮಾತಿನ ಕೌಶಲ್ಯ ನೋಡಿ ವೀಕ್ಷಕರು 'ಮುಂದಿನ ಜೇಮ್ಸ್ ಬಾಂಡ್' ಎಂದು ಕರೆದಿದ್ದಾರೆ

  • Share this:

ಉಕ್ರೇನ್ ಗಡಿ(Ukraine Border)ಯ ಬಳಿ ಕಳೆದೆರೆಡು ತಿಂಗಳಿನಿಂದ ನಡೆಯುತ್ತಿದ್ದ ರಷ್ಯಾ(Russia) ಮತ್ತು ಉಕ್ರೇನ್​ (Ukraine)ಸಂಘರ್ಷವನ್ನು ಮಾಧ್ಯಮ ವರದಿ(TV Reporter)ಗಾರ 6 ಭಾಷೆ(6 Languages)ಗಳಲ್ಲಿ ವಿವರಿಸುವ ಮೂಲಕ ಜನಪ್ರಿಯವಾಗಿದ್ದಾರೆ. ವಿಡಿಯೋ ವೀಕ್ಷಕರು ಈತನನ್ನು ಮುಂದಿನ ಜೇಮ್ಸ್ ಬಾಂಡ್(James Bond) ಎಂದು ಶ್ಲಾಘಿಸಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಬಿಕ್ಕಟ್ಟಿನ ಬಗ್ಗೆ ವರದಿಗಾರನೊಬ್ಬ 6 ಭಾಷೆಗಳಲ್ಲಿ ವಿವರಿಸಿದ್ದು, ವೀಕ್ಷಕರು ವರದಿಗಾರನ ಪ್ರತಿಭೆ(Talent) ನೋಡಿ ಜೆಮ್ಸ್ ಬಾಂಡ್ ಎಂದು ಕರೆದಿದ್ದಾರೆ. ಅಸೋಸಿಯೇಟೆಡ್ ಪ್ರೆಸ್‌(Associated Press)ನ ಅಂತರರಾಷ್ಟ್ರೀಯ ಅಂಗಸಂಸ್ಥೆಯಲ್ಲಿ ಮಾಧ್ಯಮ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಫಿಲಿಪ್ ಕ್ರೌಥರ್(Philip Crowther) ಎಂಬ ವರದಿಗಾರ, ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಸಮಸ್ಯೆಯನ್ನು ಇಂಗ್ಲಿಷ್(English), ಲಕ್ಸೆಂಬರ್ಗ್(Luxembourg), ಸ್ಪ್ಯಾನಿಷ್(Spanish), ಪೋರ್ಚುಗೀಸ್(Portuguese), ಫ್ರೆಂಚ್(French) ಮತ್ತು ಜರ್ಮನ್ (German)ಭಾಷೆ ಸೇರಿ ಆರು ಭಾಷೆಗಳಲ್ಲಿ ವಿವರಿಸಿದ್ದಾರೆ.


6 ಭಾಷೆಗಳಲ್ಲಿ ವರದಿ ಕೊಟ್ಟ ವರದಿಗಾರ!


ರಷ್ಯಾ-ಉಕ್ರೇನ್ ಬಿಕ್ಕಟ್ಟನ್ನು ವರದಿ ಮಾಡುವ ಟಿವಿ ಪತ್ರಕರ್ತ ಆರು ವಿಭಿನ್ನ ಭಾಷೆಗಳಲ್ಲಿ ವರದಿಯನ್ನು ನೀಡಿದ ನಂತರ ಇವರ ಮಾತಿನ ಕೌಶಲ್ಯ ನೋಡಿ ವೀಕ್ಷಕರು 'ಮುಂದಿನ ಜೇಮ್ಸ್ ಬಾಂಡ್' ಎಂದು ಕರೆದಿದ್ದಾರೆ. ಉಕ್ರೇನ್-ರಷ್ಯಾ ಪರಿಸ್ಥಿತಿಯ ಬಗ್ಗೆ ಮಾತನಾಡುವಾಗ, ಫಿಲಿಪ್ ಇಂಗ್ಲಿಷ್, ಲಕ್ಸೆಂಬರ್ಗ್, ಸ್ಪ್ಯಾನಿಷ್, ಪೋರ್ಚುಗೀಸ್, ಫ್ರೆಂಚ್ ಮತ್ತು ಜರ್ಮನ್ ಭಾಷೆಗಳನ್ನು ಹೀಗೆ 6 ಅಂತಾರಾಷ್ಟ್ರೀಯ ಭಾಷೆಗಳಲ್ಲಿ ವಿವರವಾಗಿ ಘಟನೆ ಕುರಿತು ವರದಿ ನೀಡಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್​!


ಈ ವರದಿಯ ವಿಡಿಯೋವನ್ನು ಸ್ವತಃ ಫಿಲಿಪ್ ಕ್ರೌಥರ್, ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ವರದಿಯನ್ನು ಇಂಗ್ಲಿಷ್, ಲಕ್ಸೆಂಬರ್ಗ್, ಸ್ಪ್ಯಾನಿಷ್, ಪೋರ್ಚುಗೀಸ್, ಫ್ರೆಂಚ್ ಮತ್ತು ಜರ್ಮನ್ ಸೇರಿ 6 ಭಾಷೆಗಳಲ್ಲಿ ವರದಿ ನೀಡಿದ್ದೇನೆ, ಎಂದು ಶೀರ್ಷಿಕೆ ಜೊತೆಗೆ ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. 59 ಸೆಕೆಂಡುಗಳ ಈ ವಿಡಿಯೋ ಕ್ಲಿಪ್ ಈಗ 5.6 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ, 50k ಲೈಕ್ಸ್ ಮತ್ತು 4,200 ಕಾಮೆಂಟ್ ಗಳನ್ನು ಟ್ವಿಟ್ಟರ್ ನಲ್ಲಿ ಪಡೆದು ಕೊಂಡಿದೆ.


ಇದನ್ನೂ ಓದಿ: ನಿಮಗೊಂದು ಚಾಲೆಂಜ್! ಈ ಫೋಟೋವನ್ನ ಸರಿಯಾಗಿ ನೋಡಿ ಯಾವುದಾದರು ಪದ ಕಾಣಿಸ್ತಾ ಇದೆಯಾ?


“ಕಳೆದ ಎಂಟು ವರ್ಷಗಳಿಂದ ಡಾನ್ಬಾಸ್ ಪ್ರದೇಶದಲ್ಲಿ ರಷ್ಯಾದ ಬೆಂಬಲಿತ ಪಡೆಗಳೊಂದಿಗೆ ಪೂರ್ವದಲ್ಲಿ ಯುದ್ಧದ ಛಾಯೆಯಿದೆ.ಆದರೆ ಅದರ ಹೊರತಾಗಿ ರಾಜಧಾನಿ ಕೈವ್ ಶಾಂತವಾಗಿದೆ" ಎಂದು ಕ್ರೌಥರ್ ವರದಿಯ ಇಂಗ್ಲಿಷ್ ತುಣುಕಿನ ಸಮಯದಲ್ಲಿ ಹೇಳಿದ್ದಾರೆ. ಉಕ್ರೇನ್‌ನ ರಾಜಧಾನಿ ಕೈವ್‌ನಿಂದ ಇತ್ತೀಚಿನ ಬೆಳವಣಿಗೆಗಳ ಕುರಿತು ಕ್ರೌಥರ್ ವರದಿ ಮಾಡುತ್ತಿದ್ದರು. ಅವರ ಭಾಷಾ ಕೌಶಲ್ಯಕ್ಕೆ ನೆಟ್ಟಿಗರು ಮನಸೋತಿದ್ದು, ಪ್ರತಿಭಾ ಶಕ್ತಿಯನ್ನು ಹೊಗಳಿದ್ದಾರೆ. ಫಿಲಿಪ್ ಅವರ ಕೌಶಲ್ಯ ಮತ್ತು ಭಾಷೆಯ ನಿರರ್ಗಳತೆಗಾಗಿ ಅವರು ಮುಂದಿನ ಜೇಮ್ಸ್ ಬಾಂಡ್ ಆಗಿರಬೇಕು ಎಂದು ನೆಟ್ಟಿಗರು ಹೇಳಿದರು.


11 ವರ್ಷಗಳಿಂದ ವರದಿಗಾರನಾಗಿರುವ ಫಿಲಿಪ್​!


ಫಿಲಿಪ್ ಕ್ರೌಥರ್ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ 2019 ರಿಂದ ಅಸೋಸಿಯೇಟೆಡ್ ಪ್ರೆಸ್‌ಗಾಗಿ ಅವರು ಕೆಲಸ ಮಾಡುತ್ತಿದೆ ಎಂದು ತಿಳಿಸುತ್ತದೆ. ಅದಕ್ಕೂ ಮೊದಲು, ಅವರು ಫ್ರೀಲ್ಯಾನ್ಸ್ ವರದಿಗಾರರಾಗಿದ್ದರು ಮತ್ತು ಫ್ರಾನ್ಸ್ 24 ಸುದ್ದಿ ಸಂಸ್ಥೆಯಲ್ಲಿ 11 ವರ್ಷಗಳ ಕಾಲ ಕೆಲಸ ಮಾಡಿದರು. ಕ್ರೌಥರ್ ಅವರು ಲಂಡನ್‌ನ ಕಿಂಗ್ಸ್ ಕಾಲೇಜ್‌ನಿಂದ ಪದವಿ ಪಡೆದು ನಂತರ ಲಂಡನ್ನ ಆರ್ಟ್ಸ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಪೂರ್ಣಗೊಳಿಸಿದ್ದಾರೆ ಎಂದು ಅವರ ಲಿಂಕಡ್ ಇನ್ ಪ್ರೊಫೈಲ್ ಮಾಹಿತಿ ನೀಡಿದೆ.


ಇದನ್ನೂ ಓದಿ: ಪಿಜ್ಜಾಗಾಗಿ ಗಂಟೆಗಟ್ಟಲೆ ಕಾಯಬೇಕಾಗಿಲ್ಲ.. 2 ನಿಮಿಷದಲ್ಲಿ ತಯಾರಿಸ್ಬೋದು!


ಫಿಲಿಪ್ ಅವರ 6 ಭಾಷೆಯ ಜ್ಞಾನ, ಮಾತಿನ ಕೌಶಲ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು, ಫಿಲಿಪ್ ಮುಂದಿನ ಜೇಮ್ಸ್ ಬಾಂಡ್ ಎಂದು ಹೊಗಳಿದ್ದಾರೆ. ಇನ್ನೂ ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದ್ದ ಉಕ್ರೇನ್ ಗಡಿಯ ಬಳಿ ಕಳೆದೆರೆಡು ತಿಂಗಳಿನಿಂದ ನಡೆಯುತ್ತಿದ್ದ ರಷ್ಯಾ ಮತ್ತು ಉಕ್ರೇನದ ಸಂಘರ್ಷ ಜಾಗತಿಕ ಆತಂಕಕ್ಕೆ ಕಾರಣವಾಗಿತ್ತು.

Published by:Vasudeva M
First published: