Haunted Jobs- ಮನೆಯಲ್ಲಿ ಒಂದು ದಿನ ಇದ್ದು ದೆವ್ವ ಇಲ್ಲವೆಂದು ಖಚಿತಪಡಿಸಿದರೆ 16 ಸಾವಿರ ರೂ

Rs 700 per Minute- ದೆವ್ವದ ವದಂತಿಯ ಮನೆಗಳು ಅಥವಾ ಆಸ್ತಿಗಳಲ್ಲಿ ಯಾವುದೇ ರೀತಿಯ ಅಲೌಕಿಕ ಚಟುವಟಿಕೆಗಳು ನಡೆಯುತ್ತಿಲ್ಲ ಎಂಬುದನ್ನು ಖಚಿತಪಡಿಸುವ, ಹಾಂಟೆಡ್ ಹೌಸ್ ಟೆಸ್ಟರ್ಸ್ ಎಂದು ಕರೆಯಲ್ಪಡುವ ನಿರ್ಭೀತ ಸ್ವತಂತ್ರ ಉದ್ಯೋಗಿಗಳ ಗುಂಪೊಂದು ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭೂತ ಬಂಗಲೆಗಳು ಅಥವಾ ದೆವ್ವ ಇದೆ ಎಂಬ ವದಂತಿಗಳು ಇರುವ ಮನೆಗಳೆಂದರೆ (Haunted Houses) ಭಯಪಡದವರು ವಿರಳ. ಅಸಹಜ ಸಾವುಗಳು (Unnatural deaths) ಸಂಭವಿಸಿರುವ ಸ್ಥಳಗಳ ಆಸ್ತಿಪಾಸ್ತಿಗಳನ್ನು ಮಾರುವುದು ಕಷ್ಟ. ಅದರಲ್ಲೂ ಮುಖ್ಯವಾಗಿ ಮೂಢನಂಬಿಕೆ ಮತ್ತು ಅಲೌಕಿಕ ವಿದ್ಯಮಾನಗಳನ್ನು (Paranormal activities) ಬಲವಾಗಿ ನಂಬುವ ಸಮಾಜಗಳಲ್ಲಿ ಅಂತಹ ಆಸ್ತಿಗಳನ್ನು ಮಾರಾಟ ಮಾಡುವುದು ಬಹಳ ಕಷ್ಟ. ಯಾರೇ ಆಗಲಿ, ಅಂತಹ ಮನೆಗಳನ್ನು ತಮ್ಮ ಹೊಸ ಮನೆಯಾಗಿ ಸುಖಾಸುಮ್ಮನೆ ಸ್ವೀಕರಿಸಲು ಬಯಸುವುದಿಲ್ಲ.

ಅದೇನೇ ಇದ್ದರೂ, ನಮ್ಮ ನೆರೆಯ ರಾಷ್ಟ್ರ ಚೀನಾದಲ್ಲಿ ಇಂತಹ ದೆವ್ವದ ವದಂತಿಯ ಮನೆಗಳು ಅಥವಾ ಆಸ್ತಿಗಳಲ್ಲಿ ಯಾವುದೇ ರೀತಿಯ ಅಲೌಕಿಕ ಚಟುವಟಿಕೆಗಳು ನಡೆಯುತ್ತಿಲ್ಲ ಎಂಬುದನ್ನು ಖಚಿತಪಡಿಸುವ ಹಾಂಟೆಡ್ ಹೌಸ್ ಟೆಸ್ಟರ್ಸ್ (Haunted House Testers) ಎಂದು ಕರೆಯಲ್ಪಡುವ ನಿರ್ಭೀತ ಸ್ವತಂತ್ರ ಉದ್ಯೋಗಿಗಳ (Independent Freelancers) ಗುಂಪೊಂದು ಇದೆ.

ಹಾಂಕಾಂಗ್ ಮೂಲದ ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆಯು (South China Morning Post) ಇತ್ತೀಚೆಗೆ ಪೋಸ್ಟ್ ಮಾಡಿರುವ ಲೇಖನವೊಂದರ ಪ್ರಕಾರ, ರಿಯಲ್ ಎಸ್ಟೇಟ್ ಏಜನ್ಸಿಗಳು, ಮಾಲೀಕರು ಅಥವಾ ಸಂಭಾವ್ಯ ಖರೀದಿದಾರರು, ಹಾಂಟೆಡ್ ಮನೆಗಳು ವಾಸಕ್ಕೆ ಯೋಗ್ಯವಾಗಿವೆ ಎಂಬುದನ್ನು, ಹಾಗು ಅಲ್ಲಿ ಯಾವುದೇ ಭಯವಿಲ್ಲ ಎಂಬುದನ್ನು ಖಾತರಿ ಪಡಿಸಲು, ಅಲ್ಲಿ ಕನಿಷ್ಟ ಒಂದು ರಾತ್ರಿಯನ್ನು ಕಳೆಯಲು ಹಾಂಟೆಡ್ ಹೌಸ್ ಟೆಸ್ಟರ್ ಗಳನ್ನು ನೇಮಿಸಿಕೊಳ್ಳುತ್ತಾರೆ.

ಇದನ್ನೂ ಓದಿ: Damodaran: 3 ದಶಕದಲ್ಲಿ 6 ಲಕ್ಷ ಶೌಚಾಲಯ ನಿರ್ಮಿಸಿ ಸ್ವಚ್ಛ ಭಾರತದ ರಾಯಭಾರಿಯಾದ ದಾಮೋದರನ್

ದಿನಕ್ಕೆ 16 ಸಾವಿರ ರೂ:

ಜ್ಯಾಂಗ್ ಎಂಬ ನಿವೃತ್ತ ಸೈನಿಕ ಮತ್ತು ಅನುಭವಿ ಹಾಂಟೆಡ್ ಮನೆ ಪರೀಕ್ಷಕರೊಬ್ಬರ ಪ್ರಕಾರ, ಅಂತಹ ಮನೆಗಳಲ್ಲಿ ಉಳಿಯಲು ಸಾಮಾನ್ಯವಾಗಿ ಅವರಿಗೆ ನಿಮಿಷಕ್ಕೆ ಒಂದು ಯುವಾನ್​ನಂತೆ ಹಣ ಸಿಗುತ್ತದೆ. ಮತ್ತು ಅವರು ಸಂಭಾವ್ಯ ದೆವ್ವದ ಮನೆಯಲ್ಲಿ 24 ಗಂಟೆಗಳ ಕಾಲ ಉಳಿದರೆ 1440 ಯುವಾನ್‍ನಷ್ಟು ಹಣ ಗಳಿಸಬಹುದು. ಅಂದರೆ, ಭಾರತದ ರೂಪಾಯಿ ಲೆಕ್ಕಾಚಾರ ತೆಗೆದುಕೊಂಡರೆ ನಿಮಿಷಕ್ಕೆ 700 ರೂ. ಮತ್ತು 24 ಗಂಟೆಗಳ ವಾಸಕ್ಕೆ 16,744 ರೂ. ಗಳಿಸುತ್ತಾರೆ ಅಲ್ಲಿನ ಹಾಂಟೆಡ್ ಹೌಸ್ ಟೆಸ್ಟರ್ಸ್.

ದೆವ್ವ ಮನೆ ಪರೀಕ್ಷಕ ಕೆಲಸ ಮಾಡುವ ಒಂದು ಡಜನ್‍ಗಿಂತಲೂ ಹೆಚ್ಚು ಜನರು ತಮಗೆ ಗೊತ್ತು ಎನ್ನುತ್ತಾರೆ ಜ್ಯಾಂಗ್. ಹೆಚ್ಚಾಗಿ ಮನೆ ಮಾಲೀಕರು ಅಥವಾ ಆಸ್ತಿ ಹೂಡಿಕೆದಾರರು ಮಾರುಕಟ್ಟೆಯಲ್ಲಿ ಖಾಲಿ ಅಥವಾ ಪಾಳು ಬಿದ್ದಿರುವ ಅಂತಹ ಮನೆಗಳಿಗೆ ಹೋಗಲು ಇಚ್ಚಿಸುವುದಿಲ್ಲ. ಆದ್ದರಿಂದ ಹಾಂಟೆಡ್ ಹೌಸ್ ಟೆಸ್ಟರ್ಸ್​ಗೆ ಬೇಡಿಕೆ ಇದೆ ಎಂದು ವಿವರಿಸುತ್ತಾರೆ ಜ್ಯಾಂಗ್.

ಇದನ್ನೂ ಓದಿ: Viral Story: ಪೋರ್ನ್ ಸಿನಿಮಾ ಚಿತ್ರೀಕರಣಕ್ಕೆ ಈ ಮನೆಯೇ ಬೇಕಂತೆ! ಸಾವಿರಾರು ಚಿತ್ರಗಳು ಇಲ್ಲಿ ಶೂಟ್ ಆಗಿದೆಯಂತೆ!

ಚೀನಾದಲ್ಲಿ, ವೃತ್ತಿಪರ ಮನೆ ಪರೀಕ್ಷಕರನ್ನು ರಿಯಲ್ ಎಸ್ಟೇಟ್ ಏಂಜೆಂಟ್‍ಗಳ ಮೂಲಕ ಸಂಪರ್ಕಿಸಬಹುದು. ದೆವ್ವ ಇದೆ ಎಂದು ನಂಬಲಾದ ಮನೆಗಳಲ್ಲಿ ವಾಸಿಸಿ ಅನುಭವ ಇರುವ ಹಾಂಟೆಡ್ ಹೌಸ್ ಟೆಸ್ಟರ್ಸ್ ಇಂಥ ಹಾಂಟೆಡ್ ಹೌಸ್​ಗಳಲ್ಲಿ 24 ಗಂಟೆ ಇರುತ್ತಾರೆ. ಅಲ್ಲಿ ಯಾವುದೇ ಪಾರಾನಾರ್ಮಲ್ ಚಟುವಟಿಕೆ ನಡೆಯುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಾರೆ. ಬಳಿಕ ಮನೆಯಲ್ಲಿ ದೆವ್ವ, ಭೂತ ಯಾವುದೂ ಇಲ್ಲ ಎಂಬುದನ್ನು ವಿಡಿಯೋ ಮೂಲಕ ಖಾತ್ರಿ ಮಾಡುತ್ತಾರೆ.

ಚೀನಾದಲ್ಲಿ ಹೆಚ್ಚಿನ ಜನರು, ಅರೆಕಾಲಿಕವಾಗಿ ಹಾಂಟೆಡ್ ಮನೆ ಪರೀಕ್ಷಕರ ಕೆಲಸವನ್ನು ಮಾಡುತ್ತಾರೆ. ಏಕೆಂದರೆ, ಒಂದು ರಾತ್ರಿ ಕೆಲಸ ಮಾಡಿ ಸಾವಿರಾರು ರೂಪಾಯಿಗಳನ್ನು ಗಳಿಸುವುದು ಅಷ್ಟೇನು ನಷ್ಟದ ವ್ಯವಹಾರವಂತೂ ಖಂಡಿತ ಅಲ್ಲ.

ಭಾಷಾಂತರ ನೆರವು: ಏಜೆನ್ಸಿ
Published by:Vijayasarthy SN
First published: