ಈ ಊರಿನ ಹೆಸರು ಭೋ*** ತಮ್ಮೂರಿನ ಹೆಸರು ಹೇಳಲು ನಾಚಿಕೆಯಾಗಿ ಜನ ಏನ್ಮಾಡಿದ್ರು ನೋಡಿ!

Jharkhand: ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ಮೋಹನ್‌ಪುರ ಬ್ಲಾಕ್‌ನ ಬಂಕಾ ಪಂಚಾಯತ್‌ನಲ್ಲಿರುವ ಹಳ್ಳಿಯೊಂದರ ಹೆಸರು ಕೂಡ ಮುಜುಗರವನ್ನುಂಟು ಮಾಡುವಂತಿದೆ. ಅದರಲ್ಲೂ  ಅಲ್ಲಿನ ಹುಡುಗರು ಮತ್ತು ಹುಡುಗಿಯರು ಶಾಲೆ ಮತ್ತು ಕಾಲೇಜಿನಲ್ಲಿ ತಮ್ಮ ಗ್ರಾಮದ ಹೆಸರನ್ನು ಹೇಳಲು ಹಿಂಜರಿಯುತ್ತಿದ್ದರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಭಾರತದಲ್ಲಿ (India) 664,369 ಹಳ್ಳಿಗಳಿವೆ. ಆಯಾ ರಾಜ್ಯಗಳ (States) ಮತ್ತು ಅಲ್ಲಿನ ಹಳ್ಳಿಯ (Village) ಹೆಸರುಗಳು ವಿಚಿತ್ರವಾಗಿವೆ. ಅದರಲ್ಲೂ ಕೆಲವು ಹಳ್ಳಿಗಳ ಹೆಸರುಗಳನ್ನು ಹೇಳುವಾಗಲೇ ನಗು ಬರುತ್ತದೆ. ಇನ್ನು ಕೆಲವು ಹಳ್ಳಿಗಳ ಹೆಸರು ಹೇಳಲಾರದಂಹತ ಪರಿಸ್ಥಿತಿಯಲ್ಲಿಯೂ ಇದೆ. ಅದರಂತೆ ಭಾರತದ ಹಳ್ಳಿಯೊಂದರ ಹೆಸರು ಅಲ್ಲಿನ ಜನರಿಗೆ ಮುಜುಗರ ತರಿಸುವಂತಿದ್ದು, ಕೊನೆಗೆ ಆ ಹಳ್ಳಿಯ ಹೆಸರನ್ನೇ ಬದಲಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

  ರಾಜಸ್ಥಾನ (Rajasthan), ಹರಿಯಾಣ (Haryana), ಮಹಾರಾಷ್ಟ್ರ(Maharastra) ಮತ್ತು ಜಾರ್ಖಂಡ್ (jharkhand) ಭಾಗದಲ್ಲಿನ ಕೆಲವು ಹಳ್ಳಿಗಳ ಹೆಸರುಗಳೇ ಇದಕ್ಕೆ ಪ್ರಮುಖ ಉದಾಹರಣೆ. ಕೆಲವೊಂದು ಹಳ್ಳಿಯ ಹೆಸರುಗಳು ಜನಸಾಮಾನ್ಯರಿಗೆ ಹೇಳಲಾರದಷ್ಟು ಮುಜುಗರವನ್ನು ತರುವಂತಿದ್ದು,  ಕೊನೆಗೆ ಪ್ರದೇಶದ ಹೆಸರನ್ನು ಬದಲಾಯಿಸುವಂತೆ ಧ್ವನಿ ಎತ್ತಿದ್ದು ಇದೆ. ಆದರೆ ಈ ವಿಚಾರದಲ್ಲಿ ಕೆಲವೊಂದು ಹಳ್ಳಿಗಳು ಮಾತ್ರ ಹೆಸರು ಬದಲಾಯಿಸಿಕೊಂಡರೆ ಇನ್ನು ಕೆಲವು ಜನರು ಅದಕ್ಕೆಂದೇ ಹೋರಾಡುತ್ತಿದ್ದಾರೆ.

  ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ಮೋಹನ್‌ಪುರ ಬ್ಲಾಕ್‌ನ ಬಂಕಾ ಪಂಚಾಯತ್‌ನಲ್ಲಿರುವ ಹಳ್ಳಿಯೊಂದರ ಹೆಸರು ಕೂಡ ಮುಜುಗರವನ್ನುಂಟು ಮಾಡುವಂತಿದೆ. ಅದರಲ್ಲೂ  ಅಲ್ಲಿನ ಹುಡುಗರು ಮತ್ತು ಹುಡುಗಿಯರು ಶಾಲೆ ಮತ್ತು ಕಾಲೇಜಿನಲ್ಲಿ ತಮ್ಮ ಗ್ರಾಮದ ಹೆಸರನ್ನು ಹೇಳಲು ಹಿಂಜರಿಯುತ್ತಿದ್ದರು. ಅಂದಹಾಗೆಯೇ ಆ ಹಳ್ಳಿಯ ಹೆಸರು ಭೋ** ಎಂದಾಗಿದ್ದು, ವಿದ್ಯಾರ್ಥಿಗಳು ಮಾತ್ರವಲ್ಲ ಊರಿನ ಜನರು ತಮ್ಮೂರಿನ ಹೆಸರನ್ನು ಖುಷಿಯಿಂದ  ಹೇಳಲು ಹೇಗೆ ಸಾಧ್ಯ.

  ತಮ್ಮೂರಿನ ಹೆಸರನ್ನು ಬದಲಾಯಿಸಲು ಅಲ್ಲಿನ ಜನರು ಸಾಕಷ್ಟು ಹೋರಾಟ ಮಾಡಿದ್ದಾರೆ. ಜಾತಿ ಪ್ರಮಾಣ ಪತ್ರ, ವಾಸಸ್ಥಳದ ಪತ್ರ, ಆದಾಯ ದೃಢೀಕರಣ ಪತ್ರಗಳಲ್ಲಿ ದೇವಘರ್ (devghar) ಎಂಬ ಈ ಗ್ರಾಮದ ಹೆಸರನ್ನು ನೋಡಿ ಜನ ನಗುತ್ತಿದ್ದರು. ವರ್ಷಗಳಿಂದಲೂ ಇರುವ ಈ ಸಮಸ್ಯೆಯನ್ನು ಹೋಗಲಾಡಿಸಲು ಯುವಕರೆಲ್ಲಾ ಒಟ್ಟಾಗಿ ಪಂಚಾಯ್ತಿಯ ನೆರವು ಪಡೆದು ಕೊನೆಗೆ ಹೆಸರು ಬದಲಾಯಿಸುವ ಮೂಲಕ ಯಶಸ್ಸು ಸಾಧಿಸಿದ್ದಾರೆ.

  ಇದನ್ನು ಓದಿ: ಬೇಡವೆಂದರೂ ಸೆಕ್ಸ್ ಮಾಡಲು ಮುಂದಾದ ಪತಿ! ಕೋಪಗೊಂಡಾಕೆ ಆತನ ಮರ್ಮಾಂಗ ಕತ್ತರಿಸಿ ಕೈಗೆ ಕೊಟ್ಟಳು!

  ಬಂಕಾ ಪಂಚಾಯತ್‌ನ ಗ್ರಾಮ ಪಂಚಾಯತ್ ಪ್ರಧಾನ ರಂಜಿತ್ ಕುಮಾರ್ ಯಾದವ್ ಅವರು ಗ್ರಾಮದ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಹೊಸ ನಾಮಕರಣವನ್ನು ನೀಡಲು ಗ್ರಾಮ ಸಭೆಯ ಸಭೆಯನ್ನು ಕರೆದರು. ಇದರಲ್ಲಿ ಗ್ರಾಮದ ಹಳೆಯ ಹೆಸರನ್ನು ತೆಗೆದುಹಾಕಿ ಮಸೂರಿಯಾ (Masuria) ಎಂಬ ಹೊಸ ಹೆಸರನ್ನಿಡಲು ಮುಂದಾದರು. ಅದಕ್ಕಾಗಿ ಸರ್ವಾನುಮತದಿಂದ ನಿರ್ಣಯವನ್ನು ತೆಗೆದುಕೊಂಡರು. ಸದ್ಯ ಅಲ್ಲಿನ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ದಾಖಲೆಗಳಲ್ಲಿ ಮಸೂರಿಯ ಎಂಬ ಹೆಸರು ಜನರು ಬರೆಯಲಾರಂಬಿಸುತ್ತಿದ್ದಾರೆ.

  ಇದನ್ನು ಓದಿ: ಭೂಮಿಗೆ ನೀರು ಎಲ್ಲಿಂದ ಬಂತು? ಸಮುದ್ರದಲ್ಲಿ ಅಷ್ಟೊಂದು ನೀರು ಹೇಗೆ ಸಂಗ್ರಹವಾಯ್ತು? ಸಂಶೋಧಕರು ಹೇಳ್ತಾರೆ ಕೇಳಿ

  ಹಳೆಯ ಕರಪತ್ರದಲ್ಲಿ ಗ್ರಾಮದ ಹೆಸರು ಆಕ್ಷೇಪಾರ್ಹವಾಗಿದೆ ಎಂದು ಬಂಕಾ ಪಂಚಾಯತ್ ಮುಖ್ಯಸ್ಥ ರಂಜಿತ್ ಕುಮಾರ್ ಯಾದವ್ ಅವರು ಪ್ರಭಾತ್ ಖಬರ್ ನಲ್ಲಿ ಪ್ರಕಟವಾಗಿರುವ ವರದಿಯಲ್ಲಿ ತಿಳಿಸಿದ್ದಾರೆ. ಈಗ ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ಕೂಡ ಮಸೂರಿಯಾ ಹೆಸರಿನಲ್ಲಿ ಹಂಚಿಕೆಯಾಗಿದೆ. ಈಗ ಎಲ್ಲ ಪ್ರಮಾಣ ಪತ್ರಗಳನ್ನೂ ಮಸೂರಿಯಾ ಗ್ರಾಮದ ಹೆಸರಿಗೆ ನೀಡಲಾಗುತ್ತಿದೆ.
  Published by:Harshith AS
  First published: