• Home
  • »
  • News
  • »
  • trend
  • »
  • Importance of Gold: ಆಭರಣ ಕೇವಲ ಆಭರಣವಲ್ಲ ಅದು ಕಾಲಕ್ಕೆ ತಕ್ಕಂತೆ ನಾನಾ ಪಾತ್ರಧಾರಿ!

Importance of Gold: ಆಭರಣ ಕೇವಲ ಆಭರಣವಲ್ಲ ಅದು ಕಾಲಕ್ಕೆ ತಕ್ಕಂತೆ ನಾನಾ ಪಾತ್ರಧಾರಿ!

ಬಂಗಾರ

ಬಂಗಾರ

Importance of Gold: ನಮ್ಮನ್ನು ಕಾಪಾಡುವ ತಾಕತ್ತು ಈ ಚಿನ್ನದ ಆಭರಣಗಳಿಗಿದೆ ಎಂದರೆ ತಪ್ಪಿಲ್ಲ. ಹಾಗಾಗಿಯೇ ಆಭರಣಗಳಿಗೆ ಸ್ಥಾನವೇ ಬೇರೆ.

  • Share this:

ಆಭರಣ ಎಂದಾಗ ಅದೇನೋ ಒಂದು ಆಕರ್ಷಣೆ ಆಗುವುದು ಸಹಜ. ಅದರಲ್ಲೂ ವಿಶೇಷವಾಗಿ ಚಿನ್ನ (Gold), ವಜ್ರಗಳಿಂದ ಸಂಪನ್ನವಾಗಿರುವ ಆಭರಣಗಳೆಂದರೆ ಹೆಂಗಳೆಯರಿಗಂತೂ ಪಂಚಪ್ರಾಣ. ಈ ಆಭರಣಗಳು (Jewellery design) ಮೈಮಾಟದ ಅಂದಚೆಂದವನ್ನು ಹೆಚ್ಚಿಸುವುದಲ್ಲದೆ ಘನತೆಯ ಪ್ರತೀಕವಾಗಿಯೂ ಕಂಗೊಳಿಸುತ್ತವೆ. ಕೇವಲ ಶೋಕಿಗಳಿಗಾಗಿ ಮಾತ್ರವಲ್ಲ, ಸಮಯ ಬಂದಾಗ ಕಷ್ಟದ ಆರ್ಥಿಕ ಪರಿಸ್ಥಿತಿಗಳಿಂದಲೂ (Economic Conditions) ನಮ್ಮನ್ನು ಕಾಪಾಡುವ ತಾಕತ್ತು ಈ ಚಿನ್ನದ ಆಭರಣಗಳಿಗಿದೆ ಎಂದರೆ ತಪ್ಪಿಲ್ಲ. ಹಾಗಾಗಿಯೇ ಆಭರಣಗಳಿಗೆ ಸ್ಥಾನವೇ ಬೇರೆ.


ಆಭರಣಗಳು ಎಂಬುದು ಮೊದಲಿನಿಂದಲೂ ಭಾರತೀಯರಿಗೆ ಅಚ್ಚು ಮೆಚ್ಚು. ಅದರಲ್ಲೂ ಹಿಂದಿನ ರಾಜ-ಮಹಾರಾಜರ ಕಾಲಗಳಲ್ಲಂತೂ ಕೇವಲ ಸ್ತ್ರೀ ಅಷ್ಟೇ ಅಲ್ಲದೆ ಪುರುಷರೂ ಸಹ ಅದ್ಭುತವಾಗಿ ನಿರ್ಮಿಸಲಾದ ಹಲವು ವೈವಿಧ್ಯಮಯ ಆಭರಣಗಳನ್ನು ಹಾಕಿಕೊಳ್ಳುತ್ತಿದ್ದರು ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.


ಅದರಂತೆ, ಚಲನಚಿತ್ರಗಳಲ್ಲೂ ಸಹ ಈ ಆಭರಣಗಳು ವಿಶೇಷವಾಗಿ ಮೂಡಿ ಬರುತ್ತವೆ ಎಂದರೆ ತಪ್ಪಾಗಲಾರದು. ಅದರಲ್ಲೂ ಐತಿಹಾಸಿಕ ಕಥಾ ಹಂದರವುಳ್ಳ ಚಿತ್ರಕಥೆಗಳಲ್ಲಿ ಉಡುಗೆ ತೊಡುಗೆಗಳ ಜೊತೆಗೆ ಆಭರಣಗಳ ಪ್ರದರ್ಶನವೂ ವಿಶೇಷವಾಗಿರುತ್ತದೆ. ಸದ್ಯ ಈಗ ತೆರೆ ಕಂಡಿರುವ ಮಣಿರತ್ಮಂ ಅವರ ಪಿರಿಯಡ್ ಡ್ರಾಮಾ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲೂ ಆಭರಣಗಳ ಅದ್ಭುತತೆಯನ್ನು ಆನಂದಿಸಬಹುದು.


ಚೋಳರ ಕಥೆಯನ್ನು ಹೊಂದಿರುವ ಹತ್ತನೇ ಶತಮಾನದ ಚಿತ್ರ


ನಂದಿನಿ ಪಾತ್ರಧಾರಿ ಐಶ್ವರ್ಯಾ ರೈ ಬಚ್ಚನ್ ತನ್ನಲ್ಲಿರುವ ಸಿಗ್ನೆಟ್ ಆಭರಣವನ್ನು ವಂಡಿಯನಾಥದೇವನ್ ಗೆ ಕೊಟ್ಟು ಅದರ ವೈಭವವನ್ನು ಕದನ ಭೂಮಿಯಲ್ಲಿ ಸೆರೆಹಿಡಿದಿರುವುದನ್ನು ಅದ್ಭುತವಾಗಿ ಕಣ್ತುಂಬಿಕೊಳ್ಳಬಹುದು. ಇಷ್ಟೇ ಅಲ್ಲದೆ ಈ ಚೋಳರ ಕಥೆಯನ್ನು ಹೊಂದಿರುವ ಹತ್ತನೇ ಶತಮಾನದ ಈ ಚಿತ್ರದಲ್ಲಿ ನಂದಿನಿ, ಚೋಳ ರಾಜಕುಮಾರಿ ಕುಂದವಿ ಹಾಗೂ ಆಕೆಯ ಸ್ನೇಹಿತೆ ಸಹ ಅದ್ಭುತವಾದ ವಿನ್ಯಾಸಗಳುಳ್ಳ ಆಭರಣಗಳಲ್ಲಿ ಮಿಂಚುವುದನ್ನು ಕಾಣಬಹುದು.


ಆಭರಣಗಳನ್ನು ವಿನ್ಯಾಸ


ಈ ಚಿತ್ರಕ್ಕಾಗಿ ಹೀಗೆ ವೈವಿಧ್ಯಮಯ ಆಭರಣಗಳನ್ನು ವಿನ್ಯಾಸಗೊಳಿಸಿದವರು ಹೈದರಾಬಾದ್ ಮೂಲದ ಆಭರಣ ವ್ಯಾಪಾರಿ ಕೃಷ್ಣದಾಸ್ ಮತ್ತು ಕಂಪನಿ. ಚಿತ್ರದ ಒಂದು ಸನ್ನಿವೇಶದಲ್ಲಿ ನಂದಿನಿ ಪಾತ್ರಧಾರಿಯು ತನ್ನನ್ನು ಪ್ರೀತಿಸುವಂತೆ ಪ್ರಭಾವಿಸುವ ಪ್ರಸಂಗದಲ್ಲಿ ತನ್ನ ತಲೆಯ ಮೇಲಿರುವ ಚೋಕರ್ ಅನ್ನು ಪತಿಯೇ ತೆಗೆಯುವಂತೆ ಪ್ರೇರೇಪಿಸಿದಾಗ ಪ್ರಣಯದ ಅನುಭೂತಿಯಾದರೂ ಸಹ ಆ ಸನ್ನಿವೇಶವು ಆಭರಣದ ವೈಭವೋಪೇತವನ್ನು ತೋರಿಸುವುದರಲ್ಲಿ ಸೋಲುವುದಿಲ್ಲ.


ಆಭರಣಗಳ ಉಪಸ್ಥಿತಿ ಪ್ರಾಮುಖ್ಯತೆ


ಒಟ್ಟಿನಲ್ಲಿ ಚಿತ್ರಕಥೆಯ ಭಾಗವಾಗಿಯೂ ಅದೆಷ್ಟೋ ಚಿತ್ರಗಳಲ್ಲಿ ಆಭರಣಗಳ ಉಪಸ್ಥಿತಿ ಹಾಗೂ ಅನುಪಸ್ಥಿತಿ ಕಥೆಗಳ ಸಾಕಷ್ಟು ಪ್ರಭಾವ ಬೀರಿರುವುದನ್ನು ನಾವು ಸೂಕ್ಷ್ಮವಾಗಿ ನೋಡಿದಾಗ ಗಮನಿಸಬಹುದು. ಅಲ್ಲದೆ, ಗೀತ ಲೇಖಕರಿಗಂತೂ ಆಭರಣಗಳು ಮುಖ್ಯ ವಸ್ತು. ಸಾಕಷ್ಟು ಬಾರಿ ಹಲವು ಆಭರಣಗಳೊಂದಿಗೆ ನಾಯಕಿಯ ಸೌಂದರ್ಯವನ್ನು ಹೋಲಿಸಿ ಗೀತ ರಚನೆ ಮಾಡಿರುವ ಉದಾಹರಣೆಗಳಿವೆ.


ಇದನ್ನೂ ಓದಿ: ಈ ನಾಯಿ ಬೈಕ್ ಸವಾರಿಯನ್ನು ಹೇಗೆ ಆನಂದಿಸುತ್ತಿದೆ ನೋಡಿ! ನೆಟ್ಟಿಗರು ಫುಲ್ ಖುಷ್


ಇನ್ನೂ, ನೂರಾರು ಚಿತ್ರಗಳಲ್ಲಿ ಕಷ್ಟದ ಸಂದರ್ಭ ಬಂದಾಗ ಮಡದಿಯಾದವಳು ತನ್ನೆಲ್ಲ ಒಡವೆಗಳನ್ನು ಬಿಚ್ಚಿ ಗಂಡನ ಕೈಗೆ ನೀಡುತ್ತ ಇದನ್ನು ಮಾರಿಯಾದರೂ ಹಣ ಹೊಂದಿಸುವ ಅಸಂಖ್ಯಾತ ಸನ್ನಿವೇಶಗಳಿರುವುದನ್ನು ಕಾಣಬಹುದು.


ಆಭರಣಗಳು ಕೇವಲ ಶೋಕಿಯ ಪ್ರತೀಕವಲ್ಲ ಬದಲಾಗಿ ಅವು ಗುರುತಿನ ಪ್ರಭಾವಶಾಲಿಯ ಸಂಕೇತಗಳಾಗಿಯೂ ಬಳಸಲ್ಪಡುತ್ತವೆ ಎಂಬುದನ್ನು ನಾವು ರಾಮಾಯಣದಿಂದ ತಿಳಿಯಬಹುದು. ಸೀತೆ ಅಪಹರಣಕ್ಕೊಳಗಾದಾಗ ಪುಷ್ಪಕ ವಿಮಾನದಲ್ಲಿ ಹಾರುತ್ತ ತನ್ನ ನಿರ್ದಿಷ್ಟ ಒಡವೆಗಳನ್ನು ಭೂಮಿಯ ಮೇಲೆ ಎಸೆಯುತ್ತ ಸಾಗುತ್ತಾಳೆ. ತದನಂತರ ಅವು ವಾನರರಿಗೆ ದೊರೆತಾಗ ರಾಮನಿಗೆ ಅದು ಸೀತೆಯದ್ದು ಎಂಬುದು ಗೊತ್ತಾಗುತ್ತದೆ.


ಇದನ್ನೂ ಓದಿ: ಸ್ವತಃ ಫುಡ್‌ ಆರ್ಡರ್‌ ಡೆಲಿವರಿ ಮಾಡ್ತಾರಂತೆ ಜೊಮೆಟೊ CEO!


ಅಲ್ಲದೆ, ಇನ್ನೂ ಕೆಲವು ಚಿತ್ರಗಳಲ್ಲಿ ಕಳೆದುಹೋದ ಸಹೋದರ ಅಥವಾ ಮಗ/ಮಗಳ ಗುರುತನ್ನು ಕೇವಲ ಒಂದು ಪೆಂಡೆಂಟ್ ನಿಂದ ಪೋಷಕರಿಗೆ ದೊರೆಯುವ ಉದಾಹರಣೆಗಳಿವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಆಭರಣಗಳು ಕೇವಲ ಪ್ರದರ್ಶನದ ವಸ್ತುಗಳಲ್ಲ. ಕಾಲಕ್ಕನುಸಾರ ಅವು ಪ್ರಭಾವಶಾಲಿ ಪಾತ್ರಗಳನ್ನು ನಿರ್ವಹಿಸಲು ಶಕ್ತ ಎಂಬುದನ್ನು ಇಲ್ಲಿ ಹೇಳಬೇಕಾಗಿದೆ.

First published: