• Home
  • »
  • News
  • »
  • trend
  • »
  • Diamond Ring: ಒಂದೇ ಉಂಗುರದಲ್ಲಿ 24 ಸಾವಿರಕ್ಕೂ ಹೆಚ್ಚು ವಜ್ರ! ಗಿನ್ನಿಸ್ ದಾಖಲೆ ಬರೆದ ಡೈಮಂಡ್ ರಿಂಗ್

Diamond Ring: ಒಂದೇ ಉಂಗುರದಲ್ಲಿ 24 ಸಾವಿರಕ್ಕೂ ಹೆಚ್ಚು ವಜ್ರ! ಗಿನ್ನಿಸ್ ದಾಖಲೆ ಬರೆದ ಡೈಮಂಡ್ ರಿಂಗ್

ದಾಖಲೆ ಬರೆದ ವಜ್ರದುಂಗುರ

ದಾಖಲೆ ಬರೆದ ವಜ್ರದುಂಗುರ

ಒಟ್ಟು 24,679 ವಜ್ರಗಳನ್ನು ಉಂಗುರದಲ್ಲಿ ಇರಿಸಲಾಗಿದ್ದು, 2020 ರಲ್ಲಿ ಹರ್ಷಿತ್ ಬನ್ಸಾಲ್ ಅವರು ನಿರ್ಮಿಸಿದ್ದ ಹಿಂದಿನ ದಾಖಲೆಯನ್ನು ಸೋಲಿಸಿದರು. ಅಂತಿಮವಾಗಿ ಉಂಗುರವು 340 ಗ್ರಾಂ ತೂಗುತ್ತದೆ. SWA ಡೈಮಂಡ್ಸ್ ಪ್ರಕಾರ 75 ಲಕ್ಷ ಮೌಲ್ಯವನ್ನು ಹೊಂದಿದೆ.

  • Share this:

ವಜ್ರ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಬಾಲಿವುಡ್ ತಾರೆಯರಂತೂ ಮದುವೆಗೆ ಉಡುಗೊರೆ ನೀಡುವುದರಿಂದ ತೊಡಗಿ ಎಲ್ಲದಕ್ಕೂ ಡೈಮಂಡ್ (Diamond) ಆರಿಸಿಕೊಳ್ಳುತ್ತಾರೆ. SWA ಡೈಮಂಡ್ಸ್  5 ಮೇ 2022 ರಂದು ಕಾರಥೋಡ್‌ನಲ್ಲಿ ಒಂದು ಉಂಗುರ (Ring) ತಯಾರಿಸಿದ್ದು ಅತಿ ಹೆಚ್ಚು ವಜ್ರಗಳ ದಾಖಲೆಯನ್ನು  (Record) ಸಾಧಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಬರೆದಿದೆ. ಉಂಗುರದ ರಚನೆಯು ಅದರ ವಿನ್ಯಾಸದೊಂದಿಗೆ ಪ್ರಾರಂಭವಾಗಿದೆ. ತಂಡವು ತಯಾರಿಸಿದ ಉಂಗುರ ಗುಲಾಬಿ ಸಿಂಪಿ ಮಶ್ರೂಮ್ (Mushroom) ಅನ್ನು ಆಧರಿಸಿದೆ. ಮಶ್ರೂಮ್ ಅಮರತ್ವ ಮತ್ತು ದೀರ್ಘಾಯುಷ್ಯವನ್ನು ಪ್ರತಿನಿಧಿಸುತ್ತದೆ ಎಂದು SWA ಡೈಮಂಡ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಗಫೂರ್ ಅನಾದಿಯಾನ್ ವಿವರಿಸಿದರು.


SWA ಡೈಮಂಡ್ಸ್ ಅವರು ಸಿದ್ಧಪಡಿಸಿದ ಉಂಗುರಕ್ಕೆ 'ಅಮಿ' ಎಂದು ಹೆಸರಿಸಲಾಗಿದೆ. ಅಮರತ್ವಕ್ಕಾಗಿ ಸಂಸ್ಕೃತದಲ್ಲಿ ಬಳಸುವ ಪದ ಇದು ಇದನ್ನು ಹೆಸರಿಸುವ ಮೂಲಕ  ಉಂಗುರಕ್ಕೆ ಗೌರವ ಸಲ್ಲಿಸಿದರು. ಭಾರತೀಯ ಚಿಲ್ಲರೆ ವ್ಯಾಪಾರಿಗಳು ಎಲ್ಲರಿಗೂ ಕೈಗೆಟಕುವಂತೆ ಮಾಡುವ ಉದ್ದೇಶದೊಂದಿಗೆ ಈ ಕಂಪನಿ ವಜ್ರದ ಆಭರಣಗಳಲ್ಲಿ ಹೆಚ್ಚಿನ ಪರಿಣತಿ ಹೊಂದಿದ್ದಾರೆ.


ಅವರ ಬ್ರ್ಯಾಂಡ್‌ ಗಮನ ಸೆಳೆಯಲು ಮತ್ತು ಅವರ ಕೆಲಸಕ್ಕೆ ಮನ್ನಣೆ ಹೆಚ್ಚಿಸಲು ರೆಕಾರ್ಡ್-ಬ್ರೇಕಿಂಗ್ ರಿಂಗ್ ಅನ್ನು ರಚಿಸಲಾಗಿದೆ.
ಬಯಸಿದ ವಿನ್ಯಾಸವನ್ನು ಸಾಧಿಸಲು, ಉಂಗುರದ ಮೂಲಮಾದರಿಯನ್ನು ಮೊದಲು ಪ್ಲಾಸ್ಟಿಕ್ ಅಚ್ಚನ್ನು ಬಳಸಿ ರಚಿಸಲಾಯಿತು. ನಂತರ ಡಿಜಿಟಲ್ ಆಗಿ ಮರುಸೃಷ್ಟಿಸಲಾಯಿತು.


41 ದಳಗಳ ಅಣಬೆ ಉಂಗುರ


3D ಮುದ್ರಣದ ನಂತರ, ದ್ರವರೂಪದ ಚಿನ್ನವನ್ನು ಅಚ್ಚಿನಲ್ಲಿ ಸುರಿದು, ತಂಪಾಗಿಸಿ ಮತ್ತು 41 ವಿಶಿಷ್ಟ ಅಣಬೆ ದಳಗಳ ಒಟ್ಟಾರೆ ಆಕಾರಕ್ಕೆ ತರಲಾಯಿತು. ಬೇಸ್ ಪೂರ್ಣಗೊಂಡ ನಂತರ, ಪ್ರತಿ ವಜ್ರವನ್ನು ಅಣಬೆ ದಳಗಳ ಪ್ರತಿ ಬದಿಯಲ್ಲಿ ಕೈಯಿಂದ ನಿಖರವಾಗಿ ಇರಿಸಲಾಯಿತು. ನೈಸರ್ಗಿಕ ವಜ್ರಗಳನ್ನು ಈ ಉಂಗುರದಲ್ಲಿ ಬಳಸಲಾಗಿದೆ.


GWR ನ ಮಾರ್ಗಸೂಚಿಗಳಿಗೆ ಅನುಸಾರವಾಗಿ, ವಜ್ರವನ್ನು ಕಿಂಬರ್ಲಿ ಪ್ರಕ್ರಿಯೆ ಪ್ರಮಾಣೀಕರಣ ಯೋಜನೆ (KPCS) ಪ್ರಮಾಣೀಕರಿಸಿದ ನಿರ್ಮಾಪಕರಿಂದ ಪಡೆಯಬೇಕಾಗಿತ್ತು. ಅಲಂಕೃತವಾದ ಮಶ್ರೂಮ್ ಆಕಾರವನ್ನು ನಂತರ ವೃತ್ತಾಕಾರದ ಬ್ಯಾಂಡ್‌ನಿಂದ ಬೆಂಬಲಿಸಿ ಸರಿಯಾಗಿ ಉಂಗುರದ ರೂಪ ನೀಡಲಾಗಿತ್ತು. ಈ ರಿಂಗ್ ಭಾಗಶಃ ವಜ್ರಗಳಿಂದ ಕೂಡಿತ್ತು.


ಇದನ್ನೂ ಓದಿ: Diamond: ಮಹಿಳೆಗೆ ಪಾರ್ಕ್​ನಲ್ಲಿ ಸಿಕ್ತು ದುಬಾರಿ ಬೆಲೆಯ ವಜ್ರ! ಇದಪ್ಪಾ ಅದೃಷ್ಟ ಅಂದ್ರೆ


ರಿಂಗ್ ಮುಗಿದ ನಂತರ, ಅದನ್ನು ಸ್ವತಂತ್ರವಾಗಿ ಪರಿಶೀಲಿಸಬೇಕಾಗಿತ್ತು.
"ಐಜಿಐ - ಇಂಟರ್ನ್ಯಾಷನಲ್ ಜೆಮಲಾಜಿಕಲ್ ಇನ್ಸ್ಟಿಟ್ಯೂಟ್ ಲ್ಯಾಬ್‌ನಲ್ಲಿ  ಸ್ವತಂತ್ರ ವಜ್ರ ತಜ್ಞರು ಮತ್ತು ಆಭರಣ ತಜ್ಞರ ತಂಡವು ಉಂಗುರವನ್ನು ಮೌಲ್ಯಮಾಪನ ಮಾಡಿದೆ" ಎಂದು ಅಬ್ದುಲ್ ಗಫೂರ್ ಅನಾದಿಯಾನ್ ಹೇಳಿದರು.


ಸೂಕ್ಷ್ಮದರ್ಶಕಗಳ ಮೂಲಕ ವಜ್ರಗಳ ಎಣಿಕೆ


ಅವರು ವಜ್ರಗಳ ಸೆಟ್ ಅನ್ನು ಎಣಿಸಲು ಸೂಕ್ಷ್ಮದರ್ಶಕವನ್ನು ಬಳಸಿದರು. ಸ್ಪಷ್ಟತೆ, ಕ್ಯಾರೆಟ್, ತೂಕ, ಕತ್ತರಿಸಿದ ಪ್ರಕಾರ ಮತ್ತು ಬಳಸಿದ ವಜ್ರಗಳ ಪ್ರಕಾರವನ್ನು ಮೌಲ್ಯಮಾಪನ ಮಾಡಿದರು ಮತ್ತು ದೃಢಪಡಿಸಿದರು.


75 ಲಕ್ಷ ಮೌಲ್ಯ


ಒಟ್ಟು 24,679 ವಜ್ರಗಳನ್ನು ಉಂಗುರದಲ್ಲಿ ಇರಿಸಲಾಗಿದ್ದು, 2020 ರಲ್ಲಿ ಹರ್ಷಿತ್ ಬನ್ಸಾಲ್ ಅವರು ನಿರ್ಮಿಸಿದ್ದ ಹಿಂದಿನ ದಾಖಲೆಯನ್ನು ಸೋಲಿಸಿದರು.
ಅಂತಿಮವಾಗಿ ಉಂಗುರವು 340 ಗ್ರಾಂ ತೂಗುತ್ತದೆ. SWA ಡೈಮಂಡ್ಸ್ ಪ್ರಕಾರ 75 ಲಕ್ಷ ಮೌಲ್ಯವನ್ನು ಹೊಂದಿದೆ.


ಇದನ್ನೂ ಓದಿ: Farmer Got Diamond: ಬಡ ರೈತನ ಅದೃಷ್ಟ, ಕೃಷಿ ಭೂಮಿಯಲ್ಲಿ ಸಿಕ್ಕಿತು ದುಬಾರಿ ವಜ್ರ


ಈ ದಾಖಲೆಯು ಕಳೆದ ಕೆಲವು ವರ್ಷಗಳಲ್ಲಿ ಜನಪ್ರಿಯವಾಗಿರುವುದ್ದಾಗಿದೆ ಎಂದು ಸಾಬೀತಾಗಿದೆ. ಇದನ್ನು ಹೈದರಾಬಾದ್ ಮೂಲದ ಆಭರಣ ವ್ಯಾಪಾರಿ ಹಾಲ್‌ಮಾರ್ಕ್ ಜ್ಯುವೆಲರ್ಸ್ ಮುರಿದಿದೆ.

Published by:Divya D
First published: