ಜೆಸ್ಟರ್​ ದಿ ವೈರಲ್​ ಡಾಗ್​!


Updated:May 9, 2018, 3:02 PM IST
ಜೆಸ್ಟರ್​ ದಿ ವೈರಲ್​ ಡಾಗ್​!
Image: Instagram

Updated: May 9, 2018, 3:02 PM IST
ಕ್ಯಾಲಿಫೋರ್ನಿಯಾ: ಪೊಲೀಸ್​ ಇಲಾಖೆಗೆ ನಾಯಿಗಳು ಅತ್ಯಂತ ಅವಶ್ಯಕ ಪ್ರಾಣಿ, ತಮ್ಮ ಕುಟುಂಬ ಸದಸ್ಯರಂತೆ ಈ ನಾಯಿಗಳು ನೋಡಿಕೊಳ್ಳಬೇಕಾದ ಕರ್ತವ್ಯ ಇಲಾಖೆಯವರದ್ದು. ಸದ್ಯ ಕ್ಯಾಲಿಫೋರ್ನಿಯಾದ ಕೆ9 ಜೆಸ್ಟರ್​ ನಾಯಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದಾನೆ.

ಕೊಲೆ ಅಥವಾ ಇನ್ನಾವುದೇ ಪ್ರಕರಣದಲ್ಲಿ ಆರೋಪಿಗಳನ್ನು ಹಿಡಿಯುವಲ್ಲಿ ನಾಯಿಗಳ ಬಳಕೆ ಹೆಚ್ಚಾಗಿ ಕಂಡುಬರುತ್ತದೆ. ಇದೇ ಕಾರಣಕ್ಕಾಗಿ ಈ ನಾಯಿಗಳಿಗೆ ಉತ್ತಮ ಮಟ್ಟದ ಟ್ರೈನಿಂಗ್​ ಕೂಡಾ ನೀಡುತ್ತಾರೆ. ಕೆ 9 ಜೆಸ್ಟರ್​ ನಾಯಿ ಕೂಡಾ ಇದೇ ಟ್ರೈನಿಂಗ್​ ಪಡೆದಿದ್ದು, ಈ ನಾಯಿ ಮಿಂಚಿನ ವೇಗದಲ್ಲೇ ತನ್ನ ಎದುರಾಳಿಯನ್ನು ತಲುಪಿರುತ್ತಾನೆ. ಇತ್ತೀಚೆಗೆ ಈ ಟ್ರೈನರ್​ ಎಸೆದ ಚೆಂಡನ್ನು ಹಿಡಿಯಲು ಮುಂದಾದ ಜೆಸ್ಟರ್​ ಕಣ್ಣು ಮಿಟಿಕಿಸುವುದರಲ್ಲಿ ಆ ಚೆಂಡನ್ನು ಹಿಡಿದಿದ್ದಾನೆ. ಈ ವಿಡಿಯೋ ವೀಡಿಯೋ ವೈರಲ್​ ಆಗಿದೆ.ಅತ್ಯಂತ ವೇಗದಲ್ಲಿ ಕ್ರಮಿಸುವ ಶಕ್ತಿ ಮಾತ್ರವಲ್ಲದೇ ಈತನಿಗಿರುವ ಮತ್ತೊಂದು ವೈಶಿಷ್ಟ್ಯವೆಂದರೆ ಕಣ್ಣುಬಿಟ್ಟುಕೊಂಡೇ ನಿದ್ದೆಗೆ ಮಾಡುವುದು. ಯಾರಿಗೂ ಕಂಡು ಹಿಡಲು ಅಸಾಧ್ಯ ರೀತಿಯಲ್ಲಿ ಜೇಸ್ಟರ್​ ನಿದ್ದೆ ಮಾಡುತ್ತಾನಂತೆ. ಒಟ್ಟಾರೆ ಈತನ ಕುರಿತಾದ ವಿಡಿಯೋವನ್ನು ಎರಡು ವಾರದಲ್ಲಿ 30 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
First published:May 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...