Viral News: ಆಸ್ಟ್ರೇಲಿಯಾದ ಬೀಚ್‌ನಲ್ಲಿ ಕಂಡುಬಂದ ಜೆಲ್ಲಿಯಂತಹ ಜೀವಿ; ಹೆಸರು ಊಹಿಸಿ ಹೈರಾಣಾದ ನೆಟ್ಟಿಗರು

Viral video of unknown creature goes viral: ಸೋಮವಾರ, ಆಸ್ಟ್ರೇಲಿಯನ್ ನೇಟಿವ್ ಅನಿಮಲ್ಸ್ ಎಂಬ ಹೆಸರಿನ ಫೇಸ್‍ಬುಕ್ ಪುಟದಲ್ಲಿ ಈ ಗುರುತಿಗೆ ಸಿಗದ ಜೀವಿಯ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ

Tomato Jellyfish

Tomato Jellyfish

  • Share this:
    Photo of Jelly like creature goes viral: ಕ್ವೀನ್ಸ್‌ಲ್ಯಾಂಡ್‌ನ ಗ್ರೇಟ್ ಬ್ಯಾರಿಯರ್ ರೀಫ್‍ನ ದಕ್ಷಿಣ ಭಾಗದ ಯೆಪ್ಪೂನೋನ್ ಕೆಂಪ್ ಕಡಲ ತೀರದಲ್ಲಿ, ಕಂದು ಬಣ್ಣದ ಜೆಲ್ಲಿಯಂತಹ ಒಂದು ನಿಗೂಢ ಪ್ರಭೇದದ ಜೀವಿಯೊಂದು ನೋಡುಗರನ್ನು ಬೆಚ್ಚಿ ಬೀಳಿಸಿದೆ. ಅದರ ಫೋಟೋವನ್ನು ಕಂಡು ಸಾಕಷ್ಟು ಮಂದಿ ನೆಟ್ಟಿಗರು ಅಸಲಿಗೆ ಅದೇನಿರಬಹುದು ಎಂದು ಊಹಿಸಲು ಪ್ರಯತ್ನಿಸಿದ್ದಾರೆ. ಸೋಮವಾರ, ಆಸ್ಟ್ರೇಲಿಯನ್ ನೇಟಿವ್ ಅನಿಮಲ್ಸ್ ಎಂಬ ಹೆಸರಿನ ಫೇಸ್‍ಬುಕ್ ಪುಟದಲ್ಲಿ ಈ ಗುರುತಿಗೆ ಸಿಗದ ಜೀವಿಯ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಚಿತ್ರಗಳಲ್ಲಿ ಕಂಡು ಬರುವ ಆ ಕಂದು ಬಣ್ಣದ ಜೆಲ್ಲಿಯಂತಹ ‘ಸನ್‍ಬರ್ನ್ಟ್’ ಮುದ್ದೆಯಂತಹ ಜೀವಿಯೊಂದು ಸಮುದ್ರ ತೀರದಲ್ಲಿ ಕಡಿಮೆ ಅಲೆಗಳ ನಡುವೆ ಕುಳಿತಿರುವುದನ್ನು ನೋಡಬಹುದು.

    ಕೆಲವು Social Media ಬಳಕೆದಾರರಿಗೆ ಅದೇನೆಂದು ತಿಳಿಯದೆ ಗೊಂದಲವಾದರೆ, ಇನ್ನು ಕೆಲವರು ಅದನ್ನು ಟೊಮ್ಯಾಟೋ ಜೆಲ್ಲಿ ಫಿಶ್ (Tomato Jelly Fish) ಎಂದು ಗುರುತಿಸಿದ್ದಾರೆ. ಆ ಸಮುದ್ರ ಜೀವಿಯ ಫೋಟೋಗಳುಳ್ಳ Facebookಗೆ ,”ಯಾರಿಗಾದರೂ ಇದೇನೆಂದು ? ತಿಳಿದಿರಬಹುದೇ ಎಂದು ಕೇಳಿ, ಗೆಳತಿಯೊಬ್ಬಳು ತನ್ನ ಎಫ್‍ಬಿಯಲ್ಲಿ ಈಗಷ್ಟೇ ಇದನ್ನು ಪೋಸ್ಟ್ ಮಾಡಿದ್ದಾಳೆ. ಅದು ಜೆಲ್ಲಿ ಫಿಶ್‍ನಂತೆ ಕಾಣುತ್ತಿತ್ತು ಎಂದು ಅವಳು ಹೇಳಿದ್ದಾಳೆ” ಎಂಬ ಅಡಿಬರಹವನ್ನು ನೀಡಲಾಗಿದೆ.

    ಪೋಸ್ಟನ್ನು ಹಂಚಿಕೊಂಡ ಕೂಡಲೇ ಹಲವಾರು ಮಂದಿ ಸಾಮಾಜಿಕ ಮಾಧ್ಯಮ ಬಳಕೆದಾರರು, ಆ ಫೋಟೋದಲ್ಲಿರುವ ಜೀವಿ ಯಾವುದೆಂದು ಊಹಿಸುವ ಪ್ರಯತ್ನ ಮಾಡಿ, ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. “ಸನ್‍ಬರ್ನ್ಟ್ ಬ್ಲೋಬ್ ಫಿಶ್ ಅಥವಾ ಪೀಟರ್ ಸ್ಟೆರ್ಲಿಂಗ್ ಫಿಶ್” ಎಂದು ಒಬ್ಬ ನೆಟ್ಟಿಗ ಊಹಿಸಿದ್ದರೆ, ಇನ್ನೊರ್ವ ಮತ್ತೊಬ್ಬ ಫೇಸ್‍ಬುಕ್ ಬಳಕೆದಾರ, “ಸ್ವಲ್ಪ ಲಯನ್ಸ್ ಮೇನ್ ಫಿಶ್ ನಂತಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. “ ನಾನು ಸ್ವಲ್ಪ ಸಂಶೋಧನೆ ಮಾಡಿ ನೋಡಿದೆ (ಗೂಗಲಿಂಗ್) ಮತ್ತು ನನಗೆ ಕಂಡು ಬಂದದ್ದು ಏನೆಂದರೆ ಇದೊಂದು ಟೊಮ್ಯಾಟೋ ಜೆಲ್ಲಿ ಫಿಶ್ ನಂತಿದೆ (ಕ್ರಾಂಬೋಯಿನ್ ಮಸ್ಟಿಗೋಫೋರಾ)” ಎಂದು ಮತ್ತೊಬ್ಬ ಬಳಕೆದಾರ ಪ್ರತಿಕ್ರಿಯೆ ನೀಡಿದ್ದಾರೆ.

    ಇದನ್ನೂ ಓದಿ: SHOCKING; ಬಂಗೀ ಜಂಪಿಂಗ್​ ವೇಳೆ ಕಟ್​ ಆಯ್ತು ಹಗ್ಗ, 80 ಅಡಿ ಎತ್ತರದಿಂದ ಬಿದ್ದು ಮಹಿಳೆ ದಾರುಣ ಸಾವು

    “ಖಂಡಿತವಾಗಿಯೂ ಜೆಲ್ಲಿ ಮೀನುಗಳಂತೆಯೇ ಇದ್ದರೆ. ಖಚಿತವಾಗಿಯೂ, ಈ ಸಮಯದಲ್ಲಿ ಪೋರ್ಟ್ ಹೆಡ್‍ಲ್ಯಾಂಡ್‍ನಲ್ಲಿ ದೊಡ್ಡ ಗುಂಪೊಂದು ಕೊಚ್ಚಿಕೊಂಡು ಹೋಗಿರುವಂತೆಯೇ ಇದೆ” ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮತ್ತೊಬ್ಬ ಸಾಮಾಜಿಕ ಬಳಕೆದಾರರು ಕ್ವೀನ್ಸ್‍ಲ್ಯಾಂಡ್ ಕಡಲ ತೀರದಲ್ಲಿ ಕಂಡು ಬಂದಿರುವ ಜೆಲ್ಲಿ ಫಿಶ್‍ನಂತೆ ಕಾಣುವ ಟೊಮ್ಯಾಟೋ ಜೆಲ್ಲಿ ಫಿಶ್‍ನ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಮತ್ತೆ ಗರ್ಭಿಣಿಯಾದ TikTok​ ಸ್ಟಾರ್​ ಮ್ಯಾಡ್​ಮಾಮ್​; 36 ವರ್ಷಕ್ಕೆ 12ನೇ ಭಾರಿ ಪ್ರೆಗ್ನೆಂಟ್​ ಆದ ಮಹಾತಾಯಿ

    ಟೊಮ್ಯಾಟೋ ಜೆಲ್ಲಿ ಫಿಶ್ ಮತ್ತು ಬ್ಲೋಬ್ ಫಿಶ್‍ನ ನಡುವಿನ ವ್ಯತ್ಯಾಸ:

    ಟೊಮ್ಯಾಟೋ ಜೆಲ್ಲಿ ಫಿಶ್- ಇವು ಸಮುದ್ರ ತೀರಕ್ಕೆ ಅಲೆಗಳಲ್ಲಿ ಕೊಚ್ಚಿಕೊಂಡು ಬಂದು ಬೀಳುತ್ತವೆ ಮತ್ತು ಕೆಲವೊಮ್ಮೆ ಅತ್ಯಂತ ಕೆಟ್ಟ ವಾಸನೆಯನ್ನು ಬೀರುತ್ತವೆ. ಈ ಜೀವಿಗಳು ಮನುಷ್ಯರಿಗೆ ಯಾವುದೇ ಹಾನಿಯನ್ನು ಮಾಡುವುದಿಲ್ಲವಾದರೂ, ಅವುಗಳನ್ನು ಮುಟ್ಟಿದರೆ ಜೋರಾಗಿ ಕುಟುಕುವ ಸಾಧ್ಯತೆ ಇರುತ್ತದೆ. ಅವುಗಳ ಮುಖ್ಯ ಆಹಾರ ಕ್ರಮದ ಬಗ್ಗೆ ಇನ್ನೂ ತಿಳಿದು ಬಂದಿಲ್ಲ, ಆದರೂ ಅವುಗಳು ಆಹಾರಕ್ಕಾಗಿ ಪ್ಲಾಕ್ಟನ್ ಪ್ರಭೇದಗಳನ್ನು ಅವಲಂಬಿಸಿವೆ.

    ಬ್ಲೋಬ್ ಫಿಶ್ – ಇವು ಫ್ಯಾಟ್ ಹೆಡ್ ಸ್ಕಲ್‍ಪಿನ್ ಕುಟುಂಬದ ಭಾಗವಾಗಿದ್ದು, ಹಿಂದೂ ಮಹಾ ಸಾಗರ ಮತ್ತು ಫೆಸಿಫಿಕ್ ಮಹಾ ಸಾಗರಗಳ ಸಮುದ್ರದ ನೀರಿನಲ್ಲಿ ಕಂಡು ಬರುತ್ತವೆ.
    Published by:Sharath Sharma Kalagaru
    First published: